WhatsApp Group Join Now
Telegram Group Join Now

  ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಪೂಜ್ಯನೀಯ ವಸ್ತು ಅಂದರೆ ಅದು ಶಂಖ. ಹಿಂದೂ ಪೂರಾಣಗಳ ಪ್ರಕಾರ ಹದಿನೆಂಟು ವಾದ್ಯಗಳಲ್ಲಿ ಶಂಖವು ಒಂದು. ಆದ್ದರಿಂದಲೇ ಇದನ್ನು ಉದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರು ಬಿಡಲಾಗುತ್ತದೆ. ಮಹಾತ್ಮರು, ರಾಜರು, ದೇವಾನುದೇವತೆಗಳ ಜನನವನ್ನು ಶಂಖನಾದದ ಮೂಲಕವೇ ಘೋಷಿಸುತ್ತಿದ್ದರು. ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮನವನ್ನು ಸೂಚಿಸಲು ಶಂಖಗಳನ್ನು ಬಳಸಲಾಗುತ್ತಿತ್ತು. ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮ ಯಾತ್ರೆಯಲ್ಲಿ ಶಂಖನಾದವನ್ನು ಮಾಡುವ ಪದ್ಧತಿ ಇದೆ. ಹಾಗಾದರೆ ಈ ಅದ್ಭುತವಾದಂತಹ ವಸ್ತು, ಅಂದರೆ ಈ ಶಂಖ ಹುಟ್ಟಿದ್ದು ಹೇಗೆ? ಯಾಕೆ ಶಂಖವನ್ನ ಉದುತ್ತಾರೆ? ಶಂಖವನ್ನು ಉದುವ ಮೂಲಕ ದೇಹದ ಮೇಲೆ ಆಗುವ ಪರಿಣಾಮಗಳಾವುವೂ? ಪೂಜಾ ಸ್ಥಳಗಳಲ್ಲಿ ಯಾಕೆ ಶಂಖದ ಚಿಪ್ಪಿನಿಂದ ನೀರನ್ನು ತುಂಬಿ ಇಡಬೇಕು? ಸಮುದ್ರ ಮಂಥನದಲ್ಲಿ ಶಿವನು ಬಳಸಿದಂತಹ ಅತ್ಯಂತ ದೊಡ್ಡ ಹಾಗೂ ವಿಶ್ವದ ಏಕೈಕ ನಿಗೂಢ ಶಂಖ ಈಗ ಎಲ್ಲಿದೆ? ಈ ಎಲ್ಲ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯೋಣ.

ಸನಾತನ ಸಂಪ್ರದಾಯಲ್ಲಿ ಮಾಡುವ ಪೂಜೆಯಲ್ಲಿ ಶಂಖಕ್ಕೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ಎಕೆಂದರೆ ಭಗವಾನ್ ವಿಷ್ಣುವಿಗೆ ಶಂಖ ಬಹಳ ಪ್ರಿಯವಾದದ್ದು, ವಿಷ್ಣು ಮತ್ತೆ ಲಕ್ಷ್ಮೀ ಶಂಖದ ಶಬ್ದವಿರೀವ ಸ್ಥಳ ಅಥಾವ ಮನೆಯಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಮಹಾಭಾರತದ ಕಾಲದಲ್ಲಿ ಮಹಾನ್ ವಿಷ್ಣು ಕೃಷ್ಣನ ರೂಪದಲ್ಲಿ ಅವತರಿಸಿದನೆಂದು ಹೇಳಲಾಗುತ್ತದೆ, ಆದ್ದರಿಂದಲೇ ಆತನ ಬಳಿ ಪಾಂಚಜನ್ಯ ಎನ್ನುವ ಶಂಖವಿತ್ತು.ಸಾಗರ ಮಂಥನ ಸಮಯದಲ್ಲಿ ಹೊರ ಬಂದ ಹದಿನಾಲ್ಕು ರತ್ನಗಳಲ್ಲಿ ಶಂಖದ ಚಿಪ್ಪು ಕೂಡ ಒಂದು ಎಂದು ನಂಬಲಾಗಿದೆ. ಅದಕ್ಕೆ ಅದನ್ನು ರತ್ನ ಎಂದು ಕೂಡ ಕರೆಯಲಾಗುತ್ತದೆ.

ಸಾಗರ ಮಂಥನದಿಂದ ತಾಯಿ ಲಕ್ಷ್ಮೀಯು ಜನಿಸುತ್ತಾಳೆ, ಇದೇ ಕಾರಣಕ್ಕೆ ಶಂಖವನ್ನು ಲಕ್ಷ್ಮಿದೇವಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಮೂಲತಃ ಶಂಖದಲ್ಲಿ ದಕ್ಷಿಣಾವ್ರುತ್ತಾ ಶಂಖ ವಾಮವೃತ ಶಂಖ ಎನ್ನುವ ಎರಡು  ವಿಧಾನಗಳಿವೆ. ಹಿಂದೆ ರಾಕ್ಷಸ ಶಂಖಚೂಡ ಎಂಬುವನಿದ್ದ, ಅವನ ದೌರ್ಜನ್ಯದಿಂದ ದೇವತೆಗಳು ತೊಂದರೆಗಿಡಾಗಿದ್ದರು. ಭಗವಾನ್ ಶ್ರೀ ವಿಷ್ಣುವಿನ ಆಜ್ಞೆಯ ಮೇರೆಗೆ ಶಂಕರನು ತನ್ನ ತ್ರಿಶೂಲದಿಂದ ಶಂಖಚೂಡನನ್ನು ಕೊಲ್ಲುತ್ತಾನೆ. ನಂತರ ಅವನ ದೇಹವನ್ನು ಸೇವಿಸುತ್ತಾನೆ, ಇದಕ್ಕಾಗಿ ಶಂಖ ಚಿಪ್ಪು ಅಥಾವ ಅದರ ನೀರನ್ನು ಶಿವನ ಪೂಜೆಯಲ್ಲಿ ಬಳಸುವುದಿಲ್ಲ.

ಮನೆಯಲ್ಲಿ ಪ್ರೇತಗಳ ಅಡೆತಡೆ ಇದ್ದಾಗ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜೆ ಮಾಡಿದ ನಂತರ ಶಂಖವನ್ನು ಉದುವುದರಿಂದ ದೆವ್ವ ನಕಾರಾತ್ಮಕ ಶಕ್ತಿ ಮತ್ತು ಇತ್ಯಾದಿ ಅಡೆತಡೆ ಗಳಿಂದ ದೂರ ಆಗುತ್ತದೆ ಎಂದು ನಂಬಲಾಗಿದೆ. ಸಮುದ್ರ ಮಂಥನದಿಂದ ಬಂದ ವಿಷವನ್ನು ಶಿವಾನು ಒಂದು ಶಂಖದಿಂದ ಕುಡಿದಿದ್ದಾನೆ ಎಂದು ಹೇಳಲಾಗಿದೆ. ಆ ಶಂಖ ಬಿಹಾರದ ಭಾಗಲ್ಪುರದಿಂದ ಸುಮಾರು 45 km ದೂರದ ಮಂದಾರ ಪರ್ವತದಲ್ಲಿ ಉತ್ಕಲನ ಮಾಡುವಾಗ ಸಿಕ್ಕಿದೆ ಎಂದು ಪುರಾತತ್ವ ಇಲಾಖೆ ಹೇಳಿದ್ದಾರೆ.

ತನ್ನ ಧಾರ್ಮಿಕತೆಗೆ ಹೆಚ್ಚು ಹೆಸರುವಾಸಿ ಆಗಿರುವ ಮಂದಾರ ಪರ್ವತ ಶಂಖ ಕುಂಡದಲ್ಲಿದೆ, ಇದು ಇತ್ತಿಚಿಗೆ ಮುಖ್ಯವಾದ ದೈತ್ಯ ಪಾಂಚಜನ್ಯ ಶಂಖಕ್ಕೆ ಹೆಸರುವಾಸಿಯಾಗಿದೆ ಈ ಪಾಂಚಜನ್ಯ ಶಂಖದಿಂದಲೇ ಶಿವನು ಸಮುದ್ರ ಮಂಥನದಿಂದ ಬಂದ ವಿಷವನ್ನು ಕುಡಿದಿದ್ದಾನೆಂದು ಪುರಾಣ ಹೇಳಲಾಗಿದೆ. ಈ ಶಂಖವು ಶಿವರಾತ್ರಿಯಂದು ಮಾತ್ರ ಕಾಣಿಸುತ್ತದೆ. ಉಳಿದ 364 ದಿನಗಳು  70 ರಿಂದ 80 ಅಡಿ ನೀರಿನೊಳಗೆ ಇರುತ್ತದೆ. ಆದರೆ ವಿಶೇಷತೆ ಎಂದರೆ ಈ ಜಾಗದಲ್ಲಿ ನೀರು ಹರಿಯುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: