ನೀವೆ ಸ್ವತಃ ಚಿಕ್ಕದಾಗಿ ಬಿಸಿನೆಸ್ ಮಾಡುವ ಆಸೆಯೆ ನೋಡಿ ಈ ಮಾಹಿತಿ

0

ಈಗಿನ ಸಮಯದಲ್ಲಿ ಓದಿಗೆ ತಕ್ಕಂತೆ ಸರಿಯಾಗಿ ಕೆಲಸ ಸಿಗುವುದಿಲ್ಲ ಅಲ್ಲದೆ ಇನ್ನೊಬ್ಬರ ಕೆಳಗೆ ಮಾಡುವ ಕೆಲಸದಲ್ಲಿ ನೆಮ್ಮದಿ ಇರುವುದಿಲ್ಲ. ನಾವೆ ಸ್ವಂತ ಬಿಸಿನೆಸ್ ಪ್ರಾರಂಭ ಮಾಡುವ ಕನಸು ಹಲವರದಾಗಿರುತ್ತದೆ. ಬಿಸಿನೆಸ್ ಮಾಡಲು ಹಲವು ಮಾರ್ಗಗಳಿವೆ ಯಾವಾಗಲೂ ಅದರ ಬೇಡಿಕೆ ಕಡಿಮೆ ಆಗದಿರುವ ಬಿಸಿನೆಸ್ ಪ್ರಾರಂಭಿಸಬೇಕು. ನಾವು ದಿನನಿತ್ಯ ಬಳಸುವ ಸೋಪ್ ಮೇಕಿಂಗ್ ಬಿಸಿನೆಸ್ ಪ್ರಾರಂಭಿಸಬಹುದು. ಈ ಬಿಸಿನೆಸ್ ಮಾಡಲು ಏನೇನು ಬೇಕು, ಅದರ ಲಾಭ ಇನ್ನಿತರ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೊ

ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಪಡದವರು ತಾವೆ ಮಾಲೀಕರಾಗಿ ಬಿಸಿನೆಸ್ ಪ್ರಾರಂಭಿಸಲು ಇಷ್ಟ ಪಡುತ್ತಾರೆ. ಅನೇಕ ಬಿಸಿನೆಸ್ ಪ್ರಾರಂಭ ಮಾಡಬಹುದು ಅದರಂತೆ ಸೋಪ್ ಮೇಕಿಂಗ್ ಬಿಸಿನೆಸ್ ಪ್ರಾರಂಭಿಸಬಹುದು. ಪ್ರತಿಯೊಬ್ಬರೂ ಪ್ರತಿದಿನ ಸೋಪ್ ಬಳಸುತ್ತಾರೆ ಆದ್ದರಿಂದ ಈ ಬಿಸಿನೆಸ್ ಗೆ ಬಹಳ ಬೇಡಿಕೆಯಿದೆ. ಸೋಪ್ ಗೆ ಇರುವ ಬೇಡಿಕೆ ಯಾವಾಗಲೂ ಕಡಿಮೆ ಆಗುವುದಿಲ್ಲ ಹೀಗಾಗಿ ಈ ಬಿಸಿನೆಸ್ ಪ್ರಾರಂಭಿಸಿದರೆ ಒಳ್ಳೆಯ ಲಾಭ ಗಳಿಸಬಹುದು. ಈ ಬಿಸಿನೆಸ್ ಪ್ರಾರಂಭಿಸಲು ಮೂರು ಮಷೀನ್ ಗಳು ಬೇಕಾಗುತ್ತದೆ. ಮಿಕ್ಸಿಂಗ್ ಮಷೀನ್ ಬೇಕಾಗುತ್ತದೆ ಈ ಮಷೀನ್ ನಲ್ಲಿ ತಯಾರಿಸಿದ ಮಿಶ್ರಣವನ್ನು ಸೋಪ್ ಬಾರ್ ಆಗಿ ತಯಾರಿಸಲು ಒಂದು ಮಶೀನ್ ಬೇಕಾಗುತ್ತದೆ.

ಸೋಪ್ ಮೇಲೆ ಬ್ರ್ಯಾಂಡ್ ನೇಮ್ ಅನ್ನು ಪ್ರಿಂಟ್ ಮಾಡಲು ಒಂದು ಮಷೀನ್ ಬೇಕಾಗುತ್ತದೆ. ಸೋಪ್ ಮೇಕಿಂಗ್ ಬಿಸಿನೆಸ್ ಪ್ರಾರಂಭಿಸಲು ಕೆಲವು ರಾ ಮೆಟೀರಿಯಲ್ಸ್ ಬೇಕಾಗುತ್ತದೆ ಸೋಪ್ ಬೇಸ್, ಸೋಡಿಯಂ ಸಿಲಿಕೇಟ್, ಪರ್ಫ್ಯೂಮ್, ಕಲರ್ ಬೇಕಾಗುತ್ತದೆ. ಸೋಪ್ ತಯಾರಿಸಲು ಮೊದಲು ಮಿಕ್ಸಿಂಗ್ ಮಷೀನ್ ಗೆ ಸೋಪ್ ಬೇಸ್ ಹಾಕಿ ಮಷೀನ್ ಆನ್ ಮಾಡಬೇಕು ಮಷೀನ್ ರೋಟೆಟ್ ಮಾಡಿ ಮಿಕ್ಸ್ ಮಾಡುತ್ತದೆ.

ಮಷೀನ್ ಗೆ ಸೋಡಿಯಂ ಸಿಲಿಕೇಟ್ ಹಾಕಬೇಕು ಇವೆರಡೂ ಸರಿಯಾಗಿ ಮಿಕ್ಸ್ ಆದ ನಂತರ ಗ್ಲಿಸರಿನ್ ಹಾಕಬೇಕು. ನಂತರ ಕಲರ್ ಮತ್ತು ಪರ್ಫ್ಯೂಮ್ ಹಾಕಬೇಕು. ಮಷೀನ್ ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡುತ್ತದೆ ಮಷೀನ್ ನ ಕೆಳಗೆ ಒಂದು ಪ್ಲೇಟ್ ಇರುತ್ತದೆ ಅದನ್ನು ರಿಮೂವ್ ಮಾಡಿದರೆ ಮಿಕ್ಸ್ ಆದ ಮಿಶ್ರಣ ಹೊರಗೆ ಬರುತ್ತದೆ ಅದನ್ನು ಒಂದು ಟಬ್ ಗೆ ಹಾಕಬೇಕು, ಅದು ಚಿಕ್ಕ ಚಿಕ್ಕ ಟ್ಯಾಬ್ಲೆಟ್ ರೀತಿ ಇರುತ್ತದೆ.

ಈ ಮಿಶ್ರಣವನ್ನು ಇನ್ನೊಂದು ಮಷೀನ್ ಗೆ ಹಾಕಬೇಕು ಈ ಮಷೀನ್ ಒಳಗೆ ರೋಲರ್ ಇರುತ್ತದೆ ಅದು ಚೆನ್ನಾಗಿ ರೋಲ್ ಮಾಡುತ್ತದೆ ಆ ಮಷೀನ್ ನಿಂದ ಸಣ್ಣದಾಗಿ ಮಾಡಿ ಔಟ್ ಪುಟ್ ಕೊಡುತ್ತದೆ ಅದನ್ನು ಮಷೀನ್ ಫಿಲ್ಟರ್ ಬದಲಾಯಿಸಿ ಅದೆ ಮಷೀನ್ ಗೆ ಹಾಕಬೇಕು. ನಂತರ ಸಣ್ಣ ಸಣ್ಣ ಲೇಯರ್ ನಂತೆ ಔಟ್ ಪುಟ್ ಸಿಗುತ್ತದೆ. ಅಂತಿಮವಾಗಿ ಸೋಪ್ ಬೇಸ್ ನಂತೆ ತಯಾರಾಗುತ್ತದೆ. ನಂತರ ಅದನ್ನು ಸಣ್ಣ ಸಣ್ಣ ಪೀಸ್ ಗಳಾಗಿ ಕಟ್ ಮಾಡಬೇಕು. ಆ ಪೀಸ್ ಅನ್ನು ಬ್ರ್ಯಾಂಡ್ ನೇಮ್ ಇರುವ ಮಷೀನ್ ನಲ್ಲಿ ಇಟ್ಟು ಪ್ರೆಸ್ ಮಾಡಿದರೆ ಸೋಪ್ ನ ಮೇಲೆ ಬ್ರ್ಯಾಂಡ್ ನೇಮ್ ಪ್ರಿಂಟ್ ಆಗುತ್ತದೆ.

ತಯಾರಾದ ಸೋಪ್ ಅನ್ನು ಪ್ಯಾಕ್ ಮಾಡಿ ಏರಿಯಾದಲ್ಲಿರುವ ಶಾಪ್ ಗಳಿಗೆ ಮಾರಾಟ ಮಾಡಬೇಕು. 100 ಗ್ರಾಂ ಸೋಪ್ ತಯಾರಿಸಲು ಬೇಕಾಗುವ ಖರ್ಚು 9-10 ರೂಪಾಯಿ, ಹೋಲ್ ಸೇಲ್ ಆಗಿ ಸೋಪ್ ಅನ್ನು 18 ರೂಪಾಯಿಗೆ ಮಾರಾಟ ಮಾಡಬಹುದು. 8 ರೂಪಾಯಿ ಲಾಭ ಸಿಗುತ್ತದೆ. ಪ್ರತಿದಿನ 1,000 ಸೋಪ್ ಮಾರಾಟವಾದರೆ 8,000 ರೂಪಾಯಿ ಆದಾಯ ಲಭ್ಯವಾಗುತ್ತದೆ. ಯಾರು ಬೇಕಾದರೂ ಈ ಬಿಸಿನೆಸ್ ಅನ್ನು ಪ್ರಾರಂಭಿಸಬಹುದು. ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಈ ಮಾಹಿತಿಯನ್ನು ಬಿಸಿನೆಸ್ ಮಾಡುವ ಮನಸ್ಸಿರುವ ಎಲ್ಲಾ ಯುವಕರಿಗೆ ತಿಳಿಸಿ.

Leave A Reply

Your email address will not be published.

error: Content is protected !!