ಪಹಣಿಯಲ್ಲಿ ನಮೂದನೆಯಾಗಿರುವ ಸಾಲವನ್ನು ಹೇಗೆ ತೆಗೆಯಬೇಕೆಂಬುದು ಈ ಕೆಳಗಿನಂತೆ ತಿಳಿದುಕೊಳ್ಳೋಣ.ಮೊದಲನೆಯದಾಗಿ ರೈತರು ತಾವು ಮಾಡಿದ ಸಾಲವನ್ನು ಸಂಬಂಧಪಟ್ಟ ಸಂಸ್ಥೆಗಾಗಲಿ ಅಥವಾ ಬ್ಯಾಂಕಿಗಾಗಲಿ ಹಣವನ್ನು ಕಟ್ಟಬೇಕು, ಕಟ್ಟಿದ ನಂತರ ರಸೀದಿಯನ್ನು ನೀವು ಪಡೆಯ ಬೇಕಾಗುತ್ತದೆ. ರಸೀದಿ ಪಡೆಯಲು ಬ್ಯಾಂಕ್ ಮ್ಯಾನೇಜರ್ ಹತ್ತಿರ ಹೋಗಿ ಸಾಲಾವಿಲ್ಲವೆಂಬ ಅಂದರೆ, ಬ್ಯಾಂಕಿನಲ್ಲಿ ಮರುಪಾವತಿ ಮಾಡಿದ್ದರೆ ಸಾಲ ಇಲ್ಲವೆಂಬ ಪ್ರಮಾಣ ಪತ್ರ ಪಡೆಯಬೇಕು. ಅಂದರೆ ನೋ ಡ್ಯೂ ಸರ್ಟಿಫಿಕೇಟ್ ಅನ್ನು ಬ್ಯಾಂಕ್ ಮ್ಯಾನೇಜರ್ ಇಂದ ಪಡೆದು ಕೊಳ್ಳಬೇಕು.
ಚಾಲ್ತಿ ವರ್ಷದ ಪಹಣಿಯನ್ನು ಕೂಡ ತೆಗೆದುಕೊಳ್ಳಬೇಕು ಮತ್ತು ಇದರ ಜೊತೆ ಆಧಾರ್ ಕಾರ್ಡ್ ಸಹ ಬೇಕಾಗುತ್ತದೆ ಮತ್ತು ಬ್ಯಾಂಕಿಗೆ ಸಾಲ ಮರುಪಾವತಿಸಿರುವ ಬಗ್ಗೆ ಒಂದು ಸರಳವಾಗಿ ಅರ್ಜಿಯನ್ನು ನೀವು ಬರೆಯಬೇಕಾಗುತ್ತದೆ ಅರ್ಜಿಯೊಂದಿಗೆ ಬ್ಯಾಂಕ್ ನೀಡಿರುವ ನೋ ಡ್ಯೂ ಸರ್ಟಿಫಿಕೇಟ್ ಮತ್ತು ಆಧಾರ್ ಕಾರ್ಡ್ ಮತ್ತು ಪಹಣಿ ಇವೆಲ್ಲಾ ದಾಖಲೆಗಳು ಲಗತ್ತಿಸಬೇಕು.
ಲಗತ್ತಿಸಿದ ನಂತರ ಈ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ತಾಲ್ಲೂಕಿನ ಭೂಮಿ ಕೇಂದ್ರದಲ್ಲಿ ಕೊಡಬೇಕು. ತದನಂತರ ತಾಲೂಕು ಭೂಮಿ ಕೇಂದ್ರದಿಂದ ನೀವು ಅಪ್ಲಾಯಿಸ್ಮೆಂಟ್ ರಸೀದಿಯನ್ನು ಸಹ ತೆಗೆದುಕೊಳ್ಳಬಹುದು. ಇದಾದನಂತರ ಮುಂದಿನ 30 ದಿನಗಳಲ್ಲಿ ನಿಮ್ಮ ಪಹಣಿಯಲ್ಲಿರುವ ಋಣಗಳು (ಜಮೀನಿನ ಮೇಲಿರುವ ಸಾಲ ಹೋಗುತ್ತದೆ) ಹೋಗಿ ಋಣ ಮುಕ್ತ ಪಹಣಿ ಆಗಿ ದೊರೆಯುತ್ತದೆ.
ಬಹುಮುಖ್ಯ ವಿಷಯವೆನೆಂದರೆ ಪಹಣಿಯಲ್ಲಿರುವ ಋಣಗಳು ತೆಗೆಯಬೇಕೆಂದರೆ ಎರಡು ವಿಧಾನಗಳಿರುತ್ತವೆ.
- ರೈತರು ಒಂದು ಲಕ್ಷಕ್ಕಿಂತ ಕಡಿಮೆ ಸಾಲ ಅಂದರೆ ಸಾಧಾರಣ ಬೆಳೆ ಸಾಲ ತೆಗೆದುಕೊಂಡಲ್ಲಿ ಈ ಮೇಲೆ ಹೇಳಿದ ಪ್ರಕ್ರಿಯೆ ಮಾಡಿದ್ದಲ್ಲಿ ನೀವು ಒಂದು ಲಕ್ಷಕ್ಕಿಂತ ಕಡಿಮೆ ಸಾಲ ಇದ್ದರೆ ಪಹಣಿಯಲ್ಲಿರುವ ಋಣ ಮುಕ್ತ ಋಣಗಳನ್ನು ತೆಗೆದು ಹಾಕಬಹುದು.
2.ಆದರೆ ರೈತರು ಒಂದು ಲಕ್ಷಕ್ಕಿಂತ ಹೆಚ್ಚು ಸಾಲ ಮಾರ್ಟ್ಗೆಜ್ ಮುಖಾಂತರ ತೆಗದು ಕೊಂಡಲ್ಲಿ ಅದನ್ನು ತೆಗೆಸಲು ಬೇರೆ ರೀತಿಯ ಕ್ರಮ ಇರುತ್ತದೆ.