ನಿಮ್ಮ ಬಳಿ ಈ 1 ರೂಪಾಯಿ ನೋಟು ಇದ್ರೆ ನಿಮಗೆ 45 ಸಾವಿರ ಸಿಗತ್ತೆ

0

ನಿಮ್ಮ ಜೇಬಿನಲ್ಲಿರುವ ನೋಟು ಲಕ್ಷಾಂತರ ರೂಪಾಯಿ ಮೌಲ್ಯದ್ದಾಗಿರಬಹುದು ಎಂದು ಹೇಳಿದರೆ ಬಹುಶಃ ನಿಮಗೆ ನಂಬಲು ಅಸಾಧ್ಯವಾದ ಮಾತು ಇದು ಎನಿಸಬಹುದು. ಆದರೆ ಅದು ಸಾಧ್ಯ. ಈ ನೋಟು ವಿಶೇಷ ಸರಣಿ ವಿಶೇಷ ಸಂಖ್ಯೆ ಮಿಸ್ ಪ್ರಿಂಟ್ ಅಥವಾ ವಿಶೇಷ ಸಹಿ ಆಗಿರಬಹುದು. ಅಂತಹ ನೋಟುಗಳನ್ನು ಅಪರೂಪದ ನೋಟುಗಳ ವರ್ಗದಲ್ಲಿ ಇರಿಸಲಾಗುತ್ತದೆ. ಇಂತಹ ನೋಟುಗಳನ್ನು ಅನೇಕ ವೆಬ್‌ಸೈಟ್‌ಗಳಲ್ಲಿ ಹರಾಜು ಮಾಡಲಾಗುತ್ತದೆ. ಆನ್‌ಲೈನ್ ಪ್ಲಾಟ್‌ ಫಾರ್ಮ್‌ ನಲ್ಲಿ 1 ರೂಪಾಯಿಯ ಹಳೆಯ ನೋಟಿಗೆ ಬದಲಾಗಿ 45 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ನಿಮ್ಮ ಬಳಿಯೂ 1 ರೂಪಾಯಿಯ ಹಳೆಯ ನೋಟಿದ್ದರೆ ನೀವು ಸಹ ಅದರ ಲಾಭವನ್ನು ಪಡೆಯಬಹುದು. ಆದರೆ ಆ ಲಾಭ ಪಡೆಯುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಭಾರತ ಸರ್ಕಾರ ಒಂದು ರೂಪಾಯಿ ನೋಟು ಮುದ್ರಣ ಮಾಡುವುದನ್ನು ಯಾವಾಗಲೋ ನಿಲ್ಲಿಸಿದೆ. ಆದರೆ ನಿಮ್ಮ ಬಳಿ ಇನ್ನೂ ಏನಾದರೂ ಹಳೆಯ 1 ರೂಪಾಯಿ ನೋಟು ಇದ್ದರೆ ಅದು ನಿಮಗೆ ಸಾವಿರಾರು ರೂಪಾಯಿಗಳನ್ನು ತಂದುಕೊಡುತ್ತದೆ. ಹಳೆಯ ನಾಣ್ಯಗಳು ಮತ್ತು ನೋಟುಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು ಎಂದು ನೀವು ಮೊದಲೇ ಕೇಳಿರಬಹುದು. ಕಳೆದ 26 ವರ್ಷಗಳ ಹಿಂದೆ ಒಂದು ರೂಪಾಯಿ ನೋಟನ್ನು ಮುದ್ರಿಸದೇ ಇರಲು ಭಾರತ ಸರ್ಕಾರ ನಿರ್ಧರಿಸಿತ್ತು. ಆದರೆ 1 ಜನವರಿ 2015 ರಿಂದ, ಈ ನೋಟಿನ ಮುದ್ರಣವನ್ನು ಪುನರ್ ಆರಂಭಿಸಲಾಯಿತು. ಅದೇನೇ ಆಗಿದ್ದರೂ ಅನೇಕ ಜನರು ಇನ್ನೂ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಅಭ್ಯಾಸ ಹೊಂದಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದ್ದರೆ, ನಿಮಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ ನಲ್ಲಿ ಇದಕ್ಕೆ 45ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇದರಲ್ಲಿ 1957 ರಲ್ಲಿ ಆಗಿನ ಕಾಲದಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಎಚ್.ಎಂ.ಪಟೇಲ್ ಅವರ ಸಹಿ ಇರಬೇಕು. ಇದರೊಂದಿಗೆ ಈ ನೋಟಿನ ಸರಣಿ ಸಂಖ್ಯೆ 123456 ಆಗಿರಬೇಕು ಎಂಬುದನ್ನು ಸಹ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಭಾರತೀಯ ಕರೆನ್ಸಿಯ ಅಪರೂಪದ ನೋಟುಗಳನ್ನು ಇಬೇನಲ್ಲಿ ಬಿಡ್ ಮಾಡಲಾಗುತ್ತದೆ. ಇಬೇ ಅಂತಹ ನೋಟುಗಳನ್ನು ಕಾಲಕಾಲಕ್ಕೆ ಬಿಡ್ ಮಾಡುತ್ತದೆ. ವೆಬ್‌ಸೈಟ್ ಮೂಲಕ ಯಾರಾದರೂ ಈ ಬಿಡ್‌ನಲ್ಲಿ ಭಾಗವಹಿಸಬಹುದು. ನೀವು ವಿಶೇಷ ಸರಣಿ ನೋಟು ಹೊಂದಿದ್ದರೆ ನೀವು ಸಹ ಭಾಗವಹಿಸಬಹುದು. ಇನ್ನು ನಾವು ಒಂದು ರೂಪಾಯಿ ಹಳೆಯ ನೋಟಿಗೆ 45 ಸಾವಿರ ರೂಪಾಯಿಗೆ ಪಡೆಯುವುದು ಹೇಗೆ? ಮಾಧ್ಯಮಗಳ ವರದಿಗಳ ಪ್ರಕಾರ ಈ ಒಂದು ರೂಪಾಯಿ ನೋಟನ್ನು ಕ್ವೊಯಿನ್ ಮಾರುಕಟ್ಟೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾರಾಟ ಮಾಡಬಹುದು. ಈ ಒಂದು ರೂಪಾಯಿ ಹಳೆಯ ನೋಟಿಗೆ ಸಂಪೂರ್ಣ 49,999 ರೂಪಾಯಿ ಆದರೆ ರಿಯಾಯಿತಿಯ ನಂತರ, ವೆಬ್‌ಸೈಟ್ ಇದಕ್ಕಾಗಿ 44,999 ರೂಪಯಿಗಳನ್ನು ನಿಗದಿಪಡಿಸಿದೆ. ಇದಕ್ಕಾಗಿ ನೀವು ವೆಬ್‌ಸೈಟ್‌ನ ಶಾಪ್ ವಿಭಾಗಕ್ಕೆ ಹೋಗಬೇಕಾಗುತ್ತದೆ. ಇದರ ನಂತರ ನೀವು ನಾಟ್ ಬಂಡಲ್ ವರ್ಗಕ್ಕೆ ಹೋಗಬೇಕು. ಅಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

Leave A Reply

Your email address will not be published.

error: Content is protected !!