ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ನಮ್ಮ ಜಮೀನಿನ ನಕ್ಷೆ ಹಾಗೂ 1956 ರಿಂದ ಇಲ್ಲಿಯವರೆಗೆ ನಮ್ಮ ಜಮೀನಿನಲ್ಲಿ ಯಾರ ಯಾರ ಹೆಸರುಗಳಿದೆ, ಯಾವ ಕಡೆ ನಮ್ಮ ಜಮೀನಿನ ನಕ್ಷೆ ಇದೆ ಎಂಬ ಮಾಹಿತಿ ಹಾಗೂ ದಾಖಲೆಗಳನ್ನು ಆನ್ಲೈನ್ ಮೂಲಕ ಹೇಗೆ ಪಡೆದುಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಮೊದಲು ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಸರ್ಚ್ ಬಾರ್ ನಲ್ಲಿ ಭೂಮಿ ಎಂದು ಟೈಪ್ ಮಾಡಬೇಕು ಭೂಮಿ ಆನ್ಲೈನ್ ಎಂಡ್ ಲ್ಯಾಂಡ್ ರೆಕಾರ್ಡ್ಸ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ಕರ್ನಾಟಕ ಸರ್ಕಾರದ ವೆಬ್ಸೈಟ್ ಓಪನ್ ಆಗುತ್ತದೆ ಅದರಲ್ಲಿ ಸರ್ವೆ ಡಾಕ್ಯೂಮೆಂಟ್ಸ್ ಎಂಬ ಆಪ್ಷನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಕರ್ನಾಟಕ ಲ್ಯಾಂಡ್ ರೆಕಾರ್ಡ್ಸ್ ಇಮೇಜ್ ರಿಟ್ರೈವಲ್ ಸಿಸ್ಟಮ್ ಎಂಬ ಪೇಜ್ ಓಪನ್ ಆಗುತ್ತದೆ ಮೊಬೈಲ್ ಸಂಖ್ಯೆಯನ್ನು ಹಾಕಬೇಕು. ಕ್ಯಾಪ್ಚ ಕೋಡ್ ಅನ್ನು ಸರಿಯಾಗಿ ಎಂಟ್ರಿ ಮಾಡಬೇಕು ನಂತರ ಜನರೇಟ್ ಓಟಿಪಿ ಎಂಬ ಆಪ್ಶನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ಹಾಕಿ ಲಾಗಿನ್ ಆಗಬೇಕು.
ಆಗ ವೆಬ್ಸೈಟ್ ನ ಇಂಟರ್ ಫೇಸ್ ಓಪನ್ ಆಗುತ್ತದೆ ನಂತರ ನಮ್ಮ ಜಿಲ್ಲೆ, ತಾಲೂಕು, ಹೋಬಳಿ ವಿಲೇಜ್ ಅನ್ನು ಸೆಲೆಕ್ಟ್ ಮಾಡಿಕೊಂಡು ಸರ್ವೆ ನಂಬರ್ ಅನ್ನು ಹಾಕಬೇಕು ನಂತರ ಸರ್ಚ್ ಎಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಕೆಲವು ಡಾಕ್ಯೂಮೆಂಟ್ ಗಳ ಹೆಸರು ಕಾಣಿಸುತ್ತದೆ ಒರಿಜಿನಲ್ ಪಕ್ಕಾ ಬುಕ್, ವರಿಜಿನಲ್ ಟಿಪ್ಪಣಿ, ಹಿಸ್ಸಾ ಇನ್ನಿತರ ಡಾಕ್ಯುಮೆಂಟ್ಸ್ ಗಳು ಇರುತ್ತವೆ. ಡಾಕ್ಯುಮೆಂಟ್ ಮುಂದೆ ವ್ಯೂ ಡಾಕ್ಯುಮೆಂಟ್ಸ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಪಿಡಿಎಫ್ ಫೈಲ್ ಓಪನ್ ಆಗುತ್ತದೆ. ಒರಿಜಿನಲ್ ಪಕ್ಕಾ ಬುಕ್ ನಲ್ಲಿ ಯಾರ ಯಾರ ಹೆಸರಿನಲ್ಲಿ ಎಷ್ಟು ಜಮೀನಿದೆ ಎಂದು ನೋಡಬಹುದು. 1956 ರಿಂದ ಇಲ್ಲಿಯವರೆಗೆ ಯಾರು ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿಯನ್ನು ಇದರಲ್ಲಿ ನೋಡಬಹುದು. ಯಾವ ಯಾವ ದಿಕ್ಕಿಗೆ ಎಷ್ಟು ಜಮೀನು ಯಾರ ಹೆಸರಿಗಿದೆ ಎಂಬ ಮಾಹಿತಿಯನ್ನು ಕೂಡ ಇದರಲ್ಲಿ ನೋಡಬಹುದು.
1956 ರಿಂದ ಇಲ್ಲಿಯವರೆಗೂ ಜಮೀನಿನಲ್ಲಿ ಯಾವೆಲ್ಲಾ ಬದಲಾವಣೆಗಳಾಗಿವೆ ಸಂಪೂರ್ಣ ಮಾಹಿತಿಯನ್ನು ಈ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ಜಮೀನಿಗೆ ಸಂಬಂಧಿಸಿದಂತೆ ತಕರಾರು ನಡೆದಿದ್ದಲ್ಲಿ ಅದರ ಬಗ್ಗೆಯೂ ಸಹ ತಿಳಿದುಕೊಳ್ಳಬಹುದು. ಸರ್ವೇ ನಂಬರ್ ಮೂಲಕ ಜಮೀನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಬಹುದು. ಡಾಕ್ಯುಮೆಂಟ್ ನಲ್ಲಿ ಎಲ್ಲಾ ಮಾಹಿತಿಗಳನ್ನು ತಿಳಿಸಲಾಗಿದೆ, ಪ್ರಿಂಟ್ ತೆಗೆದುಕೊಳ್ಳಬಹುದು. ಜಮೀನಿನ ಬಗ್ಗೆ ಸುಲಭವಾಗಿ ಹಣ ಖರ್ಚು ಮಾಡದೆ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.