ನಾವಿಂದು ನಿಮಗೆ ಕಾವೇರಿ ಡಿಜಿಟಲ್ ಸ್ಮಾರ್ಟ್ ಕಾರ್ಡ್ ನ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ನಮ್ಮ ರಾಜ್ಯ ಸರ್ಕಾರ ಯಾವಾಗಲೂ ಡಿಜಿಟಲ್ ಕಾರ್ಡುಗಳಲ್ಲಿ ಒಂದು ಹೆಜ್ಜೆ ಮುಂದೆ ಇದೆ ಎಂದು ಹೇಳಬಹುದು. ಯಾಕೆಂದರೆ ಕರ್ನಾಟಕದಲ್ಲಿ ಸಾಮಾನ್ಯವಾಗಿ ಎಲ್ಲಾ ಸೇವೆಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ಕಾರ್ಡುಗಳು ಬಂದಿದ್ದು ಈಗಾಗಲೇ ಜನರು ಅವುಗಳನ್ನು ಪಡೆದುಕೊಂಡು ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಅದೇ ರೀತಿಯಾಗಿ ನೊಂದಣಿ ಹಾಗೂ ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಈ ಒಂದು ಹೊಸ ಕಾವೇರಿ ಡಿಜಿಟಲ್ ಕಾರ್ಡನ್ನು ಹೊರತಂದಿದ್ದಾರೆ. ಈ ಒಂದು ಕಾವೇರಿ ಕಾರ್ಡಿನಿಂದ ಯಾವ ರೀತಿಯಾದಂತಹ ಸಹಾಯ ಆಗುತ್ತದೆ ಅದು ಎಲ್ಲಿ ದೊರೆಯುತ್ತದೆ ಯಾವ ರೀತಿಯಾಗಿ ಇರುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಕಾವೇರಿ ಸ್ಮಾರ್ಟ್ ಕಾರ್ಡ್ ನಿಮಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಸಿಗುತ್ತದೆ. ಹಾಗಾದರೆ ಈ ಕಾರ್ಡು ಯಾರಿಗೆ ಸಿಗುತ್ತದೆ ಎನ್ನುವುದನ್ನು ನೋಡುವುದಾದರೆ ಈ ಕಾರ್ಡ್ ನೀವು ಹೊಂದಿರುವ ಆಸ್ತಿಗಳಿಗೆ ಸಂಬಂಧಿಸಿದ್ದಾಗಿದ್ದರಿಂದ ಆಸ್ತಿಪಾಸ್ತಿಯನ್ನು ಹೊಂದಿರುವವರಿಗೆ ಈ ಕಾರ್ಡ್ ದೊರೆಯುತ್ತದೆ.
ಮೊದಲೆಲ್ಲ ನೀವು ಯಾವುದಾದರೂ ಆಸ್ತಿಯನ್ನು ಖರೀದಿ ಮಾಡಿದಾಗ ನಿಮ್ಮ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮೊದಲು ಕಾಗದಗಳ ರೂಪದಲ್ಲಿ ದಾಖಲೆಗಳು ದೊರೆಯುತ್ತಿದ್ದವು. ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಕಾಗದಗಳ ಬದಲಾಗಿ ಡಿಜಿಟಲ್ ಸ್ಮಾರ್ಟ್ ಕಾರ್ಡ್ ಸಿಗುತ್ತದೆ. ಯಾವ ರೀತಿಯಾಗಿ ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಎಟಿಎಂ ಕಾರ್ಡುಗಳಿವೆ ಆ ರೀತಿಯಾಗಿ ನಿಮ್ಮ ಆಸ್ತಿಗೆ ಸಂಬಂಧಪಟ್ಟಂತೆ ಒಂದು ಸ್ಮಾರ್ಟ್ ಡಿಜಿಟಲ್ ಕಾರ್ಡ್ ನಿಮಗೆ ದೊರೆಯಲಿದೆ ಇದು ಸರ್ಕಾರದ ಹೊಸ ಪರಿಕಲ್ಪನೆಯಾಗಿದೆ.
ಈ ಕಾರ್ಡುಗಳನ್ನು ಬಳಸಿಕೊಂಡು ಮುಂದೆ ನೀವು ನಿಮ್ಮ ಆಸ್ತಿಗೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳನ್ನು ಹುಡುಕುವುದಾಗಲಿ ಅಥವಾ ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳುವುದಾಗಲಿ ಅದನ್ನು ನೀವು ಕೇವಲ ಈ ಕಾರ್ಡನ್ನು ಬಳಸಿ ಪರಿಶೀಲನೆ ಮಾಡಬಹುದು. ನಿಮ್ಮ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದರೂ ತುಂಬಾ ಸಲೀಸಾಗಿ ಈ ಕಾರ್ಡಿನ ಮುಖಾಂತರ ನಿಮಗೆ ದೊರೆಯುತ್ತದೆ.
ನಿಮ್ಮ ಆಸ್ತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೆ ನೀವು ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸದೆ ಸುಲಭವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಕಾರ್ಡುಗಳನ್ನು ಬಳಸುವುದರಿಂದ ಜನರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ತೆಗೆಸಿಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಲಂಚ ನೀಡುವುದು ಅವರ ಮುಂದೆ ಗೋಗರೆಯುವಂತಹ ಪ್ರಸಂಗಗಳಿಗೆ ಮುಂದಿನ ದಿನಗಳಲ್ಲಿ ತೆರೆ ಬೀಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.