ನಿಂತ ಲಕ್ಷೀಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ

0

ನಮ್ಮ ಸಂಸ್ಕೃತಿಯಲ್ಲಿ ದೇವರನ್ನು ಪೂಜಿಸಲು ಅದರದ್ದೇ ಆದ ವಿಧಿ ವಿಧಾನಗಳಿವೆ. ಎಲ್ಲೆಂದರಲ್ಲಿ ಹೇಗೆಂದರಲ್ಲಿ ದೇವರ ಪೂಜೆ ಮಾಡಿದರೆ ಅದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ಆದ್ದರಿಂದಲೇ ಜನರು ಮನೆ ಕಟ್ಟಿಸುವಾಗ ಪ್ರತಿ ಹಂತದಲ್ಲೂ ಮುನ್ನೆಚರಿಕೆ ವಹಿಸುತ್ತಾರೆ. ಅಡುಗೆ ಮನೆ, ದೇವರ ಮನೆ ಸೇರಿದಂತೆ ಎಲ್ಲವೂ ಸೂಕ್ತ ಸ್ಥಾನದಲ್ಲಿರಬೇಕೆಂದು ವಾಸ್ತು ಮೊರೆ ಹೋಗುತ್ತಾರೆ. ನಿಯಮಾನುಸಾರ ದೇವರ ಪೂಜೆ ಮಾಡಿದರೆ ಸುಖ ಸಂತೋಷ, ನೆಮ್ಮದಿ, ಸಂಪತ್ತು ಮನೆಯಲ್ಲಿ ನೆಲೆಗೂಡುತ್ತದೆ.

ಹಣದ, ಸಂಪತ್ತಿನ ಒಡತಿ ಲಕ್ಷ್ಮೀ ದೇವಿಯ ಕೃಪೆ ನಮಗೆ ಇರಲೇಬೇಕು. ಲಕ್ಷ್ಮೀ ಮಾತೆಯು ಧನ, ಧಾನ್ಯಗಳ ಅಧಿದೇವತೆಯಾಗಿದ್ದಾಳೆ. ಜಗತ್ತಿನ ಎಲ್ಲರಿಗೂ ವೈಭವ, ಕೀರ್ತಿ ಹಾಗೂ ಯಶಸ್ಸನ್ನು ದಯಪಾಲಿಸುವ ದೇವಿ ಇವಳು. ಒಮ್ಮೆ ಇವಳ ಕೃಪೆ ನಮ್ಮ ಮೇಲಾಗಲಿ ಎಂದು ಎಲ್ಲರೂ ಬಯಸುತ್ತೇವೆ. ಲಕ್ಷ್ಮೀ ದೇವಿಯ ಕೃಪೆಗಾಗಿ ಮನೆಯಲ್ಲಿ ಆಕೆಯ ಫೋಟೋಗಳನ್ನು ತಂದಿಟ್ಟು ಪೂಜಿಸುತ್ತೇವೆ. ಕೆಲವು ಕೋಣೆಗಳಲ್ಲಿ ಲಕ್ಷ್ಮೀ ಫೋಟೋಗಳನ್ನು ತೂಗುಹಾಕುತ್ತೇವೆ. ಹಾಗೆಂದು ಲಕ್ಷ್ಮೀ ದೇವಿಯ ಎಲ್ಲ ಫೋಟೋಗಳನ್ನು ಹಾಕುವುದಲ್ಲ. ಎಲ್ಲ ಪೋಟೊಗಳು ಸಹ ಸಂಪತ್ತನ್ನು ದಯಪಾಲಿಸುವುದಿಲ್ಲ.

ನಮ್ಮ ಜೀವನದ ಪ್ರತಿ ದಿನ, ಪ್ರತಿ ಕ್ಷಣ ಹಣ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಪ್ರತಿದಿನ ಜನರು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಅದರಲ್ಲೂ ಶುಕ್ರವಾರ ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಇನ್ನೂ ವಿಶೇಷವಾಗಿ ಪೂಜಿಸಲಾಗುತ್ತದೆ. ಆದರೆ ಈ ಪೂಜಾ ವಿಧಾನದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ನಿಮಗೆ ಲಕ್ಷ್ಮಿ ಒಲಿಯುವುದರಲ್ಲಿ ಅನುಮಾನವೇ ಇಲ್ಲ. ವೇದ, ಉಪನಿಷತ್ತುಗಳಲ್ಲಿ ದೇವಿಗೆ ಶ್ರೀ ಎಂಬ ಪದ ಬಳಕೆ ಮಾಡಲಾಗುತ್ತದೆ.

ಶ್ರೀ ಎಂದರೆ ಮಹಾಲಕ್ಷ್ಮಿ ಎಂದು ಅರ್ಥ. ಆದರೆ ಯಾವುದೇ ಕಾರಣಕ್ಕೂ ನಿಂತ ಲಕ್ಷ್ಮಿಯ ಫೋಟೋವನನ್ನು ಮನೆಯಲ್ಲಿ ಇರಿಸಿಕೊಳ್ಳಬಾರದು, ಪೂಜಿಸಲೂಬಾರದು. ಶುಕ್ರವಾರ ಲಕ್ಷ್ಮಿಗೆ ವಿಶೇಷವಾದ ದಿನ, ಆ ದಿನ ಲಕ್ಷ್ಮಿ ಮೊದಲ ಬಾರಿಗೆ ಭೃಂಗ ಋಷಿಯ ಮಗಳಾಗಿ ಅವರ ಆಶ್ರಮದಲ್ಲಿ ಜನಿಸುತ್ತಾಳೆ. ನಂತರ ಮತ್ತೊಮ್ಮೆ ಸಮುದ್ರ ಮಂಥನದ ಸಮಯದಲ್ಲಿ ಅಮೃತಸಾಗರದಲ್ಲಿ ದೇವಿ ಜನಿಸುತ್ತಾಳೆ. ಚತುರ್ಭುಜ ಲಕ್ಷ್ಮಿ ಮಹಾವಿಷ್ಣುವಿನ ಪತ್ನಿಯಾಗಿ ಸ್ವೀಕರಿಸಲ್ಪಡುತ್ತಾಳೆ. ಈ ನಾಲ್ಕೂ ಭುಜಗಳು ಧರ್ಮ, ಅರ್ಥ, ಕಾಮ, ಮೋಕ್ಷವನ್ನು ಪ್ರತಿನಿಧಿಸುತ್ತವೆ. ಪ್ರಪಂಚದ ಎಲ್ಲೆಡೆ ಲಕ್ಷ್ಮಿಯನ್ನು ನಾನಾ ಹೆಸರಿನಿಂದ ಪೂಜಿಸಲಾಗುತ್ತದೆ. ಆದರೆ ಮನೆಯಲ್ಲಿ ನಿಂತ ಲಕ್ಷ್ಮಿಯ ಫೋಟೋವನ್ನು ಇಡಬಾರದು. ಬೀರು ಅಥವಾ ಹಣ ಸಂಗ್ರಹಿಸುವ ಯಾವ ಸ್ಥಳದಲ್ಲಿ ಕೂಡಾ ನಿಂತ ಲಕ್ಷ್ಮಿಯನ್ನು ಇಡಲೇಬಾರದು.

ಅಷ್ಟೇ ಅಲ್ಲ, ಕೆಂಪು ವಸ್ತ್ರಧಾರಿ ಲಕ್ಷ್ಮಿಯ ಫೋಟೋವನ್ನು ಕೂಡಾ ಮನೆಗೆ ತರಬಾರದು. ಲಕ್ಷ್ಮಿ ಚಂಚಲೆ, ಯಾರ ಮನೆಯಲ್ಲೂ ಆಕೆ ಸ್ಥಿರವಾಗಿ ನೆಲೆಸುವವಳಲ್ಲ. ಎಷ್ಟೇ ಐಶ್ವರ್ಯ, ಸಂಪತ್ತು ಇದ್ದರೂ ಆ ಮನೆಯಲ್ಲಿ ಏನಾದರೂ ಒಂದು ಕೆಡಕು ಇದ್ದೇ ಇರುತ್ತದೆ. ಒಂದು ವೇಳೆ ನಿಂತ ಲಕ್ಷ್ಮಿಯನ್ನು ಪೂಜೆ ಮಾಡಿದರೆ ಲಕ್ಷ್ಮಿ ಅಲ್ಲಿ ಉಳಿಯುವುದಿಲ್ಲ. ಮನೆಯಲ್ಲಿ ಅಷ್ಟದರಿದ್ರ, ಧನನಾಶವಾಗುತ್ತದೆ. ಜೊತೆಗೆ ಮಹಿಳೆಯರಿಗೆ ಅನಾರೋಗ್ಯ ಕಾಡುತ್ತದೆ. ಲಕ್ಷ್ಮೀ ದೇವಿಯು ಮನೆಯಲ್ಲೇ ನೆಲೆಸಿದ್ದರೆ ಸಂಪತ್ತು ಹೆಚ್ಚಾಗುತ್ತದೆ. ಜೊತೆಗೆ ಸಮೃದ್ಧಿ ಸಹ ಉಂಟಾಗುತ್ತದೆ.

ಗೂಬೆ ಲಕ್ಷ್ಮೀ ದೇವಿಯ ವಾಹನವಾಗಿದೆ. ಯಾವುದೇ ಕಾರಣಕ್ಕೂ ಲಕ್ಷ್ಮೀ ದೇವಿಯು ಗೂಬೆ ಮೇಲೆ ಕುಳಿತ ಇಲ್ಲವೇ ಗೂಬೆಯ ಜೊತೆಗೆ ಇರುವ ಫೋಟೊಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಏಕೆಂದರೆ ಈ ಫೋಟೊ ದೇವಿ ಸಂಚಾರ ಮಾಡುವುದರ ಪ್ರತೀಕವಾಗಿದ್ದು, ಲಕ್ಷ್ಮೀ ಸಂಚಾರ ಹೊರಟರೆ ಹಣ ಮನೆಯಲ್ಲಿ ನಿಲ್ಲುವುದಿಲ್ಲ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ವಿಗ್ರಹ ರೂಪದಲ್ಲಿ ಲಕ್ಷ್ಮಿಯನ್ನು ಪೂಜೆ ಮಾಡಬೇಕಾದರೂ ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಬೇಕು. ಪ್ರತಿ ಶುಕ್ರವಾರ ದೇವಿಗೆ ಹಾಲಿನ ಪಾಯಸವನ್ನು ನೈವೇದ್ಯವನ್ನಾಗಿ ಇಡಬೇಕು. ಹಸಿರು ಬಣ್ಣದ ಕಮಲಪೀಠದಲ್ಲಿ ಕುಳಿತಿರುವ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ, ಸಕಲ ಸಂಪತ್ತು, ಆಯಸ್ಸು, ಆರೋಗ್ಯ ನೆಲೆಸುತ್ತದೆ. ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ಲಭಿಸುತ್ತದೆ.

Leave A Reply

Your email address will not be published.

error: Content is protected !!