ಕನ್ನಡ ಚಿತ್ರರಂಗದ ಎವ್ವರ್ ಗ್ರೀನ್ ಹೀರೊ ಎಂದರೆ ರಮೇಶ್ ಅರವಿಂದ್ ಅವರು. ಈಗಲೂ ಅವರ ಮೊದಲಿನದೆ ನಟನಾ ಶೈಲಿ ಎಲ್ಲರನ್ನೂ ಆಕರ್ಷಿಸುತ್ತದೆ. ರಮೇಶ್ ಅರವಿಂದ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಅವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ರಮೇಶ್ ಅರವಿಂದ್ ಅವರು ಕನ್ನಡ ಚಿತ್ರರಂಗಕ್ಕೆ ಆಗಮಿಸುವ ಮೊದಲೆ ಅರ್ಚನಾ ಅವರನ್ನು ಭೇಟಿ ಮಾಡಿದ್ದರು. ರಮೇಶ್ ಅವರು ನಾನು ಇಂದು ಬಹುಮುಖಿ ಕೆಲಸಗಳನ್ನು ಮಾಡುತ್ತೇನೆ ಎಂದರೆ ಅದಕ್ಕೆ ಕಾರಣ ನನ್ನ ಪತ್ನಿ ಅರ್ಚನಾ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರಮೇಶ್ ಅವರು ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ನಿರೂಪಣೆ, ವಾಗ್ಮಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಕೆಲಸಗಳಿಂದ ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ಅವರು ಮದುವೆಯಾಗಿ ಮೂವತ್ತು ವರ್ಷಗಳಾಗಿವೆ ಕನ್ನಡ ಚಿತ್ರರಂಗದ ಅನ್ಯೋನ್ಯ ದಂಪತಿಗಳಲ್ಲಿ ಈ ಜೋಡಿಯು ಒಂದಾಗಿದೆ.
ಬಿಎಂಎಸ್ ಕಾಲೇಜಿನಲ್ಲಿ ರಮೇಶ್ ಅರವಿಂದ್ ಹಾಗೂ ಅರ್ಚನಾ ಅವರ ಭೇಟಿಯಾಗುತ್ತದೆ ಐದು ವರ್ಷಗಳ ಕಾಲ ಅವರು ಸ್ನೇಹಿತರಾಗಿದ್ದರು. ನಂತರ 1991 ಜುಲೈ 7ರಂದು ವಿವಾಹವಾದರು. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಮಗಳ ಹೆಸರು ನಿಹಾರಿಕಾ ಮಗನ ಹೆಸರು ಅರ್ಜುನ್. ರಮೇಶ್ ಅರವಿಂದ್ ಮಕ್ಕಳೊಂದಿಗೆ ಸ್ನೇಹಿತರಂತೆ ಇರುತ್ತಾರೆ ಆದ್ದರಿಂದ ಮಕ್ಕಳು ಏನೆ ತಪ್ಪು ಮಾಡಿದರೂ, ಸರಿ ಮಾಡಿದರೂ ರಮೇಶ್ ಅವರಿಗೆ ತಿಳಿಸುತ್ತಾರೆ. ರಮೇಶ್ ಅರವಿಂದ್ ಅವರು ಸಿನಿಮಾ, ನಿರೂಪಣೆ ಹೀಗೆ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಮನೆಯ ಕಡೆ ಜವಾಬ್ದಾರಿ ವಹಿಸಿಕೊಳ್ಳಲು ಆಗುವುದಿಲ್ಲ. ರಮೇಶ್ ಅರವಿಂದ್ ಅವರ ಅನುಪಸ್ಥಿತಿಯಲ್ಲಿ ಅರ್ಚನಾ ಅವರು ಉತ್ತಮವಾಗಿ ಮನೆಯನ್ನು ಹಾಗೂ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.
ಒಮ್ಮೆ ವಿಷ್ಣುವರ್ಧನ್ ಅವರು ರಮೇಶ್ ಅವರ ಮನೆಗೆ ಭೇಟಿ ನೀಡಿದಾಗ ವಿಷ್ಣುವರ್ಧನ್ ಅವರು ನಿಮ್ಮ ಮನೆಯಿಂದ ಹೊರ ಹೋಗಲು ಮನಸ್ಸಾಗುವುದಿಲ್ಲ ನಿಮ್ಮ ಮನೆಯಲ್ಲಿ ಒಂದು ಕಳೆ ಇದೆ ಎಂದಿದ್ದರು. ದಂಪತಿಗಳಲ್ಲಿ ಒಬ್ಬರಿಗೊಬ್ಬರು ನಂಬಿಕೆ ಇರಬೇಕು ಇದು ಮೂಲಭೂತ ವಿಷಯವಾಗಿದೆ ಎಂದು ರಮೇಶ್ ಅವರು ಹೇಳುತ್ತಾರೆ. ನಿಹಾರಿಕಾ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಅವರ ವಿವಾಹವಾಗಿದೆ. ರಮೇಶ್ ಅರವಿಂದ್ ಅವರು ಯಂಗ್ ಎಂಡ್ ಎನರ್ಜಿಟಿಕ್ ಹೀರೊ ಆಗಿದ್ದು ತಮ್ಮ ಕುಟುಂಬದವರೊಂದಿಗೆ ಸಂತೋಷವಾಗಿ ಜೀವನ ನಡೆಸಲಿ ಎಂದು ಆಶಿಸೋಣ.