ನಟಿ ಹಾಗೂ ರಾಜಕಾರಣಿ ತಾರಾ ಅವರ ಮಗ ಈಗ ಏನ್ ಮಾಡ್ತಿದಾರೆ ಗೊತ್ತೇ?

0

ಕನ್ನಡ ಚಿತ್ರರಂಗದ ಖ್ಯಾತ ನಟಿ ತಾರಾ ಅವರ ಮಗ ಈಗ ಹೇಗಿದ್ದಾರೆ? ಅವರು ಎನು ಮಾಡುತ್ತಾ ಇದ್ದಾರೆ ಎನ್ನುವುದರ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ. ತಾರಾ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ. ನಾಯಕನಟಿ , ಪೋಷಕ ನಟಿ ಹೀಗೆ ಯಾವುದೇ ರೀತಿಯ ಪಾತ್ರವನ್ನು ಕೊಟ್ಟರು ಕೂಡ ಆ ಪಾತ್ರಕ್ಕೆ ನೂರಕ್ಕೆ ನೂರರಷ್ಟು ಜೀವತುಂಬಿ ನಟನೆ ಮಾಡುತ್ತಾರೆ ಇವರು. ಇವರು ಕಣ್ಣಿನಲ್ಲಿ ಮಾತನಾಡುತ್ತಾ ಮೌನದಲ್ಲಿ ಅಭಿನಯಿಸಬಲ್ಲರು.

1984 ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. 1985 ರಲ್ಲಿ ತುಳಸಿದಳ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ತಾರಾ ಅವರು ಪಾದರ್ಪಣೆ ಮಾಡುತ್ತಾರೆ. ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಅವರ ಮೊದಲ ಚಿತ್ರವಾದ ಆನಂದ್ ಚಿತ್ರದಲ್ಲಿ ತಾರಾ ಅವರು ನಟಿಸುತ್ತಾರೆ. ಹಾಗೂ ರಮೇಶ್ ಅರವಿಂದ್ ಅವರ ಚಿತ್ರ ಸುಂದರ ಸ್ವಪ್ನಗಳು ಹಾಗೂ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಅವರ ಗುರಿ ಚಿತ್ರದಲ್ಲಿ ಕೂಡ ತಾರಾ ಅವರು ನಟನೆ ಮಾಡಿದ್ದಾರೆ. ಹಾಗೆಯೇ ನಟ ಶಶಿಕುಮಾರ್ ಅವರ ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ ಚಿತ್ರದಲ್ಲಿ ಕೂಡ ಹಾಗೂ ಅನಂತನಾಗ್ ಅವರ ಉಂಡು ಹೋದ ಕೊಂಡು ಹೋದ ಚಿತ್ರದಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದರು. ಕನ್ನಡದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿ ತಾರಾ ಅವರು ನಟನೆ ಮಾಡಿದ್ದಾರೆ.

ಇನ್ನು ಇವರಿಗೆ ಕಲಾತ್ಮಕ ಚಿತ್ರಗಳು ಹೆಚ್ಚಿನ ಹೆಸರನ್ನು ತಂದುಕೊಟ್ಟವು. ಕಲಾತ್ಮಕ ಚಿತ್ರಗಳಲ್ಲಿ ತಾಯಿಯ ಪಾತ್ರದಲ್ಲಿ ನಟಿ ತಾರಾ ಅವರು ತುಂಬಾ ಮನೋಜ್ಞವಾಗಿ ಅಭಿನಯಿಸಿ ಈ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. 1999 ರಲ್ಲಿ ತೆರೆಕಂಡ ಗಿರೀಶ್ ಕಾರ್ನಾಡ್ ಅವರು ನಿರ್ದೇಶಿಸಿದಕಾನೂರು ಹೆಗ್ಗಡತಿ ಚಿತ್ರದಲ್ಲಿ ನಟನೆ ಮಾಡುವುದರ ಮೂಲಕ ತಾರಾ ಅವರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಯಶಸ್ಸು ಹಾಗೂ ಕೀರ್ತಿಯನ್ನು ತಂದುಕೊಟ್ಟಿತು. ಈ ಚಿತ್ರದಲ್ಲಿ ತಾರಾ ಅವರ ನಟನೆಗೆ ಫಿಲಂ ಫೇರ್ ಅವಾರ್ಡ್ ಕೂಡ ದೊರಕಿತ್ತು ಅಷ್ಟೇ ಅಲ್ಲದೆ ಈ ಚಿತ್ರಕ್ಕೆ ನ್ಯಾಷನಲ್ ಫಿಲ್ಮ್ ಅವಾರ್ಡ್ ಕೂಡ ದೊರಕಿದ್ದು ಮಾತ್ರವಲ್ಲದೆ ಇನ್ನೂ ಅನೇಕ ರೀತಿಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ನಂತರ ಮತದಾನ , ಸೈನೆಡ್ , ಹಸೀನಾ ಚಿತ್ರಗಳಲ್ಲಿ ತಾರಾ ಅವರ ಅದ್ಭುತ ನಟನೆಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳು ದೊರಕಿವೆ. ಈ ರೀತಿಯಾಗಿ ತಾರಾ ಅವರು ಸಾಕಷ್ಟು ಪ್ರಶಸ್ತಿಗಳನ್ನು ಹಾಗೂ ಸನ್ಮಾನ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಾರಾ ಅವರು 2012 13ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಸಹ ಆಗಿದ್ದರು. ತಾರಾ ಅವರು ನಟನೆ ಮಾತ್ರವಲ್ಲದೆ ರಾಜಕೀಯದಲ್ಲಿಯೂ ಸಹ ಭಾಗವಹಿಸಿ, ಭಾರತೀಯ ಜನತಾ ಪಾರ್ಟಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ತಾರಾ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್ ಸಿ ವೇಣು ಅವರನ್ನು ವಿವಾಹವಾಗಿದ್ದಾರೆ. ಹೆಚ್ ಸಿ ವೇಣು ಅವರು ಕೂಡ ಕನ್ನಡ ಚಲನಚಿತ್ರ ರಂಗದಲ್ಲಿ ಉತ್ತಮ ಛಾಯಾಗ್ರಾಹಕ ಎಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ನಟಿ ತಾರಾ ಹಾಗೂ ಛಾಯಾಗ್ರಾಹಕ ಎಚ್ ಸಿ ವೇಣು ದಂಪತಿಗಳಿಗೆ ಶ್ರೀಕೃಷ್ಣ ಹೆಸರಿನ ಮುದ್ದಾದ ಪುಟ್ಟ ಮಗನಿದ್ದಾನೆ.

Leave A Reply

Your email address will not be published.

error: Content is protected !!
Footer code: