WhatsApp Group Join Now
Telegram Group Join Now

ಇಂದು ನಾವು ಎರಡುಸಾವಿರದ ಇಪ್ಪತ್ತೊಂದರ ಸೆಪ್ಟೆಂಬರ್ ತಿಂಗಳಿನ ಕೊನೆಯ ಸಪ್ತಾಹ ಅಂದರೆ ಸೆಪ್ಟೆಂಬರ್ ಇಪ್ಪತ್ತೆಡರಿಂದ ಸೆಪ್ಟೆಂಬರ್ ಮುವತ್ತನೆ ತಾರೀಕಿನ ಸಮಯದ ಫಲಗಳನ್ನು ತಿಳಿದುಕೊಳ್ಳೋಣ ಮತ್ತು ಈ ಸಪ್ತಾಹವು ವಿಶೇಷ ರೂಪದಲ್ಲಿ ಧನು ರಾಶಿ ಜಾತಕಗಳಿಗೆ ಹೇಗೆ ಅನುಕೂಲವಾಗಲಿದೆ ಈ ಎಲ್ಲಾ ಫಲಗಳು ಧನು ರಾಶಿ ಜಾತಕದವರಿಗೆ ಹೇಗೆ ಲಭಿಸಲಿವೆ ಮತ್ತು ಯಾವ ವಿಷಯವಾಗಿ ಧನು ರಾಶಿ ಜಾತಕದವರು ವಿಶೇಷ ಎಚ್ಚರಿಕೆಯನ್ನು ಹೊಂದಿರಬೇಕು ಎಂಬುದರ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಈ ಸಪ್ತಾಹದ ಪ್ರಾರಂಭವು ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಪ್ರಾರಂಭದಲ್ಲಿಯೇ ಬುಧನ ರಾಶಿ ಪರಿವರ್ತನೆ ಉಂಟಾಗಿದೆ. ಬುಧ ದೇವರು ತುಲಾರಾಶಿಗೆ ಪರಿವರ್ತನೆ ಹೊಂದುವ ಮೂಲಕ ನಮ್ಮ ಕರ್ಮ ಕ್ಷೇತ್ರದಲ್ಲಿ ಗೋಚರಿಸಿದ್ದಾನೆ ಇಲ್ಲಿ ವಿಶೇಷವೆಂದರೆ ಕರ್ಮ ಕ್ಷೇತ್ರದಲ್ಲಿ ಈ ಮೊದಲಿಂದಲೇ ಶುಕ್ರ ದೇವ ಉಪಸ್ಥಿತಿ ಇರುವುದರಿಂದಾಗಿ ಇಲ್ಲಿ ಲಕ್ಷ್ಮೀನಾರಾಯಣ ಯೋಗದ ನಿರ್ಮಾಣವಾಗಿದೆ ಇದರಿಂದಾಗಿ ಇಲ್ಲಿ ಬಹುತೇಕ ಲಾಭದ ಪ್ರಾಪ್ತಿಯು ಉಂಟಾಗಿದೆ.

ಈ ವಿಶೇಷ ಮಾಹಿತಿ ನಂತರ ಧನು ರಾಶಿ ಜಾತಕ ಸಾಪ್ತಾಹಿಕ ಮಾಹಿತಿಯನ್ನು ತಿಳಿದು ಕೊಳ್ಳುವುದಾದರೆ ಮೊದಲಿಗೆ ಇಲ್ಲಿ ಸೆಪ್ಟೆಂಬರ್ ಇಪ್ಪತ್ತೆರಡನೇ ದಿನಾಂಕದ ದಿನದ ಫಲಗಳನ್ನು ನೋಡೋಣ. ಈ ದಿನದಂದು ನಿಮಗೆ ಮಾತಾಪಿತರ ಸುಖದ ಪ್ರಾಪ್ತಿ ಉಂಟಾಗಿದೆ ಈ ದಿನದಂದು ಕರ್ಮ ಹೀನರು ಕೂಡ ಕೆಲಸ ಮಾಡಲಿದ್ದಾರೆ ಅಂದರೆ ಕರ್ಮದಿಂದ ವಂಚಿತರಾದವರಿಗೆ ಇಲ್ಲಿ ಕರ್ಮ ಗಯ್ಯುವ ಅವಕಾಶ ಪ್ರಾಪ್ತಿ ಉಂಟಾಗಿದೆ ಇಲ್ಲಿ ನೌಕರಿ ವಂಚಿತ ಜಾತಕದವರಿಗೆ ಉತ್ತಮ ನೌಕರಿಯ ಯೋಗಗಳು ಸೆಪ್ಟೆಂಬರ್ ಇಪ್ಪತ್ತೆರಡನೇ ತಾರೀಕಿನಂದು ಉಂಟಾಗಿದೆ ಈ ದಿನದಂದು ನಿಮ್ಮಆದಾಯದ ಪ್ರಾರಂಭವು ಉಂಟಾಗಿದೆ.

ಸಪ್ಟೆಂಬರ್ ಇಪ್ಪತ್ಮೂರು ಇಪ್ಪತ್ನಾಲ್ಕು ಇಪ್ಪತ್ತೈದು ಸಂಜೆ ಆರು ಗಂಟೆ ಹದಿನೈದು ನಿಮಿಷದವರೆಗೆ ಸಮಯದ ಕುರಿತಾಗಿ ನೋಡುವುದಾದರೆ ಈ ದಿನಗಳು ಈ ಸಪ್ತಾಹದ ಅತ್ಯಂತ ಉತ್ತಮವಾದ ದಿನಗಳಾಗಿವೆ. ಈ ದಿನಗಳು ಮಹಾಲಕ್ಷ್ಮಿ ಮಾತೆಯ ವಿಶೇಷ ಕೃಪೆ ನಿಮ್ಮ ರಾಶಿ ಜಾತಕದವರ ಮೇಲೆ ಉಂಟಾಗಲಿದೆ ಇಲ್ಲಿ ನಿಮಗೆ ಸ್ಟಾಕ್ ಮಾರ್ಕೆಟ್ ಮತ್ತು ಕಮ್ಯುನಿಟಿ ಸೆಕ್ಟರ್ ನಲ್ಲಿ ಲಾಭದ ಪ್ರಾಪ್ತಿ ಉಂಟಾಗಲಿದೆ ಜೊತೆಗೆ ಈ ವಿಶೇಷ ದಿನಗಳಂದು ನಿಮ್ಮ ಸರ್ಕಾರಿ ಕೆಲಸ ಕಾರ್ಯಗಳು ಕೂಡ ಅತ್ಯಂತ ವೇಗದಿಂದ ನೆರವೇರಲಿದೆ.

ಅಲ್ಲದೆ ನಿಮಗೆ ರಾಜಕೀಯ ಕ್ಷೇತ್ರದಲ್ಲಿ ಸನ್ಮಾನದ ಪ್ರಾಪ್ತಿಯಾಗಲಿದೆ ಅಥವಾ ಇಲ್ಲಿ ನಿಮಗೆ ಉನ್ನತ ಪದವಿಯ ಪ್ರಾಪ್ತಿಯು ಕೂಡ ಉಂಟಾಗಲಿದೆ. ಅದರಲ್ಲಿಯೂ ಯಾರು ತಮ್ಮ ತಂದೆಯವರ ವ್ಯಾಪಾರವನ್ನು ಮುನ್ನಡೆಸಿಕೊಂಡು ಹೊರಟಿರುವವರಿಗೆ ಅತ್ಯಧಿಕ ಲಾಭದ ಪ್ರಾಪ್ತಿ ಈ ದಿನಗಳಂದು ಉಂಟಾಗಲಿದೆ. ಜೊತೆಗೆ ಇಲ್ಲಿ ನಿಮ್ಮ ತಂದೆಯಿಂದಾಗಿ ಒಂದಷ್ಟು ಲಾಭದ ಪ್ರಾಪ್ತಿ ಉಂಟಾಗ ಬಹುದಾಗಿದೆ. ಈ ಸಮಯವು ಲಾಟರಿ ಅಂತಹ ವಿಷಯದಲ್ಲಿ ಆಸಕ್ತಿ ಹೊಂದಿದವರಿಗೆ ಮಹತ್ವಪೂರ್ಣ ದಿನವಾಗಿ ಸಾಬೀತಾಗಲಿದೆ. ವಿದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಲಾಭದ ಪ್ರಾಪ್ತಿಯಾಗಲಿದೆ ಐಟಿ ಸೆಕ್ಟರ್ ಆನ್ಲೈನ್ ಬಿಸಿನೆಸ್ ಕನ್ಸಲ್ಟೆನ್ಸಿ ಕಾರ್ಯದಿಂದ ಲಾಭ ಉಂಟಾಗಬಹುದು.

ವಕೀಲರು ಮತ್ತು ಸಲಹೆಗಾರರಿಗೆ ಈ ಸಮಯ ಶುಭಕರವಾಗಿ ಸಾಬೀತಾಗಬಹುದಾಗಿದೆ. ಅಲ್ಲದೆ ಈ ವಿಶೇಷ ದಿನಗಳಲ್ಲಿ ನಿಮ್ಮ ಅನೇಕ ಕಾರ್ಯಗಳು ವಿಶೇಷ ರೀತಿಯಲ್ಲಿ ಸಂಪನ್ನವಾಗಲಿದೆ ಅದರಲ್ಲೂ ಹದಗೆಟ್ಟು ಹೋದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವ ಸಾಧ್ಯತೆ ಇದೆ. ಜೊತೆಜೊತೆಗೆ ಈ ದಿನಗಳಲ್ಲಿ ನಿಮ್ಮ ಸಂಬಂಧದೊಳಗಿನ ವಿಶ್ವಾಸ ಮತ್ತು ಪ್ರೇಮದ ವೃದ್ಧಿಯಾಗಲಿದೆ. ನಿಮ್ಮ ಪ್ರೀತಿಪಾತ್ರರ ಮುಂದೆ ಪ್ರೇಮದ ಪ್ರಸ್ತಾವನೆಯನ್ನು ಇಟ್ಟರೆ ಅವರ ಒಪ್ಪಿಗೆ ಸಿಗಬಹುದಾಗಿದೆ. ಈ ಸಮಯ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಸಾಬೀತಾಗಲಿದೆ ವಿದ್ಯಾರ್ಥಿಗಳು ಓದಲು ಕುಳಿತುಕೊಂಡರೆ ಏಕಾಗ್ರತೆ ಹೊಂದಲು ಸಾಧ್ಯವಾಗಲಿದೆ.

ಇಲ್ಲಿ ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ ಈ ಸಂಬಂಧ ನಿಮಗೆ ಪರಿವಾರದ ಸಹಕಾರವೂ ಲಭಿಸಲಿದೆ ಈ ಸಮಯದಲ್ಲಿ ಶಾರೀರಿಕ ಪ್ರಬಲತೆ ಕಂಡು ಬರಲಿದ್ದು ಎಲ್ಲ ಇಚ್ಛೆಗಳು ಪೂರ್ತಿ ಆಗಬಹುದಾಗಿದೆ. ನಿಮ್ಮ ಮನಸ್ಸು ಅತ್ಯಂತ ಶಾಂತವಾಗಿ ಇರಲಿದ್ದು ಹೇಗೆ ಬೇಕೋ ಹಾಗೆ ಸಮಯ ನಿರ್ಮಾಣವಾಗಲಿದೆ ಈ ದಿನಗಳಂದು ಯಾತ್ರೆಗಳಿಗಾಗಿ ಸಮಯ ಉತ್ತಮವಾಗಿರಲಿದ್ದು ಯಾತ್ರೆ ನಿರ್ವಿಘ್ನವಾಗಿ ನೆರವೇರಲಿದ್ದು ಸಮಯವು ಅತ್ಯಂತ ಸುಖಕರವಾ ಗಿದ್ದು ಈ ಎಲ್ಲ ಕೆಲಸ ಕಾರ್ಯಗಳನ್ನು ಈ ದಿನದಂದು ಮಾಡಿಕೊಳ್ಳಲು ಉತ್ತಮವಾಗಿದೆ. ಕಾರಣ ಮುಂದೆ ಬರಲಿರುವ ಕೆಲದಿನಗಳು ನಿಮ್ಮ ಪಾಲಿಗೆ ಸಮಸ್ಯೆಗಳೊಂದಿಗೆ ಹಾನಿಯನ್ನು ಸಹ ಹೊತ್ತು ತರಲಿದೆ ಹೀಗಾಗಿ ಈ ದಿನಗಳಂದು ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣ ಮಾಡಿಕೊಳ್ಳದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.

ಇದರ ನಂತರ ಸೆಪ್ಟೆಂಬರ್ ಇಪ್ಪತ್ತೈದನೇ ತಾರೀಖಿನ ಸಂಜೆ ಆರು ಗಂಟೆ ಹದಿನೈದು ನಿಮಿಷದ ನಂತರದ ಸಮಯ ಸೆಪ್ಟೆಂಬರ್ ಇಪ್ಪತ್ತಾರು ಮತ್ತು ಇಪ್ಪತ್ತೆಳನೇ ತಾರೀಖಿನ ದಿನಗಳ ಕುರಿತಾಗಿ ನೋಡುವುದಾದರೆ ಈ ದಿನ ನಿಮಗೆ ಹಾನಿಯನ್ನು ಉಂಟುಮಾಡುವ ದಿನಗಳಾಗಿವೆ ಈ ದಿನಗಳಂದು ಚಂದ್ರ ಮತ್ತು ರಾಹುವಿನ ಗ್ರಹಣ ದೋಷವು ನಿಮ್ಮ ಷಷ್ಟಮ ಭಾವದಲ್ಲಿ ಉಂಟಾಗಲಿದೆ. ಹೀಗಾಗಿ ಈ ಸಮಯದಲ್ಲಿ ವಿಶೇಷವಾಗಿ ನಿಮ್ಮ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ. ಇಲ್ಲಿ ನಿಮ್ಮ ಕರ್ಮ ಕ್ಷೇತ್ರವೇ ಇರಲಿ ಅಥವಾ ಮನೆಯೆ ಆಗಿರಲಿ ಸಂಬಂಧಗಳ ಮಧ್ಯೆ ವೈಮನಸ್ಸು ಕಲಹಗಳು ನಿರ್ಮಾಣವಾಗಲಿದೆ.

ವಿಶೇಷವಾಗಿ ನೀವು ನಿಮ್ಮ ಕ್ರೋಧವನ್ನು ನಿಯಂತ್ರಣದಲ್ಲಿಟ್ಟುಕೊಂಡು ಮೌನವಾಗಿರುವುದು ಉತ್ತಮವಾದ ಸಲಹೆಯಾಗಿದೆ. ಏನೇ ಮಾತನಾಡುವುದಾದರೆ ತುಂಬಾ ವಿಚಾರ ಮಾಡಿ ಲೆಕ್ಕಾಚಾರ ಮಾಡಿ ಮಾತನಾಡುವುದು ಉತ್ತಮವಾಗಿದೆ. ಜೊತೆಗೆ ಬೆಲೆಬಾಳುವ ವಸ್ತುಗಳು ಕೆಟ್ಟುಹೋಗುವುದು ಕಳೆದುಹೋಗುವುದು ಅಥವಾ ಕಳ್ಳತನ ಆಗುವ ಸಾಧ್ಯತೆ ಇದೆ. ಇಲ್ಲಿ ನಿಮ್ಮ ಚಿಂತೆಯೂ ಕೂಡ ಹೆಚ್ಚಾಗಬಹುದು ನಿಮ್ಮ ಪರಿವಾರ ಸದಸ್ಯರೊಬ್ಬರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದ್ದು ಇದು ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು.

ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಕುರಿತಾಗಿ ಕಾಳಜಿಯನ್ನು ವಹಿಸಬೇಕಾಗುತ್ತದೆ ಇಲ್ಲಿ ನಿಮ್ಮ ಮನಸ್ಸು ಅಶಾಂತಿ ಮತ್ತು ವಿಚಲಿತವಾಗಿ ಕಂಡು ಬರಲಿದೆ. ಇದೆಲ್ಲದರ ಜೊತೆ ಈ ದಿನಗಳು ಹೂಡಿಕೆಗೆ ಉತ್ತಮವಾಗಿರುವುದಿಲ್ಲ ಆದ್ದರಿಂದ ಯಾವುದೇ ಹೂಡಿಕೆಯ ವಿಚಾರ ಕೈಗೊಳ್ಳುವುದು ಸೂಕ್ತವಲ್ಲ ಅಲ್ಲದೆ ಈ ದಿನಗಳಲ್ಲಿ ಅನಾವಶ್ಯಕ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು ಇಲ್ಲಿ ನಿಮ್ಮ ಅನಾವಶ್ಯಕ ಖರ್ಚುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಾಗಿದೆ.

ಸೆಪ್ಟೆಂಬರ್ ಇಪ್ಪತ್ತೆಂಟು ಇಪ್ಪತ್ತೊಂಬತ್ತು ಮತ್ತು ಮೂವತ್ತನೇ ತಾರೀಖಿನ ರಾತ್ರಿ ಏಳು ಗಂಟೆ ಮೂರು ನಿಮಿಷದ ವರೆಗಿನ ಸಮಯದ ಕುರಿತಾಗಿ ನೋಡುವುದಾದರೆ ಈ ಸಮಯದಲ್ಲಿ ನಿಮಗೆ ದಾಂಪತ್ಯದ ಸುಖದ ಪ್ರಾಪ್ತಿ ಉಂಟಾಗಲಿದೆ. ಪಾಲುಗಾರಿಕೆ ವ್ಯವಹಾರದಲ್ಲಿಯು ಉತ್ತಮ ಲಾಭ ಪ್ರಾಪ್ತಿಯಾಗಲಿದೆ. ಅಲ್ಲದೆ ಈ ಹಿಂದಿನ ಮೂರು ದಿನಗಳ ಅಂತರದಲ್ಲಿ ಕಂಡುಬಂದ ಬಹುತೇಕ ಸಮಸ್ಯೆಗಳಿಗೆ ಇಲ್ಲಿ ಸಮಾಧಾನವು ಲಭಿಸಲಿದೆ. ಇಲ್ಲಿ ಆತ್ಮವಿಶ್ವಾಸದಲ್ಲಿ ವೃದ್ಧಿ ಆಗಲಿದ್ದು ಜೊತೆಗೆ ಈ ಹಿಂದೆ ಉಂಟಾಗಿದ್ದ ಸಂಬಂಧದ ವೈಮನಸ್ಸು ಕೂಡ ಸರಿಹೋಗಲಿದೆ.

ಇಲ್ಲಿ ನೀವು ನಿಮ್ಮಿಂದ ಮುನಿಸಿಕೊಂಡವರನ್ನು ಮನವೊಲಿಸುವ ಪ್ರಯತ್ನಮಾಡುವಲ್ಲಿ ಸಫಲವಾಗುತ್ತಿರಿ. ಈ ಎಲ್ಲದರ ಜೊತೆಗೆ ವ್ಯಾಪಾರಕ್ಕೆ ಸಂಬಂಧಿಸಿದ ಲಾಭದ ಪ್ರಾಪ್ತಿಯಾಗಲಿದೆ ನೌಕರಿ ಸಂಬಂಧಿತ ಸಮಸ್ಯೆಗಳಿಗೆ ಸಮಾಧಾನ ದೊರೆಯಲಿದ್ದು ಇಲ್ಲಿಯೂ ನಿಮಗೆ ಲಾಭದ ಪ್ರಾಪ್ತಿಯಾಗಲಿದೆ ಜೊತೆಗೆ ಈ ದಿನಗಳಂದು ಯಾತ್ರೆ ಕೈಗೊಳ್ಳುವುದು ಮತ್ತು ಏನಾದರೂ ಕರೀದಿ ಸುವುದು ನಿಮ್ಮ ಪಾಲಿಗೆ ಉಚಿತವಾಗಿ ಸಾಬೀತಾಗಲಿದೆ.

ಆದರೆ ಅದೇ ಸೆಪ್ಟೆಂಬರ್ ಮೂವತ್ತನೇ ತಾರೀಖಿನ ರಾತ್ರಿ ಏಳು ಗಂಟೆ ಮೂರು ನಿಮಿಷದ ನಂತರದ ಸಮಯದಲ್ಲಿ ಮತ್ತೆ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ. ಇಲ್ಲಿ ಏನೇ ಮಾತನಾಡುವುದಾದರು ಅಳೆದು ತೂಗಿ ಮಾತನಾಡಬೇಕು ಜೊತೆಗೆ ಈ ಸಮಯ ಯಾತ್ರೆಗೆ ಉಚಿತವಾಗಿರಲಾರದು ಹಾಗಾಗಿ ಈ ಸಮಯದಲ್ಲಿ ಯಾತ್ರೆಗೆ ಹೊರಡುವವರು ಯಾತ್ರೆಯಿಂದ ಮುಂದೂಡುವುದು ಉತ್ತಮ. ಈ ಸಮಯದಲ್ಲಿ ಏನಾದರೂ ಸಮಸ್ಯೆ ಆಕಸ್ಮಿಕವಾಗಿ ತಲೆದೋರಬಹುದಾಗಿದೆ. ಆದ್ದರಿಂದ ಎಚ್ಚರಿಕೆ ಅತ್ಯಗತ್ಯವಾಗಿದೆ ಇನ್ನು ಕೊನೆಯದಾಗಿ ಇಲ್ಲಿ ಮಾಡಿಕೊಳ್ಳುವ ಪರಿಹಾರೋಪಾಯವೇನೆಂದರೆ ಈ ಸಪ್ತಾಹದ ಇಪ್ಪತ್ತೈದು ಇಪ್ಪತ್ತಾರು ಮತ್ತು ಇಪ್ಪತ್ತೆಳನೇ ತಾರೀಖಿನ ಸಂಜೆ ಹಾಲು ಕುಡಿಯುವುದನ್ನು ತ್ಯಜಿಸಬೇಕು ಜೊತೆಗೆ ಈ ದಿನಗಳಂದು ಕಪ್ಪು ಶ್ವಾನಕ್ಕೆ ರೊಟ್ಟಿಯನ್ನು ತಿನ್ನಿಸಬೇಕು

ಸೆಪ್ಟೆಂಬರ್ ಮೂವತ್ತನೇ ತಾರೀಖಿನ ಸಂಜೆಯ ಸಮಯದಲ್ಲಿ ಮನೆಯ ಈಶಾನ್ಯ ಮೂಲೆಯಲ್ಲಿ ಸಾಸಿವೆ ಎಣ್ಣೆ ದೀಪ ಬೆಳಗಿಸಬೇಕು ಇದರಿಂದಾಗಿ ನಿಮ್ಮ ಸಮಸ್ಯೆಯು ದೂರವಾಗುವುದರೊಂದಿಗೆ ಉತ್ತಮ ಫಲಗಳು ಪ್ರಾಪ್ತಿ ಆಗುತ್ತದೆ. ಈ ರೀತಿಯಾಗಿ ಧನುರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ಕೊನೆಯ ಸಪ್ತಾಹದಲ್ಲಿ ಮಿಶ್ರಫಲ ಗಳಿದ್ದು ಮೇಲೆ ಸೂಚಿಸಿರುವ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡು ನೆಮ್ಮದಿಯ ಬದುಕನ್ನ ನಿಮ್ಮದಾಗಿಸಿಕೊಳ್ಳಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: