ಧನು ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಏನೆಲ್ಲಾ ಆಗುತ್ತೆ ನೋಡಿ ಮಾಸ ಭವಿಷ್ಯ

0

ಪ್ರತಿಯೊಬ್ಬರೂ ತಮ್ಮ ಭವಿಷ್ಯ ಉತ್ತಮವಾಗಿರಲು ಬಯಸುತ್ತಾರೆ .ಮುಂಬರುವ ದಿನಗಳಲ್ಲಿ ಒದಗಬಹುದಾದ ಸಮಸ್ಯೆಗಳಿಗೆ ಜ್ಯೋತಿಷ್ಯದಲ್ಲಿ ಪರಿಹಾರವನ್ನು ಹುಡುಕುತ್ತಾರೆ . ಪ್ರತಿಯೊಂದು ರಾಶಿಯು ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ .ಇದರಲ್ಲಿ ಧನು ರಾಶಿಯ ಡಿಸೆಂಬರ್ ತಿಂಗಳ ವಿಶೇಷತೆಯನ್ನು ತಿಳಿಯೋಣ .

ಧನು ರಾಶಿಯವರು ಡಿಸೆಂಬರ್ ಮತ್ತು ಮುಂಬರುವ ಹೊಸ ವರ್ಷದಲ್ಲಿ ಕೆಲವು ಬದಲಾವಣೆಗಳನ್ನು ಕಾಣುತ್ತಾರೆ. ಗುರು ಮತ್ತು ಶನಿ ಗ್ರಹಗಳ ಪರಿವರ್ತನೆ ಯಿಂದಾಗಿ ಒಳ್ಳೆಯ ಫಲ ದೊರೆಯುವ ಸಾಧ್ಯತೆ ಇದೆ. ಧನು ರಾಶಿಯವರಿಗೆ ಆಭರಣವನ್ನು ಖರೀದಿಸುವ ಯೋಗಗಳು ಬರಲಿದೆ. ಕುಜನಿಂದಾಗಿ ಒಳ್ಳೆಯ ಫಲಗಳು ಬರುವಂಥದ್ದು ,ಶುಕ್ರನಿಂದ ಹಲವಾರು ಸುಖಭೋಗಗಳು ಒದಗುವಂತದ್ದು ಹೀಗೆ ಅನೇಕ ಶುಭಫಲಗಳನ್ನು ಕಾಣಬಹುದು.

ಸುಗಂಧದ ದ್ರವ್ಯ ವ್ಯಾಪಾರಿಗಳು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವವರು, ಬಟ್ಟೆ ವ್ಯಾಪಾರಿಗಳು, ಉಡುಗೊರೆ ವ್ಯಾಪಾರಿಗಳು, ಸಂಗೀತ ವಾದ್ಯಗಳನ್ನು ನುಡಿಸುವವರು, ನಾಟಕಗಳನ್ನು ಮಾಡುವವರು, ಮುಂತಾದವರು ಲಗ್ನದಲ್ಲಿ ಶುಕ್ರ ಇರುವುದರಿಂದ ಒಳ್ಳೆಯ ಫಲವನ್ನು ಅನುಭವಿಸುತ್ತಾರೆ. ಹಾಗೆಯೇ ಬುಧ ಕೂಡ ಇವರ ಲಗ್ನದಲ್ಲಿ ವಿವಾಹದ ವಿಚಾರವಾಗಿ ಮಾಡುವಂತಹ ಕಾರ್ಯಗಳಲ್ಲಿ ಸಫಲತೆಯನ್ನು ತಂದು ಕೊಡುವಲ್ಲಿ ನೆರವಾಗುತ್ತಾನೆ. ವಿವಾಹ ವಿಚಾರಗಳಿಂದ ಉಂಟಾದ ತೊಂದರೆಗಳನ್ನು ದೂರ ಮಾಡುತ್ತಾನೆ .

ಇನ್ನು ಶನಿಯಿಂದ ಉಂಟಾದ ಕೆಲವು ಸಮಸ್ಯೆಗಳು ಅಂದರೆ, ಹಣದ ವಿಚಾರದಲ್ಲಿ, ಕುಟುಂಬದ ವಿಚಾರದಲ್ಲಿ, ಮಾತಿನ ವಿಚಾರದಲ್ಲಿ, ದಾಖಲೆಗಳ ವಿಚಾರದಲ್ಲಿ ಉಂಟಾಗುವ ಕಷ್ಟಗಳು ಮುಂಬರುವ ದಿನಗಳಲ್ಲಿ ದೂರವಾಗಲಿದೆ. ಹಣಕಾಸಿನ ವಿಚಾರದಲ್ಲಿ ಲಾಭಗಳು ಆಗುವ ಸಾಧ್ಯತೆ ಇದೆ .

ಧನು ರಾಶಿಯಲ್ಲಿ ಗುರುವಿನ ಪಾತ್ರವೇನೆಂದರೆ, ಗೋಚಾರ ಫಲದ 22 ನೇ ಆಧಾರದ ಮೇಲೆ ಹೇಳುವುದಾದರೆ ಚತುರ್ಥದಲ್ಲಿ ಗುರುವಿಗೆ ಕೆಲವು ಕೆಟ್ಟ ಫಲಗಳು ಇದ್ದಾವೆ. ತಮ್ಮದೇ ಬಂಧುಗಳಿಂದ ಕಷ್ಟಗಳನ್ನು ಅನುಭವಿಸುತ್ತಾರೆ ಮತ್ತು ಸುಖಗಳಿಗೆ ಹಾನಿ ಉಂಟಾಗುತ್ತದೆ .ಈತನಿಂದ ಒದಗುವ ಕೆಟ್ಟ ಫಲಗಳು ಇನ್ನೆರಡು ಶುಭ ರಾಶಿಗಳಿಂದ ದೂರವಾಗುತ್ತವೆ.

ಕೊನೆಯದಾಗಿ ರವಿಯ ಪಾತ್ರ ಹೇಳುವುದಾದರೆ ಈ ತಿಂಗಳಿನಲ್ಲಿ ದೇಹಾಯಾಸವನ್ನು ಉಂಟುಮಾಡುತ್ತಾನೆ, ವೈಭವವನ್ನು ನಾಶ ಮಾಡುತ್ತಾನೆ .ಈ ತಿಂಗಳ 17ನೇ ತಾರೀಖಿನ ನಂತರ ನಿಮ್ಮ ಲಗ್ನಕ್ಕೆ ಬಂದು ಸೇರುವ ರವಿಯು ವೃಶ್ಚಿಕ ರಾಶಿಯಲ್ಲಿದ್ದಾಗ ನಿಮ್ಮ ಸಫಲತೆಗೆ ಭಂಗ ಉಂಟು ಮಾಡುತ್ತಾನೆ. ಸ್ವಲ್ಪ ಖರ್ಚುಗಳನ್ನು ಮಾಡಿಸುತ್ತಾನೆ ಮತ್ತು ಅಸಫಲತೆ ಕಾಣುವ ಸಾಧ್ಯತೆ ಹೆಚ್ಚು.

ಧನು ರಾಶಿಗೆ ಡಿಸೆಂಬರ್ ತಿಂಗಳಲ್ಲಿ ಉತ್ತಮವಾಗಿರುವ ಕೆಲವು ಒಳ್ಳೆಯ ದಿನಗಳೆಂದರೆ ಮೂಲ ನಕ್ಷತ್ರದವರಿಗೆ 6, 15, 24 , ಪೂರ್ವಾಷಾಡ ನಕ್ಷತ್ರದವರಿಗೆ 7 , 14 ,25 ,ಉತ್ತರಾಷಾಢ ನಕ್ಷತ್ರದವರಿಗೆ 8,17 ,26, ಈ ದಿನಗಳು ತುಂಬಾ ಉತ್ತಮವಾದ ದಿನಗಳಾಗಿವೆ .ಯಾವುದೇ ಕೆಲಸವನ್ನು ಈ ದಿನಗಳಲ್ಲಿ ಆರಂಭ ಮಾಡುವುದು ತುಂಬಾ ಒಳ್ಳೆಯದು.

ಪರಿಹಾರದ ವಿಚಾರ ಬಂದರೆ ನಿಮ್ಮ ಲಗ್ನದಲ್ಲಿ ಕೆಲವು ಅಶುಭಗಳನ್ನು ತರಲಿರುವ ಗುರು ವನ್ನು ಸಮೃದ್ಧನನ್ನಾಗಿ ಮಾಡಬೇಕು ಅದಕ್ಕಾಗಿ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಸೇವೆಗಳನ್ನು ಮಾಡಿ ಆರಾಧನೆ ಮಾಡಿದರೆ ನೀವು ಗುರುದೋಷ ನಿವಾರಣೆ ಮಾಡಿಕೊಳ್ಳಬಹುದು. ಇನ್ನು ರವಿಯಿಂದ ಬರುವ ದೆಹಾಯಾಸದ ಬಗ್ಗೆ ಅಷ್ಟೊಂದು ಚಿಂತಿಸುವ ಅಗತ್ಯವಿಲ್ಲ. ಒಟ್ಟಾರೆಯಾಗಿ

ಡಿಸೆಂಬರ್ ತಿಂಗಳ ನಂತರ ಧನು ರಾಶಿಯವರಿಗೆ ಒಳ್ಳೆಯ ಲಾಭಗಳು, ಅವಕಾಶಗಳು ಕಂಡುಬರುವ ಸಾಧ್ಯತೆ ಇದೆ .ಆರೋಗ್ಯವು ಚೆನ್ನಾಗಿರುವುದು, ಶತ್ರುಬಾಧೆಯು ಕಡಿಮೆಯಾಗುವುದು, ಮುಂಬರುವ ದಿನಗಳಲ್ಲಿ ಕ್ರಮೇಣವಾಗಿ ಧನು ರಾಶಿಯವರು ಶುಭಫಲವನ್ನು ಕಾಣುತ್ತಾ ಹೋಗುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!