ಧನಸ್ಸು ರಾಶಿಯವರು ತಿಳಿಯಬೇಕಾದ ಮುಖ್ಯ ಮಾಹಿತಿ ಇಲ್ಲಿದೆ

0

ಧನಸ್ಸು ರಾಶಿ ಮೂಲ ನಕ್ಷತ್ರದವರ ಗುಣ ಸ್ವಭಾವ ನಾನು ಇವತ್ತು ಈ ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಜಾತಕ ಫಲ ಹೇಗಿರುತ್ತದೆ ಎಂದು ತಿಳಿಸುತ್ತಿದ್ದೇನೆ ಅದು ಸ್ತ್ರೀಯರಿರಬಹುದು ಅಥವಾ ಪುರುಷ ಇರಬಹುದು ಈ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಬರುವಂತಹದು ಮೂಲ ನಕ್ಷತ್ರದ 4 ಚರಣಗಳು ಎ ಯೋ ಬಾ ಬಿ ಅನ್ನುವ ನಾಲ್ಕು ಚರಣಗಳಲ್ಲಿ ಜನಿಸಿರುವಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಅವರ ಆರೋಗ್ಯ ಸ್ಥಿತಿ ಹೇಗಿರುತ್ತದೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಥವಾ ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಯೋಗ್ಯವಾಗುತ್ತದೆ, ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳಿಗೆ ಯಾವ ನಕ್ಷತ್ರದಲ್ಲಿ ಜನಿಸಿರುವಂತಹ ವಧು ವರರು ಒಂದಾಗುತ್ತಾರೆ ಎನ್ನುವುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇನೆ

ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಗುಣಸ್ವಭಾವ ಯಾವ ರೀತಿ ಇರುತ್ತದೆ ಎಂದು ನೋಡಿದಾಗ ಇವರು ಅತ್ಯಂತ ವಸ್ತ್ರಲಂಕಾರ ಪ್ರಿಯರಾಗಿರುತ್ತಾರೆ ಇವರಿಗೆ ಮೈಮೇಲೆ ಇರುವಂತಹ ಬಟ್ಟೆಗಳು ಶುದ್ಧವಾಗಿ ಶುಭ್ರವಾಗಿ ಇರಬೇಕು ಮತ್ತು ಅವು ಯಾವತ್ತಿಗೂ ಪ್ರಕಾಶಿಸುವ ಹಾಗೆ ಇರಬೇಕು. ಇವರು ವಸ್ತ್ರಾಲಂಕಾರದ ಕಡೆ ಹೆಚ್ಚು ಗಮನವನ್ನು ವಹಿಸುತ್ತಾರೆ ಹಾಗೂ ಇವರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಾರೆ

ಏಕೆಂದರೆ ಇವರು ಜನಗಳ ಪ್ರೀತಿಯನ್ನು ಗಳಿಸಿರುತ್ತಾರೆ ಜನಗಳು ಕಷ್ಟ ಎಂದರೆ ಹಿಂದೆ ಮುಂದೆ ನೋಡದೆ ಅವರಿಗೆ ಸಹಾಯ ಮಾಡುವಂತಹ ಮನಸ್ಥಿತಿ ಯುಳ್ಳ ವ್ಯಕ್ತಿಗಳು ಹಾಗಾಗಿ ಇವರು ಚಟುವಟಿಕೆಯಿಂದ ಇರುವುದಕ್ಕಾಗಿ ಸಂಘ ಸಂಸ್ಥೆಗಳಲ್ಲಿ ಓಡಾಡುತ್ತಿರುತ್ತಾರೆ ಇನ್ನು ಇವರು ಅತ್ಯಂತ ಸಂಪ್ರದಾಯಕ್ಕೆ ಒತ್ತು ಕೊಡುವಂತಹ ವ್ಯಕ್ತಿಗಳು ಆಧ್ಯಾತ್ಮದಲ್ಲಿ ವಿಶ್ವಾಸವುಳ್ಳವರು ದೇವರಲ್ಲಿ ನಂಬಿಕೆ ಇಟ್ಟವರು ಹಿರಿಯರಲ್ಲಿ ಪ್ರೀತಿ ಇರುವಂತಹ ವ್ಯಕ್ತಿಗಳು ಹಾಗಾಗಿ ಸಂಪ್ರದಾಯ ಶಾಸ್ತ್ರದ ಕಡೆ ಹೆಚ್ಚಾಗಿ ಗಮನ ಕೊಡುತ್ತಾರೆ.

ಇವರು ಅಧಿಕವಾಗಿ ವಸ್ತ್ರಲಂಕಾರಕ್ಕೆ ಯಾವ ರೀತಿಯಾಗಿ ಮಾನ್ಯತೆ ನೀಡಿರುತ್ತಾರೆ ಹಾಗೆ ಬೇರೆಯವರಿಂದ ಕೂಡ ಅದನ್ನು ಬಯಸುತ್ತಾರೆ ಅಂದರೆ ಸೌಂದರ್ಯವನ್ನು ಆಸ್ವಾದಿಸುವ ವ್ಯಕ್ತಿಗಳು ಚೆನ್ನಾಗಿರುವಂತಹದನ್ನು ಬಹಳಷ್ಟು ವೈಭವವಾಗಿ ಹೇಳುವಂತಹ ವ್ಯಕ್ತಿತ್ವ ಮತ್ತು ಇವರು ಸದಾ ಸಂತೋಷದಿಂದ ಜೀವನವನ್ನು ನಡೆಸುತ್ತಿರುತ್ತಾರೆ ಸದೃಢ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅಂದರೆ ಇವರು ಯೋಚನೆ ಪಡುವುದಿಲ್ಲ ಯಾವುದೇ ಕೆಲಸವನ್ನು ಅದು ಆಗುತ್ತದೆ ಎನ್ನುವ ಛಲದಿಂದ ಮಾಡುತ್ತಾರೆ

ಹಾಗಾಗಿ ಅದರಿಂದ ಜಾಸ್ತಿ ಯೋಚಿಸುವುದಿಲ್ಲ ಅದನ್ನು ಬಹಳ ಲೀಲಾಜಾಲವಾಗಿ ಮಾಡುತ್ತಾರೆ ಮತ್ತು ಅವರು ತೆಗೆದುಕೊಂಡಿರುವಂತಹ ನಿರ್ಧಾರಗಳು ಸದೃಢವಾಗಿರುತ್ತವೆ. ಇವರು ಯಾವಾಗಲೂ ಜನರಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಹೆಚ್ಚಿನದಾಗಿ ಪ್ರಯತ್ನಿಸುತ್ತಿರುತ್ತಾರೆ ಎಲ್ಲ ವಿಷಯಗಳಲ್ಲಿ ಉತ್ತಮ ಸಲಹೆಗಳನ್ನು ನೀಡುತ್ತಾರೆ ಮತ್ತು ಸಂಪೂರ್ಣವಾಗಿ ಸ್ನೇಹಜೀವಿಯಾಗಿರುವಂತಹದು ಬಹಳ ಸ್ಪಷ್ಟವಾಗಿ ಕಂಡು ಬರುತ್ತದೆ ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಪಲ ಮತ್ತು ಅವರ ಮನಸ್ಥಿತಿ ಹಾಗೂ ಈ ಧನಸ್ಸು ರಾಶಿಯಲ್ಲಿ ಬರುವಂತಹ ಮೂಲ ನಕ್ಷತ್ರ ಇದರಲ್ಲಿ ನಾಲ್ಕು ಚರಣಗಳನ್ನು ಹೇಳಿದ್ದೇನೆ

ಅದರಲ್ಲಿ ಒಂದೊಂದು ಚರಣಗಳ ಮನಸ್ಥಿತಿ ಹೇಗಿರುತ್ತದೆ ಎಂದು ನಾನು ತಿಳಿಸಿಕೊಡುತ್ತೇನೆ. ಚೈತ್ರ, ಶ್ರಾವಣ, ಕಾರ್ತೀಕ, ಪುಷ್ಯ ಮಾಸಗಳಲ್ಲಿ ಮೇಷ, ಕರ್ಕಾಟಕ, ಧನುಸ್ಸು, ಮಕರ ಲಗ್ನಗಳಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆಗಳು ಆಗುತ್ತವೆ. ಈ ಮಾಸ ಹಾಗೂ ಲಗ್ನಗಳಲ್ಲಿ ಜನಿಸಿದ ಮೂಲಾ ನಕ್ಷತ್ರದವರು ಜ್ಯೋತಿಷಿಗಳಲ್ಲಿ ತಮ್ಮ ಜಾತಕವನ್ನು ತೋರಿಸಿ, ಸುಲಭ ಪರಿಹಾರ ಮಾಡಿಕೊಳ್ಳಬಹುದು.

ವೈಶಾಖ, ಜ್ಯೇಷ್ಠಾ, ಮಾರ್ಗಶಿರ, ಫಾಲ್ಗುಣ ಮಾಸಗಳಲ್ಲಿ, ಮಿಥುನ, ಕನ್ಯಾ, ತುಲಾ ಅಥವಾ ಮೀನ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ವಿಶೇಷವಾದ ಅನುಕೂಲಗಳು ಆಗುತ್ತವೆ. ಸದಾ ಕಾಲ ಧನ ಪ್ರಾಪ್ತಿ ಆಗುತ್ತದೆ. ಸಂಪೂರ್ಣ ವಿದ್ಯಾವಂತರಾಗುತ್ತಾರೆ. ಯಾವುದೇ ದೋಷವಿಲ್ಲ. ಆದರೂ ನವಗ್ರಹ, ನಕ್ಷತ್ರ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. ಮೂಲಾ ನಕ್ಷತ್ರದ ಲೋಕವಾಸ ಫಲ ಹೇಗಿರುತ್ತದೆ ಅಂದರೆ, ಆಷಾಢ, ಭಾದ್ರಪದ ಹಾಗೂ ಆಶ್ವೀಜ ಮಾಸದಲ್ಲಿ, ವೃಷಭ, ಸಿಂಹ, ವೃಶ್ಚಿಕ ಅಥವಾ ಕುಂಭ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ರಾಜ್ಯ ಪ್ರಾಪ್ತಿ ಆಗುತ್ತದೆ.

ಇನ್ನು ಇದು ಸರಸ್ವತಿ ದೇವಿಯ ನಕ್ಷತ್ರ. ಈಗ ತಿಳಿಸಿದ ಮಾಸ, ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ಯಾವ ದೋಷವೂ ಇರುವುದಿಲ್ಲ. ಇಂಥ ಹೆಣ್ಣುಮಕ್ಕಳನ್ನು ಮದುವೆ ಆದರೆ ಯಾವುದೇ ತೊಂದರೆಗಳಿಲ್ಲ. ಇನ್ನು ಮೂಲಾ ನಕ್ಷತ್ರದಲ್ಲಿ ದೋಷ ಇರುವಂಥವರಿಗೆ ಏನಾಗುತ್ತದೆ ಎಂಬುದನ್ನು ತಿಳಿಯುವುದಾದರೆ, ಹೆಣ್ಣಾಗಲಿ- ಗಂಡಾಗಲಿ ಅಗತ್ಯ ದೋಷವನ್ನು ನಿವಾರಣೆ ಮಾಡಿಕೊಳ್ಳಬೇಕು. ಅದಕ್ಕೂ ಮುನ್ನ ಕಡ್ಡಾಯವಾಗಿ ಜಾತಕ ವಿಶ್ಲೇಷಣೆ ಮಾಡಲೇಬೇಕು.

ದೋಷ ಇದ್ದಲ್ಲಿ ಮೊದಲಿಗೆ ತಂದೆಗೆ ಸಮಸ್ಯೆ ಆಗುತ್ತದೆ. ಗೋಮುಖ ಪ್ರಸವ ಶಾಂತಿ ಎಂಬುದಿದೆ. ಅದನ್ನು ಮಾಡಿಸಿಕೊಳ್ಳಬೇಕು. ಆ ಶಾಂತಿಯನ್ನು ಮಾಡಿಸಿಕೊಳ್ಳುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ. ಕೆಲವರಿಗೆ ನಕ್ಷತ್ರ ಹೋಮವನ್ನು ಸಹ ಮಾಡಿಸಬಹುದು. ಆರ್ಥಿಕವಾಗಿ ಶಕ್ತಿ ಇದ್ದರೆ ಗೋದಾನವನ್ನು ಮಾಡಿ. ಅನ್ನದಾನ ಮಾಡಿದರೂ ಉತ್ತಮವಾದ ಫಲ ನೀಡುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!