ದೇವರಿಗೆ ಯಾವ ಯಾವ ತರಹದ ದೀಪ ಹಚ್ಚಬೇಕು ಇದನೊಮ್ಮೆ ತಿಳಿದುಕೊಳ್ಳಿ

0

ಹಿಂದ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯ ಅಂಗಳ ಹಾಗೂ ದೇವರ ಮನೆಯಲ್ಲಿ ದೀಪ ಹಚ್ಚಿ ಭಗವಂತನನ್ನು ಪ್ರಾರ್ಥನೆ ಮಾಡುವುದು ಸರ್ವೇ ಸಾಮಾನ್ಯ. ಇನ್ನೂ ಹಬ್ಬ ಹರಿದಿನ ಅಂದು ದೇವರಿಗೆ ತುಪ್ಪದ ದೀಪ ಹಚ್ಚುವ ವಾಡಿಕೆ ಇದೆ . ಇಂದಿನ ಲೇಖನ ಅಲ್ಲಿ ದೇವರಿಗೆ ಯಾವ ಯಾವ ತರಹದ ದೀಪ ಅನ್ನು ಹಚ್ಚಬೇಕು ಎನ್ನುವುದನ್ನು ನಾವು ತಿಳಿಯೋಣ ಬನ್ನಿ.

ನಾವು ಮಾಡುವ ಪೂಜೆ ಅಲ್ಲಿ ದೀಪ ಹಚ್ಚುವ ಪರಿಪಾಟ ತುಂಬಾನೇ ಮಹತ್ವ ಇದೆ. ಒಂದು ವೇಳೆ ನಾವು ದೀಪವನ್ನು ಹಚ್ಚಿಲ್ಲ ಎಂದರೆ ಅಲ್ಲಿ ಸಕಾರಾತ್ಮಕ ಶಕ್ತಿ ಕುಂದಿ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುವುದು. ಹಾಗಾಗಿ ಎಲ್ಲಾ ಪೂಜಾ ಪರಿಪಾಟ ಅಲ್ಲಿ ದೀಪವನ್ನು ಹಚ್ಚುವರು ಆದರೆ ಕೆಲವೊಂದು ವಿಶೇಷ ಸಂದರ್ಭ ಅಲ್ಲಿ ವಿಶೇಷ ದೀಪಾರಾಧನೆ ಮಾಡುವುದು ಕಾಣಬಹುದು. ಹಾಗೂ ಕೆಲವರ ಮನೆಯಲ್ಲಿ ದೇವರ ಫೋಟೋ ಹಾಗೂ ವಿಗ್ರಹ ಇದ್ದು ಅದ ಫೋಟೋ ಅಥವಾ ವಿಗ್ರಹ ಅಲ್ಲಿ ಒಡೆದು ಹೋಗಿದ್ಯ ,ಮುಕ್ಕು ಆಗಿದ್ದೀಯ ಎಂದು ನಾವು ನೋಡಬೇಕು.

ಯಾವುದೇ ಕಾರಣಕ್ಕೂ ಇಂತಹ ಒಡೆದು ಆಟವ ಸೀಳಿ ಹೋದ ಫೋಟೋ ಅಥವ ವಿಗ್ರಹವನ್ನು ಇಡಬಾರದು ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚು ಆಗುವುದು ಇದರಿಂದ ಗೃಹ ಕ್ಲೇಶ ಆಗುವುದು ಹಾಗೂ ಧನ ಸಂಪತ್ತಿಗೆ ಹಾನಿ ಉಂಟು ಆಗುವುದು. ಹಾಗಾಗಿ ದೇವರ ವಿಗ್ರಹ ಹಾಗೂ ಫೋಟೋ ಅನ್ನು ಶುಚಿ ಮಾಡುವಾಗ ಬಹಳ ಕಾಳಜಿ ಇಂದ ಇರಬೇಕು. ಹಾಗೇ ಇದ್ದಲ್ಲಿ ದೇವರು ಕೂಡ ನಿಮ್ಮ ಮೇಲೆ ಕಾಳಜಿ ಅನ್ನು ವಹಿಸುತ್ತಾನೆ . ದೇವರ ಮೇಲೆ ನೀವು ಎಷ್ಟು ಪ್ರೀತಿ ತೋರಿಸುವಿರೋ ಹಾಗೆಯೇ ಆತನು ಕೂಡ ಅಷ್ಟೇ ಪ್ರೀತಿಯನ್ನು ನೀಡುವನು .

ದೇವರ ಮುಂದೆ ಉರಿಸುವ ದೀಪವು ಕೂಡ ಯಾವುದೇ ರೀತಿಯ ಒಡಕು ಇರಬಾರದು ಇನ್ನೂ ಕೆಲವರು ದೇವರಗೆ ಹಚ್ಚುವ ದೀಪದಲ್ಲಿ ಹಲವು ರೀತಿಯ ಎಣ್ಣೆ ಹಾಕಿ ಪೂಜೆ ಮಾಡುತ್ತಾರೆ. ಅದರಲ್ಲಿ ತುಪ್ಪ ,ದೀಪ ಎಳ್ಳೆಣ್ಣೆ , ಕೊಬ್ಬರಿ ಎಣ್ಣೆ ದೀಪ ಹೀಗೆಯೇ ಇನ್ನೂ ಎಣ್ಣೆಯ ದೀಪ ಹಚ್ಚುವ ಮೂಲಕ ನಮ್ಮ ಕಷ್ಟ ಹಾಗೂ ಸಮಸ್ಯೆ ಅನ್ನು ದೂರ ಮಾಡಲು ಬಳಕೆ ಆಗುವುದು. ಇನ್ನು ತುಪ್ಪದ ದೀಪ ನಮ್ಮ ಮನೋಕಾಮನೆ ಹಾಗೂ ಇಷ್ಟಾರ್ಥಗಳನ್ನು ಸಿದ್ಧಿಗಾಗಿ ಹಚ್ಚುವವರು. ಗೋಮಾತೆಯ ಶುದ್ಧವಾದ ತುಪ್ಪವು ಸಿಗುವವರು ಹಚ್ಚುವವರು. ಆದರೆ ಇಂದು ಶುದ್ಧ ತುಪ್ಪ ಸಿಗುವುದು ಅಪರೂಪ ಹಾಗಾಗಿ ಬೇರೆ ಬೇರೆ ರೀತಿಯ ಎಣ್ಣೆಯಿಂದ ದೀಪ ಉರಿಸುತ್ತಾರೆ. ಶುದ್ಧ ತುಪ್ಪ ಸಿಕ್ಕವರು ಅದನ್ನೇ ಹಚ್ಚಬಹುದು ಇದರಿಂದ ಹೆಚ್ಚಿನ ಲಾಭವನ್ನು ಪಡೆಯುವರು.

ತುಪ್ಪದ ದೀಪ ಹಾಗೂ ಎಣ್ಣೆಯ ದೀಪ ಹಚ್ಚಿದವರಿಗೂ ಕೂಡ ಸರಿಯಾದ ಫಲ ಸಿಗುವುದು ಇಲ್ಲ ಯಾಕೆಂದರೆ ಅವರು ಸರಿಯಾದ ದಿಕ್ಕಿನಲ್ಲಿ ದೀಪವನ್ನು ಇಟ್ಟು ಹೆಚ್ಚಿರುವುದಿಲ್ಲ. ಹಾಗಾಗಿ ಚಿಕ್ಕ ಚಿಕ್ಕ ವಿಷಯ ಆದರೂ ಕೂಡ ಬಹಳ ಮಹತ್ವ ಇರುವುದು ನೀವು ತುಪ್ಪದ ದೀಪ ಹಚ್ಚಿದರೆ ಅದು ನಿಮ್ಮ ಬಲಭಾಗ ಅಲ್ಲಿ ಹಚ್ಚಬೇಕು. ಇನ್ನೂ ಬೇರೆ ಬೇರೆ ದೀಪ ಆದಲ್ಲಿ ನಿಮ್ಮ ಎಡಭಾಗ ಅಲ್ಲಿ ಹಚ್ಚಬೇಕು .ಹಲವರು ದೇವಾಲಯ ಅಲ್ಲಿ ನೀವು ನೋಡಿದ್ದೀರಾ ತುಪ್ಪದ ದೀಪ ಅನ್ನು ಬಲದಲ್ಲಿ ಹಾಗೂ ಎಣ್ಣೆಯ ದೀಪ ನಿಮ್ಮ ಎಡಭಾಗ ಅಲ್ಲಿ ಹಚ್ಚಿದ್ದು ಇದರಿಂದ ನಿಮಗೆ ಹೆಚ್ಚಿನ ಲಾಭವನ್ನು ಪಡೆಯಬಹುದು.
ಹಾಗೂ ನೀವು ಹಚ್ಚುವ ದೀಪದ ಮುಖ ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದು ಕೂಡ ಬಹಳ ಅವಶ್ಯಕ.

ನಿಮ್ಮ ದೇವರ ಮನೆ ಈಶಾನ್ಯ ಮೂಲೆಯಲ್ಲಿ ಇದ್ದು ದೇವರಿಗೆ ಹಚ್ಚಿದ ದೀಪದ ಮುಖ ಪೂರ್ವ ಅಥವ ಉತ್ತರ ದಿಕ್ಕಿನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ದೀಪದ ಮುಖ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ನೀವು ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಇಟ್ಟು ಸರಿಯಾದ ರೀತಿಯಲ್ಲಿ ಪೂಜೆ ಮಾಡಿದಲ್ಲಿ ನಿಮಗೆ ಧನ ಪ್ರಾಪ್ತಿ ಆಗುವುದು ಹಾಗೂ ನಿಮ್ಮ ಮನಸ್ಸಿನ ಇಚ್ಛೆ ಸಂಪೂರ್ಣ ಆಗುವುದು ನೀವು ತಪ್ಪಾದ ದಿಕ್ಕಿನಲ್ಲಿ ಇಟ್ಟರೆ ಯಾವುದೇ ಕಾರಣಕ್ಕೂ ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗುವುದು ಇಲ್ಲ.

ನೀವು ಪ್ರತಿದಿನ ತುಪ್ಪದ ದೀಪಗಳನ್ನು ಹಚ್ಚುವುದರಿಂದ ನಿಮ್ಮ ಮನೋಕಾಮನೆಗಳು ಈಡೇರುತ್ತವೆ ಹಾಗೂ ಇಷ್ಟಾರ್ಥ ಸಿದ್ಧಿಯಾಗುತ್ತದೆ. ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾ ನೆಲೆಸುವುದು ಇದೇ ರೀತಿ ಕೊಬ್ಬರಿ ಎಣ್ಣೆ ಹಾಗೂ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಕೂಡ ದೂರ ಆಗುವುದು. ತುಪ್ಪದ ದೀಪ ಹಚ್ಚುವಾಗ ಯಾವುದೇ ಕಾರಣಕ್ಕೂ ಅದಕ್ಕೆ ಎಣ್ಣೆಯನ್ನು ಸೇರಿಸಬಾರದು ಹಾಗೆಯೇ ಒಂದು ವೇಳೆ ಎಣ್ಣೆಯ ದೀಪವನ್ನು ಹಚ್ಚುತ್ತಿದ್ದರೆ ಯಾವುದೇ ಕಾರಣಕ್ಕೂ ತುಪ್ಪವನ್ನು ಸೇರಿಸಬಾರದು ನೀವು ಭಿನ್ನವಾಗಿ ದೀಪಗಳನ್ನು ಹಚ್ಚುತ್ತಿರಬೇಕು ಯಾರು ನಿಯಮಿತವಾಗಿ ಭಗವಂತನ ಮುಂದೆ ದೀಪವನ್ನು ಹಚ್ಚುತ್ತಾರೆ ಅವರಿಗೆ ಭಗವಂತನ ಆಶೀರ್ವಾದ ಸಿಗುವುದು. ಹಾಗೆ ಪ್ರತಿಯೊಂದು ಕಾರ್ಯವನ್ನು ವಿಧಿವಿಧಾನಗಳ ಮೂಲಕ ಮಾಡಿದರೆ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಹಾಗೆಯೇ ಒಂದು ವೇಳೆ ನಿಮಗೆ ವ್ಯಾಪಾರ, ವಹಿವಾಟು,ವ್ಯವಸಾಯ, ನೌಕರಿ ಅಲ್ಲಿ ಸಮಸ್ಯೆ ಇದ್ದಲ್ಲಿ ನಿಮಗೆ ಕೆಲಸ ಸಿಗುತ್ತಿಲ್ಲದಿದ್ದರೆ ಸಾಲದ ಸುಳಿಯಲ್ಲಿ ನೀವು ಸಿಕ್ಕಿದರೆ ಹಾಗೂ ಹಣದ ಸಮಸ್ಯೆಯಲ್ಲಿ ನೀವು ಬಳಲುತ್ತಿದ್ದರೆ ಪ್ರತಿದಿನ ನೀವು ಭಗವಂತ ನಾರಾಯಣ ಹಾಗೂ ಲಕ್ಷ್ಮಿದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು. ಆದರೆ ಇಲ್ಲಿ ದೀಪದ ಬತ್ತಿಯು ಕೆಂಪುಬಣ್ಣದಿಂದ ಕೂಡಿರಬೇಕು ಹಾಗಾಗಿ ನೀವು ಕೆಂಪುಬಣ್ಣದ ಬತ್ತಿಯನ್ನು ಉಪಯೋಗಿಸಬೇಕು.ಅದು ಕುಂಕುಮದಿಂದ ಮಾಡಿರಬಾರದು ತದನಂತರ ಅದಕ್ಕೆ ಸ್ವಲ್ಪ ಅರಿಶಿನ ಕುಂಕುಮ ಹಾಕಿ ಉರಿಸಬೇಕು. ಇದರಿಂದ ನಿಮಗೆ ಲಕ್ಷ್ಮೀನಾರಾಯಣರು ಕೃಪೆ ನಿಮ್ಮ ಮೇಲೆ ಬಿದ್ದು ಬಹಳ ಲಾಭವಾಗುವುದು. ನಿಮಗೆ ಧನಪ್ರಾಪ್ತಿ ಆಗುವ ದಾರಿಯು ಕೂಡ ಸಿಗುವುದು ಒಮ್ಮೆ ಹೀಗೆ ನೀವು ದೀಪವನ್ನು ಹಚ್ಚಿ ನೋಡಿ ಇದರ ಮಹತ್ವ ಸ್ವತ್ಹ ನಿಮಗೆ ತಿಳಿಯುವುದು ಹಾಗೂ ಜೀವನ ಅಲ್ಲಿ ಕಷ್ಟ ದೂರ ಆಗುವುದು.

ಒಂದುವೇಳೆ ನೀವು ದೊಡ್ಡ ಪ್ರಮಾಣದಲ್ಲಿ ಕಷ್ಟವನ್ನು ಅನುಭವಿಸುತ್ತಾ ಇದ್ದರೆ ಅಥವಾ ಕಷ್ಟದಲ್ಲಿ ಸಿಲುಕಿ ಶತ್ರುಗಳ ಕಾಟದಿಂದ ತೊಂದರೆಗೆ ಒಳಗಾಗಿದ್ದರೆ ನೀವು ಪ್ರತಿದಿನ ಆಂಜನೇಯ ಸ್ವಾಮಿಯ ಫೋಟೋ ಎದುರು 3 ಮುಖವಿರುವ ದೀಪದಲ್ಲಿ ಕೆಂಪು ಬತ್ತಿಯನ್ನು ಹಾಕಿ ಸಾಧ್ಯವಾದರೆ ಮಲ್ಲಿಗೆ ಎಣ್ಣೆಯಿಂದ ದೀಪವನ್ನು ಹಚ್ಚಬೇಕು. ಮಲ್ಲಿಗೆ ಎಣ್ಣೆಯ ದೀಪ ಹಚ್ಚುವುದರಿಂದ ಆಂಜನೇಯ ಸ್ವಾಮಿಯು ಬೇಗನೆ ಒಲಿಯುತ್ತಾನೆ. ಹಾಗಾಗಿ ನಿಮ್ಮ ಕಷ್ಟ ಭಯವು ಬೇಗನೆ ದೂರ ಆಗುವುದು. ಮಲ್ಲಿಗೆ ಎಣ್ಣೆಯಿಂದ ದೀಪ ಹಚ್ಚುವುದರಿಂದ ನಿಮ್ಮ ಮನೋಕಾಮನೆಗಳು ಇಷ್ಟಾರ್ಥಸಿದ್ಧಿಗಳು ಬೇಗನೆ ನೆರವೇರುವುದು ಹಾಗೂ ಹಲವಾರು ರೋಗಗಳು ಕೂಡ ಪರಿಹಾರ ಆಗುವುದು.

Leave A Reply

Your email address will not be published.

error: Content is protected !!