ದುಡ್ಡುಕಾಸು ಇಲ್ಲದ ಭಕ್ತರನ್ನು ಉದ್ಧರಿಸುವ ಮಾಡಾಳು ಗ್ರಾಮದ ಶ್ರೀ ಸ್ವರ್ಣ ಗೌರಮ್ಮ ಎಲ್ಲಿದೆ ಗೊತ್ತಾ

ಭಕ್ತಿ

ಈಗಿನ ಕಾಲದಲ್ಲಿ ದೇವರ ಹೆಸರನ್ನು ಬಳಸಿಕೊಂಡು ಹಣ ಸಂಪಾದನೆ ಮಾಡುವರೇ ಹೆಚ್ಚು. ಇಂತ ಕಾಲದಲ್ಲಿ ದುಡ್ಡು ಕಾಸು ಇಲ್ಲದೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಸಾಧ್ಯವೇ ಎಂದು ನೀವು ಯೋಚನೆ ಮಾಡುತ್ತಿರಬಹುದು, ಆದರೆ ಈ ದೇವಸ್ಥಾನದಲ್ಲಿ ದುಡ್ಡು ಕಾಸು ಇಲ್ಲದೆ ಎಲ್ಲ ಭಕ್ತಾದಿಗಳು ಕೂಡ ತಮ್ಮ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ಈ ದೇವಸ್ಥಾನ ಯಾವುದು ಎನ್ದಫು ನೀವು ಯೋಚಿಸುತ್ತಿದ್ದೀರಾ ಆಗಾದರೆ ಆ ದೇವಸ್ಥಾನದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಲ್ಪತರ ನಾಡು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ಶ್ರೀ ಸ್ವರ್ಣ ಗೌರಮ್ಮ. ಈ ಗೌರಮ್ಮ ನಿಗೆ ಹಣ ಕಾಸು ಚಿನ್ನ ಯಾವುದೆ ರೀತಿಯ ಬೆಲೆಬಾಳುವ ವಸ್ತುಗಳನ್ನು ದೇವತೆ ಬಯಸುವುದಿಲ್ಲ. ಈ ದೇವರಿಗೆ ಕರ್ಪೂರ ಅಂದರೆ ಬಲು ಪ್ರೀತಿ. ಈ ದೇವರ ದರ್ಶನ ಪಡೆಯಲು ಹೋಗುವರು ತಾಯಿಗೆ ಕರ್ಪೂರವನ್ನೇ ಹರಕೆಯಾಗಿ ಅರ್ಪಿಸುತ್ತಾರೆ. ಈ ದೇವರಿಗೆ ಕರ್ಪೂರ ಮತ್ತು ಮಡಿಲಕ್ಕಿಯನ್ನು ಕಾಣಿಕೆ ರೂಪದಲ್ಲಿ ಅರ್ಪಿಸುವುದರ ಮೂಲಕ ತಮ್ಮ ಬೇಡಿಕೆಯನ್ನಿಡುತ್ತಾರೆ.

ಭಕ್ತರ ಏನೇ ಕಷ್ಟವಿದ್ದರೂ ಸಹ ಗೌರಮ್ಮ ಆ ಕಷ್ಟವನ್ನು ದೂರ ಮಾಡುತ್ತದೆ ಎನ್ನುವ ನಂಬಿಕೆ. ಹಾಗೂ ಗೌರಿ ಗಣೇಶ ಹಬ್ಬದಂದು 9 ದಿನಗಳ ಕಾಲ ತಾಯಿ ಸ್ವರ್ಣಗೌರಿ ದೇವಿಯ ಮೂರ್ತಿಯನ್ನು ಅರಿಶಿಣದಿಂದ ತಯಾರಿಸಿ ಅದಕ್ಕೆ ವಜ್ರದ ಮೂಗೂತಿಯನ್ನು ಧರಿಸಲಾಗುತ್ತದೆ ಆಗ ದೇವಿಯ ಮೂರ್ತಿಯಲ್ಲಿ ಶಕ್ತಿ ಆವಾಹನೆಯಾಗುತ್ತದೆ ಎಂಬುದು ನಂಬಿಕೆ. ದೇವಿಯನ್ನು 9 ದಿನಗಳಕಾಲ ಆರಾಧಿಸಿ ನಂತರ ಕಲ್ಲಾಣಿಯಲ್ಲಿ ವಿಸರ್ಜಿಸಲಾಗುತ್ತದೆ. ಅಮ್ಮನಿಗೆ ಹರಕೆಯ ರೂಪದಲ್ಲಿ ಸೀರೆ.ಅಕ್ಕಿ ಯನ್ನು ನೀಡುವುದು ಪದ್ದತಿ ತಾಯಿಗೆ ಕರ್ಪೂರವೆಂದರೆ ಬಲು ಪ್ರೀತಿ ಎಂಬುದು ಪ್ರತೀತಿ ಕಾರಣ ದೇವಿಯ ದೇಗುಲದ ಕರ್ಪೂರದ ಕುಂಡ 9 ದಿನಗಳಕಾಲ ನಿರಂತರ ಪ್ರಜ್ವಲಿಸುತ್ತದೆ.9 ದಿನಗಳ ಕಾಲ ಭಕ್ತರಿಗೆ ದಾಸೋಹವಿರುತ್ತದೆ.ಮುಂಜಾನೆಯಿಂದ ರಾತ್ರಿ 11 ಗಂಟೆಯ ವರೆಗೂ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ.

ಮಾರ್ಗ: ಅರಸೀಕೆರೆ ತಾಲೋಕು ಕೇಂದ್ರದಿಂದ 29 ಕಿ.ಮೀ. ದೂರದಲ್ಲಿದೆ. ಹಾಗೂ ಹಾಸನ ಜಿಲ್ಲಾ ಕೇಂದ್ರದಿಂದ 72 ಕಿ.ಮೀ ದೂರದಲ್ಲಿದೆ. ತಾಲೋಕು ಕೇಂದ್ರಕ್ಕೆ ಬಸ್ಸು ಹಾಗೂ ರೈಲಿನ ಮೂಲಕ ಬರಬಹುದಾಗಿದೆ. ತಾಲೋಕು ಕೇಂದ್ರದಿಂದ ಮಾಡಾಳುವಿಗೆ ರಸ್ತೆ ಮೂಲಕ ಸಂಚರಿಸಬಹುದಾಗಿದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *