ರೈತ ಭಾರತದ ಬೆನ್ನೆಲುಬು ರೈತ ಇದ್ದರೆ ಮಾತ್ರ ನಾವೆಲ್ಲರೂ ಇರುತ್ತೇವೆ ಇಲ್ಲವಾದರೆ ನಮ್ಮ ಜೀವನ ಶೂನ್ಯ ರೈತನ ಬಟ್ಟೆಯನ್ನು ನೋಡಿ ಅವಮಾನಿಸುವ ಮೊದಲು ಯೋಚಿಸಬೇಕು ಯಾವಾಗಲೂ ಬಟ್ಟೆಯನ್ನು ನೋಡಿ ಮನುಷ್ಯನ ಯೋಗ್ಯತೆಯನ್ನು ಅಳೆಯಬಾರದು ಯಾರನ್ನು ಸಹ ಕೀಳು ಎಂದು ಭಾವಿಸಬಾರದು ಎಲ್ಲರಲ್ಲಿ ಸಹ ಯೋಗ್ಯತೆ ಇರುತ್ತದೆ ತುಮಕೂರು ತಾಲೂಕಿನ ಹೆಬ್ಬುರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಎಂಬ ರೈತನಿಗೆ ಅವಮಾನಿಸಿದ್ದಾರೆ ಕ್ಷುಲ್ಲಕ ಕಾರಣಕ್ಕೆ ಕೆಂಪೇಗೌಡ ಎಂಬ ವ್ಯಕ್ತಿಯ ಮೇಲೆ ಅವಮಾನಿಸಿದ್ದಾರೆ
ಖರೀದಿಗೆ ಬಂದಿದ್ದನು ಬೊಲೆರೋ ಖರೀದಿಸಲು ಬಂದಿದ್ದ ಯುವ ರೈತನಿಗೆ ಮಹೇಂದ್ರ ಶೋ ರೂಮ್ ಸಿಬ್ಬಂದಿ ಅವಮಾನಿಸಿದ್ದರು .ಯುವಕನ ವೇಷ ಭೂಷಣ ನೋಡಿ ಅವಮಾನಿಸಿದ್ದಾರೆ ಯಾರನ್ನು ಯೋಗ್ಯತೆ ಇಲ್ಲ ಎಂದು ಪರಿಗಣಿಸಬಾರದು ಹಾಗೆಯೇ ಯಾರ ಬಟ್ಟೆ ನೋಡಿ ಅವರನ್ನು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ ಬದಲಾಗಿ ನಾವು ಈ ಲೇಖನದ ಮೂಲಕ ಮಹೇಂದ್ರ ಶೋ ರೂಂ ಸೇಲ್ಸ್ ಏಜೆಂಟ್ ಗಳು ಯುವ ರೈತನನ್ನು ಬಟ್ಟೆ ನೋಡಿ ಅವಮಾನಿಸಿದ್ದಾರೆ ಅದರ ಬಗ್ಗೆ ತಿಳಿದುಕೊಳ್ಳೋಣ.
ತುಮಕೂರಿನಲ್ಲಿ ಬೊಲೆರೋ ಖರೀದಿ ಮಾಡಲು ಯುವ ರೈತನು ಬಂದಿದ್ದನು ತುಮಕೂರು ತಾಲೂಕಿನ ಹೆಬ್ಬುರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಎಂಬ ರೈತನು ಖರೀದಿಗೆ ಬಂದಿದ್ದನು ಬೊಲೆರೋ ಖರೀದಿಸಲು ಬಂದಿದ್ದ ಯುವ ರೈತನಿಗೆ ಮಹೇಂದ್ರ ಶೋ ರೂಮ್ ಸಿಬ್ಬಂದಿ ಅವಮಾನಿಸಿದ್ದರು ಯುವಕನ ವೇಷ ಭೂಷಣ ನೋಡಿ ಅವಮಾನಿಸಿದ್ದಾರೆ ಯುವಕನ ಶರ್ಟ್ ಹಾಗೂ ಪಂಚೆ ನೋಡಿ ಸೇಲ್ಸ್ ಮ್ಯಾನ್ ಏಜೆಂಟ್ ಇಬ್ಬರು ಹಾಕಿರುವ ಉಡುಗೆಯನ್ನು ನೋಡಿ ಅವಮಾನಿಸಿದ್ದಾರೆ
ಹಾಗೆಯೇ ಹತ್ತು ರೂಪಾಯಿ ಕೊಡುವ ಯೋಗ್ಯತೆ ಸಹ ಇಲ್ಲ ಎಂದು ಹೀಯಾಳಿಸಿ ಅವಮಾನಿಸಿದ್ದಾರೆ ಸೇಲ್ಸ್ ಏಜೆಂಟ್ ಅವಮಾನಿಸಿದ್ದನ್ನೆ ಚಾಲೆಂಜ್ ಆಗಿ ಕೆಂಪೇಗೌಡ ಹಾಗೂ ಸ್ನೇಹಿತರು ತೆಗೆದುಕೊಂಡರು ಅರ್ಧ ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ತಂದು ಈಗಲೇ ವಾಹನ ಡಿಲೇವರಿ ಕೊಡಿ ಎಂದು ಆಕ್ರೋಶ ಹೊರಗೆ ಹಾಕಿದ್ದಾರೆ .ಆದರೆ ವಾಹನವನ್ನು ಎರಡು ಮೂರು ದಿನಕ್ಕೆ ವಾಹನ ನೀಡುತ್ತೇವೆ ಎಂದು ಶೋ ರೂಮ್ ನ ಸೇಲ್ಸ್ ಏಜೆಂಟ್ ಗಳು ಉಲ್ಟಾ ಹೊಡೆದಿದ್ದಾರೆ ಇದರಿಂದ ಕೋಪಗೊಂಡ ಕೆಂಪೇಗೌಡ ಅವರು ಅವಮಾನಿಸುವ ಮುನ್ನ ಅರಿವು ತಮಗೆ ಇರಬೇಕಾಗಿತ್ತು ಎಂದು ಕಿಡಿ ಕಾರಿದ್ದಾರೆ ಸ್ಥಳಕ್ಕೆ ಬಂದ ತಿಲಕ್ ಪಾರ್ಕ್ ಅವರ ಪೊಲೀಸ್ ರು ಮುಚ್ಚಳಿಕೆ ಬರೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ ಹೀಗೆ ಯಾರನ್ನು ಅವಮಾನಿಸುವ ಮೊದಲು ಯೋಚಿಸಬೇಕು ಯಾರ ಬಟ್ಟೆಯನ್ನು ನೋಡಿ ಅವಮಾನ ಮಾಡಬಾರದು.