WhatsApp Group Join Now
Telegram Group Join Now

ಆತ್ಮೀಯ ಓದುಗರೇ ತುಳಸಿ ಗಿಡಕ್ಕೆ ನಮ್ಮ ಹಿಂದೂ ಧರ್ಮ ಶಾಸ್ತ್ರದ ಪ್ರಾಕಾರ ಮತ್ತು ನಮ್ಮ ಸನಾತನ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ ಯಾಕಂದ್ರೆ ತುಳಸಿ ಧಾರ್ಮಿಕವಾಗಿಯೂ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಸಹ ಅತ್ಯಂತ ಪವಿತ್ರವಾದದ್ದು ಮತ್ತು ಅತ್ಯಂತ ಉಪಯುಕ್ತವಾದದ್ದು, ಯಾಕಂದ್ರೆ ತುಳಸಿ ಗಿಡದಲ್ಲಿ ಮಹಾಲಕ್ಷ್ಮೀ ದೇವಿಯು ನೆಳಸಿರುತ್ತಾಳೆ ಎಂಬುದು ನಮ್ಮ ಸನಾತನ ಧರ್ಮದ ಧಾರ್ಮಿಕ ನಂಬಿಕೆಯಾಗಿದೆ. ಎಲ್ಲರೂ ಮನೆಯ ಮುಂದೆ ತುಳಸಿ ಗಿಡವನ್ನು ನೆಡುವುದರಿಂದ ಅದು ಆರೋಗ್ಯದ ದೃಷ್ಟಿಯಿಂದ ಉಪಯೋಗಕಾರಿಯೂ ಅಲ್ಲದೇ ತುಳಸಿ ಗಿಡವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

ಪ್ರತಿ ದಿನವೂ ತುಳಸಿ ಗಿಡಕ್ಕೆ ನೀರನ್ನು ಹಾಕಿ ತುಳಸಿ ಕಟ್ಟೆಯ ಮುಂದೆ ರಂಗೋಲಿಯನ್ನು ಹಾಕಿ ಅದಕ್ಕೆ ಹರಿಶಿನ ಕುಂಕುಮ ಹೂವು ಇತ್ಯಾದಿಗಳಿಂದ ತುಳಸಿ ಗಿಡವನ್ನು ಶೃಂಗರಿಸಿ ನಿತ್ಯವೂ ಭಕ್ತಿಯಿಂದ ಪೂಜಿಸುತ್ತಾ ಬಂದಲ್ಲಿ ಮನೆಯಲ್ಲಿ ಯಾವುದೇ ರೀತಿಯ ಅಕಾಲ ಮೃತ್ಯುವು ಸಂಭವಿಸುವುದಿಲ್ಲ ಮತ್ತು ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯೂ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ. ತುಳಸಿ ಗಿಡವನ್ನು ಪೂಜಿಸುವುದರಿಂದ ಇಷ್ಟೆಲ್ಲಾ ಉಪಯೋಗಗಳಿವೆ ಆದರೆ ಇಷ್ಟೆಲ್ಲಾ ಪವಿತ್ರವಾದ ತುಳಸಿಯನ್ನು ಪೂಜೆ ಮಾಡುವಾಗ ಕೆಲವು ತಪ್ಪುಗಳನ್ನು ಅಪ್ಪಿ ತಪ್ಪಿಯೂ ಕೂಡ ಮಾಡಬಾರದು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುವುದಲ್ಲದೆ ದರಿದ್ರ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ, ಹಾಗಾದ್ರೆ ಯಾವ ತಪ್ಪುಗಳನ್ನು ತುಳಸಿ ಪೂಜೆಯ ಸಂಧರ್ಬದಲ್ಲಿ ಮಾಡಬಾರದು ಎಂಬುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಕೊಡುತ್ತೇವೆ ಬನ್ನಿ.

ಮೊದಲನೆಯದಾಗಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಳಸಿ ಗಿಡಕ್ಕೆ ಪೂಜೆ ಮಾಡುವುದು ಸೂಕ್ತವಲ್ಲ ಇಂತಹ ಸಂದರ್ಭದಲ್ಲಿ ಮುಟ್ಟಾದ ಮಹಿಳೆಯರ ನೆರಳು ಕೂಡ ತುಳಸಿ ಗಿಡಕ್ಕೆ ಸೋಕದಿರುವುದು ಒಳ್ಳೆಯದು ಮತ್ತು ತುಳಸಿ ಗಿಡವನ್ನು ಅಂದರೆ ತುಳಸಿ ಎಲೆಗಳನ್ನು ಅಮಾವಾಸ್ಯೆಯ ದಿನ ಹುಣ್ಣಿಮೆಯ ದಿನ ಮಂಗಳವಾರ ಶುಕ್ರವಾರ ಏಕಾದಶಿಯ ದಿನಗಳಲ್ಲಿ ಕೀಳಬಾರದು, ಯಾಕಂದ್ರೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿನ ಕಲಹಗಳು ಹೆಚ್ಚಾಗುತ್ತವೆ ಅಲ್ಲದೇ ನಿಮ್ಮ ಮನೆಯಲ್ಲಿ ಅಶಾಂತಿಯು ನೆಲೆಯೂರುತ್ತದೆ ದರಿದ್ರ ಲಕ್ಷ್ಮಿಯೂ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ.

ಎಲ್ಲಕ್ಕೂ ಹೆಚ್ಚಾಗಿ ತುಳಸಿ ಗಿಡವನ್ನು ಕೀಳುವಾಗ ಅದರ ಎಲೆ ಎಲೆಗಳನ್ನು ಕೀಳದೇ ಅದರ ಚಿಕ್ಕ ಚಿಕ್ಕ ಕುಡಿಗಳನ್ನು ಕೀಳುವುದು ಒಳಿತು ಮತ್ತು ಈ ಸಂಧರ್ಬದಲ್ಲಿ ಮನಸ್ಸಿನಲ್ಲಿ ಭಗವಾನ್ ವಿಷ್ಣುವನ್ನು ಸ್ಮರಿಸುವುದು ಒಳಿತು ಎಂಬುದನ್ನೂ ನಮ್ಮ ಶಾಸ್ತ್ರಗಳು ಸ್ಪಷ್ಟಪಡಿಸುತ್ತವೆ ಮತ್ತು ತುಳಸಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಗಂಧದ ಕಡ್ಡಿಯನ್ನೇ ಆಗಲಿ ದೀಪವನ್ನೇ ಆಗಲಿ ಕರ್ಪೂರದ ಆರತಿಯನ್ನೇ ಆಗಲಿ ತುಂಬಾ ಹತ್ತಿರದಿಂದ ಮಾಡುವುದು ಸೂಕ್ತವಲ್ಲ, ಯಾಕಂದ್ರೆ ಅದರ ಕಾವು ತುಳಸಿ ಗಿಡಕ್ಕೆ ತಗುಲಿ ತುಳಸಿ ಗಿಡವು ಕ್ರಮೇಣ ಒಣಗಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಯಾವುದೇ ಕಾರಣಕ್ಕೂ ತುಳಸಿ ಗಿಡವು ಮನೆಯಲ್ಲಿ ಒಣಗುವುದು ಮನೆಗೆ ಶುಭ ಸೂಚಕವಲ್ಲ ಹಾಗಾಗಿ ಈ ವಿಷಗಳಲ್ಲಿ ಎಚ್ಚರವಹಿಸುವುದು ಒಳಿತು.

ಇನ್ನು ತುಳಸಿ ಗಿಡವನ್ನು ಅದನ್ನು ನೆಟ್ಟಿರುವ ಕುಂಡದ ಸಮೇತ ಸ್ವಲ್ಪ ಎತ್ತರದ ಜಾಗದಲ್ಲಿ ಇಟ್ಟು ಪೂಜಿಸುವುದು ಒಳಿತು, ಯಾಕಂದ್ರೆ ನೀವು ಕಸ ಗುಡಿಸು ಸಂದರ್ಭದಲ್ಲಿ ಮನೆಯನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಕಸದ ಪೊರಕೆಯು ಯಾವುದೇ ಕಾರಣಕ್ಕೂ ತುಳಸಿ ಗಿಡಕ್ಕೇ ಆಗಲಿ ಅಥವಾ ಅದರ ಕುಂಡಕ್ಕೇ ಆಗಲಿ ತಗುಲುವುದು ಶುಭ ಸೂಚಕವಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: