ತುಳಸಿ ಗಿಡಕ್ಕೆ ಇದನ್ನ ಕಟ್ಟಿ ಮನೆಯ ಅದೃಷ್ಟವೇ ಬದಲಾಗಲಿದೆ

0

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ (tulsi plant) ತನ್ನದೇ ಆದ ವಿಶೇಷ ಮಹತ್ವವಿದ್ದು, ಶಾಸ್ತ್ರಗಳಲ್ಲಿಯೂ ಪವಿತ್ರವಾದ ದೇವತ ಸ್ಥಾನವನ್ನು ನೀಡಲಾಗಿದೆ. ಹೊಸ ಮನೆ ನಿರ್ಮಿಸಿದಾಗ ಮನೆಯ ಮುಂದೊಂದು ತುಳಸಿ ಗಿಡದ ಕಟ್ಟೆ ನಿರ್ಮಿಸುವುದು ಅಗತ್ಯವಾಗಿದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಶುಭವೆಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ಗಿಡದ ಮಹತ್ವವನ್ನು ಅದರ ಶ್ರೇಷ್ಟತೆಯನ್ನು ತಿಳಿದುಕೊಳ್ಳೋಣ.

ಒಂದು ಅದ್ಭುತವಾದ ಔಷಧೀಯ ಸಸ್ಯವಾದ ತುಳಸಿ ಗಿಡಕ್ಕೆ ವಾಸ್ತ್ರಶಾಸ್ತ್ರದಲ್ಲಿಯೂ ಎಲ್ಲಿಲ್ಲದ ಮಹತ್ವ. ಸಕಲ ವಾಸ್ತು ದೋಷಗಳನ್ನು ನಿವಾರಣೆ ಮಾಡುವ ಶಕ್ತಿಯು ತುಳಸಿ ಗಿಡಕ್ಕೆ ಇದೆ ಮತ್ತು ಜನರು ಮನೆಯಲ್ಲಿ ಸುಖ ಸಂತೋಷದಿಂದ ಬಾಳಬಹುದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಒಂದು ತುಳಸಿಯ ದಳವು ಶ್ರೀಮಾನ್‌ ನಾರಾಯಣನ ತೂಕಕ್ಕೆ ಸಮವೆಂದು ಹೇಳಲಾಗಿದೆ.

ಮನೆ ಮುಂದೆ ತುಳಸಿ ಬೆಳೆಸಿ ಪೂಜಿಸುವುದು ಭಾರತದ ಮನೆಗಳಲ್ಲಿ ಸಾಮಾನ್ಯ. ತುಳಸಿ ಗಿಡವನ್ನು ಎಲ್ಲಿ ಪೂಜಿಸಲಾಗುತ್ತದೆಯೋ ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು, ಶ್ರೀಲಕ್ಷ್ಮಿ, ಸರಸ್ವತಿ, ಮಂಗಳಗೌರಿ, ಸಪ್ತ ಋುಷಿಗಳು, ಸಪ್ತ ಕನ್ಯೆಯರು, ಅಷ್ಟ ದಿಕ್ಪಾಲಕರು, 33 ಕೋಟಿ ದೇವತೆಗಳು, ಸಪ್ತ ಸಮುದ್ರಗಳು, ಸರ್ವ ತೀರ್ಥಗಳು, ಸರ್ವ ಜೀವನದಿಗಳು, ಗಂಧರ್ವರು, ಚತುರ್ವೇದಗಳು, ಸಪ್ತ ಕೋಟಿ ಮಹಾ ಮಂತ್ರಗಳು, ಅಷ್ಟದಶ ಪುರಾಣಗಳು, ಕಾಮಧೇನು, ಕಲ್ಪ ವೃಕ್ಷಾದಿಗಳು ಇರುತ್ತಾರೆಂದು ಆಗಸ್ತ್ಯ ಸಂಹಿತೆಯಲ್ಲಿ ಉಲ್ಲೇಖವಾಗಿದೆ.

ಪುರಾತನ ಕಾಲದಿಂದಲೂ ಹಿಂದೂಧರ್ಮದಲ್ಲಿ ತುಳಸಿಯು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾ ಬಂದಿದೆ. ಶಾಸ್ತ್ರಗಳಲ್ಲೂ ತುಳಸಿಗೆ ಪವಿತ್ರವಾದ ದೇವತಾ ಸ್ಥಾನವನ್ನು ನೀಡಲಾಗಿದೆ. ಜೊತೆಗೆ ಮನೆಯಲ್ಲಿ ತುಳಸಿ ಇದ್ದರೆ ಮನೆಗೆ ಶುಭವೆಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯ ಸಹೋದರಿಯೆಂದು ಕರೆಯಲ್ಪಡುವ ತುಳಸಿಯು ವಿಷ್ಣುವಿಗೆ ಅತ್ಯಂತ ಪ್ರಿಯ ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಗಿಡವಿರುತ್ತದೋ ಅವರ ಮನೆಗೆ ಯಾವುದೇ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ ಎನ್ನುವ ನಂಬಿಕೆಯಿದೆ.

ಮನೆಯಲ್ಲಿ ನಿತ್ಯ ಪೂಜೆಗೆ ತುಳಸಿ ದಳಗಳನ್ನು ಸಮರ್ಪಿಸಲು ಸಾಕಾಗುವಷ್ಟು ಗಿಡಗಳನ್ನು ಬೆಳೆಸಿರಿ. ಇದರಿಂದ ಶುದ್ಧ ಆಮ್ಲಜನಕವೂ ದೊರಕುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲಿ ಭಾರ ಬೇಕೋ ಅಥವಾ ಎಲ್ಲಿ ವಾಸ್ತು ದೋಷವಿದೆಯೋ ಅಲ್ಲಿ ತುಳಸಿ ಗಿಡ ಇಟ್ಟು ಪೂಜಿಸಬೇಕು. ನೈರುತ್ಯ ಮತ್ತು ದಕ್ಷಿಣವು ಭಾರವಿರಬೇಕು. ಈ ದಿಕ್ಕುಗಳಲ್ಲಿ ತುಳಸಿ ಗಿಡ ಸ್ಥಾಪಿಸಿದರೆ ಸಮತೋಲ ಮಾಡಬಹುದು.

ತುಳಸಿ ಗಿಡವು ದೇವರಿಗೆ ಸಮಾನವೆಂದುಕೊಂಡು ಈಶಾನ್ಯದಲ್ಲಿ ಬೆಳೆಸಿದರೆ ಮಾನಸಿಕ ತೊಂದರೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇತ್ಯಾದಿಗಳನ್ನು ಅನುಭವಿಸಬೇಕಾಗುತ್ತದೆ. ನೈರುತ್ಯದಲ್ಲಿ ನೀರಿನ ಟ್ಯಾಂಕ್‌ ಇದ್ದರೆ ಆ ಜಾಗದಲ್ಲಿ ತುಳಸಿ ಗಿಡ ಇಡಬೇಡಿ. ಆದರೆ ಈಗಾಗಲೇ ನೈಋುತ್ಯದಲ್ಲಿ ನೀರಿನ ಟ್ಯಾಂಕ್‌ ಇದ್ದರೆ ಆ ಜಾಗದಲ್ಲಿ ಇಡಬಾರದು ಪಶ್ಚಿಮ ಅಥವಾ ದಕ್ಷಿಣದಲ್ಲಿಡಬೇಕು ಮತ್ತು ಗೃಹ ಪ್ರವೇಶಕ್ಕೆ ಮೊದಲು ಮೂರು ದಿನ ಮುಂಚಿತವಾಗಿ ತುಳಸಿ ಗಿಡವನ್ನು ಇಟ್ಟು ನೀರೆರೆಯಬೇಕು.

ಈ ಗಿಡವು ಒಣಗಿದರೆ ವಾಸ್ತು ದೋಷ ಅಥವಾ ಬೇರಾವುದೋ ದೋಷವಿದೆ ಎಂದು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ವಿಪತ್ತು ಕಾಣಿಸಿಕೊಳ್ಳುವ ಮನೆಯಲ್ಲಿ ಸಾಕಷ್ಟು ಕಾಳಜಿಯನ್ನು ಮಾಡಿದರೂ ತುಳಸಿಯು ಒಣಗಲಾರಂಭಿಸುತ್ತದೆ. ಎಷ್ಟೇ ನೀರು ಹಾಕಿದರೂ ತುಳಸಿ ಗಿಡವು ಬೆಳೆಯದಿದ್ದಲ್ಲಿ, ಎಲೆಗಳು ನಿರಂತರವಾಗಿ ಉದುರುತ್ತಿದ್ದರೆ ಹಾಗೂ ಒಣಗಿದರೆ ಶಕುನ ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಹಿತಕರ ಘಟನೆಗಳು ನಡೆಯುವ ಮುನ್ಸೂಚನೆಯಾಗಿದೆ.

ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ನಿಮ್ಮ ಮನೆಯ ಸದಸ್ಯರ ನಡವಳಿಕೆಗಳು ಉತ್ತಮವಾಗಿರಲಿ. ಎಲ್ಲಿ ಬಡತನ, ಅಶಾಂತಿ ಹಾಗೂ ಕ್ಲೇಶಗಳು ತುಂಬಿರುತ್ತದೋ ಅಂತಹ ಮನೆಯಲ್ಲಿ ಲಕ್ಷ್ಮಿದೇವಿಯು ನೆಲೆಸುವುದಿಲ್ಲವೆಂದು ಹೇಳಲಾಗುತ್ತದೆ.

ಮನೆಯಲ್ಲಿ ವಿಪತ್ತು ಸಂಭವಿಸಿದಾಗ ಈ ಎಲ್ಲಾ ಲಕ್ಷ ಣಗಳು ನಿಧಾನವಾಗಿ ಗೋಚರಿಸುತ್ತದೆ. ಇದರಿಂದಾಗಿಯೇ ಲಕ್ಷ್ಮಿಯು ಆ ಸ್ಥಳವನ್ನು ತೊರೆಯುತ್ತಾಳೆ. ಜ್ಯೋತಿಷ್ಯಶಾಸ್ತ್ರದಲ್ಲಿ ಬುಧವು ಹಸಿರು ಬಣ್ಣದ ಅಧಿಪತಿ ಹಾಗೂ ಈ ಗ್ರಹವು ಮರಗಳನ್ನು ಹಾಗೂ ಸಸ್ಯಗಳಿಗೆ ಕಾರಣವಾಗುವ ಗ್ರಹವೂ ಹೌದು. ಹಾಗಾಗಿ ಬುಧನು ದೋಷಪೂರಿತವಾಗಿದ್ದರೆ ಅದರ ಪರಿಣಾಮವು ಜನರಿಗೆ ಅಶುಭ ಫಲಿತಾಂಶವನ್ನು ತರುವುದು. ಬುಧನ ದೋಷವು ಗಿಡಗಳ ಮೂಲಕವೂ ವ್ಯಕ್ತವಾಗುವುದು.

ಧರ್ಮಗ್ರಂಥಗಳ ಪ್ರಕಾರ ತುಳಸಿಯಲ್ಲಿ ಹಲವು ವಿಧಗಳಿವೆ, ರಾಮ ತುಳಸಿ, ಕೃಷ್ಣತುಳಸಿ, ಜ್ಞಾನ ತುಳಸಿ, ಲಕ್ಷ್ಮೀತುಳಸಿ, ಭೂಮಿ ತುಳಸಿ, ರಕ್ತತುಳಸಿ, ನೀಲ ತುಳಸಿ, ಬಿಳಿ ತುಳಸಿ, ವನ ತುಳಸಿ ತುಳಸಿಯ ವಿಧಗಳು. ಮನೆಗಳಲ್ಲಿ ಮಾತ್ರ ಕೃಷ್ಣ ತುಳಸಿ ಹಾಗೂ ರಾಮ ತುಳಸಿಯನ್ನು ಪೂಜಿಸಲಾಗುತ್ತದೆ. ತುಳಸಿ ಗಿಡ ನೆಟ್ಟು ಪ್ರತಿದಿನವೂ ನೀರುಹಾಕುವುದರಿಂದ ಮನೆಯಲ್ಲಿ ಕಂಡುಬರುವ ಎಲ್ಲಾ ವಾಸ್ತು ದೋಷಗಳಿಗೂ ಪರಿಣಾಮಕಾರಿ.

ಆಗ್ನೇಯ ಹಾಗೂ ವಾಯುವ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದು ಅತ್ಯಂತ ಅಶುಭ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ವಾಸ್ತುಪ್ರಕಾರ ತುಳಸಿಯ ಹೂವನ್ನು ಅಡುಗೆ ಮನೆಯಲ್ಲಿಟ್ಟುಕೊಳ್ಳಬೇಕು, ಇದರಿಂದ ಕೌಟುಂಬಿಕ ಕಲಹಗಳು ದೂರವಾಗುವುದು. ಹಾಗು ಮಕ್ಕಳು ತಪ್ಪು ಹಾದಿ ತುಳಿಯುತ್ತಿದ್ದರೆ ಅವರಿಗೆ ಪ್ರತಿದಿನ ಮೂರು ತುಳಸಿ ಎಲೆಗಳನ್ನು ಯಾವುದಾದರೂ ರೂಪದಲ್ಲಿ ಕೊಡುವುದು ಒಳ್ಳೆಯದು.

ಪುರಾಣದ ಪ್ರಕಾರ ತುಳಸಿಯನ್ನು ಪ್ರತಿದಿನ ಪೂಜಿಸಿದರೆ ಹಾಗೂ ಪ್ರತಿ ದಿನ ಸಂಜೆ ತುಳಸಿಯ ಗಿಡದ ಬಳಿ ದೀಪವನ್ನು ಇಟ್ಟರೆ ಮಹಾಲಕ್ಷ್ಮೀಯು ಸದಾ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ ತುಳಸಿ ಹಲವು ವಿಧಗಳಲ್ಲಿ ಉಪಕಾರಿಯಾದ ಸಸ್ಯ ಆದರೆ ತುಳಸಿ ಎಲೆಗಳನ್ನು ಕೆಲವೊಂದು ಸಂದರ್ಭಗಳಲ್ಲಿ ಕೀಳಬಾರದು. ಏಕಾದಶಿ, ಭಾನುವಾರ, ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣದಂದು ಕೀಳಬಾರದು ಹಾಗೂ ಸೂರ್ಯಾಸ್ತದ ನಂತರ ಮುರಿಯಬಾರದು.

ಅನಗತ್ಯವಾಗಿಯೂ ತುಳಸಿ ದಳವನ್ನು ಮುರಿಯಬಾರದು. ಇದರಿಂದ ಆಪಾದನೆ ಬರುವುದು. ಅನಗತ್ಯವಾಗಿ ತುಳಸಿ ಎಲೆಯನ್ನು ಚಿವುಟುವುದು, ತುಳಸಿಗೆ ಮಾಡುವ ಅವಮಾನಕ್ಕೆ ಸಮಾನವಾಗಿರುತ್ತದೆ. ತುಳಸಿ ಗಿಡವನ್ನು ನೆಡುವಾಗ ಕೃಷ್ಣ ತುಳಸಿ ಮತ್ತು ಲಕ್ಷ್ಮಿ ತುಳಸಿ ಎರಡು ಗಿಡವನ್ನು ಒಟ್ಟಿಗೆ ನೆಟ್ಟು ಅದನ್ನ ಅರಿಶಿನದ ದಾರದಿಂದ ಕಟ್ಟಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯ ಅದೃಷ್ಟವೇ ಬದಲಾಗುತ್ತದೆ ಉತ್ತಮ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

Leave A Reply

Your email address will not be published.

error: Content is protected !!
Footer code: