WhatsApp Group Join Now
Telegram Group Join Now

ಪ್ರತಿ ತಿಂಗಳಲ್ಲಿ ಸಹ ರಾಶಿ ಚಕ್ರಗಳ ಬದಲಾವಣೆಯಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಪ್ರತಿಯೊಂದು ರಾಶಿಯಲ್ಲಿ ಇದ್ದ ಹಾಗೆ ಎಲ್ಲ ರಾಶಿಯ ಫಲಗಳು ಒಂದೇ ತೆರನಾಗಿ ಇರುವುದು ಇಲ್ಲ ಶನಿ ಕುಜ ರಾಹು ಕೇತು ಹಾಗೂ ಗುರು ಮತ್ತು ಶುಕ್ರ ಸ್ಥಾನ ಪಲ್ಲಟ ಮಾಡುತ್ತಾರೆ ಇದರಿಂದ ಕೆಲವು ರಾಶಿಯವರಿಗೆ ಶುಭ ಫಲ ಹಾಗೂ ಮಿಶ್ರ ಫಲ ಹಾಗೂ ಅಶುಭ ಫಲಗಳು ಲಭಿಸುತ್ತದೆ ಅದರಲ್ಲಿ ಕೆಲವು ರಾಶಿಯವರಿಗೆ ರಾಜಯೋಗದಂತಹ ಅದೃಷ್ಟಗಳು ಸಹ ಇರುತ್ತದೆ ಎಲ್ಲವೂ ಸಹ ಗ್ರಹಗಳ ಚಲನೆಯನ್ನು ಅವಲಂಬಿಸಿದೆ.

ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ತುಲಾ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಫೆಬ್ರುವರಿ ತಿಂಗಳಲ್ಲಿ ತುಲಾ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಹಾಗೆಯೇ ತುಲಾ ರಾಶಿಯವರಿಗೆ ಫೆಬ್ರುವರಿ ಹದಿನೈದರ ನಂತರ ಶುಕ್ರನಿಂದ ಅನುಕೂಲಕರವಾಗಿ ಇರುತ್ತದೆ ಪಂಚಮ ಸ್ಥಾನದಲ್ಲಿ ಶನಿ ಇರುವುದರಿಂದ ಅನೇಕ ಸಂಕಷ್ಟಗಳನ್ನು ತಂದು ಕೊಡುತ್ತಾನೆ ವಾಹನ ಖರೀದಿ ಮಾಡುವರು ಹಾಗೂ ಭೂಮಿ ಖರೀದಿ ಮಾಡುವರು ಫೆಬ್ರುವರಿ ಹದಿನೈದರ ನಂತರ ಮಾಡಬೇಕು ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಫೆಬ್ರುವರಿ ಏಳನೇ ತಾರೀಖಿನ ಬುಧ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಫೆಬ್ರುವರಿ ಹದಿಮೂರನೇ ತಾರೀಖಿನ ಸೂರ್ಯ ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಾನೆ ಫೆಬ್ರುವರಿ ಹದಿನೈದನೇ ತಾರೀಖಿನ ಶುಕ್ರ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶ ಮಾಡುತ್ತಾನೆ ಬದಲಾಗುವ ಗ್ರಹಗಳಿಂದ ತುಲಾ ರಾಶಿಯವರಿಗೆ ಶುಭ ಕಂಡು ಬರುತ್ತದೆ ಲಗ್ನ ರಾಶಿಯಲ್ಲಿ ಕೇತು ಸಂಚಾರ ಆಗುತ್ತದೆ

ತುಲಾ ರಾಶಿಯವರಿಗೆ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಗಳು ಕಂಡು ಬರುವುದು ಇಲ್ಲ ಕುಜ ಅಷ್ಟಮ ಸ್ಥಾನದಲ್ಲಿ ಇರುತ್ತಾನೆ ಪಂಚಮದಲ್ಲಿ ಶನಿ ಇರುವುದರಿಂದ ಸ್ವಲ್ಪ ಕಿರಿಕಿರಿಯನ್ನು ತಂದು ಕೊಡುತ್ತಾನೆ. ಹೆಣ್ಣು ಮಕ್ಕಳಿಗೆ ಕುಜ ಅಷ್ಟಮ ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ಹಾರ್ಮೋನಿನ ಅಸಮತೋಲನ ಥೈರಾಯ್ಡ್ ಸಮಸ್ಯೆಯಂತಹ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ ಗಣಪತಿಯ ಆರಾಧನೆ ಮಾಡಿದರೆ ತುಲಾ ರಾಶಿಯವರು ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು

ತುಲಾ ರಾಶಿಯವರಿಗೆ ಗುರು ಬಲ ಬರುವುದು ಏಪ್ರಿಲ್ ತಿಂಗಳಲ್ಲಿ ಈ ಸಮಯದಲ್ಲಿ ಪಂಚಮ ಸ್ಥಾನದಲ್ಲಿ ಶನಿ ಇರುವುದರಿಂದ ಅನೇಕ ಸಂಕಷ್ಟಗಳನ್ನು ತಂದು ಕೊಡುತ್ತಾನೆ ಅಷ್ಟಮಾಧಿಪತಿ ಶುಕ್ರ ಅನುಕೂಲಕರನಾಗಿ ಇರುತ್ತಾನೆ ಗಣಪತಿ ಹಾಗೂ ಸುಬ್ರಮಣ್ಯನನ್ನು ಆರಾಧನೆ ಮಾಡಬೇಕು .

ಕುಜನಿಂದ ಅನಿರೀಕ್ಷಿತ ಧನ ವ್ಯಯ ಆಗುವ ಸಾಧ್ಯತೆ ಇರುತ್ತದೆ ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಗಳು ನಿಷ್ಟುರಕ್ಕೆ ಕಾರಣ ಆಗುತ್ತದೆ ಮಾತನ್ನು ಸೌಮ್ಯವಾಗಿ ಆಡಬೇಕು ಕುಜ ವಕ್ರನಾಗಿ ಅಷ್ಟಮ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ತೃತಿಯಾಧಿಪತಿ ಗುರು ಷಷ್ಟದ ಸ್ಥಾನದಲ್ಲಿ ಇರುತ್ತಾನೆ ಸೋದರಿಯರ ನಡುವಿನ ಸಂಬಂಧ ಅಭಿವೃದ್ದಿ ಗೊಳ್ಳುತ್ತದೆ ಸಹೋದರರ ಜೊತೆ ವಿವಾದ ಉಂಟಾಗುವ ಸಾಧ್ಯತೆ ಇರುತ್ತದೆ

ಬ್ಯಾಂಕಿಂಗ್ ಸೌಲಭ್ಯ ಹಾಗೆಯೇ ಯಾವುದೇ ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ವಿಳಂಬ ಕಂಡು ಬರುತ್ತದೆ. ಫೆಬ್ರುವರಿ ಹದಿನೈದನೇ ತಾರೀಖಿನ ನಂತರ ಉಚ್ಛ ಸ್ಥಾನವನ್ನು ಪ್ರವೇಶ ಮಾಡುತ್ತಾನೆ ತದ ನಂತರ ಒಂದು ತಿಂಗಳ ಕಾಲದ ನಂತರ ತುಲಾ ರಾಶಿಯವರು ಶುಭ ಫಲವನ್ನು ಪಡೆಯುತ್ತಾರೆ ನಾಲ್ಕನೆಯ ಮನೆಯನ್ನು ವಿದ್ಯೆ ಸುಖದ ಸ್ಥಾನವಾಗಿದೆ ಪಂಚಮದಲ್ಲಿ ಶನಿ ಸಂಚಾರ ಮಾಡುತ್ತಾನೆ

ವಿಧ್ಯಾರ್ಥಿಗಳಿಗೆ ಅಭ್ಯಾಸ ಕಡೆಗೆ ಹೆಚ್ಚು ಚಿಂತೆ ಆರಂಭ ಆಗುವ ಸಾಧ್ಯತೆ ಇರುತ್ತದೆ ಪಂಚಮ ಶನಿ ಮುಕ್ತಾಯ ಆಗುವ ತನಕ ಈಶ್ವರನ ಆರಾಧನೆ ಮಾಡಬೇಕು ವಾಹನ ಖರೀದಿ ಮಾಡುವರು ಹಾಗೂ ಭೂಮಿ ಖರೀದಿ ಮಾಡುವರು ಫೆಬ್ರುವರಿ ಹದಿನೈದರ ನಂತರ ಮಾಡಬೇಕು ಏಪ್ರಿಲ್ ತಿಂಗಳ ನಂತರ ತುಲಾ ರಾಶಿಯವರಿಗೆ ನಿರೀಕ್ಷೆಗೆ ಮಿರುದ ಶುಭ ಫಲಗಳು ಲಭಿಸುತ್ತದೆ ವಿಧ್ಯಾರ್ಥಿಗಳಿಗೆ ಈಶ್ವರನ ಆರಾಧನೆ ಮಾಡಬೇಕು .

ಪಂಚಮದಲ್ಲಿ ಶನಿ ಸಂಚಾರ ಮಾಡುವುದರಿಂದ ಚಿಂತೆಯನ್ನು ಕೊಡುತ್ತಾನೆ ಆದರೆ ಶನಿ ಮಹಾತ್ಮ ತುಲಾ ರಾಶಿಯವರಿಗೆ ಪರಮ ಯೋಗಕಾರಕ ನಾಗಿ ಇರುವುದರಿಂದ ಪಂಚಮದಲ್ಲಿ ಇದ್ದರು ಸಹ ಶನಿ ದೃಷ್ಟಿ ಏಕಾದಶ ಸ್ಥಾನ ನೋಡುವುದರಿಂದ ತುಲಾ ರಾಶಿಯವರಿಗೆ ಶುಭ ಆಗುತ್ತದೆ ಸಿಟ್ಟು ಕೋಪ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಶುಕ್ರ ಹದಿನೈದನೇ ತಾರೀಖಿನ ನಂತರ ಶುಕ್ರ ಮೀನ ರಾಶಿ ಪ್ರವೇಶ ಮಾಡಿದ ನಂತರ ಅಭಿವೃದ್ದಿಯನ್ನು ತುಲಾ ರಾಶಿಯವರು ಕಾಣುತ್ತಾರೆ

ತುಲಾ ರಾಶಿಗೆ ಮೂರರ ಅಧಿಪತಿಯಾದ ಗುರು ಆರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ ಹಾಗೆಯೇ ಶುಕ್ರ ಎಂಟನೆಯ ಮನೆಯ ಅಧಿಪತಿಯಾಗಿದ್ದು ಆರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ ಫೆಬ್ರುವರಿ ಹದಿನೈದನೇ ತಾರೀಖಿನ ನಂತರ ನಿರೀಕ್ಷೆಗೂ ಮೀರಿದ ಶುಭ ಫಲಗಳು ಲಭಿಸುತ್ತದೆ ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಅಭಿವೃದ್ದಿ ಕಂಡು ಬರುತ್ತದೆ

ಸಪ್ತಮ ಸ್ಥಾನದಲ್ಲಿ ರಾಹುವಿನ ಸಂಚಾರ ಆಗುತ್ತದೆ ಹಾಗೆಯೇ ಕುಜ ಅಷ್ಟಮ ಸ್ಥಾನದಲ್ಲಿ ಇರುವುದರಿಂದ ಗಂಡ ಹೆಂಡತಿಯ ನಡುವೆ ಸಣ್ಣ ಪುಟ್ಟ ಮನಸ್ತಾಪಗಳು ಆಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ತುಲಾ ರಾಶಿಯವರ ಮಾತುಗಳು ನಿಷ್ಟುರಕ್ಕೆ ಕಾರಣ ಆಗಬಹುದು ವಿವಾಹ ಆಗುವರುಗೆ ಏಪ್ರಿಲ್ ತಿಂಗಳ ನಂತರ ಗುರು ಬಲ ಬರುತ್ತದೆ ಒಂಬತ್ತನೆಯ ಮನೆಯನ್ನು ಭಾಗ್ಯ ಸ್ಥಾನ ಎಂದು ಕರೆಯುತ್ತಾರೆ ತುಲಾ ರಾಶಿಯವರಿಗೆ ಭಾಗ್ಯೋದಯ ಆಗುತ್ತದೆ ಹೀಗೆ ತುಲಾ ರಾಶಿಯವರಿಗೆ ಫೆಬ್ರುವರಿ ತಿಂಗಳಲ್ಲಿ ಜೀವನದಲ್ಲಿ ಏರುಪೇರುಗಳನ್ನು ಎದುರಿಸಿದರು ಸಹ ಫೆಬ್ರುವರಿ ಹದಿನೈದರ ನಂತರ ಶುಭದಾಯಕವಾಗಿ ಇರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: