ತುಲಾ ರಾಶಿಯವರ ಡಿಸೆಂಬರ್ ಮಾಸ ಭವಿಷ್ಯ ಹೇಗಿರತ್ತೆ ನೋಡಿ

0

ಇಂದು ನಾವು ತುಲಾ ರಾಶಿಯವರ ಮಾಸ ಭವಿಷ್ಯ ತಿಳಿದುಕೊಳ್ಳೋಣ ಮತ್ತು ಪರಿಹಾರಕ್ಕಾಗಿ ಏನು ಮಾಡಬೇಕೆಂದು ನಾವು ಇದರಲ್ಲಿ ತಿಳಿದುಕೊಳ್ಳೋಣ. ಶುಕ್ರನಿಂದಾಗಿ ಈ ತಿಂಗಳಲ್ಲಿ ಒಳ್ಳೊಳ್ಳೆ ಫಲಗಳು ದೊರಕಬಹುದು ರಾಯರಿಂದ ಪ್ರೀತಿ ದೊರಕುತ್ತದೆ ಅಂದರೆ ರಾಜ ಸಮಾನವಾಗಿರುವಂತಹ ವ್ಯಕ್ತಿಗಳಿಂದ ಲಾಭವಾಗುವಂತದೆ ಮತ್ತು ಒಳ್ಳೆಯ ಮಿತೃತ್ವ ದೊರಕುವಂತಿದೆ

ಕುಟುಂಬದಿಂದ ಬರುವಂತಹ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ ಮತ್ತು ನೀವು ಕೇಳಿದ್ದೆಲ್ಲ ಸಿಗುವಂತಹ ಕಾಲ ಒದಗಬಹುದು. ಶುಕ್ರನಿಂದಾಗಿ ಅಲಂಕಾರ ವಸ್ತುಗಳು, ಗಾಡಿಗಳು, ಆಭರಣಗಳು ಇತ್ಯಾದಿಗಳಲ್ಲಿ ಲಾಭವಾಗುವಂತದ್ದನ್ನು ನಾವು ನೋಡಬಹುದು. ನಿಮ್ಮ ಹಣವನ್ನು ನೋಡಿ ನಿಮಗೆ ಕೆಲವರು ಗೌರವವನ್ನು ನೀಡುತ್ತಾರೆ ಸ್ವಲ್ಪ ಜಾಗರೂಕತೆಯಿಂದ ಇರಬೇಕು ಎಷ್ಟು ದಿನ ನಿಮ್ಮ ಹತ್ತಿರ ದುಡ್ಡು ಇರುತ್ತದೆ ಅಲ್ಲಿಯತನ ಗೌರವ ಕೊಡುತ್ತಾರೆ ಅದರಿಂದ ನೀವು ಹಿಗ್ಗಬಾರದು ಕುಗ್ಗಬಾರದು.

ವಸ್ತ್ರ ಲಾಭ ಆಗುವಂತದ್ದು ಅಂದರೆ ಅಲಂಕಾರ ಕ್ಕೆ ಸಂಬಂಧಪಟ್ಟಂತಹ ವಸ್ತುಗಳು ಬರುವಂತದ್ದು ಒಂದಷ್ಟು ವಸ್ತ್ರಗಳು ಬರುವಂಥದ್ದು ಅಥವಾ ಹೊಸದಾಗಿ ಖರೀದಿ ಮಾಡುವಂತದ್ದು ಕೆಲವು ಉಡುಗೊರೆಗಳು ಬರುವಂತಹ ಸಾಧ್ಯತೆ ಇರುತ್ತದೆ. ನಿಮ್ಮ ಧೈರ್ಯ ಶೌರ್ಯದಿಂದ ಶತ್ರುಗಳ ನಾಶವಾಗುತ್ತದೆ ಶುಕ್ರನಿಂದ ಬರುವಂತಹ ಧೈರ್ಯ ಹಾಸ್ಯಮಯವಾಗಿರುತ್ತದೆ ಅಂದರೆ ಶತ್ರುಗಳನ್ನು ಹಾಸ್ಯದಿಂದಲೇ ನಾಶ ಮಾಡುತ್ತೀರಿ.

ಬುಧನಿಂದ ಏನು ಫಲಗಳು ಬರುತ್ತಿತ್ತದೆ ಎಂದರೆ ಶತ್ರುವಿಂದ ಭಯ ಉಂಟಾಗುವಂತದ್ದು ಆದರೆ ಶುಕ್ರ ಇರುವುದರಿಂದ ಆ ಭಯವೂ ಕೂಡ ದೂರವಾಗುವಂತೆ ಶುಕ್ರ ಮಾಡುತ್ತಾನೆ.ಕುಜನಿಂದ ನಿಮಗೆ ಸ್ವಲ್ಪ ರೋಗಗಳು ಬರುವ ಸಾಧ್ಯತೆಗಳಿವೆ‌. ಕುಜನಿಂದ ಮನಸ್ಸಿಗೆ ಸ್ವಲ್ಪ ಕಸಿಬಿಸಿ ಆಗುವ ಸಾಧ್ಯತೆಗಳಿವೆ ಇದಲ್ಲದೆ ಮಾನಕ್ಕೂ ಕೂಡ ಧಕ್ಕೆ ಬರುವ ಸಾಧ್ಯತೆಗಳಿವೆ.

ರವಿಯಿಂದ ಧನನಾಶವಾಗುವ ಸಾಧ್ಯತೆಗಳಿವೆ ಕಣ್ಣಿಗೆ ಸ್ವಲ್ಪ ತೊಂದರೆ ಆಗುವ ಸಾಧ್ಯತೆಗಳಿವೆ ಅನ್ಯರಿಂದ ವಂಚನೆ ಆಗುವಂತದ್ದು. ಗುರುವಿನಿಂದಾಗಿ ಕಷ್ಟಪಟ್ಟಿದಕ್ಕೆ ಸರಿಯಾದಂತಹ ಫಲ ಸಿಗದೇ ಇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಗುರು ಏಪ್ರಿಲ್ ನಲ್ಲಿ ಸ್ಥಾನಪಲ್ಲಟ ಮಾಡುತ್ತಾನೆ ಶತ್ರು ಭಾಗದಲ್ಲಿ ಇದ್ದಂತವನು ಸಪ್ತಮ ಭಾಗಕ್ಕೆ ಹೋಗುತ್ತಾನೆ ಆಗ ನಮಗೆ ಒಳ್ಳೆಯದಾಗುವ ಸಾಧ್ಯತೆಗಳಿವೆ. ಶನಿ ನಿಮಗೆ ಹೆಂಡತಿಯಿಂದ ಸ್ವಲ್ಪ ತೊಂದರೆಗಳನ್ನು ಉಂಟು ಮಾಡುತ್ತಾನೆ.

ಡಿಸೆಂಬರ್ ತಿಂಗಳಲ್ಲಿ ಬರುವಂತಹ ಒಳ್ಳೊಳ್ಳೆಯ ದಿನಗಳು ಯಾವುದೆಂದರೆ ಚಿತ್ರ ನಕ್ಷತ್ರದವರಿಗೆ 10, 19, 28, ಸ್ವಾತಿ ನಕ್ಷತ್ರದವರಿಗೆ 12, 21. ಇಂಥ ದಿನಾಂಕಗಳಲ್ಲಿ ದೇವಸ್ಥಾನಗಳಿಗೆ ಹೋಗುವುದು ಮತ್ತು ಕೆಲವು ಪುಣ್ಯ ಕಾರ್ಯಗಳನ್ನು ನಾವು ಮಾಡಬಹುದು ಪರಿಹಾರಕ್ಕಾಗಿ ದೇವಿ ಆರಾಧನೆ ಮಾಡಬೇಕು ಮತ್ತು ಸ್ತೋತ್ರಗಳನ್ನು ಹೇಳುವುದರಿಂದ ಒಳ್ಳೆಯದಾಗುತ್ತದೆ.

Leave A Reply

Your email address will not be published.

error: Content is protected !!
Footer code: