ತುಲಾ ರಾಶಿಯವರಿಗೆ ಯುಗಾದಿ ನಂತರ ಇವರ ಲೈಫ್ ಹೇಗಿರತ್ತೆ ಗೊತ್ತಾ

0

ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯವನ್ನು ಅರಿಯೋಣ ಬನ್ನಿ. 2023ರ ಏಪ್ರಿಲ್ ತಿಂಗಳ 14ನೇ ತಾರೀಕಿನಂದು ರವಿಯು ಮೇಷ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. 21,22ನೇ ತಾರೀಖಿನ ಸಂಧಿಸಮಯದಲ್ಲಿ ಗುರುವು ಮೇಷರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಗುರುವಿನ ಸ್ಥಾನ ಪಲ್ಲಟದಿಂದಾಗಿ ಎಲ್ಲ ಗ್ರಹಗಳಲ್ಲಿಯೂ ಬದಲಾವಣೆಗಳು ಆಗಲಿದ್ದು, ಕೆಲವರ ಜಾತಕದ ಮೇಲೆ ಗುರುಬಲವು ಆರಂಭವಾಗಿದ್ದರೆ, ಇನ್ನು ಕೆಲವರ ಜಾತಕದ ಮೇಲೆ ಗುರುಬಲವು ನಶಿಸಲಿದೆ.

ತುಲಾ‌ರಾಶಿಯಲ್ಲಿ ರವಿಯು 6 ಮತ್ತು 7 ನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಲಾಭಾದಿಪತಿಯಾಗಿ ಏಳನೇ ಮನೆಯಲ್ಲಿ ಸ್ಥಿತನಾಗುತ್ತಾನೆ. ಇದರಿಂದ ಬಹಳ ಲಾಭಗಳು ತುಲಾರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ದೊರೆಯಲಿದೆ. ಚತುರ್ಗ್ರಹ ಕೂಟವು ಸಹ ಏರ್ಪಡುವುದರಿಂದ ಅದೃಷ್ಟವೆನ್ನುವುದು ಬೆನ್ನು ಬೀಳುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಲಿದ್ದು, ಹಣದ‌ ಒಳ ಹರಿವು ಹೆಚ್ಚಾಗುತ್ತದೆ. ನೀವು ಬೇರೆಯವರಿಗೆ ನೀಡಿದ ಹಣವು ಸಹ ಈ ಸಮಯದಲ್ಲಿ ನಿಮಗೆ ಮರಳಿ ದೊರೆಯಲಿದೆ.

ಕುಜನು ತುಲಾರಾಶಿಯಲ್ಲಿ ದ್ವೀತಿಯಾಧಿಪತಿಯಾಗಿರಲಿದ್ದು, ಬಹಳಷ್ಟು ಯೋಗಗಳು ಈ ಸಮಯದಲ್ಲಿ ಒದಗಲಿವೆ. ವಿವಾಹಕ್ಕಾಗಿ ಬಹಳ ದಿನಗಳಿಂದ‌ ಪ್ರಯತ್ನಿಸುತ್ತಿದ್ದಲ್ಲಿ, ಈ ಏಪ್ರಿಲ್ ತಿಂಗಳಾಂತ್ಯದೊಳಗೆ ಮದುವೆ ನಿಶ್ಚಯವಾಗಲಿದೆ. ಗುರುಬಲದ ಜೊತೆಗೆ ಕುಜನ ಸಂಚಾರವು ಶುಭವಾಗಿದೆ. ಬುಧನು ಸಪ್ತಮದಲ್ಲಿ ವ್ಯಯಾಧಿಪತಿಯಾಗಿ ಇದ್ದರು ಸಹ ಅವನಿಂದ ನಿಮಗೆ ಶುಭವೇ ಆಗಲಿದೆ. ಇಷ್ಟು ದಿನಗಳು ಕಾದಿದ್ದ ಘಳಿಗೆಯೂ ಈಗ ಕೂಡಿ ಬರಲಿದೆ.

ವ್ಯವಹಾರದಲ್ಲಿ ಈ ಹಿಂದೆ ಬಹಳಷ್ಟು ನಷ್ಟಗಳನ್ನು ಅನುಭವಿಸಿದ್ದಿರಿ. ಅದೆಲ್ಲವು ಸಹ ಈ ಸಮಯದಲ್ಲಿ ಸರಿದೂಗಲಿವೆ. ಬುಧ ಹಾಗೂ ಗುರುವಿನ ಬಲದಿಂದ ಈ ತಿಂಗಳು ನೀವು ಹೆಚ್ಚಿನ ಲಾಭವನ್ನು ಕಾಣಲಿದ್ದಿರಿ. ತುಲಾ ರಾಶಿಯಲ್ಲಿ ಗುರುವಿನ ಸಂಪೂರ್ಣ ಬೆಂಬಲವು ದೊರೆಯಲಿದ್ದು, ಲಾಭ ಸ್ಥಾನದ ಕಡೆಗೂ ಗುರುವಿನ ದೃಷ್ಟಿ ಇರುವುದರಿಂದ ಒಂದು ರೀತಿಯಲ್ಲಿ ಮುಟ್ಟಿದ್ದೆಲ್ಲವು ಚಿನ್ನವಾಗುವ ಹೊತ್ತು ಎನ್ನಬಹುದು. ಈ ತಿಂಗಳು ನಿಮಗೆ ಯೋಚಿಸುವ ಅಗತ್ಯವೇ ಬರುವುದಿಲ್ಲ. ನೆಮ್ಮದಿಯಾಗಿ ಇರಬಹುದು.

ಶುಕ್ರ ಅಷ್ಟಮದಲ್ಲಿ ಇರುವುದರಿಂದ ಆರೋಗ್ಯದಲ್ಲಿ ಏರುಪೇರು ಬರಲಿವೆ. ತಲೆ ನೋವಿನ ಸಮಸ್ಯೆ ಅಥವಾ ಕಣ್ಣಿನ ಸಮಸ್ಯೆಗಳು ಕಾಣಿಸುವ ಸಾಧ್ಯತೆಗಳಿವೆ. ಶನಿ ಪಂಚಮದಲ್ಲಿ ಇರುವುದು ಸಹ ನಿಮ್ಮ ರಾಶಿಯಲ್ಲಿ ಒಳಿತಲ್ಲ. ಪಂಚಮಶನಿಯು ಪೀಡಕನಾಗಿದ್ದು, ನಿಮ್ಮೆಲ್ಲ ಆಸೆ ಕನಸುಗಳಿಗೆ ಅಡ್ಡಗಾಲಾಗಿ ಕಾಡುತ್ತಾನೆ. ಶತೃನಿಯಂತ್ರಣವು ಈ ತಿಂಗಳಲ್ಲಿ ನಡೆಯುತ್ತದೆ.

ಪ್ರೇಮವಿವಾಹಕ್ಕೆ ಸೂಕ್ತವಾದ ಸಮಯವಾಗಿದೆ. ಮನೆಯವರ ಒಪ್ಪಿಗೆಗಾಗಿ ತುಲಾರಾಶಿಯವರು ಇಷ್ಟು ದಿನಗಳ ಕಾಲ ಎದುರು ನೋಡುತ್ತಿದ್ದರೆ ಈ ತಿಂಗಳಲ್ಲಿ ನಿಮಗೆ ವಿವಾಹ ಭಾಗ್ಯವು ಸಿಗಲಿದೆ. ದಾಂಪತ್ಯದಲ್ಲಿ ಅರ್ಧತಿಂಗಳಿನ ತನಕ, ಎಂದರೆ ಗುರುಬಲವು ಶುರುವಾಗುವ ತನಕವೂ ಸಣ್ಣಪುಟ್ಟ ಸಮಸ್ಯೆಗಳು ಇದ್ದರು ಸಹ ನಂತರದ ದಿನಗಳು ಒಳ್ಳೆಯದಾಗಲಿವೆ. ವಿದ್ಯಾರ್ಥಿಗಳಿಗೆ ಈ ತಿಂಗಳು ಶುಭದಿನಗಳಿವೆ. ಉನ್ನತ ವ್ಯಾಸಾಂಗ ಮಾಡುತ್ತಿರುವವರಿಗೆ ವಿದೇಶಗಳಿಂದ ನೆರವು ಸಿಗುವ ಸಾಧ್ಯತೆಗಳಿವೆ.

ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಈ ತಿಂಗಳು ಅನಾರೋಗ್ಯದಿಂದ ಮುಕ್ತಿ ಸಿಗಲಿದೆ. ಅಷ್ಟಮದಲ್ಲಿ ಶುಕ್ರ ಇರುವುದರಿಂದ ಒಮ್ಮೆ ಸರಿಯಾದ ಆರೋಗ್ಯ ಮತ್ತೆ ಹದಗೆಡಬಹುದು ಆದಷ್ಟು ಜಾಗರೂಕರಾಗಿರಿ. ಜನ್ಮ ಜಾತಕದಲ್ಲಿ ದಶಾಭುಕ್ತಿಗಳು ಸರಿಯಾಗಿ ಇಲ್ಲದಿದ್ದರೆ ಮಾತ್ರ ಈ ಮೇಲಿನ ಗೋಚಾರ ಫಲಗಳು ಲಭಿಸದರ ಹೋಗಬಹುದು. ಅಥವಾ ಇದಕ್ಕಿಂತಲೂ ಹೆಚ್ಚಿನ ಯೋಗಗಳನ್ನು ನೀವು ಹೊಂದಬಹುದು. ಒಟ್ಟಾರೆ ಈ ಏಪ್ರಿಲ್ ತಿಂಗಳು ಒಳ್ಳೆಯ ಯೋಗಗಳನ್ನು ತಂದು ಕೊಟ್ಟಿದೆ.

Leave A Reply

Your email address will not be published.

error: Content is protected !!
Footer code: