ಆತ್ಮೀಯ ಓದುಗರೇ ಕೊಬ್ಬರಿ ಎಣ್ಣೆ ಅನ್ನೋದು ಬರಿ ಎಣ್ಣೆಯಾಗಿ ಅಷ್ಟೇ ಅಲ್ಲ ಕೂದಲಿನ ನಾನಾ ರೀತಿಯ ಸಮಸ್ಯೆಗೆ ಉಪಯೋಗಕಾರಿಯಾಗಿದೆ ಮತ್ತೊಂದು ವಿಷಯ ಏನು ಅನ್ನೋದನ್ನ ನೋಡುವುದಾದರೆ ಬಹಳಷ್ಟು ಜನ ತಲೆಗೆ ಕೊಬ್ಬರಿ ಎಣ್ಣೆ ಹಾಕೋದನ್ನ ನಿರ್ಲಕ್ಷಿಸುತ್ತಾರೆ ಆದ್ರೆ ನಿಜಕ್ಕೂ ಕೊಬ್ಬರಿ ಎಣ್ಣೆ ಹಾಕುವುದರಿಂದ ಎಷ್ಟೊಂದು ಲಾಭವಿದೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಸಮಸ್ಯೆ ಕೂದಲು ಉದುರುವುದು. ಹೆಂಗಳೆಯರು ಮತ್ತು ಗಂಡಸರಿಗೆ ಅತಿಯಾದ ಕೂದಲು ಉದುರುವಿಕೆಗೆ ಕಾರಣ ಪರಿಸರಮಾಲಿನ್ಯ ಧೂಳು ಹಾಗೂ ಜೀವನಶೈಲಿ ಅಂತ ಹೇಳಬಹುದು ಧೂಳಿಂದ ಅಥವಾ ಪರಿಸರ ಮಾಲಿನ್ಯದಿಂದ ತಲೆಯಲ್ಲಿ ಧೂಳಿನ ಕಣಗಳು ಉಂಟಾಗಿ ತಲೆಯಹೊಟ್ಟು ಹೆಚ್ಚಾಗುತ್ತಾ ಹೋಗುತ್ತದೆ ಹೀಗೆ ತಲೆಯಲ್ಲಿ ಹೊಟ್ಟು ಹೆಚ್ಚಾದಂತೆ ತಲೆಯ ಕೆದರುವಿಕೆ ಹೆಚ್ಚಾಗುತ್ತದೆ ಇದರಿಂದ ಕೂದಲು ಉದುರುವುದಕ್ಕೆ ಪ್ರಾರಂಭವಾಗುತ್ತದೆ.
ಕೇವಲ ಕೂದಲು ಉದುರುವುದು ಅಲ್ಲ ಕೂದಲು ತುಂಡಾಗುತ್ತದೆ ಮೊದಮೊದಲು ಸ್ವಲ್ಪ ಸ್ವಲ್ಪವೇ ಆರಂಭವಾಗಿ ಕ್ರಮೇಣ ಅಧಿಕ ಕೂದಲು ಉದುರಲು ಪ್ರಾರಂಭವಾಗುತ್ತದೆ. ಈ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುವಂತಹ ಸಮಸ್ಯೆಯಾಗಿದೆ.ಬಹುತೇಕ ಹೆಣ್ಣುಮಕ್ಕಳಿಗೆ ಕೂದಲಿಗೆ ಎಣ್ಣೆ ಹಾಕುವುದೆಂದರೆ ಅಲರ್ಜಿ. ಎನ್ನೆಯಬಗ್ಗೆ ಇಲ್ಲಸಲ್ಲದ ತಪ್ಪು ಕಲ್ಪನೆ ಬೆಳೆಸಿಕೊಂಡು ಕೂದಲಿಗೆ ಎಣ್ಣೆ ಹಾಕಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಕೂದಲಿಗೆ ಎಣ್ಣೆ ಹಾಕುವುದೆ ಅದರ ಆರೋಗ್ಯದ ದೃಷ್ಟಿಯಿಂದ. ಕೂದಲಿಗೆ ಉಗುರು ಬೆಚ್ಚಗಿನ ಬಿಸಿ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಅದ್ಭುತ ಪ್ರಯೋಜನಗಳಿವೆ ಎಂಬ ಮಾಹಿತಿಯನ್ನು ಕೇಶ ತಜ್ಞರೇ ಹೇಳುತ್ತಾರೆ.
ಕೂದಲು ಉದುರುವಿಕಯನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ನೋಡುವುದಾದರೆ ನೀವು ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಒಂದು ಎರಡುನೂರಾಐವತ್ತು ಎಂ ಎಲ್ ಕೊಬ್ಬರಿ ಎಣ್ಣೆ ಹಾಗೂ ಒಂದು ಹಿಡಿಯಷ್ಟು ಕರಿಬೇವಿನ ಸೊಪ್ಪನ್ನು ತೆಗೆದುಕೊಳ್ಳಿ ಹಾಗೆಯೇ ಈರುಳ್ಳಿಯ ಹೂವನ್ನು ಅರ್ಧ ಕಪ್ ಮತ್ತು ಮೂರು ಚಮಚದಷ್ಟು ಅಲೋವೆರಾ ತೆಗೆದುಕೊಳ್ಳಿ. ಈ ನಾಲ್ಕು ಪದಾರ್ಥಗಳನ್ನು ತೆಗೆದುಕೊಂಡು ಮೊದಲಿಗೆ ಚಿಕ್ಕ ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಉಗುರು ಬೆಚ್ಚಗೆ ಮಾಡಿಕೊಳ್ಳಿ. ಅದರಲ್ಲಿ ಕರಿಬೇವು ಈರುಳ್ಳಿ ಹೂ ಮತ್ತು ಅಲೋವೆರಾ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ.
ಕೊಬ್ಬರಿ ಎಣ್ಣೆಯ ಬಣ್ಣ ಬದಲಾಗುವ ತನಕ ಅದನ್ನು ಕಾಯಿಸಿ ನಂತರ ತಣ್ಣಗಾಗಲು ಬಿಟ್ಟು ಬಿಡಿ ತಣ್ಣಗಾದ ನಂತರ ಅದನ್ನು ಶೋಧಿಸಿಕೊಳ್ಳಿ. ಹೀಗೆ ಶೋಧಿಸಿಕೊಳ್ಳಲಾದ ಎಣ್ಣೆಯನ್ನು ನಿಮ್ಮ ಕೂದಲಿನ ಮೂಲಗಳಿಗೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಹೀಗೆ ಮಸಾಜ್ ಮಾಡಿಕೊಂಡು ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿ ಹೀಗೆ ತಲೆಸ್ನಾನ ಮಾಡುವಾಗ ಯಾವುದೇ ಶಾಂಪೂ ಉಪಯೋಗಿಸಬೇಡಿ. ಹೀಗೆ ವಾರಕ್ಕೆ ಮೂರು ಬಾರಿ ಮಾಡಿದರೆ ಸಾಕು ಖಂಡಿತವಾಗಿ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ. ಇನ್ನುಕೂದಲಿಗೆ ಬಿಸಿ ಎಣ್ಣೆಯನ್ನು ಹಚ್ಚುವುದರಿಂದ ಅದರ ಮೇಲೆ ರಕ್ಷಣಾತ್ಮಕ ಪೊರೆ ರೂಪಗೊಳ್ಳುತ್ತದೆ ಅದು ಹಾನಿಕಾರಕ ಯುವಿ ಕಿರಣಗಳಿಂದ ನಿಮ್ಮ ಕೂದಲಿಗೆ ಹಾನಿ ಆಗದಂತೆ ತಡೆಯುತ್ತದೆ. ಕೂದಲಿಗೆ ಕ್ರಮೇಣವಾಗಿ ಬಿಸಿ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಶುಷ್ಕತೆ ಮತ್ತು ಕವಲೊಡೆಯುವುದು ನಿಂತು ಕೂದಲಿಗೆ ಹೊಳಪು ಬರುತ್ತದೆ. ಈ ರೀತಿಯಾಗಿ ನೀವು ಸುಲಭವಾಗಿ ಮನೆಯಲ್ಲಿಯೇ ಸಿಗುವ ಕೊಬ್ಬರಿ ಎಣ್ಣೆಯನ್ನೂ ಬಳಸುವುದರಿಂದ ಕೂದಲು ಉದುರುವಿಕೆಗೆ ಮತ್ತು ತಲೆಯಲ್ಲಿ ಹೊಟ್ಟು ಆಗದಂತೆ ನೋಡಿಕೊಳ್ಳಬಹುದು.