ಜೇಮ್ಸ್ ಬಗ್ಗೆ ವಿನೋದ್ ಪ್ರಭಾಕರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ

0

ವಿನೋದ ಪ್ರಭಾಕರ್ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಕನ್ನಡ ಚಿತ್ರರಂಗದ ಟೈಗರ್ ಎಂದೇ ಪ್ರಖ್ಯಾತರಾಗಿದ್ದ ನಟ ದಿವಂಗತ ಟೈಗರ್ ಪ್ರಭಾಕರ್ ಅವರ ಮಗ. 2015 ರಲ್ಲಿ ಗಡಿಪಾರ್’ ಚಿತ್ರದಿಂದ ಸಿನಿಪಯಣ ಆರಂಭಿಸಿದ ವಿನೋದ್ ಪ್ರಭಾಕರ್. ಅಪ್ಪನ ಹಾದಿಯಲ್ಲೇ ಸಾಗಿ ಬಂದ ವಿನೋದ್ ಪ್ರಭಾಕರ್ ಅವರು ಕೂಡ ಪ್ರಭಾಕರ್ ನಂತೆಯೇ ಬಾಡಿ ಬಿಲ್ಡಿಂಗ್ ಮಾಡಿ ನೋಡುಗರು ವ್ಹಾವ್ ಎಂಬ ಉದ್ಗಾರ ತೆಗೆಯುವಂತೆ ಬಾಡಿ ನಾ ಬಿಲ್ಡ್ ಮಾಡಿದ್ದಾರೆ. ಟೈಸನ್’ ಕ್ರ್ಯಾಕ್’ಬೆಳ್ಳಿ ಗಜೇಂದ್ ಹೋರಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನವಗ್ರಹ ಸಿನಿಮಾದ ಟೋನಿ ಅನ್ನೋ ಹೆಸರಲ್ಲಿ ಮಿಂಚಿದ್ದ ಇವರು ಕಳೆದ ವರ್ಷ ಬಿಡಗಡೆಯಾದ ರಾಬರ್ಟ್ ಮೂವಿಯಲ್ಲಿ ರಾಘವ್ ಅನ್ನೋ ಹೆಸರು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುವ ಹಾಗೆ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೆ ,ಸ್ನೇಹ ಜೀವಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ನೆನ್ನೆಯಷ್ಟೇ ವಿಜೃಂಭಣೆಯಿಂದ ಬಿಡುಗಡೆಯಾದ ಜೇಮ್ಸ್ ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ವಿನೋದ್ ಪ್ರಭಾಕರ್ ಅವರು ಹಂಚಿಕೊಂಡಿದ್ದಾರೆ. ಅದೇನೆಂದು ಈ ಲೇಖನದಲ್ಲಿ ನೋಡೋಣ ಬನ್ನಿ.

ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ವಿನೋದ್ ಪ್ರಭಾಕರ್. ನಮ್ಮೆಲ್ಲರ ನೆಚ್ಚಿನ ಪ್ರೀತಿಯ ಡಾ.ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಸಿನಿಮಾ ಜೇಮ್ಸ್ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆಗಿದೆ ಎಂಬ ಖುಷಿ ಒಂದು ಕಡೆಯಾದರೆ, ಪುನೀತ್ ಅವರ ಅಕಾಲಿಕ ಮರಣ ಆ ಖುಷಿಯನೆಲ್ಲ ಕಿತ್ತುಕೊಳ್ಳುವಷ್ಟು ನೋವು ಕಾಡುತ್ತಿದೆ. ಆ ಇಡೀ ಚಿತ್ರರಂಗಕ್ಕೆ ಶುಭಕೋರುತ್ತ, ಪುನೀತ್ ಸರ್ ವಿಶ್ ಯು ವೇರ, ವೇರಿ ಹ್ಯಾಪಿ ಬರ್ತ್ ಡೇ ಲವ್ ಯು ಸರ್ ಜೈ ಕರ್ನಾಟಕ ಎಂಬುದಾಗಿ ಹೇಳಿದ್ದಾರೆ

Leave A Reply

Your email address will not be published.

error: Content is protected !!
Footer code: