ಚಲಿಸುವ ವಿಮಾನ ಹತ್ತಿದ ಅಪ್ಪು ಸಾಹಸ ನೋಡಿ ವೀಡಿಯೊ

0

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದು ಗುರುತಿಸಿಕೊಂಡ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಹತ್ತಿರ ಹತ್ತಿರ ಎರಡೂವರೆ ತಿಂಗಳು ಕಳೆಯಿತು ಆದರೆ ಅವರು ಇಂದಿಗೂ ಕೂಡ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ. ಅವರು ನಮ್ಮನ್ನು ಅಗಲಿದ್ದಾರೆ ಅವರು ನಮ್ಮೊಂದಿಗೆ ಇಲ್ಲ ಎನ್ನುವ ಭಾವನೆ ಯಾರಲ್ಲಿಯೂ ಇಲ್ಲ. ಅವರು ಇಲ್ಲ ಎನ್ನುವ ವಿಷಯವನ್ನು ನೆನೆಸಿಕೊಂಡರೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ. ಅಪ್ಪು ಅವರು ನಟಿಸಿರುವ ಚಿತ್ರಗಳು ಅವರು ಮಾಡಿರುವ ಸಾಮಾಜಿಕ ಸೇವೆಗಳು ಅವರು ಯಾವಾಗಲೂ ನಮ್ಮ ನಡುವೆಯೇ ಇರುವಂತೆ ಮಾಡುತ್ತವೆ.

ಪುನೀತ್ ರಾಜಕುಮಾರ್ ಒಬ್ಬ ಪ್ರತಿಭಾನ್ವಿತ ನಟ ಅಭಿನಯದಲ್ಲಾಗಲಿ ಹಾಡುಗಾರಿಕೆಯಲಾಗಲಿ ನೃತ್ಯದಲ್ಲಿ ಎಲ್ಲದರಲ್ಲಿಯೂ ಯಶಸ್ವಿಯಾಗಿ ತಮ್ಮ ಕಾರ್ಯನಿರ್ವಹಿಸುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರು ತಮ್ಮ ಒಳ್ಳೆಯ ಕೆಲಸಗಳಿಂದ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದರು ಅವರು ವಿಧಿವಶರಾದ ನಂತರ ಅವರ ಅಭಿಮಾನಿಗಳು ಇನ್ನೂ ಕೂಡ ದುಃಖದಲ್ಲಿದ್ದರೆ. ಈ ನಡುವೆ ಪುನೀತ್ ರಾಜಕುಮಾರ್ ಅವರು ನಟಿಸಿರುವ ಕೊನೆಯ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬ ಅಭಿಮಾನಿಗಳ ಆಶಯದ ಮೇರೆಗೆ ಹದಿನೇಳನೇ ತಾರೀಕು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಇರುವ ಕಾರಣ ಅವರ ಜೀನ್ಸ್ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸುತ್ತಿದೆ.

ಈ ಜೇಮ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದುಈ ಚಿತ್ರದಲ್ಲಿ ಚಲಿಸುತ್ತಿರುವ ವಿಮಾನದ ಮೇಲೆ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಸಾಹಸವನ್ನು ನೋಡಿ ಅವರ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಜೇಮ್ಸ್ ಚಿತ್ರದ ಟ್ರೈಲರ್ ನಲ್ಲಿ ಪುನೀತ್ ರಾಜಕುಮಾರ್ ಅವರು ಯಾವುದೇ ರೀತಿಯ ಡ್ಯೂಪ್ ಇಲ್ಲದೆ ಅದ್ಭುತವಾಗಿ ಸಾಹಸ ಮಾಡುವುದನ್ನು ನಾವು ನೋಡಬಹುದಾಗಿದೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸುದ್ದಿ ಮಾಡುತ್ತಿದೆ. ಇಂತಹ ಒಬ್ಬ ಸಾಹಸಿ ನಟನನ್ನು ಕಳೆದುಕೊಂಡಿದ್ದಕ್ಕಾಗಿ ಚಿತ್ರರಂಗ ಇಂದಿಗೂ ಪರಿತಪಿಸುತ್ತಿದೆ. ಒಟ್ಟಾರೆಯಾಗಿ ಪುನೀತ್ ರಾಜಕುಮಾರ ಅವರನ್ನು ಮತ್ತೊಮ್ಮೆ ಜೇಮ್ಸ್ ಚಿತ್ರದಲ್ಲಿ ನೋಡುವುದಕ್ಕೆ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.

error: Content is protected !!