ಗ್ಯಾಸ್ಟ್ರಿಕ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಮಸ್ಯೆಗೆ ಮೂಲ ಕಾರಣ ಹೊಟ್ಟೆಯಲ್ಲಿ ಗಾಳಿ ಅಥವಾ ಗ್ಯಾಸ್ ಸಂಗ್ರಹವಾಗಿ ಹೊರ ಹೋಗದೆ ಇರುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಈ ಸಮಸ್ಯೆಗೆ ಮೂಡವಾತ ಎನ್ನುವರು. ಈ ಸಮಸ್ಯೆಗೆ ಮನೆಯಲ್ಲಿ ಮಾಡಬಹುದಾದ ಪರಿಹಾರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಮೂಡವಾತ ಎಂಬ ಖಾಯಿಲೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ವಿಪರೀತ ಹೊಟ್ಟೆ ನೋವು ಕಾಣಿಸುತ್ತದೆ. ಗಾಳಿ ಹೊಟ್ಟೆಯಲ್ಲಿ ಶೇಖರಣೆಯಾಗಿ ಹೊರ ಹೋಗುವುದಿಲ್ಲ ಅದು ಹಿಂಸೆ ಕೊಡುತ್ತದೆ. ಈ ಸಮಸ್ಯೆಗೆ ಸುಲಭವಾದ ಮನೆ ಮದ್ದಿದೆ ಹಾಗೂ ನಾಭಿ ಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ಮನೆಯಲ್ಲಿಯೆ ಗುಣವಾಗಬೇಕು ಎಂದರೆ ಮೂಡವಾತ ಸಮಸ್ಯೆಗೆ ಆಮ್ಲರಸ ಅಥವಾ ಹುಳಿರುಚಿ ಉತ್ತಮ ಪರಿಹಾರ. ಹುಳಿ ಗಾಳಿಯನ್ನು ಸರಾಗವಾಗಿ ದೇಹದಿಂದ ಹೊರಹಾಕಲು ಸಹಾಯಕಾರಿ. .
ಆಹಾರದ ಮದ್ಯದಲ್ಲಿ ಒಂದು ಚಿಟಿಕೆ ಇಂಗಿಗೆ 4-5 ಹನಿ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನೆಕ್ಕಬೇಕು. ಬೆಳಗ್ಗೆ ಮದ್ಯಾಹ್ನ ಸಾಯಂಕಾಲ ಆಹಾರ ಸೇವಿಸುವಾಗ ಮದ್ಯದಲ್ಲಿ ನಿಂಬೆ ರಸ ಮಿಶ್ರಿತ ಇಂಗಿನ ಸೇವನೆಯಿಂದ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಗ್ಯಾಸ್ ಅಥವಾ ವಾಯು ಹೊರಹೋಗುತ್ತದೆ. ಈ ಮನೆಮದ್ದನ್ನು ಅನುಸರಿಸಿದರೂ ಯಾವುದೆ ಪ್ರಯೋಜನವಾಗದೆ ಇದ್ದಲ್ಲಿ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.
ಮೂಡವಾತ ಸಮಸ್ಯೆಯಿಂದ ಹೆಚ್ಚಿನ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಮೂಡವಾತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಮನೆಯಲ್ಲಿಯೆ ಸುಲಭವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಮಾಡಬಹುದಾದ ಮನೆಮದ್ದನ್ನು ತಪ್ಪದೆ ಅನುಸರಿಸಿ ಮೂಡವಾತ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ಈ ಮಾಹಿತಿ ಉಪಯುಕ್ತವಾಗಿದ್ದು ಎಲ್ಲರಿಗೂ ತಿಳಿಸಿ.