ಗುರು ಕೃಪೆಯಿಂದ ಮೇಷರಾಶಿಯವರಿಗೆ ಇನ್ನ 5 ವರ್ಷ ಅದೃಷ್ಟದ ಸುರಿಮಳೆ

0

ಯಾವುದೇ ಒಂದು ಒಳ್ಳೆಯ ಕೆಲಸ ನಡೆಯಬೇಕು ಎಂದಾದರೆ ಗುರು ಬಲ ಇರಬೇಕು ಗುರು ಬಲ ಇದ್ದಾಗ ಮಾತ್ರ ಜೀವನದಲ್ಲಿ ಸಾಕಷ್ಟು ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಗುರುವನ್ನು ಪ್ರತ್ಯಕ್ಷ ದೇವರು ಎಂದು ಕರೆಯುತ್ತಾರೆ ಹಾಗೆಯೇ ಗುರುವನ್ನು ಒಬ್ಬ ವ್ಯಕ್ತಿಯ ಆತ್ಮ ಎಂದು ಕರೆಯುತ್ತಾರೆ ಯಾವುದೇ ವಿಶೇಷ ಕಾರ್ಯಗಳಿಗೆ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಗುರುಬಲ ಇಲ್ಲದೆ ಇರುವಾಗ ಯಾವುದೇ ವಿಶೇಷ ಕಾರ್ಯಗಳಿಗೆ ಕೈ ಹಾಕಬಾರದು

ಗುರು ಬಲ ಇದ್ದಾಗ ವ್ಯಾಪಾರ ವ್ಯವಹಾರ ಉದ್ಯೋಗ ಹೀಗೆ ಆರ್ಥಿಕವಾಗಿ ಒಳ್ಳೆಯ ಶುಭಫಲಗಳು ಕಂಡು ಬರುತ್ತದೆ . ಅಂದು ಕೊಂಡ ಕೆಲಸಗಳು ಸುಗಮ ವಾಗಿ ನಡೆಯುತ್ತದೆ ಹೀಗೆ ಗುರು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಪ್ರಮುಖನಾಗಿ ಇದ್ದಾನೆ ಗುರುಬಲ ಇರುವಾಗ ಯಾವುದೇ ಕೆಲಸ ಕಾರ್ಯಗಳಿಗೂ ಪ್ರಯತ್ನಿಸಬೇಕು ಆಗ ಯಶಸ್ಸು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಮೇಷ ರಾಶಿಯ ಮುಂದಿನ ಐದು ವರ್ಷಗಳ ಗುರು ಬಲದ ಬಗ್ಗೆ ತಿಳಿದುಕೊಳ್ಳೋಣ.

ಗುರುವನ್ನು ಪ್ರತ್ಯಕ್ಷ ದೇವರು ಎಂದು ಕರೆಯುತ್ತಾರೆ ಸೂರ್ಯ ಚಂದ್ರ ಮಂಗಳ ಗ್ರಹಕ್ಕು ಗ್ರಹಸ್ಪತಿಯೆ ಗುರು ಆಗಿರುತ್ತಾನೆ ಗುರು ಬಲ ಇದ್ದಾಗ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ ಹಣ ಆಸ್ತಿ ಅಂತಸ್ತುಗಳಿಗೆ ಗುರುವೇ ಅಧಿಪತಿಯಾಗಿ ಇರುತ್ತಾನೆ ಈ ಸಮಯದಲ್ಲಿ ಬಾಕಿ ಇರುವ ಹಣ ಬರುತ್ತದೆ ಜಮೀನು ಮಾರಾಟ ಮಾಡುವವರಿಗೆ ಗುರು ಬಲ ಇದ್ದಾಗ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತದೆ ಮೇಷ ರಾಶಿಯಲ್ಲಿ ಮೇ ಒಂದು ಎರಡು ಸಾವಿರದ ಇಪ್ಪತ್ನಾಲ್ಕು ರಿಂದ ಮೇ ಹದಿನಾಲ್ಕು ಎರಡು ಸಾವಿರದ ಇಪ್ಪತೈದರ ವರೆಗೆ ಗುರು ವೃಷಭ ರಾಶಿಯಲ್ಲಿ ಇರುತ್ತಾನೆ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತದೆ.

ಒಳ್ಳೆಯ ಅವಕಾಶಗಳು ಬರುತ್ತದೆ ಕಂಪನಿ ಶೇರಗಳಲ್ಲಿ ಹೆಚ್ಚಿನ ಲಾಭಗಳು ದೊರೆಯುತ್ತದೆ ದುಡ್ಡಿನ ಮೂಲಗಳು ಹೆಚ್ಚಾಗುತ್ತದೆ ಅಂಗಡಿ ಇದ್ದರೆ ಮಾರಾಟ ಹೆಚ್ಚಾಗುತ್ತದೆ ಇದರಿಂದ ಲಾಭ ಉಂಟಾಗುತ್ತದೆ ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಹೊಸ ಅಂಗಡಿ ಓಪನ್ ಮಾಡುವ ಸಾಧ್ಯತೆ ಇರುತ್ತದೆ ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಸುತ್ತಾರೆ ಹಾಗೆಯೇ ವೇತನದಲ್ಲಿ ಹೆಚ್ಚಳ ಕಂಡು ಬರುತ್ತದೆ ವಾಹನ ಮನೆ ಜಮೀನು ಖರೀದಿಯಲ್ಲಿ ಲಾಭ ಕಂಡುಬರುತ್ತದೆ ಗುರು ಹಿರಿಯರಿಂದ ಆಶೀರ್ವಾದ ಹಾಗೂ ಸಲಹೆಗಳು ಕಂಡು ಬರುತ್ತದೆ ಒಳ್ಳೆಯದಾಗಲಿ ಎಂದು ಬಯಸುವರ ಸಂಖ್ಯೆ ಹೆಚ್ಚಾಗುತ್ತದೆ.

ಗುರು ಬಲಿಷ್ಠನಾಗಿ ಇರುವುದರಿಂದ ಒಳ್ಳೆಯ ನಡವಳಿಕೆ ಬುದ್ದಿವಂತಿಕೆಯಿಂದ ಹೆಸರುಗಳಿಸುತ್ತಾರೆ ಮನೆಯಲ್ಲಿ ಕೂಡ ನೆಮ್ಮದಿಯ ವಾತಾವರಣ ನೆಲೆಸುತ್ತದೆ ಮಕ್ಕಳ ವಿಚಾರದಲ್ಲಿ ಭಯ ಪಡುವ ಅವಶ್ಯಕತೆ ಇರುವುದು ಇಲ್ಲ ಏಪ್ರಿಲ್ ಹದಿಮೂರು ಎರಡು ಸಾವಿರದ ಇಪ್ಪತ್ತೆರಡ ರಿಂದ ಮೇ ಒಂದು ಎರಡು ಸಾವಿರದ ಇಪ್ಪತ್ನಾಲ್ಕು ರ ಅವಧಿಯಲ್ಲಿ ಮೇಷ ರಾಶಿಯವರಿಗೆ ಅಷ್ಟೊಂದು ಒಳ್ಳೆಯ ಸಮಯವಲ್ಲ ಹಣ ಸಂಪಾದನೆ ಮಾಡಲು ಬಹಳ ಕಷ್ಟವಾದ ಕಾಲ ಇದಾಗಿದೆ. ಹೆಚ್ಚು ಖರ್ಚು ಮಾಡುವ ಸಮಯ ಇದಾಗಿದೆ

ಅನಾವಶ್ಯಕ ಖರ್ಚು ಕಂಡುಬರುತ್ತದೆ ದಾಂಪತ್ಯ ಜೀವನದಲ್ಲಿ ಮನಸ್ತಾಪ ಕಂಡು ಬರುತ್ತದೆ ಅಂದುಕೊಂಡ ಕೆಲಸಗಳು ನೆರವೇರುವುದು ಇಲ್ಲ ಅನಗತ್ಯವಾಗಿ ಶತ್ರುಗಳು ಕಾಡುತ್ತಾರೆ ಕೆಲಸದಲ್ಲಿ ವಿಘ್ನಗಳು ಆಗುತ್ತದೆ ಹಾಗೆಯೇ ಮೇ ಹದಿನಾಲ್ಕು ಎರಡು ಸಾವಿರದ ಇಪ್ಪತ್ನಾಲ್ಕ ರಿಂದ ಅಕ್ಟೋಬರ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತಾರು ಈ ಸಮಯದಲ್ಲಿ ಮೇಷ ರಾಶಿಯವರಿಗೆ ಅಶುಭ ಫಲಗಳು ಹೆಚ್ಚಾಗಿ ಕಂಡು ಬರುತ್ತದೆ.

ಕೆಲವರು ಮಿಶ್ರ ಫಲವನ್ನು ಅನುಭವಿಸುತ್ತಾರೆ ಗುರುವಿನ ಮಂತ್ರವನ್ನು ಪಠಿಸಬೇಕು ಮತ್ತೆ ಗುರು ಬಲ ಕಂಡು ಬರುವುದು ಅಕ್ಟೋಬರ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೈದಕ್ಕೇ ಗುರು ಸಿಂಹ ರಾಶಿಯಲ್ಲಿ ಪ್ರವೇಶ ಮಾಡಿದಾಗ ಮೇಷ ರಾಶಿಯವರಿಗೆ ಶುಭ ಫಲ ಕಂಡುಬರುತ್ತದೆ ಎರಡು ಸಾವಿರದ ಇಪ್ಪತ್ತೇಳು ನವೆಂಬರ್ ಇಪ್ಪತ್ತಾರ ರವರೆಗೆ ಶುಭ ದಾಯಕವಾಗಿ ಇರುತ್ತದೆ ನಿಂತು ಹೋದ ಕೆಲಸಗಳು ಪ್ರಾರಂಭ ಆಗುತ್ತದೆ ಆಸ್ತಿಯ ವಿವಾದಗಳು ಮಾತುಕತೆಗೆ ಬರುತ್ತದೆ ಹಣಕಾಸಿನ ಲಾಭ ಕಂಡು ಬರುತ್ತದೆ ಒಳ್ಳೆಯ ಕೆಲಸಗಳು ನಡೆಯುತ್ತದೆ ಮಕ್ಕಳು ಕಲಿಕೆಯಲ್ಲಿ ಮುಂದೆ ಇರುತ್ತಾರೆ

ಒಳ್ಳೆಯ ಮಾರ್ಗದಲ್ಲಿ ಹೋಗುತ್ತಾರೆ ಮಕ್ಕಳು ಒಳ್ಳೆಯ ಮಾತುಗಾರರು ಭಾಷಣಕಾರರು ಆಗುತ್ತಾರೆ ಅಂದುಕೊಂಡ ಕೆಲಸಗಳು ನೆರವೇರುತ್ತದೆ ಯಾರೇ ಸಹಾಯ ಕೇಳಿದರು ಸಹಾಯ ಮಾಡುವ ಉದಾರ ಗುಣ ಕಂಡು ಬರುತ್ತದೆ ಹೀಗೆ ಗುರು ಬಲ ಇದ್ದಾಗ ಜೀವನದಲ್ಲಿ ಯಶಸ್ಸು ಕಂಡುಬರುತ್ತದೆ ಸಾಕಷ್ಟು ಧನ ಲಾಭ ಕಂಡು ಬರುತ್ತದೆ ಸುಖ ಶಾಂತಿ ನೆಮ್ಮದಿ ಮನೆಯಲ್ಲಿ ನೆಲೆಸುತ್ತದೆ.

Leave A Reply

Your email address will not be published.

error: Content is protected !!
Footer code: