ಕ್ಯಾನ್ಸರ್ ಖಾಯಿಲೆ ಹೋಗಲಾಡಿಸುವ ವೈದ್ಯನಾಥೇಶ್ವರಸ್ವಾಮಿ ನೋಡಿ..

ಜ್ಯೋತಿಷ್ಯ

ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ. ಇದೊಂದು ಪ್ರಾಚೀನ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಆಶ್ಚರ್ಯವೆನಿಸಿದರೂ ಅಗೋಚರ ಶಕ್ತಿ ಇಲ್ಲಿದೆ. ಇಲ್ಲಿನ ಜ್ಯೋತಿರ್ಲಿಂಗದ ದರ್ಶನದಿಂದ ಏಳೇಳು ಜನ್ಮಗಳ ಪಾಪಗಳೂ ನಿವಾರಣೆಯಾಗುವುದಲ್ಲದೆ ಕ್ಯಾನ್ಸರ್ನಂತ ಮಾರಕ ರೋಗಗಳೂ ಕೂಡ ವಾಸಿಯಾಗಿರುವವು. ಈ ಕಲಿಗಾಲದಲ್ಲೂ ಪವಾಡ ಸೃಷ್ಟಿಮಾಡುತ್ತಿರುವ ಹಿಂದೂ ಧಾರ್ಮಿಕ ಕ್ಷೇತ್ರ ತುಮಕೂರು ನಗರಕ್ಕೆ 16 ಕಿ.ಮೀ. ದೂರದಲ್ಲಿರುವ ಅರೆಯೂರು ಗ್ರಾಮದಲ್ಲಿದೆ. ಶ್ರೀ ವೈದ್ಯನಾಥೇಶ್ವರ ಸಕಲ ರೋಗ ರುಜಿನಗಳಿಗೆ ವೈದ್ಯನೆಂಬುದು ಇಲ್ಲಿನ ಪ್ರತೀತಿ.

ಅರೆಯೂರು ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದೊಮ್ಮೆ ಎಡೆಯೂರು ಶ್ರೀ ಸಿದ್ದಲಿಂಗೇಶ್ವರರಿಗೆ ಬಿನ್ನಿನಲ್ಲಿ ಹುಣ್ಣಾಗಿತ್ತಂತೆ. ರಾಜ ವೈದ್ಯರಿಂದಲೂ ವಾಸಿಯಾಗದೆ ಸಿದ್ದಲಿಂಗೇಶ್ವರರು ಹಾಸಿಗೆ ಹಿಡಿದಾಗ ವೈದ್ಯನಾಥೇಶ್ವರ ಸ್ವಾಮಿ ಭಿಕ್ಷುಕನ ವೇಷದಲ್ಲಿ ಹೋಗಿ ಸಿದ್ದಲಿಂಗೇಶ್ವರರ ಹುಣ್ಣನ್ನು ತಮ್ಮ ಹಸ್ತ ಸ್ಪರ್ಶದಿಂದ ವಾಸಿಮಾಡಿದರಂತೆ. ಆಗ ಗುಣಮುಖರಾದ ಸಿದ್ದಲಿಂಗೇಶ್ವರರು ತಮ್ಮ ಭಕ್ತರು ನೀಡುವ ಮುಡಿಯ ಅರ್ಧ ಮುಡಿಯನ್ನು ವೈದ್ಯನಾಥೇಶ್ವರ ಸ್ವಾಮಿಗೆ ಅರ್ಪಿಸಿದರಂತೆ.

ಜ್ಯೋತಿರ್ಲಿಂಗದ ದರ್ಶನ ಮಾತ್ರದಿಂದ ಸಕಲ ಪಾಪ: ದುರಿತಗಳು ದೂರವಾಗಿ ಸಕಲಾಭಿಷ್ಠ ನೆರವೇರಿ ಸಾಕ್ಷಾತ್ ಶಿವನ ದರ್ಶನ ಮಾಡಿದ ಪುಣ್ಯ: ಶ್ರೇಯಸ್ಸು ಪ್ರಾಪ್ತಿ ಆಗುವುದೆಂದು ಶಿವಪುರಾಣಗಳಲ್ಲಿ ಮತ್ತು ವೇದಗಳಲ್ಲಿ ಹೇಳಲಾಗಿದೆ. ಈ ಕ್ಷೇತ್ರಕ್ಕೆ ಹಲವು ಹೈಟೆಕ್ ಆಸ್ಪತ್ರೆಗಳಲ್ಲಿ ಹೋದರೂ ಕಾಯಿಲೆ ವಾಸಿಯಾಗದ ರೋಗಿಗಳು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಕ್ಯಾನ್ಸರ್ನಂತ ಮಾರಕ ರೋಗಗಳು ವೈದ್ಯನಾಥೇಶ್ವರ ಸ್ವಾಮಿಯ ಪ್ರಸಾದ ಮಾತ್ರದಿಂದ ವಾಸಿಯಾಗಿರುವ ಐತಿಹ್ಯವಿದೆ. ಹೀಗೆ ಅನೇಕ ಅರೋಗ್ಯ ಸಮಸ್ಯೆಗಳಿಂದ ಬಳಲುವವರು ವೈದ್ಯನಾಥೇಶ್ವರ ಸ್ವಾಮಿಗೆ ಮೊರೆ ಇಟ್ಟು ಶ್ರೀ ಕ್ಷೇತ್ರಕ್ಕೆ ಬಂದು ಸ್ವಾಮಿ ದರ್ಶನ ಮಾಡಿದ ಮಾತ್ರಕ್ಕೆ ಹುಷಾರಾಗಿರುವ ಉದಾಹರಣೆಗಳು ಸಿಗುತ್ತವೆ.

ಶ್ರೀ ಕ್ಷೇತ್ರ ಹಿಂದೊಮ್ಮೆ ಋಷಿಮುನಿಗಳ, ಸಾಧಕರ ಕರ್ಮಭೂಮಿಯಾಗಿತ್ತು ಎಂದು ಹೇಳಲಾಗುತ್ತದೆ. ದೇವಸ್ಥಾನದ ಕೆರೆಯಂಗಳದಲ್ಲಿ ಪ್ರಶಾಂತ ಸ್ಥಳದಲ್ಲಿ ಶಾಂತಿ-ನೆಮ್ಮದಿ ಸದಾ ನೆಲೆಸಿರುವಂತೆ ಭಾವವಾಗುತ್ತದೆ. ಸಾಮಾನ್ಯವಾಗಿ ಇಂಥ ಪ್ರಶಾಂತ ಪರಿಸರ ಸಾಕಷ್ಟು ರೋಗಗಳನ್ನು ವಾಸಿಮಾಡುವಂತದ್ದಾಗಿದೆ ಎಂದು ವೈದ್ಯರೊಬ್ಬರು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆ. ಇದರ ಜೊತೆಗೆ ಇಲ್ಲಿ ಇನ್ನೊಂದು ವಿಶೇಷವಿದೆ. ಮಕ್ಕಳಿಲ್ಲದವರು ದೇವಸ್ಥಾನದಲ್ಲಿ ತಲೆಮೇಲೆ ನೀರನ್ನು ಹಾಕಿಸಿಕೊಂಡು ಒದ್ದೆ ಬಟ್ಟೆಯಲ್ಲಿ ಸ್ವಾಮಿಯ ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ 9 ದಿನಗಳ ಕಾಲ ಸ್ವಾಮಿಯ ಸೇವೆ ಮಾಡಿದರೆ ಸುಸಂಸ್ಕೃತ ಮಕ್ಕಳಾಗುತ್ತವೆ ಎಂದು ಹೇಳಲಾಗುತ್ತದೆ.

ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಕೆರೆಯ ಏರಿಯ ಆಳದಲ್ಲಿ ಶ್ರೀ ಹಾಲು ಮಲ್ಲೇಶ್ವರಸ್ವಾಮಿಯ ಒಂದು ಚಿಕ್ಕದಾದ ದೇವಸ್ಥಾನವಿದೆ. ಇಲ್ಲಿರುವುದು ಮನುಷ್ಯರು ಪ್ರತಿಷ್ಟಾಪಿಸಿದ ಲಿಂಗವಲ್ಲ. ಭೂಮಿಯಲ್ಲೇ ಹುಟ್ಟಿದ ಲಿಂಗು. ಈ ದೇವಸ್ಥಾನದ ಮಹಿಮೆ ಏನೆಂದರೆ ಈ ದೇವಸ್ಥಾನದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಸರ್ಪವು ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾತ್ರಿ ವೇಳೆಯಲ್ಲಿ ಕೆರೆಯ ನೀರಿನ ಮೇಲೆ ಈಜಾಡಿಕೊಂಡು ಬಂದು ಸ್ವಲ್ಪ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದ್ದು ಹೋಗುತ್ತದೆ.

ಹೀಗೆ ಅನೇಕ ಮಹಿಮೆ ಇಂದ ಕೂಡಿದ ಕ್ಷೇತ್ರ ಇದಾಗಿದೆ. ಮಕ್ಕಳ ಭಾಗ್ಯ ಇಲ್ಲದವರು ಮಕ್ಕಳ ಭಾಗ್ಯ ಮತ್ತು ಸರ್ವ ರೋಗಗಳನ್ನೂ ನಿವಾರಿಸುವಂಥಹ ಶಕ್ತಿ ಈ ಸ್ವಾಮಿಯ ಸನ್ನಿಧಿಯಲ್ಲಿ ಇಂದಿಗೂ ಜೀವಂತ ಸಾಕ್ಷಿಗಳು ದೊರಕುತ್ತವೆ. ನೀವು ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ತಪ್ಪದೇ ಭೇಟಿ ನೀಡಿ.  ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *