WhatsApp Group Join Now
Telegram Group Join Now

ನಮ್ಮಲ್ಲಿ ಒಂದು ಮಾತಿದೆ. ಸಾಲವೆಂಬುದು ಶೂಲದಂತೆ ಎಂದು. ಯಾಕೆಂದರೆ ಸಾಲದಲ್ಲಿ ಬಿದ್ದ ಮನುಷ್ಯನಿಗೆ ಎಂದಿಗೂ ಉದ್ಧಾರವಾಗಲು ಸಾಧ್ಯವೇ ಆಗದು. ತನ್ನ ಶೋಕಿಗಾಗಿಯೋ ಅಥವಾ ಅವಶ್ಯಕತೆಗಾಗಿಯೋ ಸಾಲ ಮಾಡುವಂತಹ ಮನುಷ್ಯ, ಅದನ್ನು ತೀರಿಸುವುದಕ್ಕಾಗಿ ಜೀವನವನ್ನೇ ಮುಡಿಪಾಗಿ ಇಡಬೇಕಾಗುತ್ತದೆ. ಹಾಗಿದ್ದಾಗ್ಯೂ ಅವನ ಸಾಲ ತೀರಲಾರದು. ದುಡಿದ ಹಣವೆಲ್ಲ ಸಾಲಕ್ಕಾಗಿಯೆ ವಿನಿಯೋಗ ಮಾಡಿದರು ಸಹ ಅದರ ಸುಳಿಯಿಂದ ಹೊರ ಬರುವುದು ಆತನಿಗೆ ಸಾಧ್ಯವಾಗದೆ ಹೋಗಬಹುದು.

ಯಾಕೆ ಈ ಸಾಲವೆಂಬುದು ಸುಳಿಯಾಗಿ ಕಾಡುತ್ತದೆ ಎಂದು ಯಾವತ್ತಾದರೂ ಯೋಚಿಸಿದ್ದಿರಾ? ಕೆಲವರ ಸಾಲ ಕಡಿಮೆಯಿದ್ದರು ಸಹ ಅವರಿಗೆ ತೀರಿಸಲು ಸಾಧ್ಯವಾಗದೆ ಪ್ರಾಣ ಬಿಟ್ಟಂತಹ ಘಟನೆಯು ನಮ್ಮ ಸುತ್ತಲೂ ಆಗಾಗ ನಡೆಯುತ್ತಲೆ ಇರುತ್ತವೆ. ಅಷ್ಟೆ ಅಲ್ಲ ಸಾಲವೆಂಬುದು ಬಡ್ಡಿಯಾಗಿ ಹನುಮನಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಯಾಕೆ ಹೀಗೆ ಎಂದು ಯೋಚನೆ ನಿಮಗೆ ಎಂದಾದರೂ ಬಂದಿದಿಯೆ? ನೀವು ಸಹ ಸಾಲದಿಂದ ಹೊರ ಬರುವ ದಾರಿ ಹುಡುಕುತ್ತಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಕೆಲವರಿಗೆ ಎಷ್ಟು ಪ್ರಯತ್ನ ಮಾಡಿದರು ಸಾಲದಿಂದ ಮುಕ್ತಿ ಹೊಂದಲು ಸಾಧ್ಯವಾಗಿರುವುದಿಲ್ಲ. ಯಾವ ವ್ಯಕ್ತಿಯ ಜೀವನದಲ್ಲಿ ಸಾಲವಿರುತ್ತದೆಯೋ ಅವನು ನೆಮ್ಮದಿಯಾಗಿ ಇರಲು ಸಾಧ್ಯವಾಗುವುದಿಲ್ಲ. ಇದು ಅವರ ಜೀವನದ ದೌರ್ಭಾಗ್ಯಕ್ಕೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಸುಲಭ ಪರಿಹಾರವೆಂದರೆ ಆಂಜನೇಯ ಸ್ವಾಮಿಯ ಮೊರೆ ಹೋಗುವುದು. ಹೌದು ಕಲಿಯುಗದ ನಿಜ ದೈವವಾದ ಮುಖ್ಯ ಪ್ರಾಣ ದೇವರೆಂದೆ ಖ್ಯಾತಿಯಾದಂತಹ ಆಂಜನೇಯ ಮಂತ್ರದ ಪ್ರಯೋಗದಿಂದ ನೀವು ಸಾಲದ ಸುಳಿಯಿಂದ ಹೊರ ಬರಬಹುದು.

ಸೀತಾಮಾತೆಯು ಲಂಕೆಯಲ್ಲಿ ಸೆರೆಯಲ್ಲಿರುವಾಗ ಅವರನ್ನು ಹುಡುಕಿ ತಂದವನು ಆಂಜನೇಯ. ಅಂತೆಯೇ ಎಲ್ಲರನ್ನು ಎಲ್ಲ ಕಾಲದಲ್ಲಿಯೂ ಸಲಹುವ ಸ್ವಾಮಿಯೆಂದರೆ ಅದು ಆಂಜನೇಯ ಸ್ವಾಮಿ ಮಾತ್ರ. ಆಂಜನೇಯನ ಕೃಪೆಯಿಂದಾಗಿ ಎಂತಹ ಕಷ್ಟಗಳನ್ನು ಸಹ ಪರಿಹರಿಸಿಕೊಳ್ಳಬಹುದು. ಭಗವಂತ ಭಕ್ತರ ಭಕ್ತಿಗೆ ಖಂಡಿತ ಒಲಿಯಲೇ ಬೇಕು. ಹಾಗೆ ಭಕ್ತಿಯಿಂದ ಬೇಡಿದ್ದಾದಲ್ಲಿ ಹನುಮಂತನು ಸಹ ನಿಮ್ಮನ್ನು ಸಾಲದ ಸಮಸ್ಯೆಯಿಂದ ಪಾರುಗೊಳಿಸುತ್ತಾನೆ. ಕೇವಲ ಚಿಂತೆ ಮಾತ್ರದಿಂದ ಯಾವುದು ಸಹ ಸಾಧ್ಯವಿಲ್ಲ. ಈಗ ಹೇಳುವ ಪ್ರಯೋಗವನ್ನು ಮಾಡಿ ನೋಡಿ.

ಈ ಪ್ರಯೋಗವನ್ನು ಮಂಗಳವಾರ ಅಥವಾ ಶನಿವಾರ ಪ್ರಾರಂಭ ಮಾಡಬಹುದು. ಯಾಕೆಂದರೆ ಶನಿವಾರ ಹಾಗೂ ಮಂಗಳವಾರ ಆಂಜನೇಯ ಸ್ವಾಮಿಯ ದಿನವಾಗಿದೆ. ಈ ಪ್ರಯೋಗಗಳನ್ನು ಮಾಡಲು ಹನ್ನೊಂದು ವೀಳ್ಯದೆಲೆ ಹಾಗೂ ಹನ್ನೊಂದು ಪೂಜಾ ಅಡಿಕೆಯನ್ನು ತೆಗೆದುಕೊಳ್ಳ ಬೇಕು. ಇದರ ಜೊತೆಯಲ್ಲಿ ಆಂಜನೇಯಸ್ವಾಮಿಯ ಸಿಂಧೂರವನ್ನು ಸಹ ತೆಗೆದು ಕೊಳ್ಳಬೇಕು. ಈ ಸಿಂಧೂರವು ಕೇಸರಿಯ ಬಣ್ಣದ್ದಾಗಿರುತ್ತದೆ. ಕೆಂಬಣ್ಣದ ಸಿಂಧೂರವನ್ನು ಮರೆತು ಸಹ ತೆಗೆದುಕೊಳ್ಳಬೇಡಿ. ಯಾಕೆಂದರೆ ಕೆಂಬಣ್ಣದ ಸಿಂಧೂರವು ದೇವಿಯ ಸಿಂಧೂರವಾಗಿದೆ.

ಪ್ರತಿಯೊಂದು ವೀಳ್ಯದೆಲೆಯ ಮೇಲೆ ರಾಮ ಎಂದು ಬರೆದಿಟ್ಟುಕೊಳ್ಳಿ. ಅಡಿಕೆಗೆ ಪೂರ್ತಿಯಾಗಿ ಸಿಂಧೂರವನ್ನು ಹಚ್ಚಿ ಅದನ್ನು ವೀಳ್ಯದೆಲೆಯ ಮೇಲೆ ಇಟ್ಟು ಎಲೆಯನ್ನು ಮಡಚಿಕೊಳ್ಳಿ. ತದನಂತರ ಕೆಂಪುದಾರವನ್ನು ತೆಗೆದುಕೊಂಡು ಮಡಚಿಟ್ಟ ಎಲೆಯನ್ನು ದಾರದಿಂದ ಕಟ್ಟಿ. ಇದಾದನಂತರ ನಿಮ್ಮ ಮನೆಯಲ್ಲಿರುವ ಆಂಜನೇಯ ಸ್ವಾಮಿ ಪೋಟೊ ಅಥವಾ ವಿಗ್ರಹದ ಮುಂದೆ ಕುಳಿತುಕೊಂಡು ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ ಹನ್ನೊಂದು ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಬೇಕು.

ಒಂದೊಂದು ಬಾರಿ ಹನುಮಾನ್ ಚಾಲೀಸಾ ಪಠಿಸಿದ ನಂತರ ಮಡಿಸಿಟ್ಟುಕೊಂಡಂತಹ ವೀಳ್ಯದೆಲೆ ಕಟ್ಟನ್ನು ದೇವರಿಗೆ ನೈವೇದ್ಯ ಅರ್ಪಿಸಬೇಕು. ಅದಕ್ಕಾಗಿ ನೀವು ಪಠಣಕ್ಕೆ ಕೂರುವ ಮೊದಲೆ ವೀಳ್ಯದೆಲೆಯನ್ನು ಸಿದ್ಧಗೊಳಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಈ ರೀತಿಯಾಗಿ ವಾರದಲ್ಲಿ ಒಂದು ದಿನ ಅಥವಾ ಸಮಯದ ಅಭಾವ ಇದ್ದರೆ ತಿಂಗಳಿಗೆ ಒಂದು ಬಾರಿಯಂತೆ ಮಾಡಬೇಕು. ಹೀಗೆ ಮಾಡಿ ಮರುದಿನ ಆ ವೀಳ್ಯದೆಲೆಗಳನ್ನು ತೆಗೆದುಕೊಂಡು ಆಲದ‌ಮರದ ಹತ್ತಿರ ಇಟ್ಟು ಆಂಜನೇಯಸ್ವಾಮಿಯನ್ನು ಸಂಕಟದಿಂದ ಪಾರು ಮಾಡುವಂತೆ ಬೇಡಿಕೊಂಡು ಬರಬೇಕು. ಇದರಿಂದ ನಿಮ್ಮ ಸಾಲದ ಸಮಸ್ಯೆಗಳು ದೂರವಾಗುತ್ತವೆ. ಶುಭವಾಗಲಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: