WhatsApp Group Join Now
Telegram Group Join Now

ಕೆಲವೊಮ್ಮೆ ಅಚಾನಕವಾಗಿ ಕೆಮ್ಮು ಶೀತ ಕಫ ಉಂಟಾಗುತ್ತದೆ ಆ ಸಮಯದಲ್ಲಿ ಎಲ್ಲರೂ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ ಹಾಗೆಯೇ ಮನೆಯಲ್ಲಿ ಇರುವ ಪದಾರ್ಥಗಳಿಂದ ನಿವಾರಣೆ ಮಾಡಿಕೊಳ್ಳಬಹುದು ನಮ್ಮ ಮನೆಯಲ್ಲಿ ಇರುವ ಪದಾರ್ಥಗಳು ಔಷಧಿಯ ಅಂಶವನ್ನು ಒಳಗೊಂಡಿದೆ ಹಾಗಾಗಿ ನಮ್ಮ ಮನೆಯಲ್ಲಿ ಇರುವ ಪದಾರ್ಥ ಗಳಿಂದ ನೆಗಡಿ ಶೀತ ಕಫ ವನ್ನು ಕಡಿಮೆ ಮಾಡಿಕೊಳ್ಳಬಹುದು

ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಕೆಮ್ಮು ಹಾಗೂ ಕಫದ ಸಮಸ್ಯೆಗಳು ಕೂಡ ಒಂದು ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು ನೈಸರ್ಗಿಕವಾಗಿ ನಮ್ಮ ಅಡುಗೆ ಮನೆಯಲ್ಲಿ ಸಿಗುವಂತಹ ಕೆಲವೊಂದು ಆಹಾರ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ಮನೆಮದ್ದುಗಳು ರೂಪದಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬಹುದು ನಾವು ಈ ಲೇಖನದ ಮೂಲಕ ಮನೆಯಲ್ಲಿ ಕೆಮ್ಮು ಶೀತ ಕಫಗಳಿಗೆ ಮಾಡುವ ಮನೆ ಮದ್ದನ್ನು ತಿಳಿದುಕೊಳ್ಳೋಣ.

ಕೆಲವೊಮ್ಮೆ ರಾತ್ರಿ ಮಲಗಿದಾಗ ಕೆಮ್ಮು ಎಷ್ಟು ಮಾಡಿದರೂ ಕಡಿಮೆ ಆಗುವುದು ಇಲ್ಲ ಅಂತಹ ಸಂದರ್ಭದಲ್ಲಿ ಒಂದು ಚಿಟಿಕೆಗಿಂತ ಕಡಿಮೆ ಉಪ್ಪನ್ನು ತೆಗೆದುಕೊಳ್ಳಬೇಕು ಅದನ್ನು ಬಾಯಲ್ಲಿ ಹಾಕಿ ನಿಧಾನವಾಗಿ ನುಂಗಬೇಕೂ ಹಾಗೆಯೇ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಕಾಲು ಇಂಚು ಶುಂಠಿ ಹಾಗೆಯೇ ಸಣ್ಣ ಅರಿಶಿಣ ಕೊಂಬು ಎರಡನ್ನೂ ಜಜ್ಜಿ ಕೊಳ್ಳಬೇಕು ಹಾಗೆಯೇ ಒಂದು ಕಾಳು ಮೆಣಸನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು

ಎಲ್ಲವನ್ನೂ ಕುಡಿಯುವ ನೀರಿಗೆ ಹಾಕಬೇಕು ನಂತರ ಮಿಕ್ಸ್ ಮಾಡಬೇಕು ಸರಿಯಾಗಿ ಕುದಿಸಬೇಕು ನಂತರ ಅದನ್ನು ಸೋಸಿಕೊಳ್ಳಬೇಕು ನಂತರ ಬಿಸಿ ಬಿಸಿ ಇರುವಾಗಲೇ ಕುಡಿಯಬೇಕು ಗಂಟಲಿಗೆ ಆರಾಮ ಅನಿಸುತ್ತದೆ ಹಾಗೂ ಕೆಮ್ಮು ಸಹ ನಿವಾರಣೆ ಆಗುತ್ತದೆ ನೆಗಡಿ ಅಲರ್ಜಿ ಶೀತ ಆಗಿದ್ದರು ಸಹ ನಿವಾರಣೆ ಆಗುತ್ತದೆ ಬೆಳಿಗ್ಗೆ ಹಾಗೂ ರಾತ್ರಿ ಕುಡಿಯದರಿಂದ ಕೆಮ್ಮು ಶೀತ ನೆಗಡಿ ನಿವಾರಣೆ ಆಗುತ್ತದೆ.

ಮಕ್ಕಳಿಗೆ ಶೀತ ಕೆಮ್ಮು ಕಂಡು ಬರುತ್ತದೆ ಇವು ಮಕ್ಕಳಲ್ಲಿ ಹತ್ತು ವರ್ಷದ ತನಕ ಸಾಮಾನ್ಯವಾಗಿ ಕಾಣುವ ಸಮಸ್ಯೆ ಇದಾಗಿದೆ ಮನೆಯಲ್ಲಿಯೇ ನಾವು ಔಷಧವನ್ನು ಸಿದ್ದ ಮಾಡಿಕೊಳ್ಳಬಹುದು ಅದರಲ್ಲಿ ಶುಂಠಿ ಹಿಪ್ಪಲಿ ಮೆಣಸಿನ ಕಾಳು ಅರಿಶಿಣ ಜೀರಿಗೆ ವೀಳ್ಯದೆಲೆ ಬಜೆ ಬೇರು ಜೇನುತುಪ್ಪವನ್ನು ಬಳಸಬೇಕು ಇವೆಲ್ಲವೂ ಔಷಧಿಯ ಗುಣವನ್ನು ಹೊಂದಿದೆ ಹಾಗೆಯೇ ಶುಂಠಿ ಹಿಪ್ಪಲಿ ಮೆಣಸಿನ ಕಾಳು ಅರಿಶಿಣ ಜೀರಿಗೆ ವೀಳ್ಯದೆಲೆ ಎಲ್ಲವನ್ನೂ ಸರಿಯಾಗಿ ಜಜ್ಜಿ ಕೊಂಡು ರಸ ತೆಗೆದು ಜೇನುತುಪ್ಪವನ್ನು ಸೇರಿಸಿ ಮಕ್ಕಳಿಗೆ ತಿನ್ನುವುದರಿಂದ ಕೆಮ್ಮು ಕಫ ನೆಗಡಿ ಶೀತ ನಿವಾರಣೆ ಆಗುತ್ತದೆ ನಾಲ್ಕರಿಂದ ಆರು ಬಾರಿ ತಿನ್ನಿಸಬೇಕು ಎರಡು ಅಥವಾ ಮೂರು ದಿನದಲ್ಲಿ ನಿವಾರಣೆ ಆಗುತ್ತದೆ ಹೀಗೆ ಮನೆಯಲ್ಲಿ ಇರುವ ಪದಾರ್ಥಗಳನ್ನೂ ಬಳಸಿ ರೋಗ ನಿವಾರಣೆ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: