ಕುಬೇರರಾಗಲು ಮನೆಯ ವಾಸ್ತು ಹೀಗಿರಲಿ ಅಂತಾರೆ ವಾಸ್ತು ತಜ್ಞರು

0

ಮನೆ ಎನ್ನುವುದು ಮಂತ್ರಾಲಯ ಇದ್ದಹಾಗೆ ನಮ್ಮ ಜೀವನದ ಎಲ್ಲಾ ಆಗು-ಹೋಗುಗಳನ್ನು ನಿಯಂತ್ರಿಸುವಂತಹ ಶಕ್ತಿ ನಮ್ಮ ಮನೆಗೆ ಇರುತ್ತದೆ. ಹಾಗೂ ಮನೆ ಎಂದ ಮೇಲೆ ಅದು ಕೂಡ ದಿಕ್ಕುದೆಸೆ ಗಳಿಂದ ಕೂಡಿರಬೇಕು ಪೂರ್ವ-ಪಶ್ಚಿಮ ಉತ್ತರ-ದಕ್ಷಿಣ ಆಗ್ನೇಯ ಈಶಾನ್ಯ ನೈಋತ್ಯ ವಾಯುವ್ಯ ಇವೆಲ್ಲವೂ ಚೆನ್ನಾಗಿದ್ದರೆ ನಮ್ಮ ಜೀವನ ಕೂಡ ಸಮತೋಲನವಾಗಿರುತ್ತದೆ. ಅದೇ ರೀತಿ ಬದುಕು ಕೂಡ ಅಂದವಾಗಿ ಚಂದವಾಗಿ ಇರುತ್ತದೆ ನಿಮ್ಮ ಸಂಸಾರ ಕೂಡ ಚೆನ್ನಾಗಿರುತ್ತದೆ ನಿಮ್ಮ ಮಡದಿ ಮಕ್ಕಳು ಆರೋಗ್ಯದಿಂದ ಇರುವುದಕ್ಕೆ ಸಹಾಯವಾಗುತ್ತದೆ ಮಕ್ಕಳು ಕೂಡ ವಿದ್ಯಾವಂತರಾಗಿರುತ್ತಾರೆ.

ಹಾಗೆ ಸುಂದರವಾದಂತಹ ಬದುಕು ನಿಮ್ಮದಾಗಿರುತ್ತದೆ ಅದಕ್ಕೆ ವಾಸ್ತುವಿನ ಸಂಕಲ್ಪವು ಬೇಕು ಮತ್ತು ನಾವು ವಾಸಿಸುವ ಮನೆಯು ವಾಸ್ತುಪ್ರಕಾರವಾಗಿರಬೇಕು. ನಮ್ಮ ದೇಹದ ಯಾವುದೋ ಒಂದು ಭಾಗದಲ್ಲಿ ಸಮಸ್ಯೆ ಉಂಟಾದರೆ ನಮಗೆ ಅದು ಕೊರಗನ್ನು ನೀಡುತ್ತದೆ ಆರ್ಥಿಕವಾಗಿ ಇರಬಹುದು ಆರೋಗ್ಯದ ದೃಷ್ಟಿಯಿಂದ ಇರಬಹುದು ಅಥವಾ ಮಾನಸಿಕವಾದಂತಹ ಒತ್ತಡ ಇರಬಹುದು ಅಥವಾ ಮಕ್ಕಳ ವಿದ್ಯಾಭ್ಯಾಸ ಇರಬಹುದು ಅಥವಾ ವಿವಾಹ ಇರಬಹುದು.

ಹೀಗೆ ನಾನಾ ತರಹದ ಸಮಸ್ಯೆಗಳಿಂದ ಗ್ರಹಗತಿಗಳು ಚೆನ್ನಾಗಿದ್ದರೂ ವಾಸ್ತುವಿನಿಂದ ನಮ್ಮ ನಿವೇಶನ ಇರಬಹುದು ಅಥವಾ ಭೂಮಿ ಇರಬಹುದು ಅಥವಾ ನಮ್ಮ ತೋಟ ಗದ್ದೆಗಳು ಇರಬಹುದು ಕೃಷಿಭೂಮಿ ಇರಬಹುದು ಇವೆಲ್ಲವೂ ಕೂಡ ಕೆಲವೊಂದು ಸಂದರ್ಭದಲ್ಲಿ ಸಮಸ್ಯೆಯಲ್ಲಿ ಕೂಡಿರುತ್ತವೆ. ವಾಸ್ತು ಭೂಮಿಯಲ್ಲಿ ಎರಡು ವಿಧ ಇರುತ್ತದೆ ಒಂದು ದೈವ ಭೂಮಿ ಇನ್ನೊಂದು ಭೂತ ಭೂಮಿ.

ದೈವ ಭೂಮಿ ಅತ್ಯಂತ ಶ್ರೇಷ್ಠ ದಾಯಕವಾಗಿರುವಂತದ್ದು ಮತ್ತು ಭೂತ ಭೂಮಿಯು ಅತ್ಯಂತ ಅಶುಭದಾಯಕವಾಗಿರುತ್ತದೆ. ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಾ ಇದ್ದರೆ ಅದು ಕೆಲವೊಂದು ಸಂದರ್ಭದಲ್ಲಿ ವಾಸ್ತುವಿನಿಂದಲೂ ಇರಬಹುದು. ನಿಮ್ಮ ಮನೆಗಳನ್ನು ನಿವೇಶನಗಳನ್ನು ಸ್ಥಳಗಳನ್ನು ಅಥವಾ ಅಂಗಡಿಗಳಿರಬಹುದು ಕಚೇರಿ ಗಳಿರಬಹುದು ಅಥವಾ ಮನೆಯ ದಿಕ್ಕು ದೆಸೆಗಳಿರಬಹುದು ಇವುಗಳು ವಾಸ್ತು ಪ್ರಕಾರವಾಗಿ ಇರಬೇಕು ಆಗ ಅದು ಫಲಪ್ರದವಾಗಿರುತ್ತದೆ.

ಕುಬೇರ ಮೂಲೆ ಎನ್ನುವಂತದ್ದು ನಮ್ಮ ಧನ ಧಾನ್ಯಗಳನ್ನು ಸಂಗ್ರಹ ಮಾಡುವಂತಹ ಒಂದು ಮೂಲೆ. ಹಾಗಾದರೆ ಕುಬೇರ ಮೂಲೆ ಯಾವುದು ಎಂದರೆ ದಕ್ಷಿಣ ಮತ್ತು ಪಶ್ಚಿಮದ ಮಧ್ಯಭಾಗದಲ್ಲಿ ಕುಬೇರ ಮೂಲೆ ಇರುತ್ತದೆ. ಇಲ್ಲಿ ಧನಸಂಗ್ರಹ ಮಾಡುವುದಕ್ಕೆ ನಾವು ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಹಣವನ್ನು ತಂದು ಕಪಾಟಿನಲ್ಲಿ ಇಡುವಂತಹ ಮೂಲೆ ಇದಾಗಿದೆ. ಇಂತಹ ಕುಬೇರ ಮೂಲೆಯಲ್ಲಿ ಅಡುಗೆ ಮನೆ ಇದ್ದರೆ ನೀವು ದುಡಿಯುತ್ತಿರುವ ಅಂತಹ ಹಣ ನಷ್ಟವಾಗುತ್ತದೆ.

ಹಾಗೆಯೇ ನೀವು ಸಾಲಗಾರರಾಗುತ್ತೀರಿ. ಅದೇ ರೀತಿ ನಿಮಗೆ ಅನೇಕ ಜನರು ಮೋಸ ಮಾಡುತ್ತಿರುತ್ತಾರೆ ಸುಳ್ಳು ಹೇಳಿ ನಿಮ್ಮ ಹಣವನ್ನು ಲಪಟಾಯಿಸುತ್ತಿರುತ್ತಾರೆ. ಅದೇ ರೀತಿ ನೀವು ಕೆಲಸ ಮಾಡುವಂತಹ ಹಣ ನಿಮ್ಮ ಮನೆಗೆ ಬಂದು ಸೇರುವುದೇ ಇಲ್ಲ ಅದು ನೀರಿನ ಹಾಗೆ ಖರ್ಚಾಗುತ್ತಾ ಇರುತ್ತದೆ. ನಿಮ್ಮ ಕೈಯಲ್ಲಿ ಹಣ ಯಾಕೆ ನೀಲ್ಲುತ್ತಿಲ್ಲ ಎನ್ನುವುದಕ್ಕೆ ಕಾರಣ ನಿಮ್ಮ ಕುಬೇರ ಮೂಲೆ ಚೆನ್ನಾಗಿ ಇಲ್ಲದಿರುವುದೇ ಕಾರಣ.

ಕುಬೇರ ಮೂಲೆ ಚೆನ್ನಾಗಿದ್ದರೆ ಅದು ಸರಿಯಾಗಿ ಇದ್ದರೆ ನಿಮಗೆ ಯಾವುದೇ ರೀತಿಯ ಹಣದ ಬಾದೆ ಹಣದ ಸಮಸ್ಯೆ ಉಂಟಾಗುವುದಿಲ್ಲ. ನೀವು ನಿಮ್ಮ ಮನೆಯಲ್ಲಿ ಅಂಗಡಿಗಳಲ್ಲಿ ಕಚೇರಿಗಳಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಒಂದು ಸಾರಿ ನೀವು ಕುಬೇರ ಮೊಲೆಯನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಅದು ಸರಿಯಾಗಿದ್ದರೆ ನೀವು ಕೂಡ ಮುಂದೊಂದು ದಿನ ಕುಬೇರರಾಗುತ್ತೀರಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.

error: Content is protected !!