ಕಾಂಗ್ರೆಸ್ ಗಿಡಕ್ಕೆ ಕಾಂಗ್ರೆಸ್ ಅಂತ ಹೆಸರು ಬಂದ್ದಿದ್ದು ಯಾಕೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ

0

ನಾವಿಂದು ನಿಮಗೆ ತಿಳಿದಿರದ ಕೆಲವೊಂದು ಸ್ವಾರಸ್ಯಕರ ಘಟನೆಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲನೆಯದು ಚೇಳು ಯಾವಾಗಲೂ ತನ್ನ ಮರಿಗಳನ್ನು ತನ್ನ ಮೇಲೆ ಹೊತ್ತುಕೊಂಡು ಓಡಾಡುತ್ತದೆ ಯಾಕೆಂದರೆ ಆಗಲೇ ಹುಟ್ಟಿದಂತಹ ಮರಿಗಳು ತುಂಬಾ ಸೂಕ್ಷ್ಮವಾಗಿರುತ್ತವೆ ತಮಗೆ ಬೇಕಾದ ಭೇಟಿಯನ್ನು ತಾವು ಮಾಡಿಕೊಳ್ಳುವವರೆಗೂ ತಾಯಿಯ ಮೇಲೆ ಇರುತ್ತವೆ. ತಾಯಿ ಚೇಳು ಯಾವಾಗಲೂ ತನ್ನ ಮರಿಗಳನ್ನು ಬೆನ್ನಮೇಲೆ ಹೊತ್ತು ಕೊಂಡಿರುತ್ತದೆ ಆದ್ದರಿಂದ ತನ್ನ ಮರಿಗಳ ಮೇಲೆ ಅದಕ್ಕೆ ತುಂಬಾ ಪ್ರೀತಿ ಎಂದು ತಿಳಿದುಕೊಳ್ಳಬೇಡಿ ಅದಕ್ಕೆ ಬೇಟೆಯಾಗಿ ಏನೂ ಸಿಗದಿದ್ದಾಗ ಅದರ ಮರಿಗಳನ್ನು ತಾನೇ ತಿಂದುಬಿಡುತ್ತದೆ.

ಎರಡನೆಯ ವಿಷಯ ವಿಜ್ಞಾನಿಗಳು ನಮ್ಮ ಭೂಮಿಯ ಮೇಲೆ ಮೂವತ್ತು ಮಿಲಿಯನ್ ಅಂದರೆ ಮೂರು ಕೋಟಿ ಹುಳುಗಳ ಜಾತಿ ಇರುವುದು ಎಂದು ಅಂದಾಜಿಸಿದ್ದಾರೆ ಆದರೆ ಇದುವರೆಗೂ ನಾವು ಗುರುತಿಸಿದ್ದು ಕೇವಲ ಒಂಬತ್ತು ಲಕ್ಷಕ್ಕಿಂತ ಕಡಿಮೆ ಹುಳುಗಳ ಜಾತಿಯನ್ನು. ಮೂರನೇ ವಿಷಯ ನಾಯಿಗಳ ಬುದ್ಧಿವಂತಿಕೆಯನ್ನು ಮನುಷ್ಯನಿಗೆ ಹೋಲಿಸಿದರೆ ಎರಡೂವರೆ ವರ್ಷದ ಮಗುವಿಗೆ ಎಷ್ಟು ಬುದ್ಧಿ ಇರುತ್ತದೆ ಅಷ್ಟು ಬುದ್ಧಿ ನಾಯಿಗಳಿಗೆ ಇರುತ್ತದೆಯಂತೆ.

ನಾಲ್ಕನೇದಾಗಿ ಇತ್ತೀಚಿಗೆ ಹಣ್ಣುಗಳನ್ನು ಹಣ್ಣು ಆಗುವುದಕ್ಕಿಂತ ಮೊದಲೇ ಕಿತ್ತು ಅವುಗಳನ್ನು ಕೆಮಿಕಲ್ಸ್ ಬಳಸಿ ಹಣ್ಣನ್ನಾಗಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಹಣ್ಣುಗಳು ಅವುಗಳ ಮರದಲ್ಲಿಯೇ ಹಣ್ಣಾಗುತ್ತವೆ ಆಗಲೇ ತಿನ್ನುವುದಕ್ಕೆ ರುಚಿಯಾಗಿರುತ್ತವೆ ಆದರೆ ಒಂದು ಹಣ್ಣು ಮಾತ್ರ ಮರದಲ್ಲಿ ಹಣ್ಣಾಗುವುದಿಲ್ಲ ಅದನ್ನ ಮರದಿಂದ ಕಿತ್ತರೆ ಮಾತ್ರ ಅದು ಹಣ್ಣಾಗುತ್ತದೆ ಅದೇ ಆವಕ್ಯಾಡೋ ಇದನ್ನು ಹಾಗೆ ಬಿಟ್ಟರೆ ಕಾಯಾಗಿಯೆ ಮರದಲ್ಲಿಯೇ ಕೊಳೆತುಹೋಗುತ್ತದೆ ಹೊರತು ಹಣ್ಣಾಗುವುದಿಲ್ಲ

ಆರನೆಯದಾಗಿ ಹೆಚ್ಚು ಆನ್ಲೈನ್ ಗೇಮ್ ಗಳನ್ನು ಆಡುವವರಿಗೆ ಭಾರತದ ಅತಿದೊಡ್ಡ ಗೇಮಿಂಗ್ ಪ್ಲಾಟ್ಫಾರ್ಮ್ ಆಗಿರುವ ವಿಂಜೋ ಬಗ್ಗೆ ತಿಳಿಸುತ್ತೇವೆ. ಇದರಲ್ಲಿ ನೀವು ಲೂಡೋ ಕ್ರಿಕೆಟ್ ಗಳಂತಹ ಇಪ್ಪತ್ತಕ್ಕೂ ಹೆಚ್ಚಿನ ಗೇಮ್ ಗಳನ್ನು ಆಡಬಹುದು ಮತ್ತು ಒಂದು ಲಕ್ಷದವರೆಗೂ ಗೆಲ್ಲಬಹುದು ಇದರಲ್ಲಿ ನೀವು ಫ್ರೀ ಮತ್ತು ಪೇಡ್ ಗೇಮ್ ಗಳನ್ನು ಆಡಬಹುದು. ಕ್ರಿಕೆಟ್ ಮತ್ತು ಪುಟ್ಬಾಲ್ ಆಡುವವರು ತಮ್ಮದೇ ಆದ ತಂಡಗಳನ್ನು ಮಾಡಿಕೊಂಡು ಗೆಲ್ಲಬಹುದು ಮತ್ತು ಪ್ರತಿಯೊಂದು ಆಟದಲ್ಲಿಯೂ ನಿಜವಾದ ಆಟಗಾರರೆ ಇರುತ್ತಾರೆ ಹಾಗಾಗಿ ಗೆಲ್ಲುವುದು ಬಹಳ ಸುಲಭವಾಗುತ್ತದೆ. ಮತ್ತು ಗೆದ್ದ ಹಣವನ್ನು ಪೇಟಿಎಂ ಯುಪಿಐ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಹಣವನ್ನು ಪಡೆದುಕೊಳ್ಳಬಹುದು. ಏಳನೆಯದಾಗಿ ಎಲ್ಲಾ ಕಡೆ ಕಾಣಸಿಗುವಂತಹ ಕಾಂಗ್ರೆಸ್ ಗಿಡ ಇದು ಭಾರತದಾದ್ಯಂತ ಎಲ್ಲಿ ಬೇಕಾದರೂ ಕಾಣಸಿಗುತ್ತದೆ.

ಇದು ಭಾರತ ತನ್ನ ಸ್ವಂತ ಮನೆ ಎನ್ನುವಂತೆ ಎಲ್ಲಾ ಕಡೆಗಳಲ್ಲಿಯೂ ಬೆಳೆದುಕೊಂಡಿದೆ. ಆದರೆ ಈ ಗಿಡ ಭಾರತಕ್ಕೆ ಸೇರಿದ್ದಲ್ಲ ಸಾವಿರದ ಒಂಬೈನೂರ ಐವತ್ತಕ್ಕಿಂತ ಮೊದಲು ಈ ಗಿಡ ಭಾರತದಲ್ಲಿ ಇರಲಿಲ್ಲ ಕೆಲವರು ಇದನ್ನು ಕಾಂಗ್ರೆಸ್ ಗಿಡ ಎನ್ನುತ್ತಾರೆ ಕೆಲವರು ಕ್ಯಾರೆಟ್ ಬಿಡ್ ಎನ್ನುತ್ತಾರೆ ಇದರ ವೈಜ್ಞಾನಿಕ ಹೆಸರು ಪಾರ್ಥೇನಿಯಂ ಹಿಸ್ಟರೋ ಪೋರಸ್. ಇದು ನಮ್ಮ ದೇಶದಲ್ಲಿ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ ತೋಟದಲ್ಲಿ ಒಂದು ಗಿಡ ಹುಟ್ಟಿಕೊಂಡರೆ ಅದರ ಜೊತೆ ನೂರಾರು ಗಿಡಗಳು ಕೊಳ್ಳುತ್ತವೆ. ಈ ಸಸ್ಯ ರೈತರಿಗೆ ಸುಮಾರು ನಲವತ್ತು ಶೇಕಡ ಇಳುವರಿಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆರೋಗ್ಯಕ್ಕೂ ಕೂಡ ಇದು ಅಷ್ಟು ಒಳ್ಳೆಯದಲ್ಲ ಇದು ಚರ್ಮಕ್ಕೆ ತಗುಲಿದ ಕಡೆ ಅಲರ್ಜಿ ಕೂಡ ಬರುತ್ತದೆ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿ ಡಿಪ್ರೆಶನ್ ಕೂಡ ಬರುತ್ತದೆ.

ಇದು ಮನುಷ್ಯನಿಗೆ ಎಷ್ಟು ಬೇಡವಾಗಿಯೋ ಪ್ರಾಣಿ ಪಕ್ಷಿಗಳಿಗೂ ಕೂಡ ಅಷ್ಟೇ ಬೇಡವಾದ ಸಸ್ಯವಾಗಿದೆ ಇದರ ಬೀಜಗಳು ನೆಲದಲ್ಲಿ ಎರಡು ವರ್ಷದವರೆಗೆ ಹಾಗೆ ಇರುತ್ತವೆ ಅನುಕೂಲ ನೋಡಿಕೊಂಡು ಮತ್ತೆ ಹುಟ್ಟುತ್ತವೆ. ಕೇವಲ ಒಂದು ಸಸ್ಯ ಹತ್ತರಿಂದ ಹದಿನೈದು ಸಾವಿರ ಬೀಜಗಳನ್ನು ಉತ್ಪತ್ತಿ ಮಾಡುತ್ತದೆ. ಈ ಗಿಡದ ಬೀಜಗಳು ಗಾಳಿಯಲ್ಲಿ ಮೂರು ಕಿಲೋಮೀಟರ್ ಗಳವರೆಗೆ ವಿಸ್ತರಿಸುತ್ತವೆ. ಈ ಗಿಡದ ಸಂತತಿಯನ್ನು ನಾಶಪಡಿಸುವುದು ಅಷ್ಟು ಸುಲಭವಲ್ಲ ಆದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ರೀತಿಯಲ್ಲಿ ಪ್ರಕೃತಿಯ ಈ ಶತ್ರುವಿಗೆ ಶತ್ರುವನ್ನು ಪ್ರಕೃತಿಯಲ್ಲಿಯೇ ಹುಡುಕಲಾಗಿದೆ.

ಅದೇ ಜೈಗೊಗ್ರಾಮ್ ಬೈಗೊಲೆರೆಟಾ ಜೀರುಂಡೆ. ಇದು ಮೆಕ್ಸಿಕೋ ದೇಶದಲ್ಲಿ ಕಂಡುಬರುವಂತಹ ಜೀವಿ ಈ ಜೀವಿಗೆ ಕಾಂಗ್ರೆಸ್ ಗಿಡಗಳೆಂದರೆ ತುಂಬಾ ಇಷ್ಟ ಹಾಗಾಗಿ ಮೆಕ್ಸಿಕೋದಿಂದ ತುಂಬಾ ದೇಶಗಳು ಇದನ್ನು ಆಮದು ಮಾಡಿಕೊಳ್ಳುತ್ತಿವೆ. ನಮ್ಮ ದೇಶದಲ್ಲಿಯೂ ಸಾವಿರದ ಒಂಬೈನೂರಾ ಎಂಬತ್ನಾಲ್ಕರಲ್ಲಿ ಈ ಜೀವಿಯನ್ನು ಆಮದು ಮಾಡಿಕೊಳ್ಳಲಾಗಿದೆ.

ಈಗ ಈ ಜೀವಿ ನಮ್ಮ ದೇಶದಲ್ಲಿ ಎಲ್ಲಾ ಕಡೆಗಳಲ್ಲಿ ವಿಸ್ತರಿಸಿದೆ. ರೈತರು ಈ ಜೀವಿಗಳನ್ನು ಖರೀದಿಸಿ ಈ ಗಿಡವನ್ನು ಸಾಯಿಸುವುದಕ್ಕೆ ಬಿಡುತ್ತಾರೆ. ಈ ಸಸ್ಯ ಅಮೆರಿಕ ಖಂಡಗಳಿಂದ ನಮ್ಮ ದೇಶಕ್ಕೆ ಬಂದಿದೆ. ಸಾವಿರದ ಒಂಬೈನೂರ ಐವತ್ತರ ದಶಕದಲ್ಲಿ ಆಗತಾನೆ ಸ್ವಾತಂತ್ರ್ಯ ಬಂದಿದ್ದ ನಮ್ಮ ದೇಶದಲ್ಲಿ ಕೆಲವು ಧಾನ್ಯಗಳ ಕೊರತೆ ಇತ್ತು ಅಮೇರಿಕಾ ಆ ಸಮಯದಲ್ಲಿ ಅತಿಯಾಗಿ ಬೆಳೆದ ಗೋಧಿಯನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿತ್ತು ಆಗ ಭಾರತದ ಕಾಂಗ್ರೆಸ್ ಸರ್ಕಾರ ಪಿಎಲ್ 480 ಎನ್ನುವ ಯೋಜನೆಯಡಿ ಯುಎಸ್ ನಿಂದ ಧಾನ್ಯಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿಯೇ ಗೋಧಿಗಳಲ್ಲಿ ಕಸವಾಗಿ ಈ ಗಿಡದ ಬೀಜಗಳು ಭಾರತಕ್ಕೆ ಬಂದವು.

ಸಾವಿರದ ಒಂಬೈನೂರಾ ಐವತ್ತಾರರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಇವು ಬೆಳೆದದ್ದು ಕಂಡುಬಂದಿದೆ. ಅನಂತರ ಕೇವಲ ಹತ್ತು ವರ್ಷಗಳಲ್ಲಿ ಇದು ಭಾರತವನ್ನು ಇದು ಪೂರ್ತಿಯಾಗಿ ಆಕ್ರಮಿಸಿತು. ಇದಕ್ಕೆ ಕಾಂಗ್ರೆಸ್ ಗಿಡ ಎಂದು ಹೆಸರು ಬರುವುದಕ್ಕೆ ಕಾರಣ ಇದು ಭಾರತಕ್ಕೆ ಬಂದದ್ದು ಕಾಂಗ್ರೆಸ್ ಪ್ರಭುತ್ವ ಮಾಡಿದ ಪಿಎಲ್ 480 ಯೋಜನೆಯಲ್ಲಿ ಮತ್ತು ಅದೇ ಸರ್ಕಾರ ಇದ್ದಾಗ ಹತ್ತೊಂಬತ್ನೂರ ಅರವತ್ತೆಂಟರಲ್ಲಿ ಈ ಗಿಡವನ್ನು ರಾಷ್ಟ್ರೀಯ ಕಳೆ ಎಂದು ಘೋಷಣೆ ಮಾಡಲಾಯಿತು ಆದ್ದರಿಂದ ಇದನ್ನು ಕಾಂಗ್ರೆಸ್ ಗಿಡ ಎಂದು ಕರೆಯಲಾಗುತ್ತದೆ.

ಮುಂದಿನದಾಗಿ ಸಾಮಾನ್ಯವಾಗಿ ನಕ್ಷೆಯಲ್ಲಿ ಗ್ರೀನ್ಲ್ಯಾಂಡ್ ಮತ್ತು ಆಫ್ರಿಕಾ ಖಂಡ ಒಂದೇ ಅಳತೆಯಲ್ಲಿ ಕಾಣಿಸುತ್ತವೆ ಆದರೆ ಗ್ರೀನ್ಲ್ಯಾಂಡ್ ಆಫ್ರಿಕಾ ಖಂಡದಷ್ಟು ದೊಡ್ಡದಾಗಿರುವುದಿಲ್ಲ. ಆಫ್ರಿಕಾ ಖಂಡ ಗ್ರೀನ್ಲ್ಯಾಂಡ್ ಗಿಂತ ಹದಿನಾಲ್ಕು ಪಟ್ಟು ದೊಡ್ಡದು. ಗ್ರೀನ್ಲ್ಯಾಂಡ್ ಅನ್ನು ಆಫ್ರಿಕಾಕ್ಕೆ ಹೋಲಿಸಿದರೆ ಅದು ತುಂಬಾ ಚಿಕ್ಕದು. ಅದೇ ರೀತಿ ನಕ್ಷೆಯಲ್ಲಿ ಬ್ರೆಜಿಲ್ ಮತ್ತು ಅಲಸ್ಕಾ ಗಳು ಕೂಡ ಒಂದೇ ಅಳತೆಯಲ್ಲಿ ಕಾಣುತ್ತವೆ ಆದರೆ ಅಲಾಸ್ಕ ಗಿಂತ ಬ್ರೆಜಿಲ್ ಐದು ಪಟ್ಟು ದೊಡ್ಡದು.

ಈ ಮ್ಯಾಪಿನಲ್ಲಿ ತಪ್ಪಾಗಿದ್ದರೂ ಇದನ್ನು ಪುಸ್ತಕಗಳಲ್ಲಿ ಗೂಗಲ್ ಮ್ಯಾಪ್ ನಲ್ಲಿ ಬಳಸುತ್ತಾರೆ ಏಕೆಂದರೆ ಈ ನಕ್ಷೆಯ ಹೆಸರು ಮರ್ಕೇಟರ್ ಪ್ರೋಜಕ್ಷನ್ ಈ ನಕ್ಷೆಯಲ್ಲಿ ಸಮಸ್ಯೆ ಬಂದಿರುವುದು ನಮ್ಮ ಭೂಮಿ ಗೋಳಾಕಾರದಲ್ಲಿ ಇರುವುದರಿಂದ. ಈ ಲಕ್ಷ್ಮಿ ಮಾತ್ರವಲ್ಲ ನಮ್ಮ ಭೂಮಿಯನ್ನು ಸರಿಯಾಗಿ ತಿಳಿಸುವಂತಹ ಯಾವುದೇ ನಕ್ಷೆ ಕೂಡ ಇಲ್ಲ. ಭೂಮಿಯಲ್ಲಿ ಇರುವಂತಹ ಎಲ್ಲಾ ಪ್ರದೇಶಗಳನ್ನು ಸರಿಯಾದ ಅಳತೆಯಲ್ಲಿ ನಕ್ಷೆಯಲ್ಲಿ ತೋರಿಸುವುದು ತುಂಬಾ ಕಷ್ಟ.

Leave A Reply

Your email address will not be published.

error: Content is protected !!