ಕವಿತಾ ಗೌಡ ಹಾಗೂ ಚಂದನ್ ಫುಲ್ ಎಂಜಾಯ್ ಮಾಡ್ತಿರೊ ಕ್ಯೂಟ್ ವಿಡಿಯೋ

0

ಈಗ ಸ್ವಲ್ಪ ತಿಂಗಳುಗಳ ಹಿಂದೆ ಕಲರ್ಸ್ ಕನ್ನಡ ಎಂಬ ಚಾನಲ್ ನಲ್ಲಿ ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದನ್ನು ಸೋಮವಾದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಮಾಡಲಾಗುತ್ತಿತ್ತು. ಇದರ ಮೊದಲ ಹೀರೊ ಚಂದನ್ ಅವರು ಆಗಿದ್ದರು. ಆಗ ಪ್ರತಿಯೊಂದು ಹುಡುಗಿಯರ ನೆಚ್ಚಿನ ನಟ ಇವರು ಆಗಿದ್ದರು. ಆದರೆ ನಂತರದಲ್ಲಿ ಇವರು ಇದನ್ನು ಬಿಟ್ಟು ಹೋದರು. ಹಾಗೆಯೇ ಅದರಲ್ಲಿ ನಾಯಕಿಯಾಗಿ ಕವಿತಾ ಅವರು ಲಕ್ಷ್ಮೀ ಪಾತ್ರವನ್ನು ವಹಿಸಿದ್ದರು. ಆದ್ದರಿಂದ ನಾವು ಇಲ್ಲಿ ಅವರಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಂದನ್ ಆರಂಭದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರದಲ್ಲಿ ಪ್ರೇಮ ಬರಹ ಎಂಬ ಸಿನೆಮಾದಲ್ಲಿ ನಟನೆ ಮಾಡಿದರು. ಇದರಲ್ಲಿ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅವರ ಜೊತೆ ನಟಿಸಿದ್ದಾರೆ. ಆಮೇಲೆ ಈ ಸೀರಿಯಲ್‌ನಿಂದ ಅವರು ಹೊರಬಂದರು. ನಟಿ ಕವಿತಾ ಗೌಡ ಇದರಲ್ಲಿ ಲಕ್ಷ್ಮೀ ಪಾತ್ರದಲ್ಲಿ ಕೆಲ ವರ್ಷಗಳ ಕಾಲ ಕಾಣಿಸಿಕೊಂಡು ಆಮೇಲೆ ಅವರು ಕೂಡ ಈ ಧಾರಾವಾಹಿಯನ್ನು ತ್ಯಜಿಸಿದರು. ಹೀಗಾಗಿ ಇವರಿಬ್ಬರು ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು. ಕವಿತಾ ಗೌಡಗೆ ನಟ ದಿಲೀಪ್ ಶೆಟ್ಟಿ ಕೂಡ ಆತ್ಮೀಯರು.

ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ಕವಿತಾ ಮತ್ತು ದಿಲೀಪ್ ಒಟ್ಟಾಗಿ ನಟಿಸಿದ್ದರು. ಈ ಧಾರಾವಾಹಿ ಜೀ ಕನ್ನಡದಲ್ಲಿ ಬರುತ್ತಿತ್ತು. ಹಾಗೆಯೇ ಎಷ್ಟೋ ಜನ ಧಾರಾವಾಹಿ ಮತ್ತು ಸಿನೆಮಾಗಳಲ್ಲಿ ನಟನೆ ಮಾಡಿದವರ ಜೊತೆಯೇ ಮದುವೆಯಾಗಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಉದಾಹರಣೆಗೆ ವಿಷ್ಣುವರ್ಧನ್ ಮತ್ತು ಭಾರತೀ ವಿಷ್ಣುವರ್ಧನ್, ಯಶ್ ಮತ್ತು ರಾಧಿಕಾ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ, ದಿಗಂತ್ ಮತ್ತು ಐಂದ್ರಿತಾ ರೈ ಹೀಗೆ ಹಲವಾರು ಮಂದಿ ಇದ್ದಾರೆ.

ಅವರಲ್ಲಿ ಇವರೂ ಕೂಡ ಸ್ನೇಹಿತರಾಗಿ ತಮ್ಮ ಆತ್ಮೀಯತೆಯನ್ನು ಉಳಿಸಿಕೊಂಡಿದ್ದಾರೆ. ತಿಂಗಳಿನಲ್ಲಿ ಎರಡು ಬಾರಿ ಈ ಸೀರಿಯಲ್ ಕಲಾವಿದರು ಟ್ರಿಪ್ ಹೋಗಿ ಬಂದಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಬಹಳ ಇಷ್ಟಪಟ್ಟಿದ್ದಾರೆ. ಈಗ ನಟ ಚಂದನ್ ಕುಮಾರ್ ಅವರಿಗೆ ನಟಿ ಕವಿತಾ ಗೌಡ ಅವರ ಜೊತೆ ಮದುವೆ ದಿನಾಂಕ ಫಿಕ್ಸ್ ಆಗಿ ಈಗ ಮದುವೆ ಆಗಿದೆ. ಏಪ್ರಿಲ್ ಒಂದನೇ ತಾರೀಖಿನಂದು ಇವರ ಮದುವೆ ಬಹಳ ವಿಜೃಂಭಣೆಯಿಂದ ನಡೆಯಿತು. ಯಾವುದೇ ರೀತಿಯ ವಿಘ್ನಗಳು ಉಂಟಾಗಲಿಲ್ಲ. ಎಷ್ಟೋ ವರ್ಷದ ಗೆಳೆತನ ಈಗ ಪ್ರೀತಿಯಾಗಿ ಮದುವೆ ಆಗಿದೆ. ಈಗ ಮದುವೆ ಮುಗಿದ ನಂತರ ಬಹಳ ಎಂಜಾಯ್ ಮಾಡುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: