ಕಳೆದು ಹೋದ ರಿಂಗ್ ಬಿಗ್ ಬಾಸ್ ಮನೇಲಿ ಹೇಗೆ ಸಿಕ್ತು?

0

ಬಹಳ ಕುತೂಹಲಕಾರಿ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇದೀಗ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಿ ಹಲವು ವಾರಗಳಾಗಿವೆ. ವಾರದಿಂದ ವಾರಕ್ಕೆ ಇಂಟ್ರೆಸ್ಟಿಂಗ್ ಆಗಿರುವ ಈ ರಿಯಾಲಿಟಿ ಶೋನಲ್ಲಿ ಹಲವು ವಿಭಿನ್ನ ಸ್ಪರ್ಧಿಗಳನ್ನು ನೋಡಬಹುದು. ಬಿಗ್ ಬಾಸ್ ಸೀಸನ್ 8 ರ ಅಚ್ಚು ಮೆಚ್ಚಿನ ಸ್ಪರ್ಧಿಗಳಲ್ಲಿ ದಿವ್ಯ ಉರುಡುಗ ಹಾಗೂ ಅರವಿಂದ್ ಅವರು ಪ್ರಮುಖರಾಗಿದ್ದಾರೆ. ದಿವ್ಯ ಅವರು ಅರವಿಂದ್ ಅವರಿಗೆ ಕೊಟ್ಟ ರಿಂಗ್ ಕಾಣೆಯಾಗಿದ್ದು ಅದೀಗ ಸಿಕ್ಕಿದೆ, ಹೇಗೆ ಸಿಕ್ಕಿತು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳಾದ ಅರವಿಂದ್ ಹಾಗೂ ದಿವ್ಯ ಉರುಡುಗ ಅವರು ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಎಂದರೆ ಕಷ್ಟಗಳು, ಟಾಸ್ಕ್, ಫೀಲಿಂಗ್ಸ್ ಇದ್ದೆ ಇರುತ್ತದೆ. ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಕೊಡುವ ಟಾಸ್ಕ್ ಇಟ್ಟಿದ್ದರು. ಆಗ ಅರವಿಂದ್ ಅವರು ನಾನು ಹೆಚ್ಚು ಮಾತನಾಡುವುದಿಲ್ಲ, ಮಾತನಾಡದೆ ಅವಳು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾಳೆ ಎಂದು ಹೇಳಿ ದಿವ್ಯ ಅವರಿಗೆ ಬಲೂನನ್ನು ಕೊಟ್ಟಿದ್ದಾರೆ. ಆಗ ದಿವ್ಯ ಅವರು ತನ್ನ ಜೀವನ ಪರ್ಯಂತ ಅರವಿಂದ್ ಅವರು ನನ್ನ ಜೊತೆ ಇರಬೇಕು, ನನ್ನ ತಂದೆ ಪ್ರೀತಿಯಿಂದ ಕೊಟ್ಟಿರುವ ರಿಂಗ್ ಅನ್ನು ಅವರಿಗೆ ಕೊಡುತ್ತೇನೆ ಎಂದು ಹೇಳುತ್ತಿರುವಾಗ ಅರವಿಂದ್ ಅವರು ಕಣ್ಣೀರು ಹಾಕಿದರು. ನಂತರ ದಿವ್ಯ ಅವರು ರಿಂಗ್ ಅನ್ನು ಅರವಿಂದ್ ಅವರ ಕೈಗೆ ತೊಡಿಸಿ ಪ್ರೀತಿಯಿಂದ ಇಬ್ಬರು ತಬ್ಬಿಕೊಂಡರು ಆಗ ಅರವಿಂದ್ ಅವರು ಖುಷಿಯಿಂದ ರಿಂಗ್ ಅನ್ನು ಹಾಕಿಕೊಳ್ಳುತ್ತಾರೆ.

ಸ್ವಲ್ಪ ಹೊತ್ತಿನ ನಂತರ ಅರವಿಂದ್ ಕೈಯಲ್ಲಿರುವ ಉಂಗುರ ಕಾಣಿಸದೆ ಇಡಿ ಮನೆಯನ್ನು ಹುಡುಕಿದ್ದಾರೆ, ಸಿಕ್ಕಿದ್ದನ್ನೆಲ್ಲ ಜಾಲಾಡಿಸಿದ್ದಾರೆ. ಇದನ್ನು ತಿಳಿದ ಮನೆಯವರೆಲ್ಲರೂ ಅರವಿಂದ್ ಅವರಿಗೆ ರಿಂಗ್ ಹುಡುಕಲು ಸಹಾಯ ಮಾಡುತ್ತಾರೆ. ಅಲ್ಲಿರುವ ದಿವ್ಯ ಅವರಿಗೆ ಯಾರು ಏನನ್ನು ಹೇಳುವುದಿಲ್ಲ. ಎಷ್ಟೆ ಹುಡುಕಿದರೂ ಯಾರಿಗೂ ರಿಂಗ್ ಸಿಗಲಿಲ್ಲ ನಂತರ ಅರವಿಂದ್ ಅವರು ದಿವ್ಯ ಅವರಿಗೆ ನೀನು ಕೊಟ್ಟಿರುವ ರಿಂಗ್ ಕಳೆದುಕೊಂಡಿದ್ದೇನೆ ಆದರೆ ನಾನು ಹುಡುಕುತ್ತೇನೆ ಎಂದು ಹೇಳಿದರು ಆಗ ದಿವ್ಯ ಅವರು ಏನು ಮಾತನಾಡದೆ ಸುಮ್ಮನೆ ಕುಳಿತುಕೊಂಡರು. ಹುಡುಕುವಾಗ ಅರವಿಂದ್ ಅವರು ಅಳುತ್ತಲೆ ಇದ್ದರು ಅದನ್ನು ನೋಡಿದ ದಿವ್ಯ ಅವರು ನೀವು ಅಳಬೇಡಿ ನನಗೆ ಬೇಜಾರಿಲ್ಲ ಎಂದು ಸಮಾಧಾನ ಮಾಡುತ್ತಾರೆ. ಯಾರಿಗೂ ಸಿಗದೆ ಇದ್ದಾಗ ಅರವಿಂದ್ ಅವರು ಕ್ಯಾಮೆರಾ ಮುಂದೆ ಬಂದು ಬಿಗ್ ಬಾಸ್ ನನ್ನ ಕೈಯಲ್ಲಿ ಇರುವ ರಿಂಗ್ ಕಾಣಿಸುತ್ತಿಲ್ಲ ಕ್ಯಾಮೆರಾ ಕಣ್ಣಿಗೆ ಬಿದ್ದರೆ ಹೇಳಿ ಎಂದು ಮನವಿ ಮಾಡಿಕೊಂಡರು. ಸ್ವಲ್ಪ ಸಮಯದ ನಂತರ ಅರವಿಂದ್ ಅವರು ರೂಮ್ ಗೆ ಓಡಿಹೋಗಿ ದಿವ್ಯ ಬಳಿ ಬಂದು ರಿಂಗ್ ಸಿಕ್ಕಿರುವ ವಿಚಾರವನ್ನು ಹೇಳುತ್ತಾರೆ. ನಾನು ಕ್ರೀಂ ಹಾಕಿಕೊಳ್ಳುತ್ತಿರುವಾಗ ನನ್ನ ಬಟ್ಟೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು ಎಂದು ಹೇಳಿ ಇಬ್ಬರು ತಬ್ಬಿಕೊಳ್ಳುತ್ತಾರೆ ಮತ್ತು ರಿಂಗ್ ಅನ್ನು ನಿನ್ನ ಬಳಿ ಇಟ್ಟುಕೊಂಡಿರು ನಾನು ಮತ್ತೆ ಇದನ್ನು ತೆಗೆದುಕೊಳ್ಳುತ್ತೇನೆ ಎಂದು ಅರವಿಂದ್ ಅವರು ದಿವ್ಯ ಅವರಿಗೆ ರಿಂಗ್ ಕೊಡುತ್ತಾರೆ. ಬಿಗ್ ಬಾಸ್ ಸ್ಪರ್ಧೆಯಲ್ಲಿ ಜೋಡಿ ಟಾಸ್ಕ್ ಮಾಡಿದಾಗಿನಿಂದ ಒಟ್ಟಾಗಿರುವ ದಿವ್ಯ ಮತ್ತು ಅರವಿಂದ್ ಅವರು ಪ್ರತಿದಿನ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ಇದೀಗ ಇಬ್ಬರು ಕಳೆದುಕೊಂಡ ರಿಂಗ್ ಸಿಕ್ಕಿರುವ ಖುಷಿಯಲ್ಲಿದ್ದಾರೆ. ಒಟ್ಟಿನಲ್ಲಿ ಎಲ್ಲ ಸ್ಪರ್ಧಿಗಳು ಅತ್ಯುತ್ತಮವಾಗಿ ಆಟವಾಡಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!
Footer code: