ಕನ್ಯಾ ರಾಶಿ ಡಿಸೆಂಬರ್ ಮಾಸ ಭವಿಷ್ಯ ನೋಡಿ

0

ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಫಲಗಳು ಹೇಗಿವೆ ಎಂದು ಈಗ ತಿಳಿಯೋಣ.

ಕನ್ಯಾರಾಶಿಯವರೇ ನಿಮಗೆ ಈಗ ಸಂಪೂರ್ಣ ಗುರುಬಲ. ಎಲ್ಲಾ ಗ್ರಹಗಳ ಬಲ ಅದ್ಭುತ ಫಲ ಇರಲಿದೆ ಈ ಬರುವ ಮಾಸದಲ್ಲಿ ಗುರು ನಿಮ್ಮ ರಾಶಿಯನ್ನು ನೇರವಾಗಿ ವೀಕ್ಷಿಸುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇದೆ. ಕೋರ್ಟು ಕೇಸುಗಳಿದ್ದರೆ ಜಯ ನಿಮ್ಮದು. ಯಾರಿಗೂ ನಿಮ್ಮನ್ನು ಮುಟ್ಟಲೂ ಧೈರ್ಯವಿಲ್ಲ. ನಿಮಗೆ ತೊಂದರೆ ಕೊಡುವ ಮಾತಂತೂ‌ ದೂರ ಉಳಿಯಿತು.

ನೀವು ಮಾತಿನ ನಡೆದುಕೊಳ್ಳುವುದಿಲ್ಲ. ಮಾತಾಡುತ್ತೀರಿ ಆಶ್ವಾಸನೆ ಕೊಡುತ್ತೀರಿ ಆದರೆ ಮರೆತುಬಿಡುತ್ತೀರಿ. ನಿಮಗೆ ಲಾಭವಿದ್ದರೆ ಮಾತ್ರ ನಿಮಗೆ ಬೇಕಾದವರ ಜೊತೆ ಸಂಪರ್ಕದಲ್ಲಿ ಇರುತ್ತೀರಿ. ಇದು ನಿಮ್ಮ ದೌರ್ಬಲ್ಯ. ನಿಮಗೆ ಅತಿಯಾದ ಹೊಗಳಿಕೆ ಬೇಕು. ಇದೆಲ್ಲದರಿಂದ ಹೊರಬನ್ನಿ. ಜೀವನವನ್ನು ನೇರ ದೃಷ್ಟಿಯಲ್ಲಿ ನೋಡಿ. ಸತ್ಯಾಸತ್ಯತೆಯ ಅರಿವು ಮಾಡಿಕೊಳ್ಳಿ. ಗುರುಬಲ‌ ಇರುವುದರಿಂದ ನಿಮಗೆ ಈಗ ಯಾವುದೇ ಕಾರ್ಯಕ್ಕೆ ಅಡೆತಡೆ ಇರುವುದಿಲ್ಲ.

ಇದನ್ನೇ ಗುಣಾತ್ಮಕವಾಗಿ ತೆಗೆದುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿ ನಿಮ್ಮ ಕೀರ್ತಿಯನ್ನು ಹೆಚ್ಚಿಸಿಕೊಳ್ಳಿ. ಮೂರನೇ ಮನೆಯ ಬುಧ ಶುಕ್ರರು ನಿಮಗೆ ಬೆಂಬಲ ನೀಡುತ್ತಾರೆ. ಸ್ತ್ರೀ ಯಿಂದ ಸಹಕಾರ ಕೊಡಿಸುತ್ತಾರೆ. ಸ್ತ್ರೀ ದೇವಿಮಾತೆಯೆಂದು ತಿಳಿಯಿರಿ. ಎರಡನೇ ಮನೆಯ ಸೂರ್ಯ ಹಾಗೂ ಕೇತು ನಿಮಗೆ ಹಣದ ಹರಿವು ಉತ್ತಮಪಡಿಸುತ್ತಾರೆ.

ಸರ್ಕಾರದಿಂದ ಹಣ ಬರುವ ಯೋಗ ಇದೆ. ಇನ್ನು ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಲಾಭ ಕೀರ್ತಿ ಪ್ರತಿಷ್ಠೆಗಳು ಸಿಗುತ್ತದೆ. ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತೀರಿ. ವೃತ್ತಿಯಲ್ಲಿ ಬಹುದೊಡ್ಡ ಸ್ಥಾನಮಾನ ಗಳಿಸುತ್ತೀರಿ. ದಾನ ಧರ್ಮ ಮಾಡಿ ಪುಣ್ಯ ಹೆಚ್ಚಿಸಿಕೊಳ್ಳಿ. ಒಂಬತ್ತನೇ ಮನೆಯ ಕುಜ ಭೂಮಿಯಿಂದ ಲಾಭಕೊಡಿಸುತ್ತಾನೆ. ಕಟ್ಟಡ ಮನೆ ಕಟ್ಟುವ ಕೆಲಸ ಮಾಡುತ್ತೀರಿ. ಎಂಟರ ರಾಹು ನಿಮಗೆ ಶುಭನಲ್ಲ. ಸುಬ್ರಹ್ಮಣ್ಯನ ಆರಾಧನೆ ಮಾಡಿ. ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಿಸಿ.

Leave A Reply

Your email address will not be published.

error: Content is protected !!