ಕನ್ಯಾ ರಾಶಿಯವರ ಅಕ್ಟೋಬರ್ ತಿಂಗಳ ಭವಿಷ್ಯ ಹೇಗಿರಲಿದೆ ನೋಡಿ

0

ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಆಯಾ ರಾಶಿಗೆ ಅನುಗುಣವಾಗಿ ತನ್ನದೆ ಆದ ಗುಣ ಸ್ವಭಾವ, ರಾಶಿ ಭವಿಷ್ಯವನ್ನು ಹೊಂದಿರುತ್ತಾರೆ. ಹನ್ನೆರಡು ರಾಶಿಗಳಲ್ಲಿ ಕನ್ಯಾ ರಾಶಿಯವರ ಅಕ್ಟೋಬರ್ ತಿಂಗಳ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ.

ಕನ್ಯಾ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಉತ್ತಮವಾಗಿದೆ, ಹಲವು ವಿಷಯಗಳಲ್ಲಿ ಒಳ್ಳೆಯದಾಗುತ್ತದೆ. ನಿಮ್ಮಿಂದ ನಿಮ್ಮ ಪಾರ್ಟ್ನರ್ ಗೆ ಲಾಭವಾಗುತ್ತದೆ ಲೈಫ್ ಪಾರ್ಟ್ನರ್ ಆಗಿರಬಹುದು ಅಥವಾ ಬಿಸಿನೆಸ್ ಪಾರ್ಟ್ನರ್ ಆಗಿರಬಹುದು. ಕನ್ಯಾ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಲಾಭ ಆಗುತ್ತದೆ. ಕನ್ಯಾ ರಾಶಿಯವರಿಗೆ ಈ ತಿಂಗಳಿನಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಚೆನ್ನಾಗಿರುವ ಉದ್ಯೋಗ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಕನ್ಯಾ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡುಬರುವ ಸಾಧ್ಯತೆಗಳಿವೆ, ಹಾಗೆಂದು ದೊಡ್ಡ ಮಟ್ಟದಲ್ಲಿ ಅನಾರೋಗ್ಯ ಕಂಡುಬರುವುದಿಲ್ಲ. ವಾಂತಿ, ತಲೆನೋವು, ಜ್ವರ ಬರುವ ಸಾಧ್ಯತೆಗಳಿವೆ. ಯಾವಾಗಲೂ ಪ್ರಯಾಣ ಮಾಡುತ್ತಿರುವವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕನ್ಯಾ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಸಂತೋಷದಿಂದ ಇರುತ್ತಾರೆ.

ವಾಹನಗಳಲ್ಲಿ ಸುಖ, ಕೃಷಿ ಮಾಡುತ್ತಿರುವವರಿಗೆ ಸುಖ ಸಿಗುತ್ತದೆ. ಕನ್ಯಾ ರಾಶಿಯವರಿಗೆ ತಮ್ಮ ತಾಯಿಯಿಂದ ತಮಗೆ ಹಾಗೂ, ತಾಯಿಯಿಂದ ತಮಗೆ ಲಾಭವಾಗುತ್ತದೆ. ಬಹಳ ದಿನಗಳಿಂದ ಸ್ವಂತ ಮನೆ ನಿರ್ಮಾಣ ಮಾಡಬೇಕು ಅಥವಾ ಮನೆ ಖರೀದಿ ಮಾಡಬೇಕು ಎಂದು ಅಂದುಕೊಳ್ಳುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ, ಈ ಸಮಯದಲ್ಲಿ ಗುರು ಬಲವಿದೆ ಹೀಗಾಗಿ ನಿಮ್ಮ ಆಸೆ ಈಡೇರುತ್ತದೆ. ಇಂತಹ ಉತ್ತಮ ಸಮಯದಲ್ಲಿ ಮನೆಯನ್ನು ಖರೀದಿ ಮಾಡುವುದು ಅಥವಾ ಮನೆಯನ್ನು ಕಟ್ಟುವ ಕೆಲಸವನ್ನು ಮಾಡಬಹುದು.

ಕನ್ಯಾ ರಾಶಿಯವರಿಗೆ ಒಂದೂವರೆ ತಿಂಗಳು ವಿವಾಹಕ್ಕೆ ಅಷ್ಟು ಸೂಕ್ತವಾಗಿಲ್ಲ. ಉತ್ತರಾ ನಕ್ಷತ್ರದವರಿಗೆ ಅಕ್ಟೋಬರ್ 5,14, ಹಸ್ತಾ ನಕ್ಷತ್ರದವರಿಗೆ ಅಕ್ಟೋಬರ್ 6,15, ಚಿತ್ರ ನಕ್ಷತ್ರದವರಿಗೆ ಅಕ್ಟೋಬರ್ 16, 26 ಒಳ್ಳೆಯ ದಿನಗಳಾಗಿವೆ. ಕನ್ಯಾ ರಾಶಿಯವರಿಗೆ ಅದೃಷ್ಟ ಕಡಿಮೆ ಇರುವುದರಿಂದ ಅಮ್ಮನವರ ಆರಾಧನೆ ಮಾಡಬೇಕು.

ಅಮ್ಮನವರ ದೇವಸ್ಥಾನಕ್ಕೆ ಹೋಗಿ ದರ್ಶನ, ಕುಕಂಕುಮಾರ್ಚನೆ ಮಾಡಿಸಬಹುದು, ಹೀಗೆ ಅಮ್ಮನವರ ಸೇವೆ ಮಾಡಿಸಬಹುದು. ಯಾ ದೇವಿ ಸರ್ಪಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ ಈ ಮಂತ್ರವನ್ನು ಪ್ರತಿದಿನ ಪಠಿಸಬೇಕು. ಶಕ್ತಿ ರುಪವಾಗಿರುವ ದೇವಿ ನಿನ್ನನ್ನು ನಾನು ಆರಾಧಿಸುತ್ತೇನೆ ಎಂಬುದು ಈ ಮಂತ್ರದ ಅರ್ಥ. ದೇವಿಗೆ ಹಲವು ರೂಪಗಳಿವೆ ಅದರಲ್ಲಿ ಶಕ್ತಿ ರೂಪವು ಒಂದು. ಶಕ್ತಿ ದೇವಿಯನ್ನು ಆರಾಧಿಸಿದರೆ ಕಷ್ಟವನ್ನು ಸಹಿಸುವ ಶಕ್ತಿಯನ್ನು ದೇವಿ ಕೊಡುತ್ತಾಳೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಕನ್ಯಾ ರಾಶಿಯವರಿಗೆ ತಿಳಿಸಿ.

Leave A Reply

Your email address will not be published.

error: Content is protected !!