ಕನಸಿನಲ್ಲಿ ಗಜರಾಜ ಕಾಣಿಸಿದ್ರೆ ಏನಾಗುತ್ತೆ ಗೊತ್ತೆ ಸ್ವಪ್ನ ಶಾಸ್ತ್ರ ಏನ್ ಹೇಳುತ್ತೆ ಇಲ್ಲಿದೆ ಮಾಹಿತಿ

0

ನಾವು ರಾತ್ರಿ ಮಲಗಿದಾಗ ನಮಗೆ ಕನಸುಗಳು ಬೀಳುತ್ತವೆ. ಚಿತ್ರವಿಚಿತ್ರವಾದ ಕನಸುಗಳು ಬೀಳುತ್ತವೆ, ಆ ಕನಸುಗಳು ನಮಗೆ ಅರ್ಥವಾಗುವುದಿಲ್ಲ, ಕೆಲವೊಮ್ಮೆ ಬೆಳಗ್ಗೆ ಅವು ನೆನಪಿರುವುದಿಲ್ಲ. ಸಾಮುದ್ರಿಕ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದಂತೆ ಸ್ವಪ್ನ ಶಾಸ್ತ್ರವೆಂಬ ಗ್ರಂಥವಿದೆ ಅದರ ಮೂಲಕ ಯಾವ ಕನಸು ಯಾವ ಅರ್ಥವನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಕೆಲವು ಬಾರಿ ಕನಸಿನಲ್ಲಿ ಆನೆಯು ಬರುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಆನೆ ಬಂದರೆ ಏನಾಗುತ್ತದೆ, ಶುಭ ಅಥವಾ ಅಶುಭ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ನಮಗೆ ರಾತ್ರಿ ನಾನಾರೀತಿಯ, ಆಶ್ಚರ್ಯಕರವಾದ ಸಂಗತಿಯನ್ನು ಒಳಗೊಂಡ ಕನಸುಗಳು ಬೀಳುತ್ತವೆ. ಕನಸಿನಲ್ಲಿ ಆನೆ ಬಂದರೆ ಶುಭವೋ, ಅಶುಭವೋ ಎಂಬ ಪ್ರಶ್ನೆ ಬಹಳ ಜನರಿಗೆ ಕಾಡುತ್ತದೆ. ಕನಸಿನಲ್ಲಿ ಆನೆ ಬಂದರೆ ಶುಭ, ಅಶುಭ ಎಂಬ ವಿಷಯವು ಕನಸಿನಲ್ಲಿ ಯಾವ ರೀತಿ ಆನೆ ಕಂಡಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸ್ವಪ್ನ ಶಾಸ್ತ್ರವು ಕೂಡ ಪ್ರಮುಖವಾದ ಒಂದು ಗ್ರಂಥವಾಗಿದೆ. ಈ ಗ್ರಂಥದ ಮೂಲಕ ನಮಗೆ ಬೀಳುವ ಕನಸಿನ ನಿಜವಾದ ಅರ್ಥಗಳನ್ನು ತಿಳಿದುಕೊಳ್ಳಬಹುದು. ಇದರ ಮೂಲಕ ಜೀವನದ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ಕನಸಿನಲ್ಲಿ ಆನೆ ನೋಡುವುದು ಕನಸಿನ ವಿಜ್ಞಾನದ ಪ್ರಕಾರ ಶುಭ ಸಮಾಚಾರವಾಗಿದೆ. ಇದು ನಿಮ್ಮ ಮನೆಯಲ್ಲಿ ಶಾಂತಿ, ನೆಮ್ಮದಿಯು ನೆಲೆಸುವ ಸೂಚನೆಯಾಗಿದೆ ಹಾಗೂ ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನದ ಸೂಚನೆಯಾಗಿದೆ. ಮಕ್ಕಳನ್ನು ಹೊಂದಿಲ್ಲವಾದರೆ ಈ ಸಮಯದಲ್ಲಿ ಮಕ್ಕಳ ಸಂತೋಷವನ್ನು ಹೊಂದಬಹುದು, ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ವೈಭವ ಹೆಚ್ಚಾಗುತ್ತದೆ.

ಕನಸಿನಲ್ಲಿ ಆನೆ ಕಂಡರೆ ನಿಮ್ಮ ಆರ್ಥಿಕಸ್ಥಿತಿ ಹೆಚ್ಚು ಉತ್ತಮವಾಗಲಿದೆ ಎಂಬ ಸೂಚನೆಯಾಗಿದೆ. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಆನೆಯ ಕನಸನ್ನು ಕಂಡರೆ ನಿಮ್ಮ ಪ್ರೇಮಿಯೊಂದಿಗಿನ ನಿಮ್ಮ ಪ್ರೀತಿ ಹೆಚ್ಚಾಗಿ ಬೆಳೆಯುತ್ತದೆ ಎಂದು ಅರ್ಥವಾಗಿದೆ ಅಲ್ಲದೆ ನೀವು ವಿವಾಹವಾಗದೆ ಇದ್ದರೆ ನಿಮಗೆ ವಿವಾಹ ಯೋಗ ಕೂಡಿ ಬರಲಿದೆ ಎಂದು ಅರ್ಥವಾಗಿದೆ.

ಕನಸಿನಲ್ಲಿ ಆನೆಯನ್ನು ಕಂಡರೆ ನೀವು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧವನ್ನು ಹೊಂದುವ ಸಾಧ್ಯತೆಗಳಿವೆ ಆದ್ದರಿಂದ ನಿಮ್ಮ ಪ್ರೇಮಿಯೊಂದಿಗಿನ ಸಂಬಂಧದ ಬಗ್ಗೆ ಕಾಳಜಿವಹಿಸಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ನಕಾರಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕನಸಿನಲ್ಲಿ ಆನೆ ನಿಂತುಕೊಂಡಂತೆ ಕಂಡುಬಂದರೆ ಸ್ವಪ್ನ ಶಾಸ್ತ್ರದ ಪ್ರಕಾರ ಅದು ಅಸಹ್ಯವಾದ ಕನಸು ಇದರಿಂದ ನೀವು ಮಾಡುವ ಕೆಲಸಗಳಿಗೆ ಆಡಚಣೆಯಾಗಬಹುದು, ಒಂದು ವೇಳೆ ನೀವು ಹೊಸದಾದ, ಒಳ್ಳೆಯ ಕೆಲಸವನ್ನು ಆರಂಭಿಸುವ ಯೋಚನೆಯಲ್ಲಿದ್ದರೆ ಸದ್ಯಕ್ಕೆ ಆ ಕೆಲಸವನ್ನು ಮುಂದೂಡುವುದು ಉತ್ತಮ. ಕೆಲಸವನ್ನು ಮಾಡಿದರೂ ಅದಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯುವುದಿಲ್ಲ.

ಕನಸಿನಲ್ಲಿ ಎರಡು ಆನೆ ಜೋಡಿಯಾಗಿ ಕಂಡುಬಂದರೆ ಅದು ಒಳ್ಳೆಯ ಕನಸಾಗಿದೆ ಇದರಿಂದ ನಿಮ್ಮ ವೈವಾಹಿಕ ಜೀವನ ಸಂತೋಷವಾಗಿರಲಿದೆ ಎಂದು ತಿಳಿದುಕೊಳ್ಳಬೇಕು. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಯಾವುದಾದರೂ ವಿಷಯಕ್ಕೆ ಜಗಳ ನಡೆಯುತ್ತಿದ್ದರೆ ಅಥವಾ ಭಿನ್ನಾಭಿಪ್ರಾಯವಿದ್ದರೆ ಅದು ಈ ಸಮಯದಲ್ಲಿ ಕೊನೆಗೊಳ್ಳುತ್ತದೆ ಮುಂದಿನ ದಿನಗಳಲ್ಲಿ ಸಂತೋಷ ಕಂಡುಬರುತ್ತದೆ ಎಂದು ತಿಳಿಯಬೇಕು. ಒಟ್ಟಿನಲ್ಲಿ ಕನಸಿನಲ್ಲಿ ಆನೆ ಕಂಡರೆ ಶುಭವಾಗಿದ್ದು ಸ್ವಲ್ಪ ಮಟ್ಟಿಗೆ ತೊಂದರೆಗಳಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: