WhatsApp Group Join Now
Telegram Group Join Now

ಹಿಂದಿನ ದಶಕದಲ್ಲಿ ಕೇವಲ ಬಟ್ಟೆ ಒಗೆಯುವ ಅಗಸನ ಬಳಿ ಮಾತ್ರ ಕತ್ತೆಗಳು ಕಂಡು ಬರುತ್ತಿದ್ದವು. ಆದರೆ ಈಗ ಕತ್ತೆಗಳ ಸಾಕಾಣಿಕೆ ಒಂದು ವ್ಯವಹಾರವಾಗಿ ಬದಲಾಗುತ್ತಿದೆ ಮತ್ತು ಜನರ ಜೀವನ ನಿರ್ವಹಣೆಗೆ ಸಹಾಯ ಆಗುತ್ತಿವೆ. ಇದಕ್ಕೆ ಕಾರಣ ಎಂದರೆ ಕೇವಲ ಭಾರ ಹೊರಲು ಮಾತ್ರವಲ್ಲ, ಕತ್ತೆ ಹಾಲು ಮನುಷ್ಯನ ಆರೋಗ್ಯಕ್ಕೆ ಉಂಟು ಮಾಡುವ ಪ್ರಯೋಜನಗಳು ಇಂದು ಎಲ್ಲರ ಹುಬ್ಬೇರಿಸುತ್ತಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕತ್ತೆಯ ಹಾಲಿನ ಪ್ರಯೋಜನಗಳು ಒಂದೆರಡಲ್ಲ. ಹಲವು ಆಯಾಮಗಳಲ್ಲಿ ಇಂದು ಕತ್ತೆಯ ಹಾಲು ದೇಶ – ವಿದೇಶಗಳಲ್ಲಿ ಬಳಕೆ ಆಗುತ್ತಿದೆ. ಜೊತೆಗೆ ಕತ್ತೆಯ ಹಾಲಿನ ಉತ್ಪನ್ನಗಳು ಕೂಡ ಜನರ ಕಣ್ಣು ಸೆಳೆಯುತ್ತಿವೆ. ಕತ್ತೆಯ ಹಾಲಿನಿಂದ ನಮಗೆ ಸಿಗುವ ಲಾಭಗಳು ಯಾವುವು ಮತ್ತು ಇದರ ಬಳಕೆ ಹೇಗೆ ಇಂದು ಮಾರುಕಟ್ಟೆಯಲ್ಲಿ ಇದರ ವ್ಯಾಪ್ತಿ ಎಷ್ಟಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.

ನಮ್ಮ ಆಹಾರ ಪದ್ಧತಿಯಲ್ಲಿ ಇಂತಹ ಅನೇಕ ಸಂಗತಿಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಅಂತಹ ಒಂದು ವಿಷಯವೆಂದರೆ ಕತ್ತೆ ಹಾಲು ಬಳಸುವುದು. ಒಂದು ಅಧ್ಯಯನದ ಪ್ರಕಾರ, ಕತ್ತೆ ಹಾಲನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳಿವೆ. ಕತ್ತೆ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕತ್ತೆಯ ಹಾಲನ್ನು ಅನೇಕ ಸೌಂದರ್ಯವರ್ಧಕಗಳು ಮತ್ತು ಡೈರಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ನಿಮಗೆ ಹಸು ಅಥವಾ ಎಮ್ಮೆ ಹಾಲಿಗೆ ಅಲರ್ಜಿ ಇದ್ದರೆ, ನೀವು ಕತ್ತೆ ಹಾಲನ್ನು ಕುಡಿಯಬಹುದು, ನಿಮಗೆ ಈ ಸಮಸ್ಯೆ ಇರುವುದಿಲ್ಲ. ಲ್ಯಾಕ್ಟೋಸ್ ಅಸಹಿಷ್ಣುತೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಇದನ್ನು ಕುಡಿಯಬಹುದು.

ಟೈಪ್ 2 ಡಯಾಬಿಟಿಸ್ ಇರುವ ರೋಗಿಗಳು ಕತ್ತೆಯ ಹಾಲಿನಲ್ಲಿರುವ ಪ್ರೋಟೀನ್‌ನಿಂದ ಪ್ರಯೋಜನ ಪಡೆಯುತ್ತಾರೆ ಎಂದು ನಂಬಲಾಗಿದೆ. ಇದು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸುತ್ತದೆ. ಇಲ್ಲಿಯವರೆಗೆ ಇದರ ಬಗ್ಗೆ ಯಾವುದೇ ಕಾಂಕ್ರೀಟ್ ಸಂಶೋಧನೆ ನಡೆದಿಲ್ಲವಾದರೂ, ಅದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಕತ್ತೆಯ ಹಾಲಿನಲ್ಲಿರುವ ಪ್ರೋಟೀನ್ಗಳು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಇದು ನಿಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ.

ಕತ್ತೆ ಹಾಲಿಗಿರುವ ಬೇಡಿಕೆಯಿಂದಾಗಿ ಬೆಲೆ ಗಗನಕ್ಕೇರಿದೆ. 5 ಮಿಲಿ ಹಾಲಿನ ಬೆಲೆ 50 ರೂಪಾಯಿಯಾಗಿದ್ದು, ಲೀಟರ್‌ಗೆ 7 ಸಾವಿರಕ್ಕೂ ಅಧಿಕ ರೂಪಾಯಿಯಾಗಿದೆ. ಆದರೂ ಜನರು ಖರೀದಿಸಲು ಮುಗಿಬೀಳುತ್ತಿದ್ದಾರೆ. ಕತ್ತೆಯ ಹಾಲು ಮಕ್ಕಳಲ್ಲಿ ಹಸಿವು ಹೆಚ್ಚಿಸುವ, ಆಸ್ತಮಾ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ರಾಮಬಾಣ ಎಂಬ ಮಾತುಗಳು ಜನಜನಿತವಾಗಿವೆ. ವಯಸ್ಕರು ಸಹ ಈ ಹಾಲಿನ ಸೇವನೆಯಿಂದ ಗೊರಕೆ, ತಲೆನೋವು, ಎದೆಯುರಿ, ವಾಕರಿಕೆ ಮತ್ತು ಸೆಳೆತದಂತಹ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಹೇಳಲಾಗುತ್ತಿದೆ. ಕತ್ತೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ ಎಂದು ಹೇಳುತ್ತಾರೆ.

ಆದರೆ ಒಬ್ಬ ತಾಯಿಯ ಎದೆ ಹಾಲಿನ ಪೌಷ್ಟಿಕ ಸತ್ವಗಳಿಗೆ ಸಮನಾಗಿ ಅಂದರೆ ವಿಟಮಿನ್ ಅಂಶಗಳು ಮತ್ತು ಅಗತ್ಯವಾದ ಫ್ಯಾಟಿ ಆಸಿಡ್ ಅಂಶಗಳನ್ನು ಒಳಗೊಂಡಿದೆ. ಕತ್ತೆ ಹಾಲಿನ ಆರೋಗ್ಯಕರ ಪ್ರಯೋಜನಗಳು ಸಾಕಷ್ಟಿವೆ. ಚರ್ಮ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ ಮತ್ತು ಹಸುವಿನ ಹಾಲಿಗಿಂತ ದೇಹದಲ್ಲಿ ಬಹಳ ಬೇಗನೆ ಜೀರ್ಣ ಆಗುತ್ತದೆ. ಕತ್ತೆ ಹಾಲನ್ನು ಎಳೆ ಮಕ್ಕಳಿಗೆ ಕುಡಿಸುತ್ತಾರೆ. ಏಕೆಂದರೆ ಕತ್ತೆಯ ಹಾಲು ಹಸುವಿನ ಹಾಲಿಗಿಂತ ಕಡಿಮೆ ಸಾಂದ್ರತೆ ಹೊಂದಿದ್ದು, ಪುಟ್ಟ ಮಕ್ಕಳ ದೇಹದ ಜೀರ್ಣಾಂಗ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಬಹಳ ಬೇಗನೆ ಜೀರ್ಣವಾಗುತ್ತದೆ.

ಎಳೆ ಕಂದಮ್ಮಗಳಲ್ಲಿ ಗ್ಯಾಸ್ಟ್ರಿಕ್ ಮತ್ತು ಅಜೀರ್ಣತೆ ಉಂಟಾಗುವುದಿಲ್ಲ ಎಂಬ ಕಾರಣಕ್ಕೆ. ಮನೆಯಲ್ಲಿನ ಎಂಟು – ಹತ್ತು ವರ್ಷದ ಮಕ್ಕಳಿಗೂ ಕೂಡ ಕತ್ತೆ ಹಾಲಿನ ಸೇವನೆ ಮಾಡಿಸುತ್ತಾರೆ. ವರ್ಷಕ್ಕೆ ಒಂದು ಬಾರಿಯಾದರೂ ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸುವುದರಿಂದ ಅವರ ದೇಹದ ರೋಗ – ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಕೆಮ್ಮು, ಹೊಟ್ಟೆಯಲ್ಲಿನ ಸೋಂಕು ಮತ್ತು ಚರ್ಮದ ಸೋಂಕು ಇಲ್ಲವಾಗುತ್ತದೆ ಎಂದು ಹೇಳುತ್ತಾರೆ. ಕತ್ತೆಯ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲು ಇದಕ್ಕಿಂತ ಬೇರೆ ಕಾರಣ ಬೇಕಿಲ್ಲ. ಆದರೆ ಕತ್ತೆ ಹಾಲು ತುಂಬಾ ದುಬಾರಿ ಎಂದು ಹೇಳಬಹುದು. ಕತ್ತೆ ಹಾಲಿನಲ್ಲಿ ಆಂಟಿ – ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು, ಇವುಗಳು ನಮ್ಮ ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುವ ಶಕ್ತಿ ಪಡೆದಿವೆ ಎಂದು ಹೇಳುತ್ತಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: