WhatsApp Group Join Now
Telegram Group Join Now

ನಕ್ಷತ್ರ ಅಥವಾ ನಕ್ಷತ್ರಪುಂಜವನ್ನು ಹಿಂದೂ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಐದು ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಒಟ್ಟು 27ನಕ್ಷತ್ರಗಳಿದ್ದು ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ನಕ್ಷತ್ರವು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ, ಅದರದ್ದೇ ಆದ ಸಾಂಕೇತಿಕ ರೂಪ ಮತ್ತು ಪ್ರಾಣಿ, ಆಡಳಿತ ಗ್ರಹ, ಉದ್ದೇಶ ಮತ್ತು ಹೆಚ್ಚಿನದನ್ನು ಹೊಂದಿದೆ. ಈ ನಕ್ಷತ್ರಗಳು ಒಬ್ಬರ ಜೀವನವನ್ನು ರೂಪಿಸುವ ಶಕ್ತಿಯನ್ನು ಹೊಂದಿವೆ.

ಹನ್ನೆರಡು ರಾಶಿಗಳಲ್ಲಿ ಒಂದಾದ ಕಟಕ ರಾಶಿ ಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ರಾಶಿಚಕ್ರದಲ್ಲಿ ನಾಲ್ಕನೇ ರಾಶಿಚಕ್ರ ಕಟಕ ರಾಶಿ. ಈ ರಾಶಿಯವರು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮನೆ ಮತ್ತು ಕುಟುಂಬವನ್ನು ಪ್ರೀತಿಸುತ್ತಾರೆ. ಈ ರಾಶಿಯವರು ಬಲವಾದ ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಮಾನಸಿಕ ಶಕ್ತಿಯನ್ನು ಉಳ್ಳವರು ಹಾಗಾಗಿ ಜನರನ್ನು ಚೆನ್ನಾಗಿಯೇ ಅರ್ಥಮಾಡಿಕೊಳ್ಳುತ್ತಾರೆ. ಕೆಲವರು ಹೊರಗೆ ಒರಟರಂತೆ ಕಂಡರೂ ಇವರ ಮನಸ್ಸು ಮೃದುವಾಗಿರುತ್ತಾರೆ. ಇವರು ನಿಷ್ಠೆ, ಅತೀ ಭಾವುಕತೆ ಹಾಗೂ ಕಾಳಜಿಗೆ ಹೆಸರುವಾಸಿ. ಇನ್ನೊಂದು ಕಡೆಯಲ್ಲಿ ಆಗಾಗ ಬದಲಾಗಬಲ್ಲ, ಭಾವುಕ ಮತ್ತು ಅತಿಯಾಗಿ ಒಬ್ಬರನು ಹಚ್ಚಿಕೊಳ್ಳುವಂತಹ ವ್ಯಕ್ತಿ.

ಈ ರಾಶಿಯವರ ವಾರ್ಷಿಕ ಭವಿಷ್ಯ ಬಗ್ಗೆ ಜ್ಯೋತಿಷಿ ಮುಖಾಂತರ ತಿಳಿದುಕೊಳ್ಳೋಣ.
ಏಪ್ರಿಲ್ ಅಲ್ಲಿ ಮೇಷ ರಾಶಿಗೆ ರವಿಯು ಪ್ರವೇಶ ಆದಾಗ ಶುಭ ಸೂಚನೆ ಇದ್ದು ಕೆಲಸದಲ್ಲಿ ಮುಬಡ್ತಿ ಸಿಗುವ ಯೋಗವಿದೆ..ಜೊತೆಗೆ ವೃಷಭ ರಾಶಿಗೆ ಶುಕ್ರನು ಪ್ರವೇಶದಿಂದ ಕಟಕ ರಾಶಿಯವರಿಗೆ ವಿವಾಹ ಯೋಗ ವಿದ್ದು ಮನೆಯಲ್ಲಿ ಶುಭ ಕಾರ್ಯ ನಡಿಯುವುದು. ನಂತ್ರ ದಿನಗಳಲ್ಲಿ ಗ್ರಹಗತಿಗಳು ತಮ್ಮ ಸ್ಥಾನ ಪಲ್ಲಟಗೊಂಡು ಸ್ವಲ್ಪ ವ್ಯವಹಾರದಲ್ಲಿ ಅಡಚಣೆ ಬರುವ ಸಾಧ್ಯತೆ ಜೂನ್ ತಿಂಗಳಲ್ಲಿ ಕಂಡು ಬರುತ್ತದೆ . ಆವಾಗ ಭೂ ಖರೀದಿ, ಜಮೀನ ವಿಚಾರ ಬಗ್ಗೆ ಸ್ವಲ್ಪ ಜಾಗರೂಕ ಆಗಿರಬೇಕು.
ಜುಲೈ ಆರಂಭದಲ್ಲಿ ರವಿ ಕಟಕ ರಾಶಿಯ ಮೇಲೆ ಸಂಚಾರ ಇದ್ದು, ಶುಕ್ರನು ಸಿಂಹ ರಾಶಿಗೆ ಬಂದಾಗ ಸ್ವಲ್ಪ ಶುಕ್ರಬಲ ಕಡಿಮೆ ಆಗುವುದು.

ತಿಂಗಳ ಕೊನೆಯಲ್ಲಿ ಕುಜನ ಆಗಮನದಿಂದ ಕುಟುಂಬದಲ್ಲಿ ಸಂತೋಷ ಇದ್ದು ವಿದ್ಯಾರ್ಥಿಗಳಲ್ಲಿ ತಮ್ಮ ಗುರಿ ಮುಟ್ಟಲು ಒಳ್ಳೆಯ ಅವಕಾಶ . ವಕೀಲ ವೃತ್ತಿ, ಟೀಚರ್, ಮಾತಿನ ಮೂಲಕ ತಮ್ಮ ಕಾರ್ಯ ಸಾಧನೆಗೆ ಒಳ್ಳೆಯ ಅವಕಾಶ .ಆಗಸ್ಟ್ ತಿಂಗಳಲ್ಲಿ ಬುದ ಸಿಂಹ ರಾಶಿಗೆ, ರವಿಯು ಸಿಂಹಕ್ಕೆ ಸಂಚಾರ, ಕನ್ಯಾ ಶುಕ್ರ ಪ್ರವೇಶದಿಂದ ಕಟಕ ರಾಶಿ ಮಿಶ್ರಫಲ ಲಭ್ಯ. ಸೆಪ್ಟೆಂಬರ್, ಅಕ್ಟೊಂಬರ್, ಡಿಸೆಂಬರ್ ತಿಂಗಳಲ್ಲಿ ಮಿಶ್ರ ಫಲವಿದ್ದು ಆದಷ್ಟು ಸರಕಾರಿಅಧಿಕಾರಿಗಳು ಹಾಗೂ ಸರಕಾರಿ ಉದ್ಯೋಗದಲ್ಲಿ ಇರುವವರು ಸ್ವಲ್ಪ ಜಾಗ್ರತೆ ವಹಿಸಬೇಕು. ನಂತರ ಫೆಬ್ರುವರಿ ತಿಂಗಳಲ್ಲಿ ಕಟಕ ರಾಶಿಯವರಿಗೆ ಶುಭದಾಯಕ ಈ ಕಾಲದಲ್ಲಿ ಭೂಮಿ ಖರೀದಿ,ಮದುವೆ, ಮನೆ ಕಟ್ಟುವ ಯೋಜನೆ ಉತ್ತಮ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: