ಆರ್ಮುಗಮ್ ಎಂಬ ರೈತ ತಮಿಳುನಾಡಿನಲ್ಲಿ ತಮ್ಮ ಕುಟುಂಬದ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದ.. ಈತನಿಗೆ 60 ವರ್ಷ ವಯಸ್ಸು. ಈತನ ಹೆಂಡತಿ ಹೆಸರು ವಿಶಾಲಾಕ್ಷಿ. ಇನ್ನೂ ಆರ್ಮುಗಮ್ ತನ್ನ 20 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದನು. ಈ ರೈತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬ ಗಂಡು ಮಗನಿದ್ದಾನೆ. ಆದರೆ ಈ ಗಂಡು ಮಗು ಹುಟ್ಟಿದ ತಕ್ಷಣ ಹೆಂಡತಿ ಪ್ರಾಣ ಬಿಡುತ್ತಾರೆ. ಆನಂತರ ಆರ್ಮುಗಮ್ ತನ್ನ ಮೂರು ಜನ ಮಕ್ಕಳನ್ನು ಏಕಾಂಗಿಯಾಗಿ ತಾನೇ ಸಾಕಲು ಶುರುಮಾಡುತ್ತಾನೆ. ಮಕ್ಕಳ ಜೀವನಕ್ಕೋಸ್ಕರ ತನ್ನ ಸ್ವಂತ ಜಮೀನಿನಲ್ಲಿ ಕಷ್ಟಪಟ್ಟು ಆರ್ಮುಗಮ್ ವ್ಯವಸಾಯ ಮಾಡುತ್ತಿದ್ದರು. ಇನ್ನೂ ಕಳೆದ ಆರು ತಿಂಗಳ ಹಿಂದೆ ತನ್ನ ಜಮೀನಿನಲ್ಲಿ ಆರ್ಮುಗಮ್ ತರಕಾರಿಯನ್ನು ಬೆಳೆದಿದ್ದರು.
ಆರ್ಮುಗಮ್ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಬೆಳೆ ಬಂದಿತ್ತು. ನಂತರ ಈ ನುಗ್ಗೆಕಾಯಿಗಳನ್ನು ಹಾಕಿಕೊಂಡು ಚೆನ್ನೈನ ಕೃಷಿ ಮಾರುಕಟ್ಟೆಗೆ ಹೋಗಿ ಸುಮಾರು 3ವರೆ ಲಕ್ಷ ಹಣವನ್ನು ಗಳಿಸುತ್ತಾನೆ. ನಂತರ ಮರಳಿ ತನ್ನ ಊರಿಗೆ ಬರುವಾಗ ಮಗಳಿಗೆ ಚಿನ್ನದ ಸರವನ್ನು ಕೊಂಡುಕೊಳ್ಳೋಣ ಎಂದುಕೊಂಡು ಚಿನ್ನದ ಅಂಗಡಿಗೆ ಹೋಗುತ್ತಾನೆ.ಆದರೆ ಚಿನ್ನದ ಅಂಗಡಿಯ ಸೆಕ್ಯುರಿಟಿ ಆರ್ಮುಗಮ್ ಅವರನ್ನು ನೋಡಿ ಭಿಕ್ಷುಕ ಎಂದುಕೊಂಡು ಹೊಳಗಡೆ ಬಿಡುವುದಿಲ್ಲ.ಯಾಕೆಂದರೆ ಆರ್ಮುಗಮ್ ಧರಿಸಿದ್ದ ಬಟ್ಟೆಗಳು ಸ್ವಲ್ಪ ಹಳೆಯಾದಾಗಿದ್ದ ಕಾರಣ ಸೆಕ್ಯುರಿಟಿ ಈ ರೀತಿ ಮಾಡುತ್ತಾನೆ.ಆದರೆ ಆರ್ಮುಗಮ್ ಎಷ್ಟೇ ಕೇಳಿಕೊಂಡರು ಸೆಕ್ಯುರಿಟಿ ಮಾತ್ರ ಚಿನ್ನದ ಅಂಗಡಿಯ ಒಳಗೆ ಬಿಡಲಿಲ್ಲ.ಇನ್ನೂ ಬಾಗಿಲಿನ ಬಳಿ ಇವರಿಬ್ಬರನ್ನು ನೋಡಿದ ಮ್ಯಾನೇಜರ್ ಏನೋ ನಡೆಯುತ್ತಿದೆ ಎಂದು ಹೊರಗೆ ಬರುತ್ತಾನೆ ನಂತರ ಸೆಕ್ಯುರಿಟಿ ಇವನೊಬ್ಬ ಭಿಕ್ಷುಕ ಸುಮ್ಮನೆ ಚಿನ್ನ ತೆಗೆದುಕೊಳ್ಳಬೇಕು ಅಂತ ಗಲಾಟೆ ಮಾಡುತ್ತಿದ್ದಾನೆ ಎಂದು ಮ್ಯಾನೇಜರ್ ಗೆ ಹೇಳುತ್ತಾನೆ. ಆಗ ಮ್ಯಾನೇಜರ್ ಆರ್ಮುಗಮ್ ಅವರ ವೇಷಭೂಷಣ ನೋಡಿ. ಒಂದು ರುಪಾಯಿಗೆ ಭಿಕ್ಷೆ ಬೇಡುವ ನಿನಗೆ ಚಿನ್ನಕೊಳ್ಳಲು ಹೇಗೆ ಸಾಧ್ಯ ಎಂದು ಗೇಲಿ ಮಾಡುತ್ತಾನೆ. ಆಗ ಆರ್ಮುಗಮ್ ಅವರ ಕೋಪ ನೆತ್ತಿಗೇರಿ ನುಗ್ಗೆಕಾಯಿ ಮಾರಿದ ಲಕ್ಷ ಲಕ್ಷ ಹಣವನ್ನು ಆ ಮ್ಯಾನೇಜರ್ ಗೆ ತೋರಿಸುತ್ತಾನೆ. ಆದರೆ ಮ್ಯಾನೇಜರ್ ಗೆ ಆರ್ಮುಗಮ್ ಅವರ ಮೇಲೆ ಅನುಮಾನ ಬರುತ್ತದೆ ಎಲ್ಲೋ ಕದ್ದು ತಂದಿರಬೇಕೆಂದು.
ಆಗ ಈತನನ್ನು ಹೊಳಗೆ ಕರೆದುಕೊಂಡು ಹೋಗಿ ಒಡವೆಯನ್ನು ಸೆಲೆಕ್ಷನ್ ಮಾಡಿ ಎಂದು ಹೇಳುತ್ತಾನೆ. ಆನಂತರ ಮ್ಯಾನೇಜರ್ ಪೋಲಿಸ್ ಗೆ ಕರೆಮಾಡಿ ಒಬ್ಬ ವ್ಯಕ್ತಿ ಕಳ್ಳತನ ಮಾಡಿದ ಹಣದ ಜೊತೆ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಆರ್ಮುಗಮ್ ಅವರ ಮೇಲೆ ದೂರನ್ನು ನೀಡುತ್ತಾನೆ ಕೆಲವೇ ನಿಮಿಷಗಳಲ್ಲಿ ಒಡವೆ ಅಂಗಡಿಗೆ ಬಂದ ಪೋಲಿಸರು ಆರ್ಮುಗಮ್ ಅವರನ್ನು ವಿಚಾರಣೆ ಮಾಡಲು ಶುರುಮಾಡುತ್ತಾರೆ ಆದರೆ ವಿಚಾರಣೆಯಲ್ಲಿ ಸತ್ಯ ಹೊರಗೆ ಬಂದಿದೆ.ಅದೇನೆಂದರೆ ಆರ್ಮುಗಮ್ ಒಬ್ಬ ರೈತ ಎಂಬುವ ನಿಜಾಂಶ ಗೊತ್ತಾಗಿದೆ ಹೌದು ಆತ ತಾನು ಬೆಳೆದ ಬೆಳೆಯನ್ನು ಮಾರಿ ಈ ದುಡ್ಡನ್ನು ಸಂಪಾದನೆ ಮಾಡಿದ್ದಾನೆ ಎಂಬುದು ಅವರಿಗೆ ಅರಿವಾಗುತ್ತದೆ. ಆಗ ಅವಮಾನ ಮಾಡಿದ್ದ ಮ್ಯಾನೇಜರ್ ಹಾಗು ಸೆಕ್ಯುರಿಟಿ ಆರ್ಮುಗಮ್ ಅವರ ಬಳಿ ನಾವು ನಿಮ್ಮ ಬಗ್ಗೆ ತಿಳಿಯದೆ ತಪ್ಪು ಮಾಡಿದ್ದೇವೆ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಹೇಳೊದು ಒಬ್ಬರ ಮುಖ, ವೇಷಭೂಷಣ ನೋಡಿ ಅವರನ್ನು ಕೀಳಾಗಿ ಕಾಣಬಾರದು ಅಂತ.