WhatsApp Group Join Now
Telegram Group Join Now

ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗಲು ನಮ್ಮ ಜೀವನಶೈಲಿ ಆಹಾರ ಕ್ರಮ ಇತ್ಯಾದಿಗಳು ಪ್ರಮುಖ ಕಾರಣವಾಗುತ್ತದೆ ಕೊಲೆಸ್ಟ್ರಾಲ್ ಎನ್ನುವುದು ದೇಹದಲ್ಲಿ ಒಂದು ರೀತಿಯ ಮೇದಸ್ಸು ಆಗಿದೆ ಮತ್ತು ಇದನ್ನು ದೇಹವು ಬೇಕಿರುವಾಗ ಬಳಕೆ ಮಾಡಲು ಹಾಗೆ ಸಂಗ್ರಹಿಸಿಟ್ಟುಕೊಳ್ಳುವುದು. ದೇಹವು ಕ್ಯಾಲರಿಯನ್ನು ಮೇದಸ್ಸಾಗಿ ಪರಿವರ್ತನೆ ಮಾಡಿಕೊಂಡು ಅದನ್ನು ಮತ್ತೆ ಬಳಕೆಗೆ ಸಂಗ್ರಹಿಸುವುದು ಈ ಮೂಲಕ ದೇಹದಲ್ಲಿ ತೂಕ ಹೆಚ್ಚಾಗುತ್ತದೆ.

ಆರೋಗ್ಯಕರ ಆಹಾರ ಕ್ರಮಗಳು ನಿಯಮಿತವಾದ ದೈಹಿಕ ಚಟುವಟಿಕೆ ಮತ್ತು ಸರಿಯಾದ ದೇಹದ ತೂಕವು ಇದ್ದರೆ ಬೊಜ್ಜು ಸಂಭವಿಸುವುದು ಇಲ್ಲ ತರಕಾರಿ ಹಣ್ಣುಗಳು ಮತ್ತು ದ್ವಿದಳ ಧಾನ್ಯಗಳಿಂದ ತಯಾರಿಸಿದ ಆಹಾರ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್‌ ಮತ್ತು ಖನಿಜಗಳು ಸಿಗುತ್ತವೆ ಅವು ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗುತ್ತವೆ. ನಾವು ಈ ಲೇಖನದ ಮೂಲಕ ದೇಹದ ಬೊಜ್ಜು ಕರಗಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಕೊಬ್ಬು ಹೆಚ್ಚಿದಂತೆ ಪಾಶ್ವ ವಾಯು ಹೃದಯಕ್ಕೆ ಸಂಬಂಧಿಸಿದ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ದೇಹದ ಕೊಬ್ಬನ್ನು ಕರಗಿಸಿ ಸೂಕ್ತವಾದ ದೇಹವನ್ನು ಹೊಂದುವುದು ಸೌಂದರ್ಯದ ದೃಷ್ಠಿ ಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಅನಿವಾರ್ಯವಾಗಿದೆ ದಿನಕ್ಕೆ ಎಂಟು ಲೋಟ ನೀರನ್ನು ಕುಡಿಯಬೇಕು ಎಂಬ ಕಟ್ಟು ಪಾಡಿನಲ್ಲಿ ಬಿಟ್ಟು ಬಿಡಬೇಕು ಬೆಳಗ್ಗಿನ ಉಪಹಾರ ಮಧ್ಯಾಹ್ನದ ಊಟ ಮಾಡದೇ ಇದ್ದರೆ ಹಸಿವು ಜಾಸ್ತಿ ಆಗುತ್ತದೆ ಆ ಸಂದರ್ಭದಲ್ಲಿ ನೀರನ್ನು ಕುಡಿಯಬೇಕು. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರನ್ನು ಕುಡಿಯಬೇಕು ಹಸಿ ಶುಂಠಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೆಯೇ ದೇಹದ ಬಿಸಿಯನ್ನು ಹೆಚ್ಚಿಸುತ್ತದೆ ದೇಹದ ಬಿಸಿಯನ್ನು ಹೆಚ್ಚಿಸುವ ಮೂಲಕ ದೇಹದ ಕೊಬ್ಬು ಕರಗಲು ನೆರವಾಗುತ್ತದೆ ಶುಂಠಿಯ ನಿಯಮಿತ ಸೇವನೆಯಿಂದಾಗಿ ಕೊಬ್ಬನ್ನು ಕರಗಿಸಲು ಸಾಧ್ಯ .

ಒಂದು ಲೋಟ ಕ್ಕಿಂತ ಹೆಚ್ಚು ನೀರನ್ನು ಕುದಿಸಿ ಈ ನೀರಿನಲ್ಲಿ ಒಂದು ಇಂಚು ಹಸಿ ಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷದ ವರೆಗೂ ಚಿಕ್ಕ ಉರಿಯಲ್ಲಿ ಕುದಿಸಬೇಕು ಹಾಗೆ ಅದಕ್ಕೆ. ನಿಂಬೆ ರಸ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಸೇರಿಸಬೇಕು ಹೀಗೆ ಮಾಡಿ ಒಂದು ದಿನಕ್ಕೆ ಎರಡು ಲೋಟ ಕುಡಿಯಬೇಕು ದೇಹಕ್ಕೆ ಸ್ವಲ್ಪವೂ ವ್ಯಾಯಾಮ ನೀಡದೆ ಕೆಟ್ಟ ಜೀವನ ಶೈಲಿ ಮತ್ತು ಅನುಚಿತ ಆಹಾರ ಪದ್ಧತಿಯನ್ನು ಅನುಸರಿಸುವ ಜನರಿಗೆ ಆರೋಗ್ಯದ ತೊಂದರೆಗಳು ಹೆಚ್ಚಾಗಿ ಕಾಡುತ್ತವೆ.ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರವಿರಬೇಕು ಅದರಲ್ಲಿ ಚೀಸ್ ಸಂಸ್ಕರಿಸಿದ ಆಹಾರಗಳು ಮೊಸರು ಕೆನೆ ಭರಿತ ಹಾಲು ತಂಪು ಪಾನೀಯ ಸಾಧ್ಯವಾದಷ್ಟು ಸಿಹಿ ತಿಂಡಿಗಳನ್ನು ತಿನ್ನುವುದನ್ನು ಕಡಿಮೆ ಮಾಡುವ ಮೂಲಕ ದೇಹದ ಬೊಜ್ಜನ್ನು ಕಡಿಮೆ ಮಾಗಿಕ್ಕೊಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: