ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕೆರೆ ಯಾವುದು ಗೊತ್ತೇ ಇಲ್ಲಿದೆ ಮಾಹಿತಿ

0

ಕರ್ನಾಟಕದಲ್ಲಿ ಅನೇಕ ಪ್ರವಾಸಿ ತಾಣಗಳು ಕಂಡುಬರುತ್ತದೆ. ಕೆಲವು ಪ್ರದೇಶಗಳ ಬಗ್ಗೆ ಕೇಳಿರುವುದಿಲ್ಲ. ಅಂತಹ ಪ್ರದೇಶಗಳಲ್ಲಿ ಒಂದಾದ ದಾವಣಗೆರೆ ಜಿಲ್ಲೆಯ ಒಂದು ಕೆರೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಬಟ್ಟ ಬಯಲು ಪ್ರದೇಶವಾದ್ದರಿಂದ ಬ್ರಿಟಿಷ್ ತಂತ್ರಜ್ಞರ ಪ್ರಕಾರ ಅಲ್ಲಿ ಕೆರೆ ನಿರ್ಮಿಸಲು ಸೂಕ್ತವಾಗಿಲ್ಲ. ಈ ಪ್ರದೇಶದಲ್ಲಿ ವಿಜ್ಞಾನ ಲೋಕಕ್ಕೆ ಸವಾಲೆನ್ನುವಂತೆ ಸಾಗರದಷ್ಟು ಬ್ರಹತ್ ಗಾತ್ರದ ಸೂಳೆ ಕೆರೆ ನಿರ್ಮಾಣವಾಗಿದೆ. 900 ವರ್ಷಗಳ ಹಿಂದೆ ಕ್ರಿಸ್ತ ಶಕ 11ನೆ ಶತಮಾನದಲ್ಲಿ ನಿರ್ಮಾಣಗೊಂಡಿದೆ.

ಈ ಕೆರೆ ಬರೋಬ್ಬರಿ 4500 ಎಕರೆ ವಿಸ್ತೀರ್ಣವನ್ನು ಹೊಂದಿದೆ ಅಲ್ಲದೆ 27 ಅಡಿ ಆಳ ಹೊಂದಿದೆ. ಈ ಕೆರೆ ನೋಡಲು ಸಾಗರದಂತೆ ಕಾಣುತ್ತದೆ. ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಮಾನವ ನಿರ್ಮಿತ ಕೆರೆಯಾಗಿದೆ ಅಲ್ಲದೆ ಕರ್ನಾಟಕದ ಅತಿ ದೊಡ್ಡ ಕೆರೆಯಾಗಿದೆ. 2000 ಎಕರೆ ಕೃಷಿ ಭೂಮಿಗೆ ಈ ಕೆರೆಯಿಂದ ನೀರು ಸರಬರಾಜು ಆಗುತ್ತದೆ. ಕೆರೆಯು ವಿಸ್ತಾರವಾದ ಬೆಟ್ಟಗಳ ಸಾಲಿನಲ್ಲಿ ಇದೆ.

ಕ್ರಿಸ್ತಶಕ 11ನೇ ಶತಮಾನದಲ್ಲಿ ಕೆರೆ ಇರುವ ಜಾಗದಲ್ಲಿ ಸ್ವರ್ಣಾವತಿ ಎಂಬ ಪಟ್ಟಣವಿತ್ತು. ವಿಕ್ರಮರಾಯ ಎಂಬ ರಾಜ ಈ ಪಟ್ಟಣವನ್ನು ಆಳುತ್ತಿದ್ದನು. ಈ ರಾಜನಿಗೆ ಶಾಂತಲಾದೇವಿ ಎಂಬ ಏಕೈಕ ಸುಪುತ್ರಿ ಇದ್ದಳು. ಶಾಂತಲಾದೇವಿ ಯೌವ್ವನಾವಸ್ಥೆಗೆ ಬಂದಾಗ ಸಿದ್ದೇಶ್ವರ ಎಂಬ ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗುತ್ತಾಳೆ.

ಅಂದಿನ ಸಮಾಜ ಯುವಕ ಅನ್ಯ ಜಾತಿಗೆ ಸೇರಿದವನು ಎಂಬ ಕಾರಣಕ್ಕೆ ಮದುವೆಯನ್ನು ಪುರಸ್ಕರಿಸುವುದಿಲ್ಲ. ಶಾಂತಲಾದೇವಿಯನ್ನು ನಡತೆಗೆಟ್ಟವಳು ಎಂದು ನಿಂದಿಸಿದರು. ಇದರಿಂದ ನೊಂದ ಶಾಂತಲಾದೇವಿ ತನ್ನ ಮೇಲಿನ ಕಳಂಕ ಹೋಗಲಾಡಿಸಲು ಹಾಗೂ ಹೀಯಾಳಿಸಿದ ಜನರ ಅನುಕೂಲಕ್ಕಾಗಿ ಒಂದು ಕೆರೆ ನಿರ್ಮಿಸಲು ನಿರ್ಧರಿಸುತ್ತಾಳೆ.

ಕೆರೆ ನಿರ್ಮಿಸಲು ಸೂಕ್ತ ಜಾಗವನ್ನು ನೋಡುತ್ತಿದ್ದಾಗ ಸ್ವರ್ಣಾವತಿ ಪಟ್ಟಣದಲ್ಲಿ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣ ಮಾಡಲು ಸೂಕ್ತ ಎಂದು ನಿರ್ಧಾರವಾಗುತ್ತದೆ. ಆ ಪ್ರದೇಶವನ್ನು ಕೆರೆ ನಿರ್ಮಾಣ ಮಾಡಲು ಬಿಟ್ಟುಕೊಡಬೇಕೆಂದು ವೇಶ್ಯೆಯರಲ್ಲಿ ಶಾಂತಲಾದೇವಿ ವಿನಂತಿ ಮಾಡುತ್ತಾಳೆ. ವೇಶ್ಯೆಯರು ಕೆರೆಗೆ ಸೂಳೆಕೆರೆ ಎಂದು ನಾಮಕರಣ ಮಾಡುವುದಾದರೆ ಮಾತ್ರ ಈ ಪ್ರದೇಶವನ್ನು ಬಿಟ್ಟು ಕೊಡುತ್ತೇವೆ ಎಂದು ಹೇಳುತ್ತಾರೆ.

ಅವರ ಮಾತಿಗೆ ಒಪ್ಪಿಗೆ ಕೊಟ್ಟು ಶಾಂತಲಾದೇವಿ ಕೆರೆ ನಿರ್ಮಾಣ ಮಾಡಿ ಆ ಕೆರೆಗೆ ಸೂಳೆಕೆರೆ ಎಂದು ಹೆಸರಿಡುತ್ತಾಳೆ. ಈ ಕೆರೆ ನಿರ್ಮಾಣಕ್ಕೆ ಮೂರು ವರ್ಷಗಳು ಬೇಕಾಗಿದೆ. ನಂತರ ಶಾಂತಲಾದೇವಿ ಇದೆ ಕೆರೆಗೆ ಹಾರಿ ಪ್ರಾಣಬಿಟ್ಟಳು. ಆಕೆಯನ್ನು ಬಿಟ್ಟಿರಲಾರದ ಸಿದ್ದೇಶ್ವರ ಕರೆಯ ಪಕ್ಕದಲ್ಲಿನ ಬೆಟ್ಟದ ಮೇಲಿನಿಂದ ಹಾರಿ ಪ್ರಾಣ ಬಿಟ್ಟರು. ಕೆರೆಯ ಪಕ್ಕದಲ್ಲಿರುವ ಗುಡ್ಡದ ಮೇಲೆ ಸಿದ್ದೇಶ್ವರ ದೇಗುಲವಿದೆ.

ಬ್ರಿಟಿಷ್ ತಂತ್ರಜ್ಞರ ಪ್ರಕಾರ ಈ ಪ್ರದೇಶದಲ್ಲಿ ಕೆರೆ ನಿರ್ಮಾಣವಾಗಲು ಸಾಧ್ಯವಿಲ್ಲ ಆದರೆ ಬಯಲು ಪ್ರದೇಶದಲ್ಲಿ ವಿಸ್ತಾರದಲ್ಲಿ ನಿರ್ಮಾಣವಾಗಿರುವ ಕೆರೆಯನ್ನು ನೋಡಿ ತಂತ್ರಜ್ಞರು ಆಶ್ಚರ್ಯ ಪಟ್ಟಿದ್ದಾರೆ. ನಮ್ಮ ಪೂರ್ವಜರ ತಂತ್ರಜ್ಞಾನದ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ.

ಈ ಕೆರೆಗೆ ಸೂಳೆಕೆರೆ ಎಂದು ಕರೆಯುವುದು ಅಷ್ಟು ಸೂಕ್ತವಲ್ಲವೆಂದು ಕೆರೆಯನ್ನು ನಿರ್ಮಿಸಿದ ಶಾಂತಲಾದೇವಿ ಸ್ಮರಣಾರ್ಥ ಶಾಂತಿಸಾಗರ ಎಂತಲೂ ಕರೆಯಲಾಗುತ್ತದೆ. ಕಡಲ ಅಲೆಯಂತೆ ಕೆರೆಯ ನೀರು ದಡಕ್ಕೆ ಅಪ್ಪಳಿಸುವ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಕೆರೆಯಂಚಿನಲ್ಲಿ ಆಕರ್ಷಕ ರಮ್ಯ ಮಂಟಪವಿದೆ. ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದರೆ ತಪ್ಪದೆ ಸೂಳೆಕೆರೆಗೆ ಭೇಟಿ ನೀಡಿ.

Leave A Reply

Your email address will not be published.

error: Content is protected !!
Footer code: