ಉಪ್ಪಿ ಮಗಳ ಬಡೇ ಸಂಭ್ರಮ ಹೇಗಿತ್ತು ನೋಡಿ

0

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಎಲ್ಲರೂ ಇಷ್ಟಪಡುವ ದಂಪತಿಗಳು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಕೂಡ ಒಬ್ಬರು. ಇವರಿಬ್ಬರ ದಾಂಪತ್ಯ ಒಂದು ರೀತಿ ಎಲ್ಲರಿಗೂ ಸ್ಪೂರ್ತಿ. ನಟ ಉಪೇಂದ್ರ ಸಿನಿಮಾ ಹಾಗೂ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಪತ್ನಿ ಪ್ರಿಯಾಂಕ ಉಪೇಂದ್ರ ಮಕ್ಕಳ ಪಾಲನೆ ಪೋಷಣೆ ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ಬಿಡುವಿನ ಸಮಯದಲ್ಲಿ ಸಿನಿಮಾಗಳಲ್ಲೂ ನಟಿಸುತ್ತಾರೆ. ಆದ್ದರಿಂದ ನಾವು ಇಲ್ಲಿ ಅವರ ಪುತ್ರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಉಪೇಂದ್ರ ಅವರನ್ನು ಸೂಪರ್ ಸ್ಟಾರ್ ಮತ್ತು ರಿಯಲ್ ಸ್ಟಾರ್ ಎಂದು ಕರೆಯಲಾಗುತ್ತದೆ. ಹಾಗೆಯೇ ಇವರು ಒಬ್ಬ ಅದ್ಭುತ ನಿರ್ದೇಶಕ ಹಾಗೂ ನಟ ಆಗಿದ್ದಾರೆ. ಇವರ ಬುದ್ಧಿವಂತಿಕೆ ಬಹಳ ಭಿನ್ನವಾಗಿದೆ. ಹಾಗೆಯೇ ಇವರ ನಟನೆಯನ್ನು ಸಹ ಯಾರಿಗೂ ಮಾಡಲು ಬರುವುದಿಲ್ಲ. ಹಾಗೆಯೇ ಇವರು ಹಾಡುಗಳನ್ನು ಸಹ ಹಾಡಿದ್ದಾರೆ. ಇವರ ನಿರ್ದೇಶನದ ಓಂ ಎನ್ನುವ ಚಿತ್ರ ಈಗಲೂ ಓಡುತ್ತದೆ ಎಂದರೂ ತಪ್ಪಿಲ್ಲ.ಇವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.

ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. ಇವರು ತಮ್ಮ ಮತ್ತು ಇತರರ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುಂಚೆ ಕಾಶೀನಾಥ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಾಯಕನಟರಾಗಿ ಇವರ ಮೊದಲ ಚಿತ್ರ 1994ರಲ್ಲಿ ಬಿಡುಗಡೆಯಾದ H20. ಇವರ ಬಾಳಸಂಗಾತಿ ಪ್ರಿಯಾಂಕ ಉಪೇಂದ್ರ.

ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಆಗಿದ್ದಾರೆ. ಇವರಿಗೆ ತಂದೆ ಮತ್ತು ತಾಯಿ ಇದ್ದು ಇತ್ತೀಚೆಗೆ ತಮ್ಮ 80ನೇ ತಂದೆಯ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ಹಾಗೆಯೇ ಮಗಳ ಹೆಸರು ಐಶ್ವರ್ಯ ಉಪೇಂದ್ರ. ಇತ್ತೀಚೆಗೆ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಮಗಳ ಚಿಕ್ಕವಳಿಂದ ದೊಡ್ಡವಳಾಗಿರುವವರೆಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ.

Leave A Reply

Your email address will not be published.

error: Content is protected !!
Footer code: