ಈ ವರ್ಷದ ಮೊದಲನೆ ವಾರ ಭವಿಷ್ಯ ನಿಮ್ಮ ರಾಶಿಫಲ ಹೇಗಿದೆ ತಿಳಿದುಕೊಳ್ಳಿ

0

ಇದೇ ಹೊಸ ವರ್ಷದ ಮೊದಲನೆಯ ವಾರದ ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ನಾವು ಇಲ್ಲಿ ತಿಳಿದುಕೊಳ್ಳೋಣ ಈ ವಾರದಲ್ಲಿ ವಿಶೇಷವಾಗಿ ಪುಷ್ಯ ಹುಣ್ಣಿಮೆ ಬರಲಿದ್ದು ಅಂದು ದೇವಿಯ ಆರಾಧನೆ ಮಾಡುವುದರಿಂದ ಒಳ್ಳೆಯ ಫಲಗಳು ದೊರೆಯುತ್ತವೆ.

ಮೇಷ ರಾಶಿಯವರ ರಾಶಿಯಲ್ಲಿ ರಾಹು ಇರುವುದರಿಂದ ಈತ ಸ್ವಲ್ಪಮಟ್ಟಿಗೆ ಕಷ್ಟವನ್ನು ನೀಡುತ್ತಾನೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಚಿಂತೆ ಉಂಟಾಗಬಹುದು ಈತ ನಿಮಗೆ ನಕಾರಾತ್ಮಕವಾದ ಆಲೋಚನೆಗಳನ್ನ ನೀಡುತ್ತಾನೆ ಆದರೂ ಸಹ ನಿಮ್ಮ ರಾಶಿಯಾಧಿಪತಿ ಧನ ಸ್ಥಾನದಲ್ಲಿ ಇರುವುದರಿಂದ ನಿಮಗೆ ಶುಭ ಫಲವನ್ನೇ ನೀಡುತ್ತಾನೆ ಹಾಗಾಗಿ ನಿಮಗೆ ಹೆಚ್ಚಿಗೆ ಯೋಚಿಸುವ ಅಗತ್ಯವಿರುವುದಿಲ್ಲ

ವಿದ್ಯಾರ್ಥಿಗಳಿಗೆ ಈ ವಾರ ತುಂಬಾ ಒಳ್ಳೆಯದಾಗಿರುತ್ತದೆ ಸಾಲಬಾಧೆಯಿಂದ ಮುಕ್ತರಾಗುತ್ತೀರಿ ಮಿತ್ರರಿಂದ ಸಾಕಷ್ಟು ಸಹಾಯವನ್ನು ಪಡೆಯುತ್ತೀರಿ ಸರ್ಕಾರಿ ಉದ್ಯೋಗದಲ್ಲಿ ಇರುವವರೆಗೂ ಈ ವಾರ ಉತ್ತಮವಾಗಿರುತ್ತದೆ ಇನ್ನು ಕುಟುಂಬದ ವಿಚಾರಕ್ಕೆ ಬಂದರೆ ಸ್ವಲ್ಪ ಮಾತಿನ ಮೇಲೆ ನಿಗಾ ಇಡುವುದು ಒಳ್ಳೆಯದು ಮಾತಿನಿಂದಲೇ ಸಂಬಂಧ ಹಾಳಾಗುವ ಸಾಧ್ಯತೆಗಳು ಇರುತ್ತವೆ.

ಇನ್ನು ವೃಷಭ ರಾಶಿಯ ಜನರಿಗೆ ಕೆಲವೊಂದು ಗೊಂದಲಗಳು ಎದುರಾಗುವ ಸಾಧ್ಯತೆ ಇದೆ ಏಕೆಂದರೆ ವೃಷಭ ರಾಶಿಯಲ್ಲಿ ಕುಜ ಇರುವುದರಿಂದ ಈತ ನಿಮ್ಮನ್ನು ಉದ್ವೇಗಕ್ಕೆ ಒಳಪಡಿಸುತ್ತಾನೆ ಆದ್ದರಿಂದ ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವುದರಿಂದ ದೈವ ಕೃಪೆ ನಿಮ್ಮ ಮೇಲೆ ಇರುತ್ತದೆ ಇನ್ನು ವೃಷಭ ರಾಶಿಯಲ್ಲಿ ಭಾಗ್ಯಾಧಿಪತಿ ಶುಕ್ರನ ಜೊತೆ ಇರುವುದರಿಂದ ಅದೃಷ್ಟವು ನಿಮ್ಮ ಪಾಲಾಗುತ್ತದೆ

ಒಳ್ಳೆಯ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವುದರಿಂದ ನಿಮಗೆ ಮುಂದೆ ಒಳ್ಳೆಯ ಲಾಭ ಗಳೇ ಉಂಟಾಗುತ್ತವೆ. ಸೇವಿಸುವ ಆಹಾರದ ಬಗ್ಗೆ ಸ್ವಲ್ಪ ಗಮನ ಹರಿಸಿ ಇದರಿಂದ ನಿಮ್ಮ ಆರೋಗ್ಯ ಸಮಸ್ಯೆ ಹದಗಿಡಬಹುದು ಇದನ್ನು ಪ್ರತಿನಿತ್ಯ ಸೂರ್ಯ ನಮಸ್ಕಾರ ಹಾಗೂ ಸೂರ್ಯನ ಆರಾಧನೆ ಮಾಡುವುದರಿಂದ ಪರಿಹರಿಸಿಕೊಳ್ಳಬಹುದು.

ಇನ್ನು ಮಿಥುನ ರಾಶಿಯವರಿಗೆ ಅದರಲ್ಲೂ ಸರ್ಕಾರಿ ಉದ್ಯೋಗಿಗಳಿಗೆ ಕೆಲಸದ ಹೊರೆಯ ಜಾತಿ ಇರುತ್ತದೆ ಇದರಿಂದ ನೀವು ಒತ್ತಡಕ್ಕೆ ಒಳಗಾಗಬಹುದು ತುಂಬಾ ಕಷ್ಟಕರವಾದ ಕೆಲಸವನ್ನು ಸುಲಭ ರೀತಿಯಲ್ಲಿ ಮಾಡುವ ವಿಧಾನವನ್ನು ನೀವು ಕಂಡುಕೊಳ್ಳಬೇಕಾಗುತ್ತದೆ ಮಿಥುನ ರಾಶಿಯವರ ರಾಶಿಯ ಅಧಿಪತಿ 7ನೇ ಮನೆಯಲ್ಲಿ ಇರುವುದರಿಂದ ಸ್ವಂತ ಉದ್ಯೋಗ ಮಾಡುವವರಿಗೆ ಸಾಧಾರಣವಾದ ಯೋಗ ಫಲವೂ ಬರಲಿದೆ ಹಣಕಾಸಿನ ವಿಚಾರದಲ್ಲಿ ಆದಾಯ ಮತ್ತು ಖರ್ಚು ಎರಡು ಸರಿಸಮವಾಗಿ ಇರಲಿವೆ ಹಾಗೆ ಈ ರಾಶಿಯವರು ಮಕ್ಕಳ ಬಗ್ಗೆ ಅತಿಯಾದ ಚಿಂತೆಯನ್ನು ಮಾಡುತ್ತಾರೆ ಈ ವಾರದಲ್ಲಿ ಹನುಮಾನ್ ಚಾಲೀಸಾ ವನ್ನು ಪಠಣ ನಿಮ್ಮಲ್ಲಿರುವ ಚಿಂತೆಗಳು ದೂರವಾಗುತ್ತವೆ.

ಕರ್ಕಾಟಕ ರಾಶಿಯವರಿಗೆ ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ರವಿಯು ಇರುತ್ತಾನೆ ಆರನೇ ಮನೆ ಎಂದರೆ ಖರ್ಚು ಎಂದು ಅರ್ಥ ಇದರಿಂದ ವಿಪರೀತವಾಗಿ ಧನವ್ಯಯ ಉಂಟಾಗುತ್ತದೆ ಕೆಲಸದ ವಿಚಾರದಲ್ಲಿ ರವಿಯು ಒಳ್ಳೆಯ ಫಲವನ್ನೇ ನೀಡುತ್ತಾನೆ ಸರ್ಕಾರಿ ಉದ್ಯೋಗದಲ್ಲಿ ಇರುವವರು ಸಹ ನಿಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಿ ಸ್ವಂತ ಉದ್ಯೋಗವನ್ನು ಮಾಡುವವರು ಸಹ ಒಳ್ಳೆಯ ಲಾಭವನ್ನು ಗಳಿಸುತ್ತೀರಿ ಆದರೆ ಶುಕ್ರ ಮತ್ತು ಶನಿಯ ನಿಮ್ಮ ಸಂಸಾರದಲ್ಲಿ ಸಣ್ಣಪುಟ್ಟ ಮನಸ್ತಾಪಗಳನ್ನು ತಂದೊಡ್ಡಬಹುದು.

ಸಿಂಹ ರಾಶಿಯವರಲ್ಲಿ ಈ ವಾರ ಅನೇಕ ಸುಧಾರಣೆಗಳು ಕಂಡುಬರುತ್ತವೆ. ಹಲವಾರು ಕೆಲಸಗಳು ಮುಂದುವರೆಯದೆ ನಿಂತಿದ್ದಲ್ಲಿ ಅವುಗಳು ಈ ವಾರ ಪೂರ್ಣಗೊಳ್ಳುತ್ತವೆ. ಆರೋಗ್ಯ ಸಮಸ್ಯೆಯು ಸುಧಾರಿಸುತ್ತದೆ ಇನ್ನು ಐದನೇ ಮನೆಯಲ್ಲಿ ಬುಧ ಇರುವುದರಿಂದ ಹಣಕಾಸಿನ ವಿಚಾರ ಕೂಡ ಸಮಾಧಾನಕರ ವಾಗಿರುತ್ತದೆ ಆದರೆ ಹಣ ಗಳಿಕೆಯ ಸಾಧ್ಯತೆ ಕಡಿಮೆ ಹಾಗೆ ಖಾಸಗಿ ಉದ್ಯೋಗದಲ್ಲಿ ಇರುವಂತವರಿಗೆ ಕೆಲಸದ ಒತ್ತಡ ಜಾಸ್ತಿ ಇರಲಿದೆ

ಸಿಂಹ ರಾಶಿಯವರು ಹನುಮಂತನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಉಮ್ಮಸ್ಸನ್ನು ಪಡೆಯುತ್ತೀರಿ ಇನ್ನು ರಾಹು ಭಾಗ್ಯದಲ್ಲಿ ಇರುವುದರಿಂದ ತಂದೆಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು.

ಕನ್ಯಾ ರಾಶಿಯವರ ಈ ವಾರದಲ್ಲಿ ದೇವಾಲಯಗಳಿಗೆ ಹಾಗೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಆಗಮನ ಅಥವಾ ಭೇಟಿ ಇತ ಇತ್ಯಾದಿಗಳಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಉಂಟಾಗುತ್ತವೆ ಆರನೆಯ ಮನೆಯಲ್ಲಿ ಶನಿಯ ಜೊತೆಗೆ ಶುಕ್ರನು ಇರುವುದರಿಂದ ನಿಮ್ಮ ಪ್ರತಿಭೆಗಳನ್ನು ಗುರುತಿಸಲು ಈ ಸಮಯ ತುಂಬಾ ಚೆನ್ನಾಗಿ ಇರುತ್ತದೆ ಆದ್ದರಿಂದ ನಿಮ್ಮ ಯಾವುದೇ ರೀತಿಯ ಉದ್ಯೋಗದಲ್ಲಿಯೂ ಕೂಡ ತುಂಬಾ ಉತ್ತಮ ಬದಲಾವಣೆಗಳನ್ನು ಕಾಣುತ್ತೀರಿ

ನಿಮ್ಮ ಕುಟುಂಬದಲ್ಲಿ ಉಂಟಾದ ಗೊಂದಲಗಳು ನಿವಾರಣೆಯಾಗಿ ನೆಮ್ಮದಿ ದೊರೆಯುತ್ತದೆ ಉದ್ಯೋಗದ ವಿಚಾರವಾಗಿ ವಿದೇಶಕ್ಕೆ ಹೋಗ ಬಯಸುವವರ ಪ್ರಯತ್ನಕ್ಕೆ ಈ ವಾರ ಫಲ ಸಿಗುತ್ತದೆ ಹಾಗೆ ಶನಿ ನಿಮ್ಮ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿಯನ್ನು ತರುತ್ತಾನೆ.

ತುಲಾ ರಾಶಿ ಈ ರಾಶಿಯಲ್ಲಿ ಶುಕ್ರನು 4ನೇ ಮನೆಯಲ್ಲಿ ಶನಿಯ ಜೊತೆ ಇರುವುದರಿಂದ ಯಾವುದಾದರೂ ನಿರ್ಧಾರವನ್ನ ತೆಗೆದುಕೊಳ್ಳಲು ಉತ್ತಮವಾದ ಸಮಯ ಆಗಿರಲಿದೆ ನಿಮ್ಮ ಉದ್ಯೋಗದಲ್ಲಿ ವ್ಯಾಪಾರದಲ್ಲಿ ಲಾಭ ಚೆನ್ನಾಗಿರಲಿದೆ ಇನ್ನು ಖಾಸಗಿ ನೌಕರರಿಗೆ ನಿಮ್ಮ ಕೆಲಸಕ್ಕೆ ಉತ್ತಮ ಗೌರವ ದೊರೆಯುತ್ತದೆ

ನಿಮ್ಮ ರಾಶಿಯಲ್ಲಿ ಕುಜನೂ 8ನೇ ಮನೆಯಲ್ಲಿ ಇರುವುದರಿಂದ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಬೇಕಾಗುತ್ತದೆ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡುವುದರಿಂದ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಇದನ್ನು ಹೊರತುಪಡಿಸಿ ಕೆಲಸ ಕಾರ್ಯ ಉದ್ಯೋಗದ ವಿಚಾರದಲ್ಲಿ ತುಲಾ ರಾಶಿಯವರಿಗೆ ಉತ್ತಮವಾಗಿದೆ.

ವೃಶ್ಚಿಕ ರಾಶಿಯವರಿಗೆ ರಾಶಿಯಾಧಿಪತಿಯಾದ ಕುಜನು 7ನೇ ಮನೆಯಲ್ಲಿ ಇದ್ದಾನೆ ಈತ ಉದ್ಯೋಗದ ವಿಚಾರದಲ್ಲಿ ಒಳ್ಳೆಯ ಫಲವನ್ನು ನೀಡುತ್ತಾನೆ ಹಾಗೆಯೇ ವೃಶ್ಚಿಕ ರಾಶಿಯವರು ಕೃಷಿ ಕ್ಷೇತ್ರದಲ್ಲಿಯೂ ಬೆಳವಣಿಗೆ ಕಾಣುತ್ತೀರಿ ನಿಮ್ಮ ಕಾರ್ಯಗಳಿಂದ ಧನಾಘಮನ ಉಂಟಾಗುತ್ತದೆ ಹಾಗೆಯೇ ಬಂದ ಹಡವು ವೆಚ್ಚ ಕೂಡ ಆಗುತ್ತದೆ ಹಣವನ್ನ ಉಳಿಸಲು ಆಗುವುದಿಲ್ಲ ಇನ್ನು ಪಂಚಮದಲ್ಲಿರುವ ಗುರು ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ ವೃಶ್ಚಿಕ ರಾಶಿಯವರಿಗೆ 7ನೇ ಮನೆಯಲ್ಲಿ ಕುಜ ಇರುವುದರಿಂದ ಸಿಟ್ಟು ಜಾಸ್ತಿ ಇರುತ್ತದೆ ಇದರಿಂದ ಮಾತಿನ ಮೇಲೆ ನಿಗಾ ವಹಿಸಬೇಕು ಉಳಿದ ಎಲ್ಲ ವಿಚಾರಗಳಲ್ಲಿಯೂ ವೃಶ್ಚಿಕ ರಾಶಿಯವರಿಗೆ ಉತ್ತಮ ಲಾಭವೇ ಕಂಡುಬರುತ್ತದೆ.

ಧನಸ್ಸು ರಾಶಿಯವರ ಅಧಿಪತಿಯಾಗಿರುವಂತಹ ಗುರು ಚತುರ್ಥ ಭಾಗದಲ್ಲಿ ಇದ್ದಾನೆ ಹಾಗೆ ಬುಧ ಕರ್ಮಸ್ಥಾನಾಧಿಪತಿ ರವಿಯು ಭಾಗ್ಯಅಧಿಪತಿಯು ಆಗಿದ್ದಾನೆ ಆದ್ದರಿಂದ ಈ ಸಮಯ ನಿಮಗೆ ರಾಜಯೋಗ ಎಂದು ಹೇಳಬಹುದು ನೀವು ಮಾಡುವ ಯಾವುದೇ ಕೆಲಸದಲ್ಲಿ ಧರ್ಮ ಹಾಗೂ ನಿಷ್ಠೆ ಇರಬೇಕು ಇದರಿಂದ ನೀವು ಉತ್ತಮ ಯಶಸ್ಸನ್ನು ಗಳಿಸುವಿರಿ

ಯಾವುದಾದರೂ ಒಂದು ವಿಷಯದ ಬಗ್ಗೆ ತುಂಬಾ ಯೋಚನೆ ಮಾಡಿ ನಿರ್ಧಾರವನ್ನು ಕೈಗೊಳ್ಳುತ್ತೀರಿ ಈ ನಿರ್ಧಾರ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ ಧನಸ್ಥಾನದಲ್ಲಿ ಶನಿ ಮತ್ತು ಶುಕ್ರ ಇರುವುದರಿಂದ ಹಣದ ಉಳಿತಾಯ ಉಂಟಾಗುತ್ತದೆ ಪಂಚಮದಲ್ಲಿ ರಾಹು ಇರುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆ ಎದುರಾಗಬಹುದು ಆದ್ದರಿಂದ ಆಹಾರದ ವಿಚಾರದಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ.

ಮಕರ ರಾಶಿಯವರಿಗೆ ನಿಮ್ಮ ರಾಶಿಯಾಧಿಪತಿ ಶನಿಯ ಜೊತೆ ಶುಕ್ರ ಕೂಡ ಸೇರಿಕೊಂಡಿದ್ದಾನೆ ಶುಕ್ರ ವೈಭೋಗವನ್ನು ನೀಡುತ್ತಾನೆ ಶನಿಯು ಅದನ್ನು ಹಾಗೆ ಕಾಪಾಡುತ್ತಾನೆ ಆದ್ದರಿಂದ ಶುಭ ಗ್ರಹದ ಜೊತೆ ಕುಳಿತಿರುವ ಶನಿಯು ಶುಭಕಾರಕನಾಗಿರುತ್ತಾನೆ ಮಕರ ರಾಶಿಯವರು ನಿಮ್ಮ ಕೆಲಸದಲ್ಲಿ ಅದ್ಭುತವಾದ ಅಭಿವೃದ್ಧಿಯನ್ನು ಈ ವಾರ ಪಡೆಯಲಿದ್ದೀರಿ

ಇನ್ನು ರವಿಯ ಜೊತೆ ಅಷ್ಟಮ ಸ್ಥಾನದಲ್ಲಿ ಬುಧ ಇರುವುದರಿಂದ ಕೊನೆಯ ಕ್ಷಣದಲ್ಲಿ ನೀವು ಮಾಡಿದ ಎಲ್ಲಾ ಪ್ರಯತ್ನಗಳಿಗೂ ತೊಂದರೆ ಉಂಟಾಗಬಹುದು ಇದಕ್ಕೆ ಬುದನಿಗೆ ಪರಿಹಾರ ಮಾಡಿಕೊಳ್ಳಬೇಕು ಬುಧನ ಅಧಿದೇವತೆಯಾದ ಮಹಾ ವಿಷ್ಣು ಅನ್ನೋ ಆರಾಧಿಸುವುದರಿಂದ ಇದಕ್ಕೆ ಪರಿಹಾರ ಪಡೆಯಬಹುದು ಮನೆ ಅಥವಾ ಆಸ್ತಿ ವಿಚಾರದಲ್ಲಿ ಸ್ವಲ್ಪ ಓಡಾಟ ಜಾಸ್ತಿ ಆಗಬಹುದು.

ಕುಂಭ ರಾಶಿಯವರಿಗೆ ರಾಶ್ಯಾಧಿಪತಿಯಾಗಿರುವಂತಹ ಶನಿ ವ್ಯಯಸ್ಥಾನದಲ್ಲಿ ಕುಳಿತಿದ್ದಾನೆ ಆದರೆ ಇತರ ರಾಶಿಗಳಿಂದ ನಿಮಗೆ ಲಾಭಗಳು ದೊರೆಯುವ ಸಾಧ್ಯತೆಗಳು ಇವೆ ಈ ಸಮಯದಲ್ಲಿ ಶನಿಯು ಬಿಡುವಿಲ್ಲದೆ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿ ಪೂರ್ಣಗೊಳಿಸುತ್ತಾನೆ ಹಾಗೆ ನಿಮ್ಮ ಲಾಭದಲ್ಲಿ ರವಿ ಮತ್ತು ಬುಧ ಇರುವುದರಿಂದ ಬುದ್ಧಿವಂತಿಕೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತೀರಿ ಸ್ವಂತ ಉದ್ಯೋಗಿಗಳಿಗೆ ಆದಾಯವು ಚೆನ್ನಾಗಿರುತ್ತದೆ

ಖಾಸಗಿ ನೌಕರರಿಗೆ ಈ ವಾರ ಸಾಧಾರಣವಾಗಿದೆ ಸರ್ಕಾರಿ ಉದ್ಯೋಗಿಗಳಿಗೆ ಈ ವಾರ ಬಹಳ ಉತ್ತಮವಾಗಿದೆ ಭೂಮಿಯ ವಿಚಾರದಲ್ಲಿ ಯಾವುದಾದರೂ ಓಡಾಟದಲ್ಲಿದ್ದರೆ ಆದ ಕಾರ್ಯ ಕೂಡ ಯಶಸ್ಸನ್ನು ಕಾಣುತ್ತದೆ ಆದರೆ ಶನಿಯು 12ನೇ ಮನೆಯಲ್ಲಿ ಇರುವುದರಿಂದ ಕಾಲು ನೋವು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಈ ವಾರದಲ್ಲಿ ಕಪ್ಪು ಎಳ್ಳು ಅಥವಾ ಎಳ್ಳೆಣ್ಣೆಯನ್ನು ದೇವಸ್ಥಾನಕ್ಕೆ ಕೊಟ್ಟು ಆರಾಧನೆಯನ್ನು ಮಾಡುವುದರಿಂದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಮೀನ ರಾಶಿಯವರ ರಾಶಿಯಾಧಿಪತಿ ನಿಮ್ಮ ರಾಶಿಯಲ್ಲಿಯೇ ಇದ್ದಾನೆ ಹಾಗಾಗಿ ಧನ ಸ್ಥಾನಕ್ಕೆ ರಾಹು ಬಂದಾಗಿನಿಂದ ಹಣಕಾಸಿನ ವಿಚಾರದಲ್ಲಿ ಕುಟುಂಬದ ವಿಚಾರದಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಲು ನಿಮ್ಮ ರಾಶಿಯಲ್ಲಿರುವ ಗುರು ನಿಮ್ಮ ಬೆನ್ನೆಲುಬಾಗಿ ನಿಂತಿರುತ್ತಾನೆ

ಕೆಲಸದ ವಿಚಾರದಲ್ಲಿ ಬದಲಾವಣೆ ಹೊಂದಲು ಬಯಸಿದ್ದಲ್ಲಿ ಈ ವಾರ ಉತ್ತಮವಾಗಿದೆ ಲಾಭದಲ್ಲಿರುವ ಶನಿಯು ಸ್ಥಿರವಾದ ಲಾಭವನ್ನು ಕೊಡುತ್ತಾನೆ ಬಂದು ಮಿತ್ರರ ಭೇಟಿ ನಿಮ್ಮ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗದಲ್ಲಿರುವ ಈ ವಾರ ತುಂಬಾ ಚೆನ್ನಾಗಿದೆ ಮೀನ ರಾಶಿಯವರಿಗೆ ಈ ವಾರ ಸಾಮಾನ್ಯವಾಗಿರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: