ಬಿಗ್ಬಾಸ್ ಮನೆಯಲ್ಲಿ ಅನೇಕ ಸ್ಪರ್ಧಿಗಳು ಇದ್ದಾರೆ. ಈಗ ಬಿಗ್ಬಾಸ್ ಏಳು ಸೀಸನ್ ಗಳು ಮುಗಿದಿವೆ. ಹಾಗೆಯೇ ಈಗ ಕಲರ್ಸ್ ಕನ್ನಡದಲ್ಲಿ ಎಂಟನೇ ಸೀಸನ್ ನಡೆಯುತ್ತಿದೆ. ಇದರಲ್ಲಿ ಅನೇಕ ಸ್ಪರ್ಧಿಗಳು ಹೊರ ಹೋಗಿದ್ದಾರೆ. ಹಾಗೆಯೇ ಅನೇಕ ಸ್ಪರ್ಧಿಗಳು ಇದ್ದಾರೆ. ಅವರಲ್ಲಿ ಇರುವವರು ಬೇರೆ ಬೇರೆ ರೀತಿಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ನಾವು ಇಲ್ಲಿ ಬಿಗ್ಬಾಸ್ ಮನೆಯ ಸ್ಪರ್ಧಿಗಳ ಆದಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಶಮಂತ್ ಅವರು ಟಿಕ್ ಟಾಕ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಹೆಸರನ್ನು ಮಾಡಿದ್ದರು. ಇವರು ತಿಂಗಳಿಗೆ 30,000 ದಿಂದ 40,000 ಆದಾಯ ಗಳಿಸುತ್ತಿದ್ದರು. ಹಾಗೆಯೇ ವರ್ಷಕ್ಕೆ 8 ಲಕ್ಷದಿಂದ 9 ಲಕ್ಷದಷ್ಟು ಆದಾಯವನ್ನು ಗಳಿಸುತ್ತಿದ್ದರು. ಹಾಗೆಯೇ ರಘು ಅವರು ರಘು ವೈನ್ ಸ್ಟೋರ್ ಎನ್ನುವ ಯೂಟ್ಯೂಬ್ ಚಾನಲ್ ನ್ನು ಆರಂಭಿಸಿದ್ದರು. ಇದರಿಂದ ಇವರು 15 ಲಕ್ಷದಿಂದ 20 ಲಕ್ಷದವರೆಗೆ ಆದಾಯವನ್ನು ಗಳಿಸಿದ್ದಾರೆ. ಬೈಕರ್ ಅರವಿಂದ್ ಕೆ.ಪಿ. ಅವರು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹಾಗೆಯೇ ಇವರು 40ಲಕ್ಷದಿಂದ 50ಲಕ್ಷದವರೆಗೆ ಸಂಪಾದನೆ ಮಾಡಿದ್ದಾರೆ.

ಸಾಮಾಜಿಕ ಸೇವಕ ಆದ ಚಕ್ರವರ್ತಿ ಚಂದ್ರಚೂಡಾ ಅವರು ಸಿನೆಮಾ ಕ್ಷೇತ್ರದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಒಂದರಿಂದ ಎರಡು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹುಲಿರಾಯ ಖ್ಯಾತಿಯ ದಿವ್ಯಾ ಉರುಡುಗ ಅವರು ಹಲವಾರು ಧಾರಾವಾಹಿ ಮತ್ತು ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ. ಇದರಿಂದ 50 ಲಕ್ಷದಿಂದ 60 ಲಕ್ಷದಷ್ಟು ಸಂಪಾದನೆ ಮಾಡಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು ಸಾಮಾಜಿಕ ಹೋರಾಟಗಾರ ಆಗಿದ್ದಾರೆ. ಹಾಗೆಯೇ ತಮ್ಮದೇ ಆದ ಬಿಸನೆಸ್ ಹೊಂದಿದ್ದಾರೆ. ಸುಮಾರು 5 ಕೋಟಿಯಿಂದ 6 ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ. ಹಾಗೆಯೇ ರಾಜೀವ್ ಅವರು ಸುಮಾರು 2 ಕೋಟಿಯಿಂದ 3 ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ.

ಹಾಗೆಯೇ ದಿವ್ಯಾ ಸುರೇಶ್ ಅವರು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಸಿನೆಮಾಗಳಲ್ಲಿ ನಟಿಸಿದ್ದಾರೆ. ಸುಮಾರು 1 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಮಂಜು ಪಾವಗಡ ಅವರು ಮಜಾಭಾರತದ ಮೂಲಕ ಹೆಸರು ಮಾಡಿದ್ದಾರೆ. ದಾಸಪ್ಪ ಎಂಬ ಸಿನೆಮಾದಲ್ಲಿ ನಟಿಸಿ ಸುಮಾರು 30ಲಕ್ಷದಿಂದ 40ಲಕ್ಷ ಸಂಪಾದನೆ ಮಾಡಿದ್ದಾರೆ. ಶುಭಾ ಪೂಂಜಾ ಅವರು ಸತತ 7 ವರ್ಷಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯವಾಗಿ ಇದ್ದಾರೆ. ಸುಮಾರು 6 ಕೋಟಿಯಿಂದ 7 ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ. ಪಂಚರಂಗಿ ಬೆಡಗಿ ಎಂದು ಹೆಸರಿಸಿಕೊಂಡ ನಿಧಿ ಸುಬ್ಬಯ್ಯ ಅವರು 4 ಕೋಟಿಯಿಂದ 5 ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!
Footer code: