ಈ ಬಾರಿಯ ಐಪಿಎಲ್ ನಲ್ಲಿ RCB ತಂಡದ ಹೊಸ ಕ್ಯಾಪ್ಟನ್ ಯಾರು ಗೊತ್ತೇ ಗೆಸ್ ಮಾಡಿ

0

ಕ್ರಿಕೆಟ್ ಪ್ರೇಮಿಗಳಿಗೆ ಕಡಿಮೆ ಇಲ್ಲ, ಪ್ರತಿಯೊಂದು ಮನೆಯಲ್ಲಿ ಒಬ್ಬರಾದರು ಕ್ರಿಕೆಟ್ ಪ್ರೇಮಿ ಇರುತ್ತಾರೆ. ನಮ್ಮ ಕರ್ನಾಟಕ ತಂಡ ಆರ್ ಸಿಬಿ ತಂಡದ ಅಭಿಮಾನಿಗಳು ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ಸಿಗುತ್ತಾರೆ. ಬಹಳ ಇಂಟರೆಸ್ಟಿಂಗ್ ವಿಷಯ ಆರ್ ಸಿಬಿ ತಂಡದ ನಾಯಕ ಯಾರಾಗುತ್ತಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಐಪಿಎಲ್ 2022 ವೇಳಾಪಟ್ಟಿ ಈಗಾಗಲೆ ಪ್ರಕಟಗೊಂಡಿದೆ ಆದರೆ ಆರ್​ಸಿಬಿ ತಂಡದ ನಾಯಕ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ಪ್ರಶ್ನೆಗೆ ಇದೀಗ ಉತ್ತರ ಸಿಗುವ ಸಾಧ್ಯತೆ ಇದೆ. ಆರ್​​ಸಿಬಿ ತಂಡದ ನಾಯಕನ ಹೆಸರು ಸದ್ಯದಲ್ಲಿ ಘೋಷಣೆ ಆಗಲಿದೆ ಎಂದು ಹೇಳಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೆ ಐಪಿಎಲ್ 2022 ಫೀವರ್ ಶುರುವಾಗಿದ್ದು ಭಾನುವಾರವಷ್ಟೆ ಬಿಸಿಸಿಐ ವೇಳಾಪಟ್ಟಿ ಕೂಡ ಪ್ರಕಟ ಮಾಡಿದೆ. ಇದರ ಪ್ರಕಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇ ಆಫ್ ಪಂದ್ಯಗಳನ್ನು ಆಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 27 ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಶುರು ಮಾಡಲಿದೆ. ಆರ್ ಸಿಬಿ ತಂಡದ ನಾಯಕ ಯಾರು ಎಂಬುದು ಇನ್ನು ಬಹಿರಂಗವಾಗಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆ ಇದೆ. ಆರ್​​ ಸಿಬಿ ತಂಡದ ನೂತನ ಸಾರಥಿಯ ಹೆಸರು ಶೀಘ್ರದಲ್ಲೆ ಘೋಷಣೆ ಆಗಲಿದೆ ಎಂದು ಖಾಸಗಿ ವೆಬ್​ಸೈಟ್​ವೊಂದು ವರದಿ ಮಾಡಿದೆ. ಈಗಾಗಲೆ ಎಲ್ಲ 9 ತಂಡಗಳ ನಾಯಕ ಯಾರು ಎಂಬುದು ತಿಳಿದಿದೆ ಆದರೆ ಆರ್ ಸಿಬಿ ಮಾತ್ರ ಹೆಸರು ಪ್ರಕಟಿಸಲು ದಿನವನ್ನು ಮುಂದೂಡುತ್ತಲೆ ಬರುತ್ತಿತ್ತು ಆದರೆ ಈಗ ಇದಕ್ಕೆ ಸೂಕ್ತ ಸಮಯ ಬಂದಿದ್ದು ಸೋಮವಾರದಂದು ಆರ್​ಸಿಬಿ ಹೊಸ ನಾಯಕ ಹೆಸರು ರಿವೀಲ್ ಆಗಲಿದೆಯಂತೆ ಅಲ್ಲದೆ ಹೊಸ ಕ್ಯಾಪ್ಟನ್ ಯಾರು ಇರಬಹುದು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ.

ವರದಿಯ ಪ್ರಕಾರ ಶಾಕಿಂಗ್ ಎಂಬಂತೆ ಆರ್​ಸಿಬಿ ತಂಡದ ಹೊಸ ನಾಯಕನಾಗಿ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ. ಇವರ ಹೆಸರನ್ನು ಘೋಷಣೆ ಮಾಡಲು ಮಾತ್ರ ಫ್ರಾಂಚೈಸಿ ಬಾಕಿ ಉಳಿದಿದೆ ಎನ್ನಲಾಗಿದೆ. ಪ್ರಮುಖವಾಗಿ ಗ್ಲೆನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡುಪ್ಲೆಸಿಸ್ ಅವರುಗಳ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು. ಕಾರ್ತಿಕ್ ನಾಯಕ ಆಗುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಯಾಕೆಂದರೆ ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ಕಾರ್ತಿಕ್ ನಾಯಕನಾಗಿ ಸತತ ಸೋಲಿನ ರುಚಿ ಕಂಡಿದ್ದರು. ಇದೀಗ ಶಾಕಿಂಗ್ ಎಂಬಂತೆ ಆರ್​ಸಿಬಿ ನೂತನ ನಾಯಕ ದಿನೇಶ್ ಕಾರ್ತಿಕ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಐಪಿಎಲ್ 2022 ಮೆಗಾ ಹರಾಜಿನಲ್ಲಿ ಕಾರ್ತಿಕ್ ಅವರನ್ನು ಆರ್​​ಸಿಬಿ ಫ್ರಾಂಚೈಸಿ 5.50 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಐಪಿಎಲ್ ಆರಂಭವಾದ 2008 ರಿಂದಲೂ ಕಾರ್ತಿಕ್ ಈ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2008 ರಿಂದ 10ರ ವರೆಗೆ ಡೆಲ್ಲಿ ಡೇರ್ ಡೆವಿಲ್ಸ್, 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, 2012 ಮತ್ತು 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ನಂತರ 2014 ರಲ್ಲಿ ಇವರನ್ನು ಡೆಲ್ಲಿ ಮತ್ತೊಮ್ಮೆ ಖರೀದಿ ಮಾಡಿದರು. 2015 ರಲ್ಲಿ ಆರ್​ಸಿಬಿ ಪರ ಕೂಡ ಕಣಕ್ಕಿಳಿದಿದ್ದರು.

2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. 2018 ರಲ್ಲಿ ಕೋಲ್ಕತ್ತಾ ಸೇರಿದ ಇವರು 2021ರವರೆಗೆ ಉಳಿಸಿಕೊಂಡಿತ್ತು. ಕಳೆದ ಐಪಿಎಲ್ 2021 ರಲ್ಲಿ ಕಾರ್ತಿಕ್ ಆಡಿದ 17 ಪಂದ್ಯಗಳಲ್ಲಿ 223 ರನ್ ಗಳಿಸಿದ್ದರು. ಒಟ್ಟಾರೆಯಾಗಿ ಇವರು 213 ಐಪಿಎಲ್ ಪಂದ್ಯಗಳನ್ನು ಆಡಿದ್ದು 19 ಅರ್ಧಶತಕ ಬಾರಿಸಿ 4046 ರನ್ ಗಳಿಸಿದ್ದರು. ದಿನೇಶ್ ಕಾರ್ತಿಕ್​ಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅಪಾರ ಅನುಭವವಿದೆ. ಇತ್ತ ಡುಪ್ಲೆಸಿಸ್ ಮತ್ತು ಮ್ಯಾಕ್ಸ್​ವೆಲ್ ಅವರಿಗೂ ನಾಯಕನಾಗುವ ಅರ್ಹತೆ ಇದೆ ಆದರೆ ಇವರು ಐಪಿಎಲ್ 2022 ಆರಂಭದ ಕೆಲವು ಪಂದ್ಯಗಳಿಗೆ ಇವರು ಅಲಭ್ಯರಾಗಿದ್ದಾರೆ. ಮ್ಯಾಕ್ಸ್​ವೆಲ್ ಅವರ ವಿವಾಹ ಇರುವ ಕಾರಣ ಇವರು ಏಪ್ರಿಲ್ 6ರ ನಂತರ ಆರ್​ಸಿಬಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಕೇಳಿಬರುತ್ತದೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ನಾಯಕತ್ವದ ಜವಾಬ್ದಾರಿ ಫಾಫ್‌ ಡುಪ್ಲೆಸಿಸ್ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ.

Leave A Reply

Your email address will not be published.

error: Content is protected !!