ಈ ದೇವಸ್ಥಾನ ಕಟ್ಟಲು ಎಷ್ಟು KG ಚಿನ್ನ ಬಳಸಿದ್ದಾರೆ ಗೊತ್ತೆ, ನಿಜಕ್ಕೂ ಶಾ’ಕಿಂಗ್ ಅನ್ಸತ್ತೆ

0

ನಾವು – ನೀವು ಸಾಕಷ್ಟು ಮಂದಿರಗಳ ಇತಿಹಾಸದ ಕುರಿತು ಕೇಳಿದ್ದೇವೆ , ಸಾಕಷ್ಟು ದೇವಸ್ಥಾನಗಳನ್ನು ಸುತ್ತಿ ಕೂಡ ನೋಡಿದ್ದೀವಿ ಆ ದೇವಾಲಯಗಳ ಬಗ್ಗೆ ತಿಳಿದುಕೊಂಡಿದ್ದೇವೆ. ನಮಗೆ ತಿಳಿದಿರುವ ಪ್ರಕಾರ ಸಾಕಷ್ಟು ದೇವಾಲಯಗಳು ನಿರ್ಮಾಣ ಹೊಂದಿರುವುದು ಕಲ್ಲಿನಿಂದ , ಆದರೆ ಇಲ್ಲಿ ಒಂದು ದೇವಾಲಯವನ್ನು ಚಿನ್ನದಿಂದ ನಿರ್ಮಿಸಲ್ಪಟ್ಟಿದೆ. ಹಾಗಾದ್ರೆ ಆ ದೇವಾಲಯ ಯಾವುದು.ಎಲ್ಲಿದೆ ಹಾಗೂ ಆ ದೇವಸ್ಥಾನವನ್ನು ನಿರ್ಮಿಸಲು ಎಷ್ಟು ಕೆಜಿ ಚಿನ್ನವನ್ನು ಬಳಸಲಾಗಿದೆ ಎಂಬುದರ ಕುರಿತು ನಮ್ಮ ಈ ಲೇಖನದಲ್ಲಿ ನೋಡೋಣ ಬನ್ನಿ.

ವೆಲ್ಲೂರು ಶ್ರೀ ಪುರಂ ಗೋಲ್ಡನ್ ಟೆಂಪಲ್ ತಮಿಳು ರಾಜ್ಯದ ವೆಲ್ಲೂರು ನಲ್ಲಿದೆ. ಇದು ಲಕ್ಷ್ಮೀದೇವಿಗೆ ಅರ್ಪಿತವಾದ ಮಹತ್ವರವಾದ ದೇವಾಲಯವಾಗಿದೆ. ಅಷ್ಟೇ ಅಲ್ಲದೆ ಅದು ಭಾರತದಲ್ಲೇ ಅತ್ಯಂತ ವಿಭಿನ್ನವಾದ ವಿಶಿಷ್ಟವಾದ ಹಾಗೂ ವಿಶೇಷ ಸ್ಥಾನವನ್ನು ಕೂಡ ಹೊಂದಿದೆ. ಶ್ರೀ ಪುರಂ ಗೋಲ್ಡನ್ ಟೆಂಪಲ್ ಮಲೈಕೊಡಿ ಎಂಬ ಬೆಟ್ಟದ ತಪ್ಪಲಿನಲ್ಲಿ ಸ್ಥಿರವಾಗಿ ನೆಲೆಸಿದೆ. ಈ ದೇವಾಲಯದಲ್ಲಿ ಲಕ್ಷ್ಮಯ ಆರಾಧನೆ ದಿನವೂ ಸೊಗಸಾಗಿ ಕಣ್ಣಿಗೆ ಹಬ್ಬದಂತೆ ನಡೆಯುತ್ತದೆ . ಇಲ್ಲಿ ಲಕ್ಷ್ಮೀದೇವಿಯನ್ನು ಶ್ರೀ ಲಕ್ಷ್ಮೀ ನಾರಾಯಣಿ ಎಂಬ ಹೆಸರಿನಿಂದ ಕರೆಯುತ್ತಾರೆ. ದೇವಾಲಯದ ಗೋಪುರ ಹಾಗೂ ಅರ್ಧ ಮಂಟಪವನ್ನು ಚಿನ್ನದಿಂದ ನಿರ್ಮಿಸಲಾಗಿರುವುದೇ ಇಲ್ಲಿನ ವಿಶೇಷವಾಗಿದೆ.

ದೇವಾಲಯದ ಆವರಣವು ಸುಮಾರು 100 ಎಕ್ಕರೆ ಪ್ರದೇಶದಲ್ಲಿ ಅರಡಿಕೊಂಡು ವಿಸ್ತಾರವಾಗಿದ್ದು ,ಅಷ್ಟೇ ಅಲ್ಲದೆ ಈ ದೇವಾಲಯವು ಶ್ರೀ ಚಕ್ರವನ್ನು ಪ್ರತಿನಿಧಿಸುವ ನಕ್ಷತ್ರದ ಆಕಾರವನ್ನು ಹೊಂದಿದೆ . ಪಾಲರ್ ನದಿಯ ತೀರದಲ್ಲಿ ಇರುವ ಈ ದೇವಾಲಯವು ಪ್ರೇಕ್ಷಣೀಯ ಸ್ಥಳ ಕೂಡ ಆಗಿದೆ. ವೆಲ್ಲೂರು ಬೆಂಗಳೂರಿನಿಂದ ನಾಲ್ಕು ಗಂಟೆಯ ಪ್ರಯಾಣವಾಗಿದೆ. ಬೆಂಗಳೂರಿನಿಂದ ವೆಲ್ಲೂರಿಗೆ ಹೋಗಲು ಎರಡು ಮಾರ್ಗಗಳಿವೆ.ಒಂದು 224 ಕಿಲೋ ಮೀಟರ್ ಇದ್ದು ಬೆಂಗಳೂರು – ಹೊಸೂರು – ಅಂಬುರ್ ಕಡೆಯಿಂದ ಹೋಗಬಹುದು. ಮತ್ತೊಂದು 209 ಕಿಲೋ ಮೀಟರ್ ಇದ್ದು ಬೆಂಗಳೂರು – ಕೋಲಾರ – ಮುಳಬಾಗಿಲು ಕಡೆಯಿಂದ ಹೋಗಬಹುದು.

ತಮಿಳುನಾಡಿನ ರಾಜಧಾನಿ ಎನಿಸಿಕೊಂಡಿರುವ ಚೆನ್ನೈ ಇಂದ 145 ಕಿಲೋ ಮೀಟರ್ ದೂರದಲ್ಲಿದೆ. ಈ ವೆಲ್ಲೂರು ನಗರವನ್ನು ಬಲ್ಲವರು ,ವಿಜಯನಗರದ ಅರಸರು , ರಾಷ್ಟ್ರಕೂಟರು ಹಾಗೂ ವಿಜಯನಗರದ ಅರಸರು , ರಾಷ್ಟ್ರಕೂಟರು ಹಾಗೂ ಬ್ರಿಟೀಷ್ ನವರು ಆಳ್ವಿಕೆ ನಡೆಸಿದರು. ಈ ದೇವಸ್ಥಾನದ ಗೋಪುರ ನಿರ್ಮಾಣಕ್ಕಾಗಿ 1500 ಕೆಜಿ ಚಿನ್ನವನ್ನು ಬಳಸಲಾಗಿದೆ. ಆ ದೇವಸ್ಥಾನದ ಅಕ್ಕ – ಪಕ್ಕ ನೋಡಬಹುದಾದಂತ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಕೂಡ ಇವೆ. ವೆಲ್ಲೂರು ಕೋಟೆ . ಈ ಕೋಟೆಯು ನಮ್ಮ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಈ ಕೋಟೆಯಂತಹ ಮತ್ತೊಂದು ಕೋಟೆಯಿಲ್ಲವೆಂದು ಬ್ರಿಟಿಷರಿಂದ ಪ್ರಶಂಸೆಗೆ ಪಾತ್ರವಾಯಿತು.ಜಲಕಂಟೇಶ್ವರ ದೇವಾಲಯ ಈ ದೇವಾಲಯವು ಪ್ರಮುಖ ಆಕರ್ಷಣಾ ದೇವಾಲಯವಾಗಿದ್ದು ಇಲ್ಲಿ ಶಿವನನ್ನುಪೂಜಿಸಲಾಗುತ್ತದೆ. ಹಾಗೆ ಮತ್ತೊಂದು ಸ್ಥಳ ಬಲಮಠಿ ಹಿಲ್ಸ್ ನೋಡಿಕೊಂಡು ಆ ಲಕ್ಷ್ಮೀ ನಾರಾಯಣಿ ಕೃಪೆಗೆ ಪಾತ್ರರಾಗಿ..

Leave A Reply

Your email address will not be published.

error: Content is protected !!