WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಎಲ್ಲರಲ್ಲಿಯೂ ಸಹ ಸುಸ್ತು ನಿಶಕ್ತಿ ಹಾಗೂ ಆಲಸ್ಯ ಹೀಗೆ ಮುಂತಾದ ಸಮಸ್ಯೆ ಕಾಡುತ್ತಿದೆ ಇದರಿಂದ ನಮ್ಮ ಆರೋಗ್ಯದ ಮೇಲೆ ಸಹ ಪರಿಣಾಮ ಬೀಳುತ್ತಿದೆ ಹಾಗಾಗಿ ಈ ಸಮಸ್ಯೆಯಿಂದ ಹೊರಗೆ ಬರಲು ಎಲ್ಲರೂ ಪ್ರತಿದಿನ ಪ್ರಯತ್ನಿಸುತ್ತಾರೆ ಮೊಳಕೆ ಕಾಳು ಅಥವಾ ಧಾನ್ಯಗಳು ಮೊಳಕೆಯೊಡದ ನಂತರದ ಸಂದರ್ಭದಲ್ಲಿ ಅವುಗಳಲ್ಲಿನ ಪೌಷ್ಟಿಕಾಂಶಗಳ ಪ್ರಮಾಣ ದುಪ್ಪಟ್ಟಾಗುತ್ತದೆ ಹೀಗಾಗಿ ಇವು ಪ್ರೊಟೀನ್ ಮೆಗ್ನೇಶಿಯಂ ಫಾಸ್ಫರಸ್ ಮ್ಯಾಂಗನೀಸ್ ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಗಳಿಂದ ಸಮೃದ್ಧವಾಗಿರುತ್ತದೆ ಮೊಳಕೆಯೊಡುವುದರಿಂದ ಕಾಳಿನಲ್ಲಿನ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಬೆಲ್ಲದಲ್ಲಿಯು ಸಹ ಕಬ್ಬಿಣಾಂಶ ಹೇರಳವಾಗಿ ಇರುತ್ತದೆ.

ಬೆಲ್ಲ ಮತ್ತು ಮೊಳಕೆ ಒಡೆದ ಕಡಲೆ ಕಾಳನ್ನು ಸೇವಿಸುವುದು ತುಂಬಾ ಒಳ್ಳೆಯದು ಹಾಗಾಗಿ ಪ್ರತಿದಿನ ಬೆಲ್ಲ ಮತ್ತು ಮೊಳಕೆ ಕಡಲೆ ಕಾಳನ್ನು ಸೇವನೆಯಿಂದ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ ಹಾಗೆಯೆ ನಮ್ಮ ಶರೀರ ಬಲಗೊಳ್ಳುತ್ತದೆ ಮತ್ತು ನಿತ್ರಾಣ ದೂರವಾಗಿ ದೇಹ ಅನೇಕ ರೋಗಗಳಿಂದ ಮುಕ್ತಿ ಪಡೆಯುತ್ತದೆ ನಾವು ಈ ಲೇಖನದ ಮೂಲಕ ಬೆಲ್ಲ ಮತ್ತು ಮೊಳಕೆ ಒಡೆದ ಕಾಳಿನ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ರಕ್ತದ ಒತ್ತಡ ಸುಸ್ತು ನಿಶಕ್ತಿ ಯಾವುದೇ ಕೆಲಸದಲ್ಲಿ ಆಲಸ್ಯ ಯಾವಾಗಲೂ ಮಂಕಾಗಿ ಇರುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಜನರನ್ನು ಕಾಡುತ್ತಿದೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಈ ಸಮಸ್ಯೆ ಕಂಡು ಬರುತ್ತಿದೆ ಆದರೆ ಹಿಂದಿನ ಕಾಲದವರಿಗೆ ಈ ರೀತಿಯ ಸಮಸ್ಯೆ ಇರುತ್ತಿರಲಿಲ್ಲ ಆದರೆ ಇಂದಿನ ದಿನಮಾನದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಲ್ಲಿ ಸಹ ಈ ಸಮಸ್ಯೆ ಕಂಡು ಬರುತ್ತಿದೆ ನಾವು ಸೇವಿಸುವ ಆಹಾರ ಸಹ ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಮೊಳಕೆ ಒಡೆದ ಕಾಳುಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೊಳಕೆ ಒಡೆದ ಕಾಳಿನಲ್ಲಿ ತುಂಬಾ ವಿಟಮಿನ್ಸ್ ಗಳು ಇರುತ್ತದೆ ಹಾಗೆಯೇ ಬೆಲ್ಲದಲ್ಲಿ ಸಹ ಪೌಷ್ಟಿಕ ಗುಣ ಇರುತ್ತದೆ ಹಿಂದಿನ ಕಾಲದಿಂದಲೂ ಸಹ ಬೆಲ್ಲವನ್ನು ಹೆಚ್ಚು ಅಡುಗೆಯಲ್ಲಿ ಬಳಸುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಬೆಲ್ಲವನ್ನು ಕಡಿಮೆ ಬಳಸುತ್ತಾರೆ ಮೊಳಕೆ ಒಡೆದ ಕಡಲೆ ಕಾಳು ಹಾಗೂ ಬೆಲ್ಲವನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳು ದೊರೆಯುತ್ತದೆ ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ದೊರೆಯುತ್ತದೆ.

ಕಡಲೆ ಕಾಳಿನಲ್ಲಿ ಪ್ರೊಟೀನ್ ಮ್ಯಾಂಗನೀಸ್ ಮೆಗ್ನೀಷಿಯಂ ಸತು ಕಬ್ಬಿಣ ವಿಟಮಿನ್ ಬಿ ಹಾಗೂ ಎ ಈ ಅಂಶ ಇರುತ್ತದೆ ಹಾಗೆಯೇ ಬೆಲ್ಲದಲ್ಲಿ ಕಬ್ಬಿಣ ಮೆಗ್ನೀಷಿಯಂ ಕ್ಯಾಲ್ಸಿಯಂ ತಾಮ್ರ ಸತು ವಿಟಮಿನ್ ಗಳು ಸಮೃದ್ಧವಾಗಿ ಸಿಗುತ್ತದೆ ಮೊಳಕೆ ಒಡೆದ ಕಡಲೆ ಕಾಳು ಹಾಗೂ ಬೆಲ್ಲವನ್ನು ಒಟ್ಟಿಗೆ ಸೇರಿಸಿ ತಿನ್ನುದರಿಂದ ಗಂಭೀರ ಖಾಯಿಲೆಗಳನ್ನು ದೂರ ಇಡಬಹುದು ಅನೇಕ ಆರೋಗ್ಯ ಚಿಕಿತ್ಸೆಯಲ್ಲಿ ಸಹ ಪರಿಣಾಮಕಾರಿಯಾಗಿದೆ ಮೊಳಕೆ ಒಡೆದ ಕಡಲೆ ಕಾಳು ಬೆಲ್ಲವನ್ನು ಸೇವಿಸುವ ಮೂಲಕ ಜೀರ್ಣಿಸಿಕೊಳ್ಳಲು ಸಹಾಯಕವಾಗಿದೆ.

ಪೌಷ್ಠಿಕಾಂಶವನ್ನು ಹೀರಿಕೊಳ್ಳಲು ಸಹಾಯಕವಾಗಿದೆ ಮೊಳಕೆ ಒಡೆದ ಕಾಳು ಹಾಗೂ ಬೆಲ್ಲ ತುಂಬಾ ಪ್ರಯೋಜನಕಾರಿಯಾಗಿದೆ ಅದರಲ್ಲಿ ಸಹ ದೇಹದಲ್ಲಿನ ರಕ್ತ ಹೀನತೆಯ ಕೊರತೆಯಲ್ಲಿ ಚಿಕಿತ್ಸೆಯಲ್ಲಿ ಸಹ ಮೊಳಕೆ ಒಡೆದ ಕಾಳನ್ನು ಮತ್ತು ಬೆಲ್ಲದ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ ಇವೆರಡರಲ್ಲಿ ಕಬ್ಬಿಣಾಂಶ ಅಧಿಕವಾಗಿ ಇರುತ್ತದೆ ಇದು ರಕ್ತದಲ್ಲಿ ಆಮ್ಲಜನಕ ಹಾಗೂ ಕೆಂಪು ರಕ್ತ ಕಣವನ್ನು ಹೆಚ್ಚಿಸಲು ಸಹಾಯಕವಾಗಿದೆ .

ರಕ್ತ ಹೀನತೆಯ ಕೊರತೆಯನ್ನು ನಿವಾರಿಸುವ ಜೊತೆಗೆ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮೊಳಕೆ ಕಾಳು ಮತ್ತು ಬೆಲ್ಲದಲ್ಲಿ ಮೆಗ್ನೀಷಿಯಂ ಕಬ್ಬಿಣ ಸತು ಅಂತಹ ಪೋಷಕಾಂಶಗಳು ಇರುತ್ತದೆ ಇದರಿಂದ ಬಿ ಪಿ ಯನ್ನು ನಿಯಂತ್ರಿಸುತ್ತದೆ ಹೃದಯ ಅಪಘಾತ ಪಾರ್ಶ್ವ ವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಮೊಳಕೆ ಕಾಳಿನಲ್ಲಿ ಫೈಬರ್ ಸಂವೃದ್ದವಾಗಿ ಇರುತ್ತದೆ ಇದರಿಂದಾಗಿ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಚಯಾಪಚಯವನ್ನು ಹೆಚ್ಚಿಸುತ್ತದೆ ಗ್ಯಾಸ್ ಮಲಬದ್ದತೆ ಅಜೀರ್ಣ ಹಾಗೂ ಹೊಟ್ಟೆ ಉಬ್ಬುವುದು ಮುಂತಾದ ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ

ಕಡಲೆ ಕಾಳು ಮತ್ತು ಬೆಲ್ಲ ರಕ್ತದ ಕೊರತೆಯನ್ನು ಹೋಗಲಾಡಿಸುವುದರ ಜೊತೆಗೆ ದೈಹಿಕ ಆಯಾಸ ಮತ್ತು ದೌರ್ಬಲ್ಯವನ್ನು ದೂರ ಮಾಡುತ್ತದೆ ಹಾಗೆಯೇ ನಮ್ಮ ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ ಪ್ರತಿದಿನ ಮೊಳಕೆ ಕಾಳು ಹಾಗೂ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಹಲ್ಲು ಮತ್ತು ಮೂಳೆಯನ್ನು ಬಲ ಪಡಿಸುತ್ತದೆ ಕ್ಯಾಲ್ಸಿಯಂ ಅನ್ನು ಸಂವೃದ್ದ ಗೊಳಿಸುತ್ತದೆ ಇವೆರಡನ್ನೂ ಜೊತೆಯಾಗಿ ಸೇವಿಸುವುದರಿಂದ ಮೂಳೆ ಮುರಿತ ಕೀಲು ನೋವು ಹಲ್ಲು ನೋವು ಸಮಸ್ಯೆಯನ್ನು ಹೋಗಲಾಡಿಸುತ್ತದೆ ಹೀಗೆ ಮೊಳಕೆ ಕಾಳು ಮತ್ತು ಬೆಲ್ಲ ಸೇವನೆ ಮಾಡುವ ಮೂಲಕ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶ ದೊರಕುತ್ತದೆ ಅಷ್ಟೇ ಅಲ್ಲದೆ ದೇಹಕ್ಕೆ ಶಕ್ತಿ ನೀಡಿದಂತೆ ಆಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: