ಇವರಲ್ಲಿ ನಂಬರ್ 1 ಶ್ರೀಮಂತ ಯಾರು ನೋಡಿ

0

ನಮ್ಮ ಕನ್ನಡ ಚಿತ್ರರಂಗದಲ್ಲಿ ಯಶ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಗಣೇಶ್, ಉಪೇಂದ್ರ ಹೀಗೆ ಅನೇಕ ಸ್ಟಾರ್ ನಟರಿದ್ದು, ಅತಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಯಾವ ನಟ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ, ಅವರ ಆಸ್ತಿಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳು ತೆರೆಗೆ ಬರಲು ರೆಡಿ ಆಗಿದ್ದು, ಐದು ಭಾಷೆಗಳಲ್ಲಿ ಮಿಂಚುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ದರ್ಶನ್, ಸುದೀಪ್, ಯಶ್, ಶಿವರಾಜಕುಮಾರ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಗಣೇಶ್ ಸೇರಿದಂತೆ ಹಲವಾರು ನಟರು ಮುಂಚೂಣಿಯಲ್ಲಿದ್ದಾರೆ. ಮೊದಲಿಗೆ ಉಪೇಂದ್ರ ಅವರು ಏಳು ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಇವರು ಕೋಟಿ ಕೋಟಿ ಬೆಲೆಬಾಳುವ ರೆಸಾರ್ಟ್, ಬಿಲ್ಡಿಂಗ್ ಹೊಂದಿದ್ದಾರೆ. ಇವರು ರುಪೀಸ್ ಎಂಬ ಹೋಟೆಲ್ ಮತ್ತು ರೆಸ್ಟೋರೆಂಟ್ ನಡೆಸುತ್ತಾರೆ. ಇವರು ಕೆಲವು ಖಾಸಗಿ ವ್ಯವಹಾರವನ್ನು ಹೊಂದಿದ್ದು 140 ರಿಂದ 160 ಕೋಟಿ ವ್ಯವಹಾರವನ್ನು ಮಾಡುತ್ತಾರೆ.

ಯಂಗ್ ಸ್ಟಾರ್ ಗಳಿಗೆ ಕಡಿಮೆಯಿಲ್ಲ ಎನ್ನುವಂತೆ ಶಿವರಾಜ್ ಕುಮಾರ್ ಅವರು ಹಿಟ್ ಮೇಲೆ ಹಿಟ್ ಸಿನಿಮಾ ಮಾಡಿದ್ದಾರೆ. ಅವರು ಒಂದೂವರೆ ಎಕರೆಯಲ್ಲಿ ಐಷಾರಾಮಿ ಮನೆಯನ್ನು ನಿರ್ಮಿಸಿದ್ದಾರೆ. ಕೋಟಿ ಕೋಟಿ ಆಸ್ತಿ ಹೊಂದಿರುವ ಇವರು ಬೆಂಗಳೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡಿದ್ದಾರೆ. ಇವರು 180 ರಿಂದ 200 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ಅಭಿನಯ ಚಕ್ರವರ್ತಿ ನಮ್ಮ ಕಿಚ್ಚ ಸುದೀಪ್ ಅವರು ಹುಟ್ಟಿನಿಂದಲೆ ಶ್ರೀಮಂತ ಕುಟುಂಬದಲ್ಲಿ ಬೆಳೆದು ಬಂದಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ಇವರು ಕೋಟಿ ಕೋಟಿ ಬೆಲೆಬಾಳುವ ಷೇರುಗಳನ್ನು ಹೊಂದಿದ್ದಾರೆ. ಇವರು ಕಿಚ್ಚ ಕ್ರಿಯೇಶನ್ ಮತ್ತು ಸರೋವರ ಗ್ರೂಪ್ ಮಾಲೀಕರಾಗಿದ್ದಾರೆ. ಸುದೀಪ್ ಅವರಿಗೆ ಸಿನಿಮಾಗಳಿಂದ ಹಣ ಬರುವುದಲ್ಲದೆ, ಬೇರೆ ಬೇರೆ ವ್ಯವಹಾರಗಳಿಂದ ಹಣ ಬರುತ್ತದೆ. ಇವರು 200 ರಿಂದ 250 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ಈಗಲೂ ಬೇಡಿಕೆಯ ನಟರಾಗಿದ್ದಾರೆ. ಜಗ್ಗೇಶ್ ಅವರು ಸಿನಿಮಾ ಕ್ಷೇತ್ರ ಬಿಟ್ಟು ಇತರ ವ್ಯವಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಿನಿಮಾಗಳಿಗೆ ಹಣ ಒದಗಿಸುವ ಇವರು 110 ರಿಂದ 130 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಸ್ಟಾರ್ ನಟರಲ್ಲಿ ಒಬ್ಬರು. ಗಣೇಶ್ ಅವರ ಜೊತೆ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಸೇರಿ ಅನೇಕ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಗಣೇಶ್ ಅವರು 100 ರಿಂದ 150 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಂಗಳೂರಿನ ಆರ್ ಆರ್ ನಗರದಲ್ಲಿ ಅತಿ ದೊಡ್ಡ ಮನೆಯನ್ನು ಹೊಂದಿದ್ದು, ಮೈಸೂರಿನಲ್ಲಿ ತಮ್ಮದೆ ಆದ ಫಾರ್ಮಹೌಸ್ ಹೊಂದಿದ್ದಾರೆ. ದರ್ಶನ್ ಅವರು ದುಬೈನಲ್ಲಿ ಕೋಟಿ ಕೋಟಿ ಹಣವನ್ನು ಪ್ರಾಪರ್ಟಿ ಮೇಲೆ ಇನ್ವೆಸ್ಟ್ ಮಾಡಿದ್ದಾರೆ. 5 ಭಾಷೆಗಳಲ್ಲಿ ಬಿಡುಗಡೆಗೊಳ್ಳುವ ಸಿನಿಮಾಗಳಲ್ಲಿ ದರ್ಶನ್ ಅವರು ಬ್ಯೂಸಿ ಇದ್ದಾರೆ. ದರ್ಶನ್ ಅವರು ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ. ದರ್ಶನ್ ಅವರು ಸಿನಿಮಾರಂಗ ಅಷ್ಟೆ ಅಲ್ಲದೆ ಇತರೆ ವ್ಯವಹಾರಗಳನ್ನು ಹೊಂದಿದ್ದಾರೆ, ಅವರು 120 ರಿಂದ 170 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ಯಾವಾಗಲೂ ಪಾಸಿಟಿವ್ ಆಗಿ ಯೋಚನೆ ಮಾಡಿಕೊಂಡು, ನಗು ನಗುತಿರುವ ಪುನೀತ್ ರಾಜಕುಮಾರ್ ಅವರು ದೊಡ್ಡ, ದೊಡ್ಡ ಮಾಲ್ ಮತ್ತು ಅಪಾರ್ಟ್ಮೆಂಟ್ ಗಳನ್ನು ಹೊಂದಿದ್ದು ಹಲವು ಪ್ರಾಪರ್ಟಿ ಮೇಲೆ ಇನ್ವೆಸ್ಟ್ಮೆಂಟ್ ಮಾಡಿದ್ದಾರೆ. ಪುನೀತ್ ಅವರು ಕರ್ನಾಟಕದ ಅತಿ ದೊಡ್ಡ ಆಡಿಯೋ ಸಂಸ್ಥೆಗಳಲ್ಲಿ ಒಂದಾದ ಪಿಆರ್ಕೆ ಆಡಿಯೋ ಸಂಸ್ಥೆಯ ಮಾಲೀಕರಾಗಿದ್ದಾರೆ. ಇವರು ಅನೇಕ ಥಿಯೇಟರ್ ಹೊಂದಿದ್ದು ಪಾರ್ಟ್ನರ್ ಶಿಪ್ ನಲ್ಲಿ ಅನೇಕ ವ್ಯವಹಾರ ಮಾಡುತ್ತಿದ್ದಾರೆ. ಇವರು ಕರ್ನಾಟಕದಲ್ಲಿ ಮಾತ್ರ ಅಲ್ಲದೆ ಬೇರೆ ಕಡೆ ಆಸ್ತಿಯನ್ನು ಹೊಂದಿದ್ದು, 200 ರಿಂದ 300 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಕನ್ನಡದಲ್ಲಿ ಬಿಡುಗಡೆಗೊಂಡ ಕೆಜಿಎಫ್ ಸಿನಿಮಾ 350 ಕೋಟಿ ಆದಾಯವನ್ನು ಗಳಿಸಿದ್ದು ಇದರಿಂದ ಅವರ ಸಂಭಾವನೆ ಹೆಚ್ಚಾಗಿದೆ. ಯಶ್ ಅವರು ಸಿನಿಮಾಗಳಲ್ಲಿ ಮಾತ್ರ ನಟಿಸುವುದಲ್ಲದೆ ಅನೇಕ ಇತರೆ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಯಶ್ ಅವರು ಕೋಟಿ ಕೋಟಿ ಬೆಲೆ ಬಾಳುವ ಷೇರುಗಳನ್ನು ಹೊಂದಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆ ಆಸ್ತಿಯನ್ನು ಹೊಂದಿದ್ದು 130 ರಿಂದ 150 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ಇಷ್ಟೆ ಅಲ್ಲದೆ ನಮ್ಮ ಕನ್ನಡದ ಸ್ಟಾರ್ ಗಳು ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವ ಮೂಲಕ ಆದಾಯ ಗಳಿಸುವುದರೊಂದಿಗೆ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಪ್ರತಿವರ್ಷ 50 ಲಕ್ಷದಿಂದ ಎರಡು ಕೋಟಿ ರೂಪಾಯಿ ಹಣವನ್ನು ಜನರಿಗೆ ಉಪಯೋಗವಾಗುವ ಕೆಲಸಗಳಿಗೆ ನೀಡುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: