ಇದು ದೊಡ್ಮನೆಯವರ ಗುಣ ಅಂದ್ರು ಅಭಿಮಾನಿಗಳು ನಿಜಕ್ಕೂ ಅಶ್ವಿನಿ ಮಾಡಿದ್ದೇನು ಗೊತ್ತೇ?

0

ಡಾ. ರಾಜಕುಮಾರ್ ಕುಟುಂಬದ ಔದಾರ್ಯತೆ, ಆ ಕುಟುಂಬದವರ ಒಳ್ಳೆತನದ ಬಗ್ಗೆ ಮತ್ತೆ ವಿವರಿಸಿ ಹೇಳಬೇಕಿಲ್ಲ. ಇಂಥ ಕುಟುಂಬದ ಕುಡಿ ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿದ ಮೇಲೆ ಅಭಿಮಾನಿಗಳು ತುಂಬಾನೇ ಬೇಸರಗೊಂಡಿದ್ದಾರೆ. ಆದರೆ, ರಾಜ್ಕುಮಾರ್ ಕುಟುಂಬಕ್ಕೆ ಅವರು ಬೆಂಬಲವಾಗಿ ನಿಲ್ಲುವುದನ್ನು ಎಂದಿಗೂ ನಿಲ್ಲಿಸಿಲ್ಲ. ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಾಡಿದ ಒಂದು ಒಳ್ಳೆಯ ಕೆಲಸ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಂಭಾವನೆ ವಿಚಾರದಲ್ಲಿ ಜಗಳ, ವೈಮನಸ್ಸು ಏರ್ಪಟ್ಟ ಸಾಕಷ್ಟು ಉದಾಹರಣೆ ಇದೆ.

ನಿರ್ಮಾಪಕರು ಸಂಭಾವನೆ ಕೊಟ್ಟಿಲ್ಲ ಎಂದು ದೂರುವ ಅನೇಕ ನಟ ನಟಿಯರು ಇದ್ದಾರೆ. ನಿರ್ಮಾಪಕರೂ ಅಷ್ಟೇ, ಹೀರೋ ಹೀರೋಯಿನ್​​ ಗಳಿಗೆ ಹಣ ಕೊಟ್ಟ ಹೊರತಾಗಿಯೂ ಶೂಟಿಂಗ್​ ಗೆ ಬಂದಿಲ್ಲ ಎಂದು ಹೇಳಿಕೊಂಡ ಹಲವಾರು ಪ್ರಕರಣಗಳು ಸಿಗುತ್ತವೆ. ಅಡ್ವಾನ್ಸ್ ಹಣ​ ಪಡೆದುಕೊಂಡ ನಂತರ ಸಿನಿಮಾ ಕ್ಯಾನ್ಸಲ್​ ಆದರೆ, ನಿರ್ಮಾಪಕರಿಗೆ ಹಣ ಹಿಂದಿರುಗಿಸೋಕೆ ಯಾರೂ ಅಷ್ಟು ಸುಲಭವಾಗಿ ಮುಂದೆ ಬರುವುದಿಲ್ಲ. ಆದರೆ, ಪುನೀತ್​ ಕುಟುಂಬದವರು ಆ ರೀತಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಪಡೆದಿದ್ದ 2.5 ಕೋಟಿ ಅಡ್ವಾನ್ಸ್​ ಹಣವನ್ನು ವಾಪಸ್​ ಕೊಟ್ಟು ಈ ಮೂಲಕ ಮತ್ತೆ ದೊಡ್ಮನೆಯ ದೊಡ್ಡತನದ ಮತ್ತೊಂದು ನಿದರ್ಶನವನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕರುನಾಡಿನ ಮಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ದೈಹಿಕವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಎಷ್ಟೆ ಆದರೂ ಯಾರ ಮಗ ಹೇಳಿ.! ಡಾ.ರಾಜ್​​ಕುಮಾರ್ ​ ಅವರ ತೃತೀಯ ಪುತ್ರ ಪವರ್​ ಸ್ಟಾರ್​ ಅಪ್ಪನ ಹಾಗೇ ಅಪ್ಪು ಬದುಕಿದರೇ ಹೀಗೆ ಬದುಕಬೇಕು ಎಂದು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಎಲ್ಲರೂ ಒಪ್ಪಿಕೊಂಡು ಹೋಗಬೇಕು.

ಅವರು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಂಡಿದ್ದಾರೆ. ದೊಡ್ಮನೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ ಇದು. ಅಪ್ಪು ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ಹೇಳದೆ, ಕೇಳದೇ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಆದರೆ, ಇತಂಹ ಸಮಯದಲ್ಲಿ ಆ ದೊಡ್ಮನೆ ಸೊಸೆಯ ದೊಡ್ಡ ಮನಸ್ಸು ಮಾಡಿರುವ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಪ್ಪು ಅವರಂತೆ ನೀವು ಮೇಡಂ ನಿಮಗೆ ಒಂದು ಸಲಾಂ ಅಂತ ಅಶ್ವಿನಿ ರಾಜ್​ಕುಮಾರ್​ ಅವರಿಗೆ ಫ್ಯಾನ್ಸ್​ ಹೇಳುತ್ತಿದ್ದಾರೆ.

ಪುನೀತ್ ನಿಧನರಾಗುವುದಕ್ಕೂ ಮೊದಲು ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಈ ಪೈಕಿ ಅವರು ಮುಖ್ಯಭೂಮಿಕೆ ನಿರ್ವಹಿಸಿರುವ ಜೇಮ್ಸ್ ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿ ಮ್ಯಾನ್ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಉಳಿದ ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ಈ ಪೈಕಿ ಕೆಲ ಸಿನಿಮಾಗಳಿಗೆ ಪುನೀತ್ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದರು. ಈ ಪೈಕಿ ಒಂದು ಸಿನಿಮಾದ ಅಡ್ವಾನ್ಸ್ ಅನ್ನು ಪುನೀತ್ ಪತ್ನಿ ಅಶ್ವಿನಿ ಅವರು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. “ಅವರು ಕನ್ನಡ ಸಿನಿಮಾ ನಿರ್ಮಾಪಕರು.

ಅವರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಮಾಡಿದವರು ಹೇಳಿದವರು. ಅವರು ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.5 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ ಎಂದರು ಆ ಮಹಿಳೆ.. ಹೀಗೆ ಹೇಳಿದ ಮಹಿಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್​..ಇದು ಪ್ರಾಮಾಣಿಕತೆ.. ಕನ್ನಡ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್​ ಕುಟುಂಬ ಇರುವುದು ಹೀಗೆ’’ ಎಂದು ಟ್ವೀಟ್ ಮಾಡಿದ್ದಾರೆ.

ಪವರ್​ ಸ್ಟಾರ್ ಪುನೀತ್​​ ರಾಜಕುಮಾರ್​ ಒಂದು ಸಿನಿಮಾಗೆ ಡೇಟ್ಸ್​ ನೀಡಿದ್ದರು. ಜೊತೆಗೆ ಆ ನಿರ್ಮಾಪಕರು ಎರಡೂವರೆ ಕೋಟಿ ಅಡ್ವಾನ್ಸ್​ ಕೊಟ್ಟಿದ್ದರಂತೆ. ಪುನೀತ್ ನಿಧನದ ನಂತರ ಆ ನಿರ್ಮಾಪಕರು ಕೂಡ ಅಪ್ಪು ಇಲ್ಲ ಎಂಬುದನ್ನು ನೆನೆದು ಕಣ್ಣೀರಿಟ್ಟಿದ್ದರು. ಹಣದ ಬಗ್ಗೆ ಆ ನಿರ್ಮಾಪಕರು ಯಾರ ಬಳಿಯೂ ಏನೂ ಕೇಳಿಲ್ಲ. ಆದರೂ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಆ ನಿರ್ಮಾಪಕರಿಗೆ ತಾವು ಕೊಟ್ಟಿರುವ ಎರಡೂವರೆ ಕೋಟಿ ಹಣವನ್ನು ವಾಪಸ್​ ಪಡೆಯುವಂತೆ ಕರೆ ಮಾಡಿ ಹೇಳಿದ್ದಾರೆ.

ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದ್ದಷ್ಟು ದಿನ ಮಾಡಿದ ಸಹಾಯವನ್ನು ಯಾರಿಗೂ ತಿಳಿಯದಂತೆ ನಮ್ಮ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮಾಡಿದ್ದರು. ಅವರ ಸಹಾಯ ಮಾಡಿದ್ದನ್ನು ಅವರ ಅಭಿಮಾನಿಗಳು ಮುಂದುವರೆಸಲು ಮುಂದಾಗಿದ್ದಾರೆ. ಇದೆಲ್ಲರ ನಡುವೆ ಅಶ್ವಿನಿ ರಾಜ್​ಕುಮಾರ್​ ಅವರ ಈ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮ ಅಪ್ಪು ಅವರ ಪತ್ನಿಯಾಗಿ ನೀವು ಮಾಡುತ್ತಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು. ಇದು ಹೀಗೆ ಮುಂದುವರೆಯಿಲಿ ಮೇಡಂ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: