ಆಪರೇಷನ್ ಇಲ್ಲದೆ ಪಿತ್ತಕೋಶದಲ್ಲಿನ ಕಲ್ಲು ಕರಗಿಸುವ ಸುಲಭ ಆಯುರ್ವೇದ ಮದ್ದು

0

ವಿಶ್ವದಾದ್ಯಂತ ಪಿತ್ತಕೋಶದ ಕಲ್ಲು ರೋಗದ ಹರಡುವಿಕೆಯಲ್ಲಿ ಗಮನಾರ್ಹ ಭೌಗೋಳಿಕ ವ್ಯತ್ಯಾಸವಿದೆ ಇದು ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಂಡುಬರುವ ಕಾಯಿಲೆಯಾಗಿದೆ . ಆದಾಗ್ಯೂ , ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಸಹ ಈ ಸಮಸ್ಯೆಯಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.

ಪಿತ್ತಕೋಶದಲ್ಲಿ ಕಲ್ಲು ಉಂಟಾಗುವುದು ಇಂದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಹಲವು ಆದರೆ ಈ ಸಮಸ್ಯೆ ಮತ್ತು ಅದರ ಪರಿಹಾರದ ಬಗೆಗಿನ ಮಾಹಿತಿ ಹೆಚ್ಚಿನವರನ್ನು ಇನ್ನೂ ಮುಟ್ಟಿಲ್ಲ ಎಂದೇ ಹೇಳಬಹುದು. ಅದಲ್ಲದೇ ಕೆಲವೊಂದು ಅಪನಂಬಿಕೆಯಿಂದ ಹಲವೊಮ್ಮೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ರೋಗಿಗಳು ವಂಚಿತರಾಗುತ್ತಾರೆ. ನಮ್ಮ ಸುತ್ತಲೂ ಇರುವ ನೈಸರ್ಗಿಕವಾಗಿ ಬೆಳೆದ ಸಸ್ಯದ ಮೂಲಕ ಈ ಸಮಸ್ಯೆ ಇಂದ ಹೊರಬರುವುದು ಹೇಗೆ ಎಂಬುದನ್ನ ಈ ಬರಹದಲ್ಲಿ ಬರೆಯಲಾಗಿದೆ.

ಪಿತ್ತಕೋಶ ಎಂದರೆ, ಉದರದಲ್ಲಿ ಪಿತ್ತಜನಕಾಂಗ (ಲಿವರ್)ನ ಕೆಳಭಾಗದಲ್ಲಿ ಪಿತ್ತಜನಕಾಂಗದ ನಾಳಕ್ಕೆ ಅಂಟಿಕೊಂಡಂತೆ ಇರುವ ಒಂದು ಅಂಗ. ಪಿತ್ತಜನಕಾಂಗದಲ್ಲಿ ಉತ್ಪಡಿತವಾಗುವ ಪಿತ್ತರಸದ ತುಸು ಭಾಗವನ್ನು ಶೇಖರಿಸಿ ಇಟ್ಟುಕೊಳ್ಳುವುದೇ ಇದರ ಕೆಲಸ. ಪಿತ್ತಕೋಶದ ನಾಳ ಹಾಗೂ ಪಿತ್ತಜನಕಾಂಗಗಳ ಒಟ್ಟು ಸೇರಿಕೊಂಡು ಸಾಮಾನ್ಯ ಪಿತ್ತನಾಳವಾಗಿ ಮಾರ್ಪಟ್ಟು ಸಣ್ಣ ಕರುಳಿಗೆ ಜೋಡಣೆಯಾಗುತ್ತದೆ. ಸಣ್ಣ ಕರುಳಿನಲ್ಲಿ ಜಿಡ್ಡು ಯುಕ್ತ ಆಹಾರದ ಪಚನಕ್ರಿಯೆಯಲ್ಲಿ ಪಿತ್ತರಸದ ಪಾತ್ರ ಮಹತ್ವದ್ದು. ಆದರೆ ಪಿತ್ತರಸ ಸ್ರವಿಸುವುದು ಪಿತ್ತಜನಕಾಂಗದಲ್ಲಿಯೇ ಹೊರತು ಪಿತ್ತಕೋಶದಲ್ಲಲ್ಲ ಎಂಬುದು ಗಮನಿಸಬೇಕಾದ ಅಂಶ.

ಪಿತ್ತಕೋಶದಲ್ಲಿ ಕಲ್ಲಿನ ಇರುವಿಕೆಯಿಂದಾಗಿ ನಿರ್ದಿಷ್ಟ ಲಕ್ಷಣಗಳು ಕಾಣಿಸಿಕೊಳ್ಳತ್ತವೆ ಎನ್ನುವಂತಿಲ್ಲ. ಕೆಲವರಿಗಂತೂ ಕಲ್ಲುಗಳ ಇರುವಿಕೆಯ ಅರಿವೇ ಇರುವುದಿಲ್ಲ. ಇನ್ನೂ ಕೆಲವರಿಗೆ ಊಟದ ನಂತರ ಉದರದ ಮೇಲ್ಭಾಗದಲ್ಲಿ ಹಿಡಿದಿಟ್ಟ ಅನುಭವ ಅಥವಾ ನೋವು ಕಾಣಿಸಬಹುದು. ಹಲವರು ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಳ್ಳುವುದುಂಟು.

ಕಡಿಮೆ ಪ್ರೋಟೀನ್ ಯುಕ್ತ ತರಕಾರಿ ಸೇವನೆ ಮತ್ತು ಸಂಸ್ಕರಿಸಿದ ಸಕ್ಕರೆ ಅತಿಯಾದ ಸೇವನೆಯು ಪಿತ್ತಕೋಶದ ಕಲ್ಲಿನ ಅಪಾಯವನ್ನು ಹೆಚ್ಚಿಸುತ್ತದೆ. ಅನಾರೋಗ್ಯಕರ ಜೀವನಶೈಲಿ, ಆಹಾರದಲ್ಲಿ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬು ಮತ್ತು ಹೆಚ್ಚಿನ ಸೊಂಟದ ಅನುಪಾತವು ಪಿತ್ತಕಲ್ಲು ಕಾಯಿಲೆಗೆ ಗಮನಾರ್ಹ ಅಪಾಯಕಾರಿ ಮುನ್ಸೂಚಕಗಳಾಗಿವೆ. ಮೆಟಬಲಿಕ್ ಸಿಂಡ್ರೋಮ್, ಇನ್ಸುಲಿನ್ ಪ್ರತಿರೋಧ, ಮಧುಮೇಹ ಮತ್ತು ದೀರ್ಘಕಾಲದ ಉಪವಾಸದಿಂದಾಗಿ ತ್ವರಿತಗತಿಯ ತೂಕ ನಷ್ಟ ಪಿತ್ತಕೋಶದ ಕಲ್ಲಿನ ಸಮಸ್ಯೆಯನ್ನು ಹೆಚ್ಚಿಸುವ ಇವು ಅಪಾಯಕಾರಿ.

ಪಿತ್ತಕೋಶದ ಕಲ್ಲಿನ ಸೋಂಕಿಗೆ ಆಯುರ್ವೇದದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದು. ಉದಾಹರಣೆಗೆ ಕಾಡುಬಸಳೆಯನ್ನು ಎಳನೀರಿನ ಜೊತೆ ಸೇವಿಸುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಹಾಗೂ ಇಂಗಳಾರದ ಹಣ್ಣನ್ನು ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಹೊರಬಹುದಾಗಿದೆ. ಇದರ ಜೊತೆಗೆ ಪಿತ್ತಕೋಶದ ಯಾವುದೇ ರೀತಿಯ ಸಮಸ್ಯೆ ಇದ್ದರೂ ಪರಿಹಾರವನ್ನು ಹೊಂದಬಹುದು. ಜಾಂಡೀಸ್ ಅಥವಾ ಕಾಮಾಲೆ ರೋಗದಿಂದಲೂ ಮುಕ್ತಿ ಸಿಗುತ್ತದೆ. ಆಸ್ಪತ್ರೆ ಶಸ್ತ್ರಚಕಿತ್ಸೆಗಾಗಿ ಲಕ್ಷಾಂತರ ಹಣವನ್ನು ಖರ್ಚುಮಾಡಿ ಪರದಾಡುವ ಬದಲು ಒಂದು ರೂಪಾಯಿ ವ್ಯಯಿಸದೆ ನಮ್ಮ ಸುತ್ತಲೂ ನೈಸರ್ಗಿಕವಾಗಿ ಬೆಳೆದ ಗಿಡಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.

error: Content is protected !!