ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಹುಟ್ಟಿದ ಮನುಷ್ಯ ಗುರುವಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಾಗ ಮಾತ್ರ ಜೀವನದಲ್ಲಿ ಏಳ್ಗೆ ಹಾಗೂ ಮುಕ್ತಿ ಸಿಗುತ್ತದೆ ಎಂದು ಶಿರಡಿ ಸಾಯಿಬಾಬಾ ಪದೆ ಪದೆ ಹೇಳುತ್ತಿದ್ದರು ಮತ್ತು ನಂಬುತ್ತಿದ್ದರು. ಪವಾಡ ಪುರುಷರಾದ ಸಾಯಿಬಾಬಾ ಅವರ ಒಂದು ಪವಾಡವನ್ನು ಈ ಲೇಖನದಲ್ಲಿ ನೋಡೋಣ.
ಶಿರಡಿ ಸಾಯಿಬಾಬಾ ಅವರ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಎಣ್ಣೆ ಇಲ್ಲದೆ ದೀಪ ಉರಿಯುವುದು, ಕುದಿಯುವ ಅನ್ನಕ್ಕೆ ಕೈ ಹಾಕಿದ್ದು, ಬಡವ ಶ್ರೀಮಂತನಾದದ್ದು, ಕುಷ್ಟ ರೋಗಿ, ಮಾನಸಿಕ ರೋಗಿ ಸರಿಹೋಗಿದ್ದು ಮೊದಲಾದ ಪವಾಡಗಳನ್ನು ಶಿರಡಿ ಸಾಯಿಬಾಬಾ ಅವರು ಮಾಡಿದ್ದಾರೆ. ಸಾಯಿಬಾಬಾ ಅವರು ತಮ್ಮನ್ನು ನಂಬಿ ಬರುತ್ತಿದ್ದ ಭಕ್ತರ ಕಷ್ಟವನ್ನು ನಿವಾರಣೆ ಮಾಡುತ್ತಿದ್ದರು ಸನ್ಮಾರ್ಗ ತೋರುತ್ತಿದ್ದರು. ಬಾಬಾ ಅವರು ತಮ್ಮ ಶಕ್ತಿಯನ್ನು ಒಳ್ಳೆಯದಕ್ಕೆ ಬಳಸುತ್ತಿದ್ದರು, ಅವರ ಪವಾಡಗಳು ಅವರ ಕಟ್ಟಾ ಅನುಯಾಯಿಗಳಿಗೆ ಮಾತ್ರ ಕೆಲಸ ಮಾಡುತ್ತಿತ್ತು. ಅವರ ಪವಾಡದಿಂದ ಅವರನ್ನು 20 ನೇ ಶತಮಾನದ ಪವಾಡ ಪುರುಷ ಎಂದು ಕರೆಯುತ್ತಿದ್ದರು. 1952 ಆಗಸ್ಟ್ ತಿಂಗಳು ಮಹಾರಾಷ್ಟ್ರದ ಸತಾರದಲ್ಲಿ ಒಬ್ಬ ಬಾಬಾ ಭಕ್ತನಿದ್ದ ಅವನ ಹೆಸರು ರಾಮನಾರಾಯಣ ಶಿಂಧೆ ಅವನು ಟೇಲರಿಂಗ್ ಕೆಲಸ ಮಾಡಿಕೊಂಡು ತನ್ನ ಜೀವನ ಸಾಗಿಸುತ್ತಿದ್ದರು.
ಅವನು ತನ್ನ ಮನೆಯ ಹೊರಗೆ ಟೇಲರಿಂಗ್ ಮಷೀನ್ ಇಟ್ಟುಕೊಂಡು ಊರಿನವರ ಬಟ್ಟೆ ಹೊಲಿದು ಜೀವನ ನಡೆಸುತ್ತಿದ್ದ. ಪ್ರತಿವರ್ಷ ಆತ ನಡೆದುಕೊಂಡು ಶಿರಡಿಗೆ ಹೋಗಿ ಬಾಬಾ ಅವರ ದರ್ಶನ ಪಡೆಯುತ್ತಿದ್ದ. ಅವನ ಮನೆಯ ಪಕ್ಕ ಸೈಯದ್ ಎಂಬ ವ್ಯಕ್ತಿ ಬಾಡಿಗೆಗೆ ಬರುತ್ತಾನೆ, ಆತ ಮುಸಲ್ಮಾನ ಆಗಿರುವುದರಿಂದ ಮನೆಯಲ್ಲೆ 5 ಬಾರಿ ನಮಾಜ್ ಮಾಡಿಕೊಳ್ಳುತ್ತಿದ್ದ ಅವನು ನಮಾಜ್ ಮಾಡುವಾಗ ರಾಮನಾರಯಣ ಬಳಸುತ್ತಿದ್ದ ಮಷೀನ್ ಶಬ್ಧದಿಂದ ತೊಂದರೆಯಾಗುತ್ತಿತ್ತು. ಸೈಯದ್ ರಾಮನಾರಾಯಣನಿಗೆ ತಾನು ನಮಾಜ್ ಮಾಡುವಾಗ ಮಷೀನ್ ಬಳಸಬಾರದು ಎಂದು ತಾಕೀತು ಮಾಡಿದನು.
ಸೈಯದ್ ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ ದಿನಕ್ಕೆ ಅಷ್ಟು ಸಮಯ ಹೊಲಿಯುವುದನ್ನು ಬಿಟ್ಟರೆ ತನ್ನ ಜೀವನ ನಡೆಯುವುದಿಲ್ಲ ಎಂದು ರಾಮನಾರಾಯಣ ತಾಳ್ಮೆಯಿಂದ ಹೇಳುತ್ತಾನೆ. ಅವರಿಬ್ಬರ ನಡುವೆ ವಾದ ನಡೆಯುತ್ತದೆ. ರಾಮನಾರಾಯಣ ಹೊಲಿಯುವುದನ್ನು ಮುಂದುವರೆಸಲು ನಿರ್ಧರಿಸಿದ. ಅದು ದೀಪಾವಳಿಯ ಸಮಯ ಬಟ್ಟೆ ಹೊಲಿಯಲು ಆರ್ಡರ್ ಗಳು ಬಂದಿತ್ತು ಆದ್ದರಿಂದ ರಾಮನಾರಾಯಣ ಕೆಲವು ಅವಶ್ಯ ವಸ್ತುಗಳನ್ನು ತರಲು ಮಾರುಕಟ್ಟೆಗೆ ಹೋಗುತ್ತಾನೆ ಆ ದಿನ ಸೈಯದ್ ರಾಮನಾರಾಯಣನ ಟೇಲರಿಂಗ್ ಮಷೀನ ಅನ್ನು ಕದಿಯುತ್ತಾನೆ.
ಮಾರ್ಕೆಟ್ ಇಂದ ಬಂದ ರಾಮನಾರಾಯಣನಿಗೆ ಮಷಿನ್ ಇಲ್ಲದೆ ಇರುವುದನ್ನು ನೋಡಿ ಶಾಕ್ ಆಯಿತು ಅಕ್ಕ ಪಕ್ಕದವರಿಗೆ ಕೇಳಿದರೂ ಯಾರಿಗೂ ಗೊತ್ತಿಲ್ಲ. ರಾಮನಾರಾಯಣನಿಗೆ ಸೈಯದ್ ಮೇಲೆ ಅನುಮಾನವಿತ್ತು ಆದರೆ ಸೈಯದ್ ಏನು ಗೊತ್ತಿಲ್ಲದ ಹಾಗೆ ನಾಟಕವಾಡುತ್ತಿದ್ದ. ರಾಮನಾರಾಯಣನಿಗೆ ಪೊಲೀಸ್ ಠಾಣೆಗೆ ದೂರು ಕೊಡಲು ಇಷ್ಟವಿರಲಿಲ್ಲ ಅಲ್ಲದೆ ಬಾಬಾ ಮೇಲೆ ಅಪಾರವಾದ ನಂಬಿಕೆ ಇತ್ತು. ಅವನು ಅಂದಿನಿಂದ ಬಾಬಾ ಅವರನ್ನು ಪ್ರಾರ್ಥಿಸಿಕೊಂಡ. ಮುಂದಿನ ಎರಡು ದಿನದಲ್ಲಿ ಸೈಯ್ಯದ್ ಕೈ ಮೇಲೆ ಗುಳ್ಳೆಗಳು ಎದ್ದವು ಅವನು ಗಾಬರಿಗೊಂಡು ಆಸ್ಪತ್ರೆಗೆ ಹೋಗುತ್ತಾನೆ.
ವೈದ್ಯರು ನೋಡಿ ಆಶ್ಚರ್ಯ ಪಡುತ್ತಾರೆ ವಿನಾಕಾರಣ ಹೀಗೆ ಗುಳ್ಳೆಗಳು ಬರುವುದಿಲ್ಲ ಎಂದು ಹೇಳುತ್ತಾರೆ, ಆದರೂ ಔಷಧಿ ಕೊಡುತ್ತಾರೆ. ಎರಡರಿಂದ ಮೂರು ದಿನಗಳವರೆಗೆ ಕಳೆದರೂ ಔಷಧಿ ಪರಿಣಾಮ ಬೀರುವುದಿಲ್ಲ ಬದಲಾಗಿ ಇನ್ನೊಂದು ಕೈಯಲ್ಲೂ ಗುಳ್ಳೆಗಳು ಕಾಣಿಸುತ್ತವೆ ಆಗ ಮತ್ತೆ ಸೈಯದ್ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ಹೇಳಿದಾಗ ಅವರು ಶಾಕ್ ಆಗುತ್ತಾರೆ. ವೈದ್ಯರು ಹಾಗೆಯೆ ಬಿಟ್ಟರೆ ಮೈತುಂಬ ಹರಡುತ್ತದೆ ಅದಕ್ಕಾಗಿ ಎರಡು ಕೈಗಳನ್ನು ಕತ್ತರಿಸಬೇಕು ಎಂದು ಹೇಳುತ್ತಾರೆ. ನಂತರ ಸೈಯದ್ ಅವರ ಕೈ ತುಂಬಾ ಗುಳ್ಳೆಗಳು ಕಾಣಿಸುತ್ತವೆ ಮತ್ತು ನೋವು ಜಾಸ್ತಿ ಆಗುತ್ತದೆ, ಊಟ ಮಾಡಲು ಆಗುವುದಿಲ್ಲ.
ಸೈಯದ್ ರಾತ್ರಿ ಮಲಗಿದಾಗ ಅವನಿಗೆ ಅವನ ತಪ್ಪಿನ ಆರಿವಾಗುತ್ತದೆ ತಕ್ಷಣ ರಾಮನಾರಯಣನ ಬಳಿ ಕ್ಷಮೆ ಕೇಳುತ್ತಾನೆ ಹಾಗೂ ತಾನು ಕದ್ದ ಮಷೀನ್ ಅನ್ನು ವಾಪಸ್ ಕೊಡುತ್ತಾನೆ. ತಾನು ತಪ್ಪು ಮಾಡಿದ್ದೇನೆ ನಿನ್ನ ಸಾಯಿಬಾಬಾ ನನಗೆ ತಕ್ಕ ಶಿಕ್ಷೆ ಕೊಟ್ಟಿದ್ದಾನೆ ಎಂದು ಹೇಳುತ್ತಾನೆ. ಕಾಯಕವೆ ಕೈಲಾಸ ಎಂದು ಸೈಯದ್ ಒಪ್ಪಿಕೊಳ್ಳುತ್ತಾನೆ ಹಾಗೂ ಸಾಯಿಬಾಬಾರ ಭಕ್ತನಗುತ್ತಾನೆ ಮುಂದೆ ಅವನು ಕೂಡ ರಾಮನಾರಾಯಣ ಅವರ ಜೊತೆ ಶಿರಡಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾನೆ. ದೇವರ ಮೇಲೆ ನಂಬಿಕೆ ಇರಬೇಕು, ನಂಬಿದವರನ್ನು ದೇವರು ಕೈ ಬಿಡುವುದಿಲ್ಲ.